ಸಿನಿಮಾ ಪಾತ್ರಗಳ ವಿಚಾರದಲ್ಲಿ ಒಬ್ಬೊಬ್ಬರದ್ದು ಒಂದೊಂದು ರೀತಿಯ ನಿಲುವು ಇರುತ್ತದೆ. ಕೆಲವರು ಮಡಿವಂತಿಕೆ ತೋರುತ್ತಾರೆ. ಆದರೆ, ಕೆಲವರು ಆ ರೀತಿ ಅಲ್ಲ. ಬೋಲ್ಡ್ ಪಾತ್ರಗಳನ್ನು ಮಾಡಲು ಹಿಂಜರಿಕೆ ಮಾಡುವುದಿಲ್ಲ. ಬೋಲ್ಡ್ ಕ್ಯಾರೆಕ್ಟರ್ ಮಾಡಿ ಮಿಂಚುತ್ತಾರೆ. ಈ ಬಗ್ಗೆ ಟ್ರೋಲ್ (Troll) ಆದರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಇನ್ನೂ ಕೆಲವೊಮ್ಮೆ ಅವರು ಮಾಡುವ ಬೋಲ್ಡ್ ಪಾತ್ರಗಳು ವಿವಾದ ಸೃಷ್ಟಿ ಮಾಡಿದ ಉದಾಹರಣೆ ಸಾಕಷ್ಟಿದೆ. ಕರೀನಾ ಕಪೂರ್ (Kareena Kapoor) ಅವರಿಂದ ಹಿಡಿದು ಅನೇಕ ಸೆಲೆಬ್ರಿಟಿಗಳು ಬೋಲ್ಡ್ ಪೋಸ್ಟರ್ ಮೂಲಕ ಗಮನ ಸೆಳೆದಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಕರೀನಾ ಕಪೂರ್: ಕರೀನಾ ಕಪೂರ್ ಅವರು ಬಾಲಿವುಡ್ನಲ್ಲಿ ಹಲವು ವರ್ಷಗಳಿಂದ ಆ್ಯಕ್ಟೀವ್ ಆಗಿದ್ದಾರೆ. ಅವರಿಗೆ ಸಾಕಷ್ಟು ಬೇಡಿಕೆ ಇದೆ. ಅವರು ಹಲವು ರೀತಿಯ ಪಾತ್ರಗಳನ್ನು ಮಾಡಿ ಗಮನ ಸೆಳೆದಿದ್ದಾರೆ. ಸೈಫ್ ಅಲಿ ಖಾನ್ ಜೊತೆ ಕರೀನಾ ‘ಕುರ್ಬಾನ್’ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರದ ಪೋಸ್ಟರ್ನಲ್ಲಿ ಟಾಪ್ಲೆಸ್ ಆಗಿ ಅವರು ಕಾಣಿಸಿಕೊಂಡಿದ್ದರು. ಇದು ಸಾಕಷ್ಟು ವಿವಾದ ಸೃಷ್ಟಿ ಮಾಡಿತ್ತು. ನಟಿಗೆ ಎಲ್ಲರೂ ಸಂಸ್ಕೃತಿಯ ಪಾಠ ಹೇಳಿಕೊಟ್ಟಿದ್ದರು. ಆದರೆ, ಅವರು ಇದಕ್ಕೆ ತಲೆ ಕೆಡಸಿಕೊಂಡಿಲ್ಲ.
ಇದನ್ನೂ ಓದಿ: ಹೊಸ ಫೋಟೋಶೂಟ್ನಲ್ಲಿ ಹಾಟ್ ಆಗಿ ಮಿಂಚಿದ ಪ್ರಣಿತಾ
ಪೂನಂ ಪಾಂಡೆ: ಪೂನಂ ಪಾಂಡೆ ಅವರು ಬೋಲ್ಡ್ ಪಾತ್ರಗಳ ಮೂಲಕವೇ ಗಮನ ಸೆಳೆದವರು. ಅವರ ಸುತ್ತ ಹಲವು ಕಾಂಟ್ರವರ್ಸಿಗಳು ಸುತ್ತಿಕೊಂಡಿವೆ. ‘ನಶಾ’ ಸಿನಿಮಾದಲ್ಲಿ ಪೂನಂ ಪಾಂಡೆ ನಟಿಸಿದ್ದರು. ಚಿತ್ರದ ಟೈಟಲ್ ಕಾರ್ಡ್ ಮೂಲಕ ಅವರು ಗುಪ್ತಾಂಗವನ್ನು ಮುಚ್ಚಿಕೊಂಡಿದ್ದರು. ಈ ಪೋಸ್ಟರ್ ಟ್ರೋಲ್ ಆಗಿತ್ತು.
ಸುರ್ವೀನ್ ಚಾವ್ಲಾ: ಸುರ್ವೀನ್ ಚಾವ್ಲಾ ಅವರು ‘ಹೇಟ್ ಸ್ಟೋರಿ 2’ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರದ ಪೋಸ್ಟರ್ನಲ್ಲಿ ಅವರು ಬ್ಯಾಕ್ಲೆಸ್ ಆಗಿ ಮಿಂಚಿದ್ದರು. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಬಿಸ್ನೆಸ್ ಮಾಡಿತ್ತು. ಅವರ ಪಾತ್ರದ ಕುರಿತು ಸಾಕಷ್ಟು ಚರ್ಚೆಗಳು ನಡೆದಿದ್ದವು.
ಇದನ್ನೂ ಓದಿ: ಮಾಲ್ಡೀವ್ಸ್ನಲ್ಲಿ ಸೋನು ಶ್ರೀನಿವಾಸ್ ಗೌಡ; ಇಲ್ಲಿವೆ ಹಾಟ್ ಫೋಟೋಗಳು
ರಾಧಿಕಾ ಆಪ್ಟೆ: ರಾಧಿಕಾ ಆಪ್ಟೆ ಅವರು ಮಾಡಿಕೊಂಡ ವಿವಾದಗಳು ಒಂದೆರಡಲ್ಲ. ಅವರು ಬೋಲ್ಡ್ ಪಾತ್ರಗಳನ್ನು ಮಾಡಲು ಎಂದಿಗೂ ಹಿಂದೇಟು ಹಾಕಿದವರಲ್ಲ. ‘ಪಾರ್ಚೆಡ್’ ಹೆಸರಿನ ಚಿತ್ರದಲ್ಲಿ ಅವರು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಇದೇ ರೀತಿಯಲ್ಲಿ ಸಿನಿಮಾದ ಪೋಸ್ಟರ್ ಕೂಡ ಮೂಡಿ ಬಂದಿತ್ತು.
ಕಲ್ಕಿ ಕೇಕ್ಲಾ: ಕಲ್ಕಿ ಕೇಕ್ಲಾ ಅವರು ಬಾಲಿವುಡ್ ಸಿನಿಮಾ ಆಯ್ಕೆಯಲ್ಲಿ ಸಖತ್ ಚ್ಯೂಸಿ ಆಗಿದ್ದಾರೆ. ಅವರು ‘ಮಾರ್ಗರಿಟಾ’ ಸಿನಿಮಾದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾದ ಪೋಸ್ಟರ್ ಸಾಕಷ್ಟು ಸದ್ದು ಮಾಡಿತ್ತು.
ನೇಹಾ ಧೂಪಿಯಾ: ನೇಹಾ ಧೂಪಿಯಾ ಅವರು ‘ಜ್ಯೂಲಿಸ್’ ಸಿನಿಮಾದ ಪೋಸ್ಟರ್ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದರು. ಅವರು ಬ್ಯಾಕ್ಲೆಸ್ ಆಗಿ ಗಮನ ಸೆಳೆದಿದ್ದರು. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಅಷ್ಟಾಗಿ ಸದ್ದು ಮಾಡಲೇ ಇಲ್ಲ.
ಇದನ್ನೂ ಓದಿ: ‘ಸ್ನೇಹನಾ ಪ್ರೀತಿನಾ’ ಚಿತ್ರದ ನಟಿ ಲಕ್ಷ್ಮಿ ರೈ ಹಾಟ್ ಫೋಟೋಸ್ ವೈರಲ್
ಸನ್ನಿ ಲಿಯೋನ್: ಸನ್ನಿ ಲಿಯೋನ್ ಅವರು ‘ರಾಗಿಣಿ ಎಂಎಂಎಸ್ 2’ ಚಿತ್ರದ ಮೂಲಕ ಸದ್ದು ಮಾಡಿದ್ದರು. ಅವರು ಸಂಪೂರ್ಣ ಬೆತ್ತಲಾದ ರೀತಿಯಲ್ಲಿ ಕಾಣಿಸಿಕೊಂಡಿದ್ದರು. ಈ ಮೂಲಕ ಅವರು ಸುದ್ದಿ ಆಗಿದ್ದರು. ಅವರು ಭಾರತೀಯ ಸಂಸ್ಕೃತಿಗೆ ಧಕ್ಕೆ ತರುತ್ತಿದ್ದಾರೆ ಎಂದು ಅನೇಕರು ಟೀಕೆ ಮಾಡಿದ್ದರು. ಸನ್ನಿ ಲಿಯೋನ್ ಅವರು ‘ಜಿಸ್ಮ್ 2’ ಚಿತ್ರದ ಪೋಸ್ಟರ್ ಮೂಲಕ ಗಮನ ಸೆಳೆದಿದ್ದರು. ಈ ಪೋಸ್ಟರ್ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.