ತಪ್ಪಿತಸ್ಥರನ್ನು ಕ್ಷಮಿಸುವುದಿಲ್ಲ ಪ್ರಭಾಸ್; ಕೇಸ್ ದಾಖಲು ಮಾಡಿದ ‘ಕಲ್ಕಿ’ ಟೀಂ

‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಪ್ರಭಾಸ್ ಹಲವು ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಅವರ ಲುಕ್​ನ ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಮಾಡುತ್ತಾ ಹೋದರೆ ಅದರಿಂದ ಸಿನಿಮಾಗೆ ತೊಂದರೆ ಆಗಲಿದೆ. ಸಿನಿಮಾ ತಂಡದಲ್ಲಿ ಇದ್ದುಕೊಂಡು ಈ ರೀತಿ ಮಾಡಿರೋದು ಟೀಂಗೆ ಬೇಸರ ಮೂಡಿಸಿದೆ. ಶೀಘ್ರವೇ ತಪ್ಪಿತಸ್ಥರ ಬಂಧನ ಆಗಲಿದೆ ಎನ್ನುವ ಭರವಸೆಯಲ್ಲಿ ತಂಡ ಇದೆ.

ತಪ್ಪಿತಸ್ಥರನ್ನು ಕ್ಷಮಿಸುವುದಿಲ್ಲ ಪ್ರಭಾಸ್; ಕೇಸ್ ದಾಖಲು ಮಾಡಿದ ‘ಕಲ್ಕಿ’ ಟೀಂ
ಪ್ರಭಾಸ್​
Follow us
| Edited By: ಮದನ್​ ಕುಮಾರ್​

Updated on: Sep 18, 2023 | 6:08 PM

ಸಿನಿಮಾ ಮಾಡಲು ನಿರ್ಮಾಪಕರು ಕೋಟಿ ಕೋಟಿ ರೂಪಾಯಿ ಹಣ ಹೂಡಿಕೆ ಮಾಡಿರುತ್ತಾರೆ. ಆದರೆ, ಕೆಲವರು ಮಾಡುವ ತಪ್ಪಿನಿಂದ ನಿರ್ಮಾಪಕರು ನಷ್ಟ ಅನುಭವಿಸಬೇಕಾಗುತ್ತದೆ. ಸಿನಿಮಾ ಸೆಟ್​ನ ಫೋಟೋಗಳನ್ನು ಕೆಲವರು ಲೀಕ್ (video Leak) ಮಾಡುತ್ತಾರೆ. ಇದು ಇಂದು-ನಿನ್ನೆಯ ಸಮಸ್ಯೆ ಅಲ್ಲ. ಮೊಬೈಲ್ ಬಳಕೆ ಹೆಚ್ಚಿದಾಗಿನಿಂದ ಈ ತೊಂದರೆ ಎದುರಾಗುತ್ತಲೇ ಇದೆ. ಈ ರೀತಿ ಫೋಟೋ ಹಾಗೂ ವಿಡಿಯೋ ಲೀಕ್ ಆದರೆ ಸಿನಿಮಾ ಬಗ್ಗೆ ಇರೋ ನಿರೀಕ್ಷೆ ಕಡಿಮೆ ಆಗುತ್ತದೆ. ಹೀಗಾಗಬಾರದು ಎಂದು ಅನೇಕ ತಂಡಗಳು ಪ್ರಯತ್ನಿಸುತ್ತವೆ. ಆದರೆ, ಸಾಧ್ಯವಾಗುವುದಿಲ್ಲ. ಈಗ ಪ್ರಭಾಸ್ (Prabhas) ನಟನೆಯ ‘ಕಲ್ಕಿ 2898 ಎಡಿ’ (Kalki 2898 AD) ಚಿತ್ರಕ್ಕೂ ಇದೇ ಸಮಸ್ಯೆ ಆಗಿದೆ. ಆದರೆ, ಅವರು ಸುಮ್ಮನೆ ಕುಳಿತಿಲ್ಲ. ಬದಲಿಗೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.

ಇತ್ತೀಚೆಗೆ ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಸಿನಿಮಾ ಸೆಟ್​ನ ವಿಡಿಯೋ ಹಾಗೂ ಫೋಟೋಗಳನ್ನು ಲೀಕ್ ಮಾಡಲಾಗಿತ್ತು. ರಾಮ್ ಚರಣ್ ಲುಕ್​ ಅನ್ನು ರಿವೀಲ್ ಮಾಡಲಾಗಿತ್ತು. ಈ ಹಿನ್ನೆಯಲ್ಲಿ ದೂರು ನೀಡಲಾಗಿತ್ತು. ‘ಕಲ್ಕಿ 2898 ಎಡಿ’ ಸಿನಿಮಾ ತಂಡ ಕೂಡ ಇದೇ ಹಾದಿ ಹಿದಿದೆ. ಸೆಟ್​ನಲ್ಲಿ ಪ್ರಭಾಸ್ ನಿಂತಿರುವ ಫೋಟೋಗಳನ್ನು ಸೆರೆಹಿಡಿದು ಲೀಕ್ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಪ್ರಭಾಸ್ ಶಿವನ ಪಾತ್ರ ಮಾಡೋದನ್ನು ಒಪ್ಪಿಕೊಂಡರಾ ವಿಷ್ಣು ಮಂಚು? ಈ ಟ್ವೀಟ್​ನ ಅರ್ಥವೇನು?

‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಪ್ರಭಾಸ್ ಹಲವು ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಹೀಗಿರುವಾಗ ಅವರ ಲುಕ್​ನ ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಮಾಡುತ್ತಾ ಹೋದರೆ ಅದರಿಂದ ಸಿನಿಮಾಗೆ ತೊಂದರೆ ಆಗಲಿದೆ. ಸಿನಿಮಾ ತಂಡದಲ್ಲಿ ಇದ್ದುಕೊಂಡು ಈ ರೀತಿ ಮಾಡಿರೋದು ಟೀಂಗೆ ಬೇಸರ ಮೂಡಿಸಿದೆ. ಶೀಘ್ರವೇ ತಪ್ಪಿತಸ್ಥರ ಬಂಧನ ಆಗಲಿದೆ ಎನ್ನುವ ಭರವಸೆಯಲ್ಲಿ ತಂಡ ಇದೆ.

ಇದನ್ನೂ ಓದಿ: ‘ಸಲಾರ್’ ರಿಲೀಸ್ ಪೋಸ್ಟ್​ಪೋನ್ ಆದ ಬೆನ್ನಲ್ಲೇ ವಿದೇಶಕ್ಕೆ ಹಾರಿದ ನಟ ಪ್ರಭಾಸ್

ತೆಲುಗು ಸಿನಿಮಾ ರಂಗ ಈ ವಿಚಾರದಲ್ಲಿ ಗಂಭೀರವಾಗಿದೆ. ಈಗಾಗಲೇ ಹಲವು ಸಿನಿಮಾ ತಂಡಗಳು ಈ ರೀತಿ ಮಾಡಿದವರ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ಇದನ್ನು ಸಂಪೂರ್ಣವಾಗಿ ತಡೆಯಬೇಕು ಎನ್ನುವ ಉದ್ದೇಶ ಇಟ್ಟುಕೊಳ್ಳಲಾಗಿದೆ. ಆದರೆ, ಅದು ಸಾಧ್ಯವಾಗುತ್ತಿಲ್ಲ. ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಮೊದಲಾದವರು ನಟಿಸಿದ್ದಾರೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಸೃಷ್ಟಿ ಆಗಿದೆ. ನಾಗ್ ಅಶ್ವಿನ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದ ಟೀಸರ್ ಗಮನ ಸೆಳೆದಿದೆ. ಈ ಚಿತ್ರದ ರಿಲೀಸ್​ಗಾಗಿ ಅಭಿಮಾನಿಗಳು ಕಾದಿದ್ದಾರೆ. ಬಿಡುಗಡೆ ದಿನಾಂಕ ಇನ್ನಷ್ಟೇ ಅಧಿಕೃತವಾಗಬೇಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ
ಡ್ಯೂಪ್ ಇಲ್ಲದೆ ಫೈಟ್ ಮಾಡಿದ ನಟಿ ಅದಿತಿ: ಮಾಲಾಶ್ರೀಯೇ ಸ್ಪೂರ್ತಿ
ಡ್ಯೂಪ್ ಇಲ್ಲದೆ ಫೈಟ್ ಮಾಡಿದ ನಟಿ ಅದಿತಿ: ಮಾಲಾಶ್ರೀಯೇ ಸ್ಪೂರ್ತಿ
ಕುಡಿದ ಮತ್ತಿನಲ್ಲಿ ಶಿವಾಜಿ ಮೂರ್ತಿಗೆ ಹಾನಿ ಮಾಡಿದ ವ್ಯಕ್ತಿ: ಬಂಧನ
ಕುಡಿದ ಮತ್ತಿನಲ್ಲಿ ಶಿವಾಜಿ ಮೂರ್ತಿಗೆ ಹಾನಿ ಮಾಡಿದ ವ್ಯಕ್ತಿ: ಬಂಧನ
ಕಾವೇರಿ ನದಿ ನೀರಿವ ಸಮಸ್ಯೆ ಚರ್ಚಿಸಲು ಕುಮಾರಸ್ವಾಮಿ ದೆಹಲಿಗೆ ಹೋಗಿದ್ದರೇ?
ಕಾವೇರಿ ನದಿ ನೀರಿವ ಸಮಸ್ಯೆ ಚರ್ಚಿಸಲು ಕುಮಾರಸ್ವಾಮಿ ದೆಹಲಿಗೆ ಹೋಗಿದ್ದರೇ?
ಶಿವಕುಮಾರ್ ಲೋಕಸಭಾ ಚುನಾವಣೆಗೆ ಹಣ ಹೊಂಚುವುದರಲ್ಲಿ ಮಗ್ನ: ಕುಮಾರಸ್ವಾಮಿ
ಶಿವಕುಮಾರ್ ಲೋಕಸಭಾ ಚುನಾವಣೆಗೆ ಹಣ ಹೊಂಚುವುದರಲ್ಲಿ ಮಗ್ನ: ಕುಮಾರಸ್ವಾಮಿ
ದಶಕಗಳಿಂದ ಹೋರಾಡುತ್ತಾ ಪಕ್ಷವನ್ನು ಅಧಿಕಾರದಲ್ಲಿ ಕೂರಿಸಿದ್ದೇನೆ: ಡಿಕೆಶಿ
ದಶಕಗಳಿಂದ ಹೋರಾಡುತ್ತಾ ಪಕ್ಷವನ್ನು ಅಧಿಕಾರದಲ್ಲಿ ಕೂರಿಸಿದ್ದೇನೆ: ಡಿಕೆಶಿ
ವಕೀಲರು ಅದ್ಭುತವಾಗಿ ಕಾವೇರಿ ನೀರಿಗಾಗಿ ವಾದಿಸುತ್ತಿದ್ದಾರೆ:ಡಿಕೆ ಶಿವಕುಮಾರ್
ವಕೀಲರು ಅದ್ಭುತವಾಗಿ ಕಾವೇರಿ ನೀರಿಗಾಗಿ ವಾದಿಸುತ್ತಿದ್ದಾರೆ:ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್ ಪುನಃ ಜೈಲಿಗೆ ಹೋಗೋದು ನಿಶ್ಚಿತ: ಕೆ ಎಸ್ ಈಶ್ವರಪ್ಪ
ಡಿಕೆ ಶಿವಕುಮಾರ್ ಪುನಃ ಜೈಲಿಗೆ ಹೋಗೋದು ನಿಶ್ಚಿತ: ಕೆ ಎಸ್ ಈಶ್ವರಪ್ಪ
‘ಯಾವ ಕೆಲಸ ಮಾಡೋಕೂ ನಾನು ರೆಡಿ’: ನಟಿ ಪ್ರಮೀಳಾ ಜೋಶಾಯ್​ ಸುದ್ದಿಗೋಷ್ಠಿ
‘ಯಾವ ಕೆಲಸ ಮಾಡೋಕೂ ನಾನು ರೆಡಿ’: ನಟಿ ಪ್ರಮೀಳಾ ಜೋಶಾಯ್​ ಸುದ್ದಿಗೋಷ್ಠಿ
ಹರಾಜಿನಲ್ಲಿ ಗಣೇಶನ ಲಡ್ಡು ರೇಟ್‌ ಕೇಳಿದ್ರೆ ನೀವು ದಂಗಾಗೋದು ಗ್ಯಾರೆಂಟಿ
ಹರಾಜಿನಲ್ಲಿ ಗಣೇಶನ ಲಡ್ಡು ರೇಟ್‌ ಕೇಳಿದ್ರೆ ನೀವು ದಂಗಾಗೋದು ಗ್ಯಾರೆಂಟಿ
ಕನಸು ಸಾಕಾರಗೊಳಿಸಿದ ಪ್ರಧಾನಿ  ಮೋದಿಯವರನ್ನು ಸತ್ಕರಿಸಿದ ಮಹಿಳೆಯರು!
ಕನಸು ಸಾಕಾರಗೊಳಿಸಿದ ಪ್ರಧಾನಿ  ಮೋದಿಯವರನ್ನು ಸತ್ಕರಿಸಿದ ಮಹಿಳೆಯರು!