‘ತಾರೆ ಜಮೀನ್ ಪರ್’ನಲ್ಲಿ ನಟಿಸಿದ್ದ ದರ್ಶೀಲ್ ಈಗ ಹೇಗಿದ್ದಾರೆ ನೋಡಿ; ಕಣ್ಣೀರಲ್ಲಿ ಕೈ ತೊಳೆದಿದ್ದ ಕಲಾವಿದ

ರಂಗಭೂಮಿಯಲ್ಲಿ ಒಂದಷ್ಟು ವರ್ಷ ಕಳೆದರು ದರ್ಶೀಲ್. ಆಗ ಹಲವು ನಾಟಕಗಳಲ್ಲಿ ನಟಿಸಿದ್ದಾರೆ ಅವರು. ಹಲವು ಕಡೆಗಳಲ್ಲಿ ಸುತ್ತಾಟ ನಡೆಸಿದರು. ಒಳಗಿರುವ ನಟನ್ನು ಹುಡುಕುತ್ತಿದ್ದ ಅವರು ಒಳ್ಳೆಯ ಸ್ಕ್ರಿಪ್ಟ್​ಗಾಗಿ ಹುಡುಕಾಡಿದ್ದಾರೆ.

‘ತಾರೆ ಜಮೀನ್ ಪರ್’ನಲ್ಲಿ ನಟಿಸಿದ್ದ ದರ್ಶೀಲ್ ಈಗ ಹೇಗಿದ್ದಾರೆ ನೋಡಿ; ಕಣ್ಣೀರಲ್ಲಿ ಕೈ ತೊಳೆದಿದ್ದ ಕಲಾವಿದ
ದರ್ಶೀಲ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Oct 09, 2023 | 8:54 AM

‘ತಾರೇ ಜಮೀನ್​ ಪರ್’ ಸಿನಿಮಾದಲ್ಲಿ ನಟಿಸುವ ಮೂಲಕ ಫೇಮಸ್ ಆದವರು ದರ್ಶೀಲ್ ಸಫಾರಿ (Darsheel Safary ). ಈ ಚಿತ್ರದಲ್ಲಿ ನಟಿಸುವಾಗ ಅವರಿಗೆ 10 ವರ್ಷವೂ ತುಂಬಿರಲಿಲ್ಲ. ಇಷ್ಟು ಸಣ್ಣ ವಯಸ್ಸಿಗೆ ಖ್ಯಾತಿ ಪಡೆದುಕೊಳ್ಳೋದು ಅಷ್ಟು ಸುಲಭ ವಿಚಾರ ಅಲ್ಲವೇ ಅಲ್ಲ. ಈಗ ಅವರಿಗೆ 26 ವರ್ಷ. ಅವರು ತಮ್ಮ ಜೀವನದಲ್ಲಿ ಅನುಭವಿಸಿದ ಕಷ್ಟಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಸಣ್ಣ ವಯಸ್ಸಿನಲ್ಲಿ ಖ್ಯಾತಿ ಗಳಿಸಿದ್ದರಿಂದ ಅವರಿಗೆ ಒತ್ತಡ ಎದುರಾಗಿತ್ತಂತೆ.

ರೆಡಿಯೋ ಜಾಕಿ ಸಿದ್ದಾರ್ಥ್ ಕಣ್ಣನ್ ಜೊತೆ ದರ್ಶೀಲ್ ಮಾತನಾಡಿದ್ದಾರೆ. ಸುತ್ತಲೂ ಇರುವವರು ದರ್ಶೀಲ್ ಅದ್ಭುತಗಳನ್ನು ಸೃಷ್ಟಿಸಲಿ ಎಂದು ನಿರೀಕ್ಷಿಸುತ್ತಿದ್ದರಂತೆ. ಇದರಿಂದ ಅವರಿಗೆ ಏನು ಮಾಡಬೇಕು ಎನ್ನುವುದೇ ತೋಚುತ್ತಿರಲಿಲ್ಲ. ‘ನಾನು ಶಿಕ್ಷಣ ಪಡೆಯುವದರಲ್ಲಿ ಬ್ಯುಸಿ ಆಗಿದ್ದೆ. ಈ ಕಾರಣದಿಂದ ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದೆ. ಹೀಗಾಗಿ ಒಳ್ಳೆಯ ಸ್ಟೆಪ್ ತೆಗೆದುಕೊಳ್ಳಲು ಇಚ್ಛಿಸುತ್ತಿದ್ದೆ. ಶಿಕ್ಷಣ ಪಡೆದು ಬಳಿಕ ನಾನು ಬ್ರೇಕ್ ತೆಗೆದುಕೊಳ್ಳಲು ನಿರ್ಧರಿಸಿದ್ದೆ. ಆ ಸಮಯದಲ್ಲಿ ಜೀವನದಲ್ಲಿ ಏನು ಮಾಡಬೇಕು ಎಂಬ ಬಗ್ಗೆ ನಾನು ಆತ್ಮಾವಲೋಕನ ಮಾಡಿಕೊಳ್ಳಬೇಕಿತ್ತು’ ಎಂದಿದ್ದಾರೆ’ ಅವರು.

ರಂಗಭೂಮಿಯಲ್ಲಿ ಒಂದಷ್ಟು ವರ್ಷ ಕಳೆದರು ದರ್ಶೀಲ್. ಆಗ ಹಲವು ನಾಟಕಗಳಲ್ಲಿ ನಟಿಸಿದ್ದಾರೆ ಅವರು. ಹಲವು ಕಡೆಗಳಲ್ಲಿ ಸುತ್ತಾಟ ನಡೆಸಿದರು. ಒಳಗಿರುವ ನಟನ್ನು ಹುಡುಕುತ್ತಿದ್ದ ಅವರು ಒಳ್ಳೆಯ ಸ್ಕ್ರಿಪ್ಟ್​ಗಾಗಿ ಹುಡುಕಾಡಿದ್ದಾರೆ. ಸದ್ಯ ಅವರು ಮುಂದಿನ ಸಿನಿಮಾ ‘ಹುಕುಸ್ ಬುಕುಸ್’ ಸಿನಿಮಾ ಪ್ರಮೋಷನ್ ಮಾಡುತ್ತಿದ್ದಾರೆ. ಕೆಲವು ಸಿನಿಮಾಗಳಲ್ಲಿ ಈಗಾಗಲೇ ಅವರು ಬಣ್ಣ ಹಚ್ಚಿದ್ದಾರೆ.

10 ವರ್ಷದವಿನದ್ದಾಗಲೇ ದರ್ಶೀಲ್ ಅವರು ಭರ್ಜರಿ ಗೆಲುವು ಕಂಡರು. ಎಲ್ಲರೂ ಬಂದು ಅವರನ್ನು ಹಗ್ ಮಾಡುತ್ತಿದ್ದರಂತೆ. ಜನರು ಏಕೆ ಇಷ್ಟೊಂದು ಪ್ರೀತಿ ತೋರಿಸುತ್ತಿದ್ದಾರೆ ಎಂಬುದೇ ಅವರಿಗೆ ತಿಳಿದಿರಲಿಲ್ಲ.  ‘ನಾನು ಪ್ರತಿದಿನ ಮನೆಗೆ ಹೋಗಿ ಅಳುತ್ತಿದ್ದೆ. ನನ್ನ ಹೆತ್ತವರು ಮತ್ತು ಅಜ್ಜಿಯ ವಯಸ್ಸಿನವರು ನನ್ನ ಬಳಿಗೆ ಬಂದು ತುಂಬಾ ಪ್ರೀತಿಯನ್ನು ತೋರಿಸುತ್ತಿದ್ದರು. ಎಲ್ಲವೂ ನನ್ನ ಮನಸ್ಸಿನಲ್ಲಿ ದಾಖಲಾಗುತ್ತಿತ್ತು. ಆದರೆ ಏನಾಗುತ್ತಿದೆ ಎಂದು ನನಗೆ ಅರ್ಥವಾಗಲಿಲ್ಲ. ಇಷ್ಟೊಂದು ಹೈಪ್​ ಏಕೆ ಎನ್ನುವ ಪ್ರಶ್ನೆ ಮೂಡುತ್ತಿತ್ತು’ ಎಂದಿದ್ದಾರೆ ದರ್ಶೀಲ್.

ಇದನ್ನೂ ಓದಿ:ಹಿಂದೂ ಸಂಪ್ರದಾಯದಂತೆ ಪೂಜೆ ಮಾಡಿದ ನಟ ಆಮಿರ್​ ಖಾನ್, ಮಾಜಿ ಪತ್ನಿ ಕಿರಣ್​ ರಾವ್​ ಭಾಗಿ 

ದರ್ಶೀಲ್ ಅವರು ‘ತಾರೇ ಜಮೀನ್​ ಪರ್’ ಚಿತ್ರವನ್ನು ಹಲವು ಬಾರಿ ವೀಕ್ಷಿಸಿದ್ದರು. ಹಲವು ಶೋಗಳಲ್ಲಿ ಅವರು ನಿದ್ರಿಸಿದ್ದರು. ಜನರ ಹರ್ಷೋದ್ಘಾರ ಕೇಳಿ ಅವರಿಗೆ ಒತ್ತಡದ ಫೀಲ್ ಆಗಿತ್ತು.  ಆಮಿರ್ ಖಾನ್ ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಡಿಸ್ಲೆಕ್ಸಿಯಾದಿಂದ ಬಳಲುತ್ತಿರುವ ಚಿಕ್ಕ ಹುಡುಗನ ಕುರಿತಾಗಿ ಈ ಸಿನಿಮಾ ಇತ್ತು. ಅವನ ಸಮಸ್ಯೆಯನ್ನು ಅರ್ಥಮಾಡಿಕೊಳ್ಳದ ಹೆತ್ತವರು ಅವನನ್ನು ಬೋರ್ಡಿಂಗ್ ಶಾಲೆಗೆ ಸೇರಿಸುತ್ತಾರೆ. ಆತನಿಗೆ ಶಿಕ್ಷಕನ (ಆಮಿರ್ ಖಾನ್) ಭೇಟಿಯಾಗುತ್ತದೆ. ದರ್ಶೀಲ್ ನಟನೆಗೆ ಮೆಚ್ಚುಗೆ ಸಿಕ್ಕಿತ್ತು. ಸದ್ಯ ಅವರಿಗೆ ಎಲ್ಲವೂ ಅರ್ಥವಾಗಿದೆ. ನಿಧಾನವಾಗಿ ನಟನೆಯಲ್ಲಿ ಅವರು ತೊಡಗಿಕೊಳ್ಳುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!