AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sushant Singh Rajput: ‘ಸುಶಾಂತ್​ ಮೃತದೇಹ ಕಂಡಾಗಲೇ ಅದು ಆತ್ಮಹತ್ಯೆ ಅಲ್ಲ ಅಂತ ಗೊತ್ತಾಗಿತ್ತು’: ಸಹೋದರಿ ಸ್ಫೋಟಕ ಹೇಳಿಕೆ

Sushant Singh Rajput Case: ‘ನಾನು ಕ್ರಿಮಿನಲ್​ ಲಾಯರ್​. ಆತ್ಮಹತ್ಯೆ ಮಾಡಿಕೊಂಡವರ ಅನೇಕ ಕೇಸ್​ಗಳನ್ನು ನಾನು ಕಂಡಿದ್ದೇನೆ’ ಎಂದು ಸುಶಾಂತ್​ ಸಿಂಗ್ ರಜಪೂತ್​ ಸಹೋದರಿ ಪ್ರಿಯಾಂಕಾ ಸಿಂಗ್​ ಹೇಳಿದ್ದಾರೆ.

Sushant Singh Rajput: ‘ಸುಶಾಂತ್​ ಮೃತದೇಹ ಕಂಡಾಗಲೇ ಅದು ಆತ್ಮಹತ್ಯೆ ಅಲ್ಲ ಅಂತ ಗೊತ್ತಾಗಿತ್ತು’: ಸಹೋದರಿ ಸ್ಫೋಟಕ ಹೇಳಿಕೆ
ಸುಶಾಂತ್ ಸಿಂಗ್ ರಜಪೂತ್, ಪ್ರಿಯಾಂಕಾ ಸಿಂಗ್, ರಿಯಾ ಚಕ್ರವರ್ತಿ
TV9 Web
| Edited By: |

Updated on:Jul 15, 2022 | 8:57 AM

Share

ನಟ ಸುಶಾಂತ್​ ಸಿಂಗ್​ ರಜಪೂತ್​ (Sushant Singh Rajput) ಅವರನ್ನು ಕಳೆದುಕೊಂಡಿದ್ದು ನೋವಿನ ಸಂಗತಿ. ಅವರು ಇಲ್ಲ ಎಂಬ ನೋವು ಪ್ರತಿದಿನವೂ ಕುಟುಂಬದವರನ್ನು ಮತ್ತು ಆಪ್ತರನ್ನು ಕಾಡುತ್ತಿದೆ. ಅವರ ಸಾವಿಗೆ ನ್ಯಾಯ ಕೊಡಿಸಬೇಕು ಎಂದು ಅಭಿಮಾನಿಗಳಿಗೆ ಇಂದಿಗೂ ಹೋರಾಟ ಮಾಡುತ್ತಲೇ ಇದ್ದಾರೆ. ಸುಶಾಂತ್​ ಅವರದ್ದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಬಗ್ಗೆ ಇನ್ನೂ ಅಂತಿಮ ನಿರ್ಧಾರಕ್ಕೆ ಬರಲಾಗಿಲ್ಲ. ಅಂತಿಮವಾಗಿ ಕೋರ್ಟ್​ ಯಾವ ತೀರ್ಪು ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ. ಈ ನಡುವೆ ಸುಶಾಂತ್​ ಸಿಂಗ್​ ರಜಪೂತ್​ ಸಹೋದರಿ ಪ್ರಿಯಾಂಕಾ ಸಿಂಗ್​ (Priyanka Singh) ಅವರು ಕೆಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ವೃತ್ತಿಯಲ್ಲಿ ಲಾಯರ್​ ಆಗಿರುವ ಅವರು ತಮ್ಮ ಸಹೋದರನ ಸಾವಿನ ಬಗ್ಗೆ ಹಲವು ವಿವರಗಳನ್ನು ಹಂಚಿಕೊಂಡಿದ್ದಾರೆ. ರಿಯಾ ಚಕ್ರವರ್ತಿ (Rhea Chakraborty) ಮೇಲೆ ಕೆಲವು ಆರೋಪಗಳನ್ನು ಅವರು ಹೊರಿಸಿದ್ದಾರೆ.

2020ರ ಜೂನ್​ 14ರಂದು ಮುಂಬೈನ ಅಪಾರ್ಟ್​ಮೆಂಟ್​ನಲ್ಲಿ ಸುಶಾಂತ್​ ಸಿಂಗ್​ ರಜಪೂತ್​ ಅವರ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆ ಆಗಿತ್ತು. ಆ ಘಟನೆಯನ್ನು ಪ್ರಿಯಾಂಕಾ ಸಿಂಗ್​ ಅವರು ಮತ್ತೆ ಈಗ ನೆನಪು ಮಾಡಿಕೊಂಡಿದ್ದಾರೆ. ‘ಇಂಡಿಯಾ ನ್ಯೂಸ್​’ಗೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರಗಳನ್ನು ತಿಳಿಸಿದ್ದಾರೆ.

‘ನಾನು ಕ್ರಿಮಿನಲ್​ ಲಾಯರ್​. ವರದಕ್ಷಿಣೆ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡವರ ಅನೇಕ ಕೇಸ್​ಗಳನ್ನು ನಾನು ಕಂಡಿದ್ದೇನೆ. ಕಣ್ಣುಗಳು ಹೊರಗೆ ಬಂದಿರುತ್ತವೆ. ನಾಲಿಗೆ ಹೊರಚಾಚಿರುತ್ತದೆ. ನನ್ನ ಸಹೋದರನ ದೇಹದಲ್ಲಿ ಆ ರೀತಿ ಏನೂ ಆಗಿರಲಿಲ್ಲ. ಕೆಲವು ದಿನಗಳ ಬಳಿಕ ನಾನು ಆ ರೂಮ್​ಗೆ ಹೋಗಿ ನೋಡಿದೆ. ಬೆಡ್​ ಮತ್ತು ಫ್ಯಾನ್​ ನಡುವೆ ಸುಶಾಂತ್​ನ ಎತ್ತರದಷ್ಟು​ ಅಂತರ ಕೂಡ ಇರಲಿಲ್ಲಿ’ ಎಂದು ಪ್ರಿಯಾಂಕಾ ಸಿಂಗ್​ ಹೇಳಿದ್ದಾರೆ.

ಇದನ್ನೂ ಓದಿ
Image
ಸುಶಾಂತ್​ ಸಿಂಗ್​ ನೆರೆ ಮನೆಯವನನ್ನು ಅರೆಸ್ಟ್​ ಮಾಡಿದ ಪೊಲೀಸರು; ಇದಕ್ಕಿದೆ ಡ್ರಗ್ಸ್​ ಲಿಂಕ್​
Image
‘ಪಾರ್ಟಿ ಮಾಡಿ ದುಡ್ಡು ಖರ್ಚು ಮಾಡಲು ಮದುವೆ ಆದೆ’; ಸುಶಾಂತ್​ ಮಾಜಿ ಪ್ರೇಯಸಿಯ ಅಚ್ಚರಿಯ ಹೇಳಿಕೆ
Image
Sushant Birthday: ಸುಶಾಂತ್​ ವಿಡಿಯೋ ಹಂಚಿಕೊಂಡು ಮಿಸ್​ ಯೂ ಎಂದ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿ
Image
ರಾತ್ರಿ ಸುಶಾಂತ್​ ಜತೆ ವೈನ್​ ಕುಡಿಯುತ್ತ, ಸೋಲಿಗೆ ಕಾರಣ ಹುಡುಕಿದ್ದ ಘಟನೆ ನೆನಪಿಸಿಕೊಂಡ ಕೃತಿ ಸನೋನ್​

‘2019ರಲ್ಲಿ ರಿಯಾ ಚಕ್ರವರ್ತಿ ಬಂದ ಬಳಿಕ ಸುಶಾಂತ್​ ಜೀವನ ಹಾಳಾಗಲು ಶುರು ಆಯಿತು. ನನ್ನ ಮತ್ತು ಆತನ ನಡುವೆ ಭಿನ್ನಾಭಿಪ್ರಾಯ ಮೂಡಲು ಶುರುವಾಗಿದ್ದೇ ಆಗ. ನಂತರದ 6 ದಿನಗಳಲ್ಲಿ ಇಷ್ಟೆಲ್ಲ ಆಯಿತು. ಯಾರೋ ಬೇಕಂತಲೇ ಸುಶಾಂತ್​ ಬದುಕಿನಲ್ಲಿ ರಿಯಾಳ ಎಂಟ್ರಿ ಆಗುವಂತೆ ಮಾಡಿದ್ದರು’ ಎಂಬುದು ಪ್ರಿಯಾಂಕಾ ಸಿಂಗ್​ ಅಭಿಪ್ರಾಯ.

ರಿಯಾ ವಿರುದ್ಧ ಚಾರ್ಜ್​ಶೀಟ್​:

ಸುಶಾಂತ್​ ಸಿಂಗ್​ ರಜಪೂತ್​ ಸಾವಿಗೆ ಸಂಬಂಧಿಸಿದ ಡ್ರಗ್ಸ್​ ಪ್ರಕರಣದಲ್ಲಿ ಎನ್​ಸಿಬಿ ಇತ್ತೀಚೆಗೆ ಚಾರ್ಜ್​ಶೀಟ್​ ಸಲ್ಲಿಕೆ ಮಾಡಿದೆ. ಅದರ ಅನ್ವಯ, ರಿಯಾ ಚಕ್ರವರ್ತಿ ಅವರ ಮೇಲೆ ಹಲವು ಆರೋಪಗಳನ್ನು ಮಾಡಲಾಗಿದೆ. ಸುಶಾಂತ್​ ಸಿಂಗ್​ ರಜಪೂತ್​ಗೆ ಗಾಂಜಾ ಮುಂತಾದ ಮಾದಕ ವಸ್ತುಗಳನ್ನು ಪೂರೈಸಿದ್ದೇ ರಿಯಾ ಚಕ್ರವರ್ತಿ ಎಂದು ಉಲ್ಲೇಖ ಮಾಡಲಾಗಿದೆ. ಇದರಿಂದ ಅವರಿಗೆ ಸಂಕಷ್ಟ ಎದುರಾಗಿದೆ. ಒಂದು ವೇಳೆ ಆರೋಪ ಸಾಬೀತಾದರೆ ರಿಯಾ ಚಕ್ರವರ್ತಿಗೆ 10 ವರ್ಷ ಜೈಲು ಶಿಕ್ಷೆ ಆಗುವ ಸಾಧ್ಯತೆ ಇದೆ.

Published On - 8:57 am, Fri, 15 July 22

ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ