ಪ್ರಭಾಸ್, ಶಾರುಖ್ ಖಾನ್ ಅಭಿಮಾನಿಗಳಿಂದ ವಿವೇಕ್ ಅಗ್ನಿಹೋತ್ರಿಗೆ ನಿಂದನೆ; ಬೇಸರ ಹೊರಹಾಕಿದ ನಿರ್ದೇಶಕ

ಸೆಪ್ಟೆಂಬರ್ 28ರಂದು ‘ದಿ ವ್ಯಾಕ್ಸಿನ್ ವಾರ್’ ಹಾಗೂ ‘ಸಲಾರ್’ ಸಿನಿಮಾ ಒಟ್ಟಿಗೆ ರಿಲೀಸ್ ಆಗಬೇಕಿತ್ತು. ಆದರೆ, ಕಾರಣಾಂತರಗಳಿಂದ ‘ಸಲಾರ್’ ಸಿನಿಮಾದ ರಿಲೀಸ್ ದಿನಾಂಕ ಮುಂದಕ್ಕೆ ಹೋಗಿದೆ. ಆರಂಭದಲ್ಲಿ ಪ್ರಭಾಸ್ ಅಭಿಮಾನಿಗಳು ವಿವೇಕ್ ಅವರನ್ನು ಟ್ರೋಲ್ ಮಾಡುತ್ತಿದ್ದರಂತೆ. ಈ ವಿಚಾರದ ಬಗ್ಗೆ ಅವರು ಮಾತನಾಡಿದ್ದಾರೆ.

ಪ್ರಭಾಸ್, ಶಾರುಖ್ ಖಾನ್ ಅಭಿಮಾನಿಗಳಿಂದ ವಿವೇಕ್ ಅಗ್ನಿಹೋತ್ರಿಗೆ ನಿಂದನೆ; ಬೇಸರ ಹೊರಹಾಕಿದ ನಿರ್ದೇಶಕ
ವಿವೇಕ್​ ಅಗ್ನಿಹೋತ್ರಿ, ಶಾರುಖ್ ಖಾನ್, ಪ್ರಭಾಸ್​
Updated By: ಮದನ್​ ಕುಮಾರ್​

Updated on: Sep 26, 2023 | 5:27 PM

‘ದಿ ಕಾಶ್ಮೀರ್ ಫೈಲ್ಸ್’ ಯಶಸ್ಸಿನ ಬಳಿಕ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ (Vivek Agnihotri) ಸ್ಟಾರ್ ಪಟ್ಟ ಸಿಕ್ಕಿದೆ. ಈ ಕಾರಣಕ್ಕೋ ಏನೋ ಅವರು ಅನೇಕ ವಿಚಾರಗಳ ಬಗ್ಗೆ ಮಾತನಾಡುತ್ತಿದ್ದಾರೆ. ಹಲವು ಸ್ಟಾರ್ ಹೀರೋಗಳನ್ನು ಟೀಕಿಸುತ್ತಿದ್ದಾರೆ. ಅವರಿಗೆ ಬಾಲಿವುಡ್​ನಲ್ಲಿ ಅನೇಕರನ್ನು ಕಂಡರೆ ಆಗುವುದಿಲ್ಲ. ಸ್ಟಾರ್ ಹೀರೋಗಳನ್ನು ನೇರವಾಗಿ ಹಾಗೂ ಪರೋಕ್ಷವಾಗಿ ಅವರು ಅಣಕಿಸಿದ್ದಾರೆ. ಇದೇ ಅವರಿಗೆ ಮುಳುವಾಗಿದೆ. ಈಗ ಅವರು ಶಾರುಖ್ ಖಾನ್ (Shah Rukh Khan) ಹಾಗೂ ಪ್ರಭಾಸ್ (Prabhas) ಅಭಿಮಾನಿಗಳಿಂದ ನಿಂದನೆಗೆ ಒಳಗಾಗಿರುವುದಾಗಿ ಹೇಳಿದ್ದಾರೆ. ಈ ಬಗ್ಗೆ ಅವರು ಬೇಸರ ಹೊರಹಾಕಿದ್ದಾರೆ.

ಸೆಪ್ಟೆಂಬರ್ 28ರಂದು ‘ದಿ ವ್ಯಾಕ್ಸಿನ್ ವಾರ್’ ಹಾಗೂ ‘ಸಲಾರ್’ ಸಿನಿಮಾ ಒಟ್ಟಿಗೆ ರಿಲೀಸ್ ಆಗಬೇಕಿತ್ತು. ಎರಡೂ ಸಿನಿಮಾಗಳ ಮಧ್ಯೆ ಕ್ಲ್ಯಾಶ್ ಏರ್ಪಡುವುದರಲ್ಲಿತ್ತು. ಆದರೆ, ಅದು ಮಿಸ್ ಆಗಿದೆ. ಕಾರಣಾಂತರಗಳಿಂದ ‘ಸಲಾರ್’ ಸಿನಿಮಾದ ರಿಲೀಸ್ ದಿನಾಂಕ ಮುಂದಕ್ಕೆ ಹೋಗಿದೆ. ಆರಂಭದಲ್ಲಿ ಪ್ರಭಾಸ್ ಅಭಿಮಾನಿಗಳು ವಿವೇಕ್ ಅವರನ್ನು ಟ್ರೋಲ್ ಮಾಡುತ್ತಿದ್ದರಂತೆ. ಈ ವಿಚಾರದ ಬಗ್ಗೆ ಅವರು ಮಾತನಾಡಿದ್ದಾರೆ.

ಇದನ್ನೂ ಓದಿ: ವಿಜ್ಞಾನಿಗಳಿಂದಲೂ ಮೆಚ್ಚುಗೆ ಪಡೆದ ‘ದಿ ವ್ಯಾಕ್ಸಿನ್​ ವಾರ್​’; ಖುಷಿ ಹಂಚಿಕೊಂಡ ಪಲ್ಲವಿ ಜೋಶಿ

‘ದಿ ವ್ಯಾಕ್ಸಿನ್ ವಾರ್ ಸಿನಿಮಾ ಸಣ್ಣ ಸಿನಿಮಾ. ಇಲ್ಲಿ ಸ್ಟಾರ್​ಗಳು ಇಲ್ಲ. ನಮ್ಮ ಸಿನಿಮಾದ ಬಜೆಟ್ 12.5 ಕೋಟಿ ರೂಪಾಯಿ. ಮತ್ತೊಂದು ಸಿನಿಮಾ ಸಲಾರ್. ಅದರ ಬಜೆಟ್ 300 ಕೋಟಿ ರೂಪಾಯಿ. ಅವರ ಅಭಿಮಾನಿಗಳು ನನ್ನನ್ನು ನಿಂದಿಸಿದ್ದಾರೆ. ಟ್ರೋಲ್ ಮಾಡಿದ್ದಾರೆ. ಇವರನ್ನು ಓಡಿಸಿ, ಬರಲು ಬಿಡಬೇಡಿ ಎನ್ನುತ್ತಿದ್ದರು. ಆದರೆ, ಅವರು ಓಡಿ ಹೋದರು’ ಎಂದಿದ್ದಾರೆ ವಿವೇಕ್ ಅಗ್ನಿಹೋತ್ರಿ.

ಇದನ್ನೂ ಓದಿ: ‘ದಿ ವ್ಯಾಕ್ಸಿನ್​ ವಾರ್​’ ಚಿತ್ರ ಕೊವಿಡ್​ ಬಗ್ಗೆ ಅಲ್ಲ; ಹಾಗಾದ್ರೆ ಇದ್ರಲ್ಲಿ ಏನಿದೆ? ಉತ್ತರಿಸಿದ ವಿವೇಕ್​ ಅಗ್ನಿಹೋತ್ರಿ

ಶಾರುಖ್ ಖಾನ್ ಅವರನ್ನು ವಿವೇಕ್ ಅಗ್ನಿಹೋತ್ರಿ ಅವರನ್ನು ಟೀಕಿಸಿದ್ದಾರೆ. ‘ಜವಾನ್’ ಯಶಸ್ಸಿನ ಬಳಿಕ ವಿವೇಕ್ ಅವರನ್ನು ಶಾರುಖ್ ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ. ಹೆಸರನ್ನು ಉಲ್ಲೇಖಿಸದೇ ವಿವೇಕ್ ಅವರು ಈ ಬಗ್ಗೆ ಮಾತನಾಡಿದ್ದಾರೆ. ‘ದೊಡ್ಡ ಮಟ್ಟದಲ್ಲಿ ಹಿಟ್ ಆದ ಸಿನಿಮಾದ ಅಭಿಮಾನಿಗಳು ನನ್ನನ್ನು ಟ್ರೋಲ್ ಮಾಡುತ್ತಿದ್ದಾರೆ. ನಾನು ಅವರ ಸಿನಿಮಾ ನೋಡಬೇಡಿ ಎಂದು ಎಂದಿಗೂ ಹೇಳಿಲ್ಲ’ ಎಂದು ಬೇಸರ ಹೊರಹಾಕಿದ್ದಾರೆ ವಿವೇಕ್.

ಇದನ್ನೂ ಓದಿ: ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ‘ದಿ ವ್ಯಾಕ್ಸಿನ್​ ವಾರ್​’ ಇಲ್ಲ; ಅಚ್ಚರಿ ವಿಷಯ ತಿಳಿಸಿದ ವಿವೇಕ್​ ಅಗ್ನಿಹೋತ್ರಿ

ಪ್ರಭಾಸ್ ಅಭಿಮಾನಿಗಳಿಗೆ ವಿವೇಕ್ ಅಗ್ನಿಹೋತ್ರಿ ಮೇಲೆ ಸಿಟ್ಟು ಬರಲು ಒಂದು ಪ್ರಮುಖ ಕಾರಣ ಇದೆ. ‘ರಾಧೆ ಶ್ಯಾಮ್’ ಹಾಗೂ ‘ದಿ ಕಾಶ್ಮೀರ್ ಫೈಲ್ಸ್’ ಒಟ್ಟಿಗೆ ರಿಲೀಸ್ ಆಯಿತು. ಪ್ರಭಾಸ್ ಸಿನಿಮಾ ಸೋತಿತ್ತು ಮತ್ತು ‘ದಿ ಕಾಶ್ಮೀರ್ ಫೈಲ್ಸ್’ ಹಿಟ್ ಆಯಿತು. ‘ಸಲಾರ್’ ಹಾಗೂ ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ಒಟ್ಟಿಗೆ ರಿಲೀಸ್ ಆಗುವ ಸಂದರ್ಭದಲ್ಲಿ ‘ಇತಿಹಾಸ ಮತ್ತೆ ಮರುಕುಳಿಸುತ್ತಿದೆ’ ಎಂದು ವಿವೇಕ್ ಅವರು ಹೇಳಿಕೆ ನೀಡಿದ್ದಾಗಿ ಮಾಧ್ಯಮಗಳು ವರದಿ ಮಾಡಿದ್ದವು. ಇದು ಪ್ರಭಾಸ್ ಅಭಿಮಾನಿಗಳ ಕೋಪಕ್ಕೆ ಕಾರಣ ಆಗಿತ್ತು. ‘ದಿ ವ್ಯಾಕ್ಸಿನ್ ವಾರ್’ ಸಿನಿಮಾದಲ್ಲಿ ನಾನಾ ಪಾಟೇಕರ್, ಅನುಪಮ್ ಖೇರ್, ಸಪ್ತಮಿ ಗೌಡ, ಪಲ್ಲವಿ ಜೋಶಿ ಮೊದಲಾದವರು ನಟಿಸುತ್ತಿದ್ದಾರೆ. ಪಲ್ಲವಿ ಜೋಶಿ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಹಿಂದಿ, ತಮಿಳು, ತೆಲುಗು ಭಾಷೆಯಲ್ಲಿ ಈ ಚಿತ್ರ ರಿಲೀಸ್ ಆಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.