AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರೀ ಶ್ರೀ ರವಿಶಂಕರ್ ಬಯೋಪಿಕ್ ‘ವೈಟ್​’ ಚಿತ್ರದ ಡಬ್ಬಿಂಗ್ ಪೂರ್ಣ; ಶೀಘ್ರವೇ ತೆರೆಗೆ

ಬಾಲಿವುಡ್ ನಟ ವಿಕ್ರಾಂತ್ ಮಾಸ್ಸಿ ನಟನೆಯ ಬಹುನಿರೀಕ್ಷಿತ 'ವೈಟ್' ಸಿನಿಮಾದ ಡಬ್ಬಿಂಗ್ ಪೂರ್ಣಗೊಂಡಿದೆ. ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ್ ಅವರ ಪಾತ್ರದಲ್ಲಿ ವಿಕ್ರಾಂತ್ ನಟಿಸಿದ್ದಾರೆ. ಕೊಲಂಬಿಯಾ ಯುದ್ಧದ ಹಿನ್ನೆಲೆಯುಳ್ಳ ಈ ಚಿತ್ರವು ಜಗತ್ತಿಗೆ ಭಾರತ ನೀಡಲಿರುವ ಅಪೂರ್ವ ಕೊಡುಗೆ ಎಂದು ನಿರ್ಮಾಪಕ ಮಹಾವೀರ್ ಜೈನ್ ಶ್ಲಾಘಿಸಿದ್ದಾರೆ.

ಶ್ರೀ ಶ್ರೀ ರವಿಶಂಕರ್ ಬಯೋಪಿಕ್ ‘ವೈಟ್​’ ಚಿತ್ರದ ಡಬ್ಬಿಂಗ್ ಪೂರ್ಣ; ಶೀಘ್ರವೇ ತೆರೆಗೆ
ವಿಕ್ರಾಂತ್-ರವಿ
ರಾಜೇಶ್ ದುಗ್ಗುಮನೆ
|

Updated on:Jul 28, 2026 | 12:01 PM

Share

ಮುಖ್ಯಾಂಶಗಳು

  • ಮುಕ್ತಾಯಗೊಂಡಿತು ‘ವೈಟ್’ ಡಬ್ಬಿಂಗ್ ಕಾರ್ಯ
  • ಶ್ರೀ ಶ್ರೀ ರವಿಶಂಕರ್ ಪಾತ್ರದಲ್ಲಿ ಮಿಂಚಲಿದ್ದಾರೆ ವಿಕ್ರಾಂತ್ ಮಾಸ್ಸಿ
  • ಜಾಗತಿಕ ಸಂಘರ್ಷಕ್ಕೆ ಭಾರತದ ಶಾಂತಿ ಸಂದೇಶ

ಬಾಲಿವುಡ್‌ನ ಪ್ರತಿಭಾವಂತ ನಟ ವಿಕ್ರಾಂತ್ ಮಾಸ್ಸಿ (Vikrant Massey)  ಸದ್ಯ ಯಶಸ್ಸಿನ ಅಲೆಯಲ್ಲಿದ್ದಾರೆ. ‘ಪ್ರೀತಮ್ ಆ್ಯಂಡ್ ಪೆಡ್ರೋ’ ಸರಣಿ ಮೆಚ್ಚುಗೆ ಪಡೆದಿದೆ. ಇದರಲ್ಲಿ ವಿಲನ್ ಶೇಡ್ ಪಾತ್ರ ಮಾಡಿ ಗಮನ ಸೆಳೆದಿದ್ದಾರೆ. ಈಗ ಅವರು ಮತ್ತೊಂದು ದೊಡ್ಡ ಸಿನಿಮಾಗೆ ಸಜ್ಜಾಗಿದ್ದಾರೆ. ಅವರ ನಟನೆಯ ಅತ್ಯಂತ ಮಹತ್ವಾಕಾಂಕ್ಷೆಯ ಚಿತ್ರ ‘ವೈಟ್’ ಚಿತ್ರದ ಡಬ್ಬಿಂಗ್ ಕೆಲಸಗಳು ಈಗ ಅಧಿಕೃತವಾಗಿ ಪೂರ್ಣಗೊಂಡಿವೆ. ಚಿತ್ರದಲ್ಲಿ ವಿಕ್ರಾಂತ್ ಮಾಸ್ಸಿ ಅವರು ಜಾಗತಿಕ ಆಧ್ಯಾತ್ಮ ಗುರುಗಳಾದ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಪಾತ್ರವನ್ನು ನಿರ್ವಹಿಸಿದ್ದಾರೆ.

ಗುರು ಪೂರ್ಣಿಮೆಯ ದಿನದಂದೇ ‘ವೈಟ್’ ಚಿತ್ರದ ಡಬ್ಬಿಂಗ್ ಮುಕ್ತಾಯಗೊಂಡಿರುವುದು ವಿಶೇಷ. ಈ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕ ಮಹಾವೀರ್ ಜೈನ್ ಅವರು ಸಿನಿಮಾದ ಬಗ್ಗೆ ಹೆಮ್ಮೆಯ ಮಾತುಗಳನ್ನು ಆಡಿದ್ದಾರೆ. ಪ್ರಸ್ತುತ ಜಗತ್ತು ಯುದ್ಧ ಮತ್ತು ಸಂಘರ್ಷಗಳಿಗೆ ಪರಿಹಾರವನ್ನು ಹುಡುಕುತ್ತಿದೆ. ಇಂತಹ ಸಮಯದಲ್ಲಿ ‘ವೈಟ್’ ಸಿನಿಮಾ ಬಿಡುಗಡೆಯಾಗುತ್ತಿರುವುದು ಸೂಕ್ತವಾಗಿದೆ. ಈ ಚಿತ್ರವು ಜಗತ್ತಿಗೆ ಶಾಂತಿಯ ಮಾರ್ಗವನ್ನು ತೋರಿಸಲಿದೆ. ಇದು ಭಾರತದಿಂದ ಇಡೀ ವಿಶ್ವಕ್ಕೆ ಸಿಗಲಿರುವ ಒಂದು ಅಪೂರ್ವ ಕೊಡುಗೆಯಾಗಿದೆ ಎಂದು ಅವರು ಹೇಳಿದ್ದಾರೆ.

ಒಂದು ಬಯೋಪಿಕ್ ಮಾಡಬೇಕು ಎಂದರೆ ಎಚ್ಚರಿಕೆ ಬೇಕು. ನಟನೆ ಪರಿಪೂರ್ಣತೆಯಿಂದ ಕೂಡಿರಬೇಕು. ಇದನ್ನು ವಿಕ್ರಾಂತ್ ಯಶಸ್ವಿಯಾಗಿ ನಟಿಸಿದ್ದಾರೆ ಎಂಬ ಭರವಸೆಯನ್ನು ನಿರ್ಮಾಪಕರು ಹೊರಹಾಕಿದ್ದಾರೆ. ಅವರ ಈ ಶಕ್ತಿಶಾಲಿ ಅಭಿನಯ ಮತ್ತು ಚಿತ್ರದ ಕಥೆ ಜಾಗತಿಕ ಮಟ್ಟದಲ್ಲಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಲಿದೆ ಎಂದು ನಿರ್ಮಾಪಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಚಿತ್ರದ ಹಿನ್ನೆಲೆ ಏನು?

ವಿಶ್ವದ ಅತ್ಯಂತ ದೀರ್ಘಾವಧಿಯ ಮತ್ತು ಭೀಕರ ಸಂಘರ್ಷವಾದ ಕೊಲಂಬಿಯಾದ ಆಂತರಿಕ ಯುದ್ಧದ ಕಥೆಯನ್ನು ಇದು ಒಳಗೊಂಡಿದೆ. ಭಾರತದ ಆಧ್ಯಾತ್ಮಿಕ ಗುರು ರವಿಶಂಕರ್ ಅವರು ತಮ್ಮ ಜ್ಞಾನದ ಮೂಲಕ ಈ ಯುದ್ಧವನ್ನು ಹೇಗೆ ಬಗೆಹರಿಸಿದರು ಎಂಬುದು ಚಿತ್ರದ ಪ್ರಮುಖ ಕಥಾವಸ್ತು.

ಇದನ್ನೂ ಓದಿ: ‘ನೆನಪಿಟ್ಟುಕೊಳ್ಳಿ, ಹಣ ಇದ್ರೆ ಮಾತ್ರ ನಿಮಗೆ ಗೌರವ’; ಯುವ ಜನತೆ ಎಚ್ಚರಿಸಿದ ವಿಕ್ರಾಂತ್ ಮಾಸ್ಸಿ

ಅಂತರರಾಷ್ಟ್ರೀಯ ತಾರಾಗಣ:

ಈ ಚಿತ್ರದಲ್ಲಿ ಜಾಗತಿಕ ಮಟ್ಟದ ತಂತ್ರಜ್ಞರು ಮತ್ತು ಕಲಾವಿದರು ಕೆಲಸ ಮಾಡಿದ್ದಾರೆ. ‘ನಾರ್ಕೋಸ್’ ಸರಣಿ ಖ್ಯಾತಿಯ ಜುವಾನ್ ಕಾರ್ಲೋಸ್ ಗಿಲ್ ಚಿತ್ರಕ್ಕೆ ಸಿನಿಮಾಟೋಗ್ರಫಿ ಮಾಡಿದ್ದಾರೆ. ಮೆಕ್ಸಿಕನ್ ನಟ ಡಾರಿಯೊ ಯಾಜ್ಬೆಕ್ ಬರ್ನಾಲ್ ಮತ್ತು ಪನಾಮದ ನಟ ಜೈಮ್ ನ್ಯೂಬಾಲ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಖ್ಯಾತ ಆ್ಯಡ್ ಫಿಲ್ಮ್ ಮೇಕರ್ ಮೊಂಟೂ ಬಸ್ಸಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸಿದ್ಧಾರ್ಥ್ ಆನಂದ್, ಪೀಸ್‌ಕ್ರಾಫ್ಟ್ ಪಿಕ್ಚರ್ಸ್ ಮತ್ತು ಮಹಾವೀರ್ ಜೈನ್ ಜಂಟಿಯಾಗಿ ಚಿತ್ರವನ್ನು ನಿರ್ಮಿಸಿದ್ದಾರೆ. ಈ ವರ್ಷದ ಕೊನೆಯ ಭಾಗದಲ್ಲಿ ‘ವೈಟ್’ ಸಿನಿಮಾವು ಹಲವು ಅಂತರರಾಷ್ಟ್ರೀಯ ಮತ್ತು ಭಾರತೀಯ ಭಾಷೆಗಳಲ್ಲಿ ವಿಶ್ವಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:59 am, Tue, 28 July 26

Follow Us
ಚಾಮರಾಜೇಶ್ವರಸ್ವಾಮಿ ಆಷಾಢ ಮಾಸದ ರಥೋತ್ಸವಕ್ಕೆ ಕ್ಷಣಗಣನೆ ಆರಂಭ
ಚಾಮರಾಜೇಶ್ವರಸ್ವಾಮಿ ಆಷಾಢ ಮಾಸದ ರಥೋತ್ಸವಕ್ಕೆ ಕ್ಷಣಗಣನೆ ಆರಂಭ
ಸಿಟಿ ರವಿ ಚಿಕ್ಕಮಗಳೂರಿಗೆ ಬರದಂತೆ ತಡೀತೇವೆ, ಮುಸ್ಲಿಂ ಮುಖಂಡರ ಎಚ್ಚರಿಕೆ
ಸಿಟಿ ರವಿ ಚಿಕ್ಕಮಗಳೂರಿಗೆ ಬರದಂತೆ ತಡೀತೇವೆ, ಮುಸ್ಲಿಂ ಮುಖಂಡರ ಎಚ್ಚರಿಕೆ
ಭೀಕರ ಬರಕ್ಕೆ ತುತ್ತಾದ ರಾಯಚೂರು, ಲಿಂಗಸೂರಿನಲ್ಲಿ ಗುಳೆ ಹೊರಟ 40 ಸಾವಿರ ಜನ
ಭೀಕರ ಬರಕ್ಕೆ ತುತ್ತಾದ ರಾಯಚೂರು, ಲಿಂಗಸೂರಿನಲ್ಲಿ ಗುಳೆ ಹೊರಟ 40 ಸಾವಿರ ಜನ
ಬೆಂಗಳೂರು: ಕ್ಯಾಬ್ಗೆ ಕಾಯುತ್ತಿದ್ದ ಯುವತಿ ಜೊತೆ ವ್ಯಕ್ತಿ ಅಸಭ್ಯ ವರ್ತನೆ
ಬೆಂಗಳೂರು: ಕ್ಯಾಬ್ಗೆ ಕಾಯುತ್ತಿದ್ದ ಯುವತಿ ಜೊತೆ ವ್ಯಕ್ತಿ ಅಸಭ್ಯ ವರ್ತನೆ
ಸುಬ್ರಹ್ಮಣ್ಯ, ಹನುಮನ ಲಹರಿ ಇರುವ ಪರ್ವ ದಿನ: 12 ರಾಶಿಗಳ ದಿನ ಭವಿಷ್ಯ
ಸುಬ್ರಹ್ಮಣ್ಯ, ಹನುಮನ ಲಹರಿ ಇರುವ ಪರ್ವ ದಿನ: 12 ರಾಶಿಗಳ ದಿನ ಭವಿಷ್ಯ
ಸರ್ಕಾರದ ಜೊತೆ ಇರುತ್ತೇವೆ: ಡಿಕೆಶಿಗೆ ತೇಜಸ್ವಿ ಸೂರ್ಯ ಭರವಸೆ
ಸರ್ಕಾರದ ಜೊತೆ ಇರುತ್ತೇವೆ: ಡಿಕೆಶಿಗೆ ತೇಜಸ್ವಿ ಸೂರ್ಯ ಭರವಸೆ
ಪಶುವೈದ್ಯ ನೇಮಕಾತಿ ಹಗರಣ: CBI ತನಿಖೆಗೆ ಒಪ್ಪಿಸಿ ಎಂದ ಸುರೇಶ್ ಕುಮಾರ್
ಪಶುವೈದ್ಯ ನೇಮಕಾತಿ ಹಗರಣ: CBI ತನಿಖೆಗೆ ಒಪ್ಪಿಸಿ ಎಂದ ಸುರೇಶ್ ಕುಮಾರ್
ಪ್ರತಿಭಟನಾಕಾರರ ಮೇಲಿನ ಲಾಠಿಚಾರ್ಜ್​ಗೆ ಸದನದಲ್ಲಿ ಖರ್ಗೆ ಖಂಡನೆ
ಪ್ರತಿಭಟನಾಕಾರರ ಮೇಲಿನ ಲಾಠಿಚಾರ್ಜ್​ಗೆ ಸದನದಲ್ಲಿ ಖರ್ಗೆ ಖಂಡನೆ
ಡಿಕೆಶಿಗೆ ಹೈ ಸೆಕ್ಯೂರಿಟಿ:ದೆಹಲಿಯಲ್ಲಿ ವಿಶೇಷ ಭದ್ರತೆ ಇದೇ ಮೊದಲು
ಡಿಕೆಶಿಗೆ ಹೈ ಸೆಕ್ಯೂರಿಟಿ:ದೆಹಲಿಯಲ್ಲಿ ವಿಶೇಷ ಭದ್ರತೆ ಇದೇ ಮೊದಲು
ಆನ್ಲೈನ್ ಫುಡ್ ಡೆಲಿವರಿ ಆಪ್‌ಗಳ ವಿರುದ್ಧ ತಿರುಗಿಬಿದ್ದ ಹೋಟೆಲ್ ಮಾಲೀಕರು
ಆನ್ಲೈನ್ ಫುಡ್ ಡೆಲಿವರಿ ಆಪ್‌ಗಳ ವಿರುದ್ಧ ತಿರುಗಿಬಿದ್ದ ಹೋಟೆಲ್ ಮಾಲೀಕರು