ಪ್ರಭಾಸ್ ಶಿವನ ಪಾತ್ರ ಮಾಡೋದನ್ನು ಒಪ್ಪಿಕೊಂಡರಾ ವಿಷ್ಣು ಮಂಚು? ಈ ಟ್ವೀಟ್​ನ ಅರ್ಥವೇನು?

ಪ್ರಭಾಸ್ ಅವರು ‘ಆದಿಪುರುಷ್’ ಚಿತ್ರದಲ್ಲಿ ರಾಮನ ಅವತಾರ ತಾಳಿದ್ದರು. ಆದರೆ, ಈ ಪಾತ್ರಕ್ಕೆ ಮೆಚ್ಚುಗೆಗಿಂತ ತೆಗಳಿಕೆಗಳು ಬಂದಿದ್ದೇ ಹೆಚ್ಚು. ಈಗ ಪ್ರಭಾಸ್​ಗೆ ಶಿವನ ಅವತಾರ ತಾಳಲು ಆಫರ್ ಬಂದಿದೆಯಂತೆ. ಇದನ್ನು ಅವರು ಒಪ್ಪಿಕೊಂಡಿದ್ದಾರೆ ಎಂದು ಕೂಡ ಹೇಳಲಾಗಿತ್ತು. ಇದನ್ನು ವಿಷ್ಣು ಮಂಚು ಅವರು ಬಹುತೇಕ ಖಚಿತಪಡಿಸಿದ್ದಾರೆ.

ಪ್ರಭಾಸ್ ಶಿವನ ಪಾತ್ರ ಮಾಡೋದನ್ನು ಒಪ್ಪಿಕೊಂಡರಾ ವಿಷ್ಣು ಮಂಚು? ಈ ಟ್ವೀಟ್​ನ ಅರ್ಥವೇನು?
ವಿಷ್ಣು ಮಂಚು-ಪ್ರಭಾಸ್
Follow us
|

Updated on:Sep 11, 2023 | 10:17 AM

ನಟ ಪ್ರಭಾಸ್ (Prabhas) ಅವರು ಸಾಲು ಸಾಲು ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ. ‘ಸಲಾರ್’ ಸಿನಿಮಾದ ರಿಲೀಸ್​ ಡೇಟ್ ಕಾರಣಾಂತರಗಳಿಂದ ಮುಂದಕ್ಕೆ ಹೋಗಿದೆ. ‘ಕಲ್ಕಿ 2898 ಎಡಿ’ ಚಿತ್ರದ ಶೂಟಿಂಗ್ ಕೂಡ ಭರದಿಂದ ಸಾಗುತ್ತಿದೆ. ಈಗ ಪ್ರಭಾಸ್ ಅವರು ಶಿವನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಇದನ್ನು ಅವರ ಗೆಳೆಯ, ನಟ ವಿಷ್ಣು ಮಂಚು ಒಪ್ಪಿಕೊಂಡಿದ್ದಾರೆ! ಅವರು ಮಾಡಿರುವ ಟ್ವೀಟ್ ಈ ಅನುಮಾನ ಹುಟ್ಟಲು ಪ್ರಮುಖ ಕಾರಣ.

ಪ್ರಭಾಸ್ ಅವರು ‘ಆದಿಪುರುಷ್’ ಚಿತ್ರದಲ್ಲಿ ರಾಮನ ಅವತಾರ ತಾಳಿದ್ದರು. ಆದರೆ, ಈ ಪಾತ್ರಕ್ಕೆ ಮೆಚ್ಚುಗೆಗಿಂತ ತೆಗಳಿಕೆಗಳು ಬಂದಿದ್ದೇ ಹೆಚ್ಚು. ಈಗ ಪ್ರಭಾಸ್​ಗೆ ಶಿವನ ಅವತಾರ ತಾಳಲು ಆಫರ್ ಬಂದಿದೆಯಂತೆ. ಇದನ್ನು ಅವರು ಒಪ್ಪಿಕೊಂಡಿದ್ದಾರೆ ಎಂದು ಕೂಡ ಹೇಳಲಾಗಿತ್ತು. ಇದನ್ನು ವಿಷ್ಣು ಮಂಚು ಅವರು ಬಹುತೇಕ ಖಚಿತಪಡಿಸಿದ್ದಾರೆ.

ತೆಲುಗಿನಲ್ಲಿ ‘ಕಣ್ಣಪ್ಪ’ ಸಿನಿಮಾ ಸಿದ್ಧಗೊಳ್ಳುತ್ತಿದೆ. ನಟ ವಿಷ್ಣು ಮಂಚು ಅವರು ಬೇಡರ ಕಣ್ಣಪ್ಪನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಮುಹೂರ್ತ ಇತ್ತೀಚೆಗೆ ಭರ್ಜರಿಯಾಗಿ ನೆರವೇರಿದೆ. ಪ್ರಭಾಸ್ ಅವರು ಈ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಲು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಈ ಕುರಿತು ಟ್ರೇಡ್ ವಿಶ್ಲೇಷಕ ರಮೇಶ್ ಬಾಲಾ ಟ್ವೀಟ್ ಒಂದನ್ನು ಮಾಡಿದ್ದರು.

ವಿಷ್ಣುಮಂಚು ಅವರ ಕನಸಿನ ಪ್ರಾಜೆಕ್ಟ್​ ಕಣ್ಣಪ್ಪದಲ್ಲಿ ಪ್ರಭಾಸ್ ನಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ರಮೇಶ್ ಬಾಲಾ ಟ್ವೀಟ್ ಮಾಡಿದ್ದರು. ಇದನ್ನು ರೀಟ್ವೀಟ್ ಮಾಡಿಕೊಂಡಿರುವ ವಿಷ್ಣು ಮಂಚು, ‘ಹರ ಹರ ಮಹದೇವ’ ಎಂದಿದ್ದಾರೆ. ಜೊತೆಗೆ ಕಣ್ಣಪ್ಪ ಎನ್ನುವ ಹ್ಯಾಶ್​ಟ್ಯಾಗ್ ಹಾಕಿದ್ದಾರೆ. ಈ ಮೂಲಕ ಅವರು ತಾವು ಪ್ರಭಾಸ್ ಜೊತೆ ನಟಿಸುತ್ತಿರುವ ವಿಚಾರ ಖಚಿತಪಡಿಸಿದ್ದಾರೆ.

ಇದನ್ನೂ ಓದಿ: ಪ್ರಭಾಸ್​ಗೆ ಅನುಷ್ಕಾ ಶೆಟ್ಟಿ ಎಸೆದ ಸವಾಲು ರಾಮ್ ಚರಣ್ ವರ್ಗ, ಹಂಚಿಕೊಂಡ ರೆಸಿಪಿ ಯಾವುದು?

ಪ್ರಭಾಸ್ ಅವರು ಹ್ಯಾಟ್ರಿಕ್ ಸೋಲು ಅನುಭವಿಸಿದ್ದಾರೆ. ‘ಸಾಹೋ’, ‘ರಾಧೆ ಶ್ಯಾಮ್’ ಹಾಗೂ ‘ಆದಿಪುರುಷ್’ ಸಿನಿಮಾಗಳು ಸೋತಿವೆ. ಈಗ ‘ಸಲಾರ್’ ಸಿನಿಮಾ ಮೂಲಕ ಗೆಲ್ಲುವ ಭರವಸೆಯಲ್ಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:03 am, Mon, 11 September 23

ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ