Sushant Singh Rajput: ಸುಶಾಂತ್​ ವಾಸಿಸಿದ್ದ ಮನೆ ಇಂದಿಗೂ ಖಾಲಿ; ಬಾಡಿಗೆಗೆ ಬರಲು ಹೆದರುತ್ತಿರುವ ಜನ

Sushant Singh Rajput Apartment: ಸುಶಾಂತ್​ ಸಿಂಗ್​ ರಜಪೂತ್​ ನಿಧನರಾಗಿ ಎರಡೂವರೆ ವರ್ಷ ಕಳೆದಿದೆ. ಒಂದಿಲ್ಲೊಂದು ಕಾರಣಕ್ಕೆ ಅಭಿಮಾನಿಗಳು ಅವರನ್ನು ಮಿಸ್​ ಮಾಡಿಕೊಳ್ಳುತ್ತಲೇ ಇದ್ದಾರೆ.

Sushant Singh Rajput: ಸುಶಾಂತ್​ ವಾಸಿಸಿದ್ದ ಮನೆ ಇಂದಿಗೂ ಖಾಲಿ; ಬಾಡಿಗೆಗೆ ಬರಲು ಹೆದರುತ್ತಿರುವ ಜನ
ಸುಶಾಂತ್ ಸಿಂಗ್ ರಜಪೂತ್
Follow us
TV9 Web
| Updated By: ಮದನ್​ ಕುಮಾರ್​

Updated on:Dec 11, 2022 | 7:44 AM

2020ರ ಜೂನ್​ 14ರಂದು ನಟ ಸುಶಾಂತ್​ ಸಿಂಗ್​ ರಜಪೂತ್​​ (Sushant Singh Rajput) ಅವರನ್ನು ಕಳೆದುಕೊಂಡಿದ್ದು ತೀವ್ರ ನೋವಿನ ಸಂಗತಿ. ಅವರು ಇಲ್ಲದೇ ಬಾಲಿವುಡ್​ ಸೊರಗಿದೆ. ಭಿನ್ನ ಸಿನಿಮಾಗಳನ್ನು ಮಾಡುತ್ತಿದ್ದ ಪ್ರತಿಭಾವಂತ ನಟ ಇಂದು ಇಲ್ಲವಲ್ಲ ಎಂದು ಅವರ ಅಭಿಮಾನಿಗಳು ಸಖತ್​ ಮಿಸ್​ ಮಾಡಿಕೊಳ್ಳುತ್ತಿದ್ದಾರೆ. ಮುಂಬೈನ ಐಷಾರಾಮಿ ಅಪಾರ್ಟ್​ಮೆಂಟ್​ನಲ್ಲಿ ಸುಶಾಂತ್​ ವಾಸಿಸುತ್ತಿದ್ದರು. ಅವರು ನಿಧನರಾದ ಬಳಿಕ ಆ ಮನೆ (Sushant Singh Rajput Flat) ಖಾಲಿ ಇದೆ. ಹೊಸದಾಗಿ ಯಾರೂ ಕೂಡ ಬಾಡಿಗೆಗೆ ಬರುತ್ತಿಲ್ಲ. ಈ ವಿಚಾರವನ್ನು ರಿಯಲ್​ ಎಸ್ಟೇಟ್​ ಬ್ರೋಕರ್​ ಒಬ್ಬರು ಬಹಿರಂಗಪಡಿಸಿದ್ದಾರೆ. ಈ ಮನೆಗೆ ಕಾಲಿಡಲು ಜನರು ಹೆದರುತ್ತಿದ್ದಾರೆ. ಬಾಲಿವುಡ್​ (Bollywood) ಮಂದಿಗೆ ಮತ್ತೆ ಮನೆ ನೀಡಲು ಆ ಅಪಾರ್ಟ್​ಮೆಂಟ್​ ಮಾಲೀಕರು ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಸುಶಾಂತ್​ ಸಿಂಗ್ ರಜಪೂತ್​ ಅವರು ಆತ್ಮಹತ್ಯೆ ಮಾಡಿಕೊಂಡರು ಎಂಬುದು ಒಂದು ವರ್ಗದ ವಾದ. ಅವರನ್ನು ಹತ್ಯೆ ಮಾಡಲಾಯಿತು ಎಂಬುದು ಕುಟುಂಬದವರ ಆರೋಪ. ತನಿಖೆ ಪೂರ್ಣಗೊಂಡು, ಕೋರ್ಟ್​ ತೀರ್ಪು ನೀಡಿದ ಬಳಿಕವಷ್ಟೇ ಈ ವಾದಕ್ಕೆ ತೆರೆ ಬೀಳಲಿದೆ. ಸುಶಾಂತ್​ ಆತ್ಮಹತ್ಯೆ ಮಾಡಿಕೊಂಡರು ಎಂದು ನಂಬಿರುವ ಎಲ್ಲರೂ ಈ ಫ್ಲಾಟ್​ನಲ್ಲಿ ವಾಸ ಮಾಡಲು ಹೆದರುತ್ತಿದ್ದಾರೆ.

ಇದನ್ನೂ ಓದಿ
Image
ಸುಶಾಂತ್​ ಸಿಂಗ್​ ನೆರೆ ಮನೆಯವನನ್ನು ಅರೆಸ್ಟ್​ ಮಾಡಿದ ಪೊಲೀಸರು; ಇದಕ್ಕಿದೆ ಡ್ರಗ್ಸ್​ ಲಿಂಕ್​
Image
‘ಪಾರ್ಟಿ ಮಾಡಿ ದುಡ್ಡು ಖರ್ಚು ಮಾಡಲು ಮದುವೆ ಆದೆ’; ಸುಶಾಂತ್​ ಮಾಜಿ ಪ್ರೇಯಸಿಯ ಅಚ್ಚರಿಯ ಹೇಳಿಕೆ
Image
Sushant Birthday: ಸುಶಾಂತ್​ ವಿಡಿಯೋ ಹಂಚಿಕೊಂಡು ಮಿಸ್​ ಯೂ ಎಂದ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿ
Image
ರಾತ್ರಿ ಸುಶಾಂತ್​ ಜತೆ ವೈನ್​ ಕುಡಿಯುತ್ತ, ಸೋಲಿಗೆ ಕಾರಣ ಹುಡುಕಿದ್ದ ಘಟನೆ ನೆನಪಿಸಿಕೊಂಡ ಕೃತಿ ಸನೋನ್​

ಇದನ್ನೂ ಓದಿ: Sushant Singh Rajput: ‘ಸುಶಾಂತ್​ ಮೃತದೇಹ ಕಂಡಾಗಲೇ ಅದು ಆತ್ಮಹತ್ಯೆ ಅಲ್ಲ ಅಂತ ಗೊತ್ತಾಗಿತ್ತು’: ಸಹೋದರಿ ಸ್ಫೋಟಕ ಹೇಳಿಕೆ

ಈ ಅಪಾರ್ಟ್​​ಮೆಂಟ್​ ಮಾಲೀಕರು ಓರ್ವ ಎನ್​ಆರ್​ಐ. ಅವರು ಮುಂಬೈನಲ್ಲಿ ಇರುವುದಿಲ್ಲ. ಈ ಫ್ಲಾಟ್​ಗೆ ಅವರು ಪ್ರತಿ ತಿಂಗಳಿಗೆ 5 ಲಕ್ಷ ರೂಪಾಯಿ ಬಾಡಿಗೆ ನಿಗದಿ ಮಾಡಿದ್ದಾರೆ. ಇದು ಅಲ್ಲಿನ ಮಾರ್ಕೆಟ್​ ಬೆಲೆ. ಇದು ವಿವಾದಿತ ಫ್ಲಾಟ್​ ಎಂಬುದು ಗೊತ್ತಿದ್ದರೂ ಕೂಡ ಬಾಡಿಗೆ ತಗ್ಗಿಸಲು ಮಾಲೀಕರು ಸಿದ್ಧರಿಲ್ಲ. ಇದೇ ಬೆಲೆಗೆ ಅಕ್ಕ-ಪಕ್ಕದ ಅಪಾರ್ಟ್​ಮೆಂಟ್​​ನಲ್ಲಿ ಫ್ಲಾಟ್​ ಸಿಗುತ್ತಿರುವಾಗ ಈ ವಿವಾದಿತ ಜಾಗಕ್ಕೆ ಯಾಕೆ ಬರಬೇಕು ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ.

ಇದನ್ನೂ ಓದಿ: Rhea Chakraborty: ಸುಶಾಂತ್​ ಸಿಂಗ್​ ರಜಪೂತ್​ಗೆ ಡ್ರಗ್ಸ್​ ನೀಡಿದ್ದೇ ರಿಯಾ ಚಕ್ರವರ್ತಿ: ಎನ್​ಸಿಬಿ ಚಾರ್ಜ್​ಶೀಟ್​ನಲ್ಲಿ ಉಲ್ಲೇಖ

ಇದು ನಾಲ್ಕು ಬೆಡ್​ ರೂಮ್​ ಇರುವ ಫ್ಲಾಟ್​. ಮುಂಬೈನ ಬಾಂದ್ರಾದಲ್ಲಿ ಈ ಕಟ್ಟಡ ಇದೆ. ಸಮುದ್ರಕ್ಕೆ ಮುಖ ಮಾಡಿರುವ ಈ ಅಪಾರ್ಟ್​ಮೆಂಟ್​ನ ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಕೆಲವು ಸ್ಟಾರ್​ ಸೆಲೆಬ್ರಿಟಿಗಳು ಈ ಫ್ಲಾಟ್​ ಅನ್ನು ಬಾಡಿಗೆಗೆ ಪಡೆಯಲು ಮುಂದೆಬರಬಹುದು. ಆದರೆ ಅವರು ಎಷ್ಟೇ ದೊಡ್ಡ ಸೆಲೆಬ್ರಿಟಿ ಆಗಿದ್ದರೂ ಕೂಡ ಸಿನಿಮಾ ಮಂದಿಗೆ ಮನೆ ನೀಡಬಾರದು ಎಂದು ಮಾಲೀಕರು ಗಟ್ಟಿ ನಿರ್ಧಾರ ಮಾಡಿಕೊಂಡಿದ್ದಾರೆ.

ಸುಶಾಂತ್​ ಸಿಂಗ್​ ರಜಪೂತ್​​ ನಿಧನರಾಗಿ ಎರಡೂವರೆ ವರ್ಷ ಕಳೆದಿದೆ. ಒಂದಿಲ್ಲೊಂದು ಕಾರಣಕ್ಕೆ ಅಭಿಮಾನಿಗಳು ಅವರನ್ನು ಮಿಸ್​ ಮಾಡಿಕೊಳ್ಳುತ್ತಲೇ ಇದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಅವರ ಕುರಿತು ಚರ್ಚೆ ಆಗುತ್ತಲೇ ಇರುತ್ತದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:44 am, Sun, 11 December 22

ಬಾಗಲಕೋಟೆಯಲ್ಲಿ ರಸ್ತೆ ಮೇಲೆ ಅಡುಗೆ ಮಾಡಿ ನೇಕಾರರಿಂದ ಪ್ರತಿಭಟನೆ
ಬಾಗಲಕೋಟೆಯಲ್ಲಿ ರಸ್ತೆ ಮೇಲೆ ಅಡುಗೆ ಮಾಡಿ ನೇಕಾರರಿಂದ ಪ್ರತಿಭಟನೆ
ನನಗೆ ಎಲ್ಲ ಧರ್ಮವೂ ಒಂದೇ, ಓಲೈಕೆ ಮಾಡುವವನಲ್ಲ; ಸಿಎಂ ಸಿದ್ದರಾಮಯ್ಯ
ನನಗೆ ಎಲ್ಲ ಧರ್ಮವೂ ಒಂದೇ, ಓಲೈಕೆ ಮಾಡುವವನಲ್ಲ; ಸಿಎಂ ಸಿದ್ದರಾಮಯ್ಯ
6,6,6,6,4... ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ಹಾರ್ದಿಕ್
6,6,6,6,4... ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ಹಾರ್ದಿಕ್
ವಾಲ್ಮೀಕಿ ನಿಗಮ ಹಗರಣದಲ್ಲಿ ಕ್ಲೀನ್ ಚಿಟ್; ನಾಗೇಂದ್ರ ಪುನಃ ಆಗುವರೇ ಮಂತ್ರಿ?
ವಾಲ್ಮೀಕಿ ನಿಗಮ ಹಗರಣದಲ್ಲಿ ಕ್ಲೀನ್ ಚಿಟ್; ನಾಗೇಂದ್ರ ಪುನಃ ಆಗುವರೇ ಮಂತ್ರಿ?
ವಾಲ್ಮೀಕಿ ಹಗರಣ ವಿರುದ್ಧ ಪಾದಾಯಾತ್ರೆಗೆ ಅನುಮತಿ ಸಿಗಲಿಲ್ಲ: ಯತ್ನಾಳ್
ವಾಲ್ಮೀಕಿ ಹಗರಣ ವಿರುದ್ಧ ಪಾದಾಯಾತ್ರೆಗೆ ಅನುಮತಿ ಸಿಗಲಿಲ್ಲ: ಯತ್ನಾಳ್
ತಿರುಮಲದಲ್ಲಿ 8 ಅಡಿಯ ದೈತ ನಾಗರಹಾವು ಪತ್ತೆ: ವೈರಲ್ ವಿಡಿಯೋ
ತಿರುಮಲದಲ್ಲಿ 8 ಅಡಿಯ ದೈತ ನಾಗರಹಾವು ಪತ್ತೆ: ವೈರಲ್ ವಿಡಿಯೋ
ನಿನ್ನದು ನರಿ ಕಣ್ಣೀರು: ಮಹಾರಾಣಿ ಮೋಕ್ಷಿತಾ ಮೇಲೆ ಉರಿದು ಬಿದ್ದ ಮಂಜು
ನಿನ್ನದು ನರಿ ಕಣ್ಣೀರು: ಮಹಾರಾಣಿ ಮೋಕ್ಷಿತಾ ಮೇಲೆ ಉರಿದು ಬಿದ್ದ ಮಂಜು
ಅಭಿನಂದನಾ ಕಾರ್ಯಕ್ರಮಕ್ಕೆ ಸಿಎಂರ ಡೇಟ್ ಕೇಳಲು ಬಂದಿದ್ದು ಎಂದ ಯೋಗೇಶ್ವರ್
ಅಭಿನಂದನಾ ಕಾರ್ಯಕ್ರಮಕ್ಕೆ ಸಿಎಂರ ಡೇಟ್ ಕೇಳಲು ಬಂದಿದ್ದು ಎಂದ ಯೋಗೇಶ್ವರ್
ನವೆಂಬರ್ 29ರಿಂದ ರೇಣುಕಾಚಾರ್ಯ ತಂಡದಿಂದಲೂ ಒಂದು ಅಭಿಯಾನ!
ನವೆಂಬರ್ 29ರಿಂದ ರೇಣುಕಾಚಾರ್ಯ ತಂಡದಿಂದಲೂ ಒಂದು ಅಭಿಯಾನ!
ಬಂಡೀಪುರದಲ್ಲಿ ಆನೆ ಮರಿಗೆ ಹೊಂಚು ಹಾಕಿದ್ದ ಹುಲಿಯನ್ನು ಓಡಿಸಿದ ತಾಯಾನೆ
ಬಂಡೀಪುರದಲ್ಲಿ ಆನೆ ಮರಿಗೆ ಹೊಂಚು ಹಾಕಿದ್ದ ಹುಲಿಯನ್ನು ಓಡಿಸಿದ ತಾಯಾನೆ