‘ಜೀವನ ಹಾಳು ಮಾಡುತ್ತಿದ್ದೀರಿ’: ನಟ ಗೋವಿಂದ ಬಗ್ಗೆ ಪತ್ನಿ ಸುನೀತಾ ಟೀಕೆ

ಬಾಲಿವುಡ್ ನಟ ಗೋವಿಂದ ಅವರಿಗೆ ಈಗ ಮೊದಲಿನ ಚಾರ್ಮ್ ಇಲ್ಲ. ಸಿನಿಮಾದಲ್ಲಿ ಅವರಿಗೆ ಆಸಕ್ತಿ ಇಲ್ಲದಂತಾಗಿದೆ. ಈ ಬಗ್ಗೆ ಅವರ ಪತ್ನಿ ಸುನೀತಾ ಅಹುಜಾ ಮಾತನಾಡಿದ್ದಾರೆ. ಅನಿಲ್ ಕಪೂರ್, ಜಾಕಿ ಶ್ರಾಫ್, ಸುನೀಲ್ ಶೆಟ್ಟಿ ರೀತಿ ಗೋವಿಂದ ಕೂಡ ಚಿತ್ರರಂಗದಲ್ಲಿ ಕೆಲಸ ಮಾಡಬೇಕು ಎಂಬುದು ಸುನೀತಾ ಅಭಿಪ್ರಾಯ.

‘ಜೀವನ ಹಾಳು ಮಾಡುತ್ತಿದ್ದೀರಿ’: ನಟ ಗೋವಿಂದ ಬಗ್ಗೆ ಪತ್ನಿ ಸುನೀತಾ ಟೀಕೆ
Sunita Ahuja, Govinda

Updated on: May 13, 2025 | 5:14 PM

ಕೆಲವೇ ದಿನಗಳ ಹಿಂದೆ ಬಾಲಿವುಡ್ (Bollywood) ನಟ ಗೋವಿಂದ ಅವರ ದಾಂಪತ್ಯದ ಬಗ್ಗೆ ಗಾಸಿಪ್ ಕೇಳಿಬಂದಿತ್ತು. ಅವರ ಸಂಸಾರದಲ್ಲಿ ಸಾಮರಸ್ಯ ಹಾಳಾಗಿದೆ ಎಂದು ಸುದ್ದಿ ಹಬ್ಬಿತ್ತು. ಈಗಾಗಲೇ ಡಿವೋರ್ಸ್​ ನೋಟಿಸ್ ಕಳಿಸುವ ಹಂತಕ್ಕೆ ಕಿರಿಕ್ ಶುರುವಾಗಿದೆ ಎಂದು ಗಾಸಿಪ್ ಮಂದಿ ಮಾತನಾಡಿಕೊಂಡರು. ಆದರೆ ಆ ರೀತಿ ಏನೂ ಆಗಲೇ ಇಲ್ಲ. ಅದರ ನಡುವೆ ಗೋವಿಂದ ಬಗ್ಗೆ ಅವರ ಪತ್ನಿ ಸುನೀತಾ ಅಹುಜಾ (Sunita Ahuja) ಅವರು ನೀಡಿದ ಹೇಳಿಕೆ ಈಗ ಸುದ್ದಿ ಆಗುತ್ತಿದೆ. ಚಿತ್ರರಂಗದಲ್ಲಿ ಗೋವಿಂದ (Govinda) ಆ್ಯಕ್ಟೀವ್ ಆಗಿಲ್ಲ ಎಂಬುದು ಸುನೀತಾ ಅವರ ಅಸಮಾಧಾನಕ್ಕೆ ಕಾರಣ ಆಗಿದೆ.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸುನೀತಾ ಅಹುಜಾ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ 6 ವರ್ಷಗಳಿಂದ ಗೋವಿಂದ ಅವರು ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಬದಲಿಗೆ ಅವರು ಬಿಸ್ನೆಸ್ ಕಡೆಗೆ ಗಮನ ಹರಿಸಿದ್ದಾರೆ. ಆದರೆ ಅವರ ಕಾಲಘಟ್ಟದ ಬೇರೆ ನಟರು ಈಗಲೂ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಈ ಬಗ್ಗೆ ಅವರು ಮಾತನಾಡಿದ್ದಾರೆ.

‘ನಿಮ್ಮಂಥ ಯಶಸ್ವಿ ನಟರು ಮನೆಯಲ್ಲಿ ಕುಳಿತುಕೊಳ್ಳುವುದು ಯಾಕೆ? ನಿಮ್ಮ ವಯಸ್ಸಿನ ಬೇರೆ ನಟರು ತುಂಬ ಕೆಲಸ ಮಾಡುತ್ತಿದ್ದಾರೆ. ಅನಿಲ್ ಕಪೂರ್, ಸುನೀಲ್ ಶೆಟ್ಟಿ, ಜಾಕಿ ಶ್ರಾಫ್ ಕೂಡ ಕೆಲಸ ಮಾಡುತ್ತಿದ್ದಾರೆ. ನೀವು ಯಾಕೆ ಕೆಲಸ ಮಾಡಬಾರದು’ ಎಂದು ಗೋವಿಂದಗೆ ಸುನೀತಾ ಆಗಾಗ ಕೇಳುತ್ತಿರುತ್ತಾರಂತೆ. ಆದರೆ ಆ ಬಗ್ಗೆ ಗೋವಿಂದ ಹೆಚ್ಚು ಗಮನ ಕೊಟ್ಟಂತೆ ಕಾಣುತ್ತಿಲ್ಲ.

ಇದನ್ನೂ ಓದಿ
ಅವತಾರ್ ಹೀರೋ ಆಫರ್ ನನಗೆ ಬಂದಿತ್ತು, ಶೀರ್ಷಿಕೆ ಕೊಟ್ಟಿದ್ದು ನಾನೇ: ಗೋವಿಂದ
ಗೋವಿಂದ ಜಾತಕದಲ್ಲಿ ಬರೆದಿದೆ ಎರಡನೇ ಮದುವೆ; ಆ ದಿನ ಹತ್ತಿರ ಬಂದೇ ಬಿಡ್ತಾ?
37 ವರ್ಷ ಸಂಸಾರ ಮಾಡಿ ಈಗ ವಿಚ್ಛೇದನ ಪಡೆಯಲು ಮುಂದಾದ ನಟ ಗೋವಿಂದ?
ಮೂಢನಂಬಿಕೆಯಿಂದ ಬಾಲಿವುಡ್​ನಲ್ಲಿ ಬೇಡಿಕೆ ಕಳೆದುಕೊಂಡ ನಟ ಗೋವಿಂದ?

ಗೋವಿಂದ ಅವರ ಸ್ನೇಹಿತರು ಕೂಡ ಸರಿಯಾಗಿ ಸಲಹೆ ನೀಡುತ್ತಿಲ್ಲ ಎಂಬುದು ಸುನೀತಾ ಅಹುಜಾ ಆರೋಪ. ‘ಪ್ರೇಕ್ಷಕರು 90ರ ದಶಕದ ಸಿನಿಮಾಗಳನ್ನೇ ಈಗ ನೋಡುತ್ತಿಲ್ಲ ಎಂಬುದನ್ನು ಅವರ ಸ್ನೇಹಿತರು ತಿಳಿಸಿ ಹೇಳುತ್ತಿಲ್ಲ. ಹಣಕ್ಕಾಗಿ ಅವರ ಜೀವನ ಯಾಕೆ ಹಾಳು ಮಾಡುತ್ತಿದ್ದೀರಿ? ತೂಕ ಕಡಿಮೆ ಮಾಡಿಕೊಂಡು ಹ್ಯಾಂಡ್ಸಮ್ ಆಗಿ ಕಾಣಲು ಅವರಿಗೆ ಹೇಳಿ’ ಎಂದು ಗಂಡನ ಸ್ನೇಹಿತರನ್ನು ಉದ್ದೇಶಿಸಿ ಹೇಳಿದ್ದಾರೆ ಸುನೀತಾ.

ಇದನ್ನೂ ಓದಿ: ‘ನನ್ನ ಬಿಟ್ಟುಹೋಗುವಷ್ಟು ಮೂರ್ಖನಲ್ಲ’; ಗೋವಿಂದ ಪತ್ನಿ ಸುನೀತಾ ಹೇಳಿಕೆ

90ರ ದಶಕದಲ್ಲಿ ಗೋವಿಂದ ಅವರು ಬಹುಬೇಡಿಕೆಯ ಹೀರೋ ಆಗಿದ್ದರು. 2008ರ ಬಳಿಕ ಅವರ ಚಾರ್ಮ್ ಕಡಿಮೆ ಆಯಿತು. ಆ ಬಳಿಕ ಅವರು ಕೆಲವು ಸಿನಿಮಾಗಳಲ್ಲಿ ನಟಿಸಿದರೂ ಕೂಡ ಮೊದಲಿನಂತೆ ಮಿಂಚಲು ಸಾಧ್ಯವಾಗಲಿಲ್ಲ. 2019ರಲ್ಲಿ ಗೋವಿಂದ ನಟಿಸಿದ ‘ರಂಗೀಲಾ ರಾಜ’ ಸಿನಿಮಾ ಫ್ಲಾಪ್ ಆಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.