ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಅವರು ಒಂದಿಲ್ಲೊಂದು ಕಾರಣಕ್ಕೆ ಸುದ್ದಿ ಆಗುತ್ತಾರೆ. ಅವರು ನರೇಂದ್ರ ಮೋದಿ ಸರ್ಕಾರದ ಪರವಾಗಿ ಇದ್ದಾರೆ ಎಂಬುದನ್ನು ಹೊಸದಾಗಿ ಹೇಳಬೇಕಾದ್ದಿಲ್ಲ. ಅನೇಕ ಬಾರಿ ಅವರು ಮೋದಿ ಸರ್ಕಾರದ ಪರವಾಗಿ ಮಾತನಾಡಿದ್ದಿದೆ. ಅದೇ ರೀತಿ ರಾಹುಲ್ ಗಾಂಧಿ ಅವರನ್ನು ಟೀಕಿಸಿದ್ದಾರೆ ಕೂಡ. ಈಗ ಮತ್ತೆ ವಿವೇಕ್ ಅಗ್ನಿಹೋತ್ರಿ ಅವರು ರಾಜಕೀಯದ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡು ಸುದ್ದಿ ಆಗಿದ್ದಾರೆ. ಆದರೆ ಅವರ ಮಾತುಗಳಿಗೆ ಕೆಲವರಿಂದ ವಿರೋಧ ವ್ಯಕ್ತವಾಗಿದೆ. ಅಲ್ಲದೇ, ಈ ಹಿಂದೆ ವಿವೇಕ್ ಅಗ್ನಿಹೋತ್ರಿ ನಿರ್ದೇಶಿಸಿದ್ದ ‘ಹೇಟ್ ಸ್ಟೋರಿ’ ಚಿತ್ರದ ವಿಚಾರವನ್ನೂ ಎಳೆದು ತರಲಾಗಿದೆ. ಅದಕ್ಕೆ ರಾಹುಲ್ ಗಾಂಧಿ (Rahul Gandhi) ಶೈಲಿಯಲ್ಲೇ ವಿವೇಕ್ ಅಗ್ನಿಹೋತ್ರಿ ಪ್ರತಿಕ್ರಿಯೆ ನೀಡಿದ್ದಾರೆ. ಅವರ ಟ್ವೀಟ್ ವೈರಲ್ ಆಗಿದೆ.
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಿದ್ದರ ಕುರಿತು ಹಲವರು ತಮ್ಮ ಅನಿಸಿಕೆ ತಿಳಿಸಿದ್ದಾರೆ. ಅದೇ ರೀತಿ ವಿವೇಕ್ ಅಗ್ನಿಹೋತ್ರಿ ಕೂಡ ಟ್ವೀಟ್ ಮಾಡಿದ್ದಾರೆ. ‘ರಾಹುಲ್ ಗಾಂಧಿ ಅವರು ಯಾವಾಗಲೂ ಅನರ್ಹರೇ ಆಗಿದ್ದರು. ಈಗ ಆ ವಿಚಾರವನ್ನು ಅಧಿಕೃತಗೊಳಿಸಲಾಗಿದೆ’ ಎಂದು ಅವರು ವ್ಯಂಗ್ಯವಾಗಿ ಪೋಸ್ಟ್ ಮಾಡಿದ್ದಾರೆ.
Rahul Gandhi was always unqualified. It’s just that now it’s been made official.
— Vivek Ranjan Agnihotri (@vivekagnihotri) March 27, 2023
ವಿವೇಕ್ ಅಗ್ನಿಹೋತ್ರಿ ಅವರ ಈ ಟ್ವೀಟ್ ನೋಡಿ ನೆಟ್ಟಿಗರು ಬಗೆಬಗೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದಿಂದ ವಿವೇಕ್ ಅಗ್ನಿಹೋತ್ರಿ ಅವರಿಗೆ ದೇಶಾದ್ಯಂತ ಜನಮನ್ನಣೆ ಸಿಕ್ಕಿದೆ ಎಂಬುದು ನಿಜ. ಆದರೆ 2012ರಲ್ಲಿ ಅವರು ಮಾದಕ ಕಥಾಹಂದರ ಇರುವ ‘ಹೇಟ್ ಸ್ಟೋರಿ’ ಸಿನಿಮಾ ಮಾಡಿದ್ದಕ್ಕೆ ಈಗಲೂ ಅವರನ್ನು ಅನೇಕರು ಹೀಯಾಳಿಸುತ್ತಿದ್ದಾರೆ. ರಾಹುಲ್ ಗಾಂಧಿ ಬಗ್ಗೆ ವಿವೇಕ್ ಅಗ್ನಿಹೋತ್ರಿ ವ್ಯಂಗ್ಯವಾಡಿದ ಬೆನ್ನಲ್ಲೇ ಕೆಲವು ನೆಟ್ಟಿಗರು ‘ಹೇಟ್ ಸ್ಟೋರಿ’ ಚಿತ್ರವನ್ನು ನೆನಪಿಸಿದ್ದಾರೆ. ‘ಅರ್ಹತೆಯ ಬಗ್ಗೆ ಹೇಟ್ ಸ್ಟೋರಿ ನಿರ್ದೇಶಕರು ಮಾತಾಡ್ತಾರೆ.. ಜೋಕರ್’ ಎಂದು ಟ್ವಿಟರ್ ಬಳಕೆದಾರರೊಬ್ಬರು ಟೀಕೆ ಮಾಡಿದ್ದಾರೆ.
ಇದನ್ನೂ ಓದಿ: Vivek Agnihotri: ಏಕಾಏಕಿ ದೀಪಿಕಾ ಪಡುಕೋಣೆಗೆ ಮೆಚ್ಚುಗೆ ಸೂಚಿಸಿದ ವಿವೇಕ್ ಅಗ್ನಿಹೋತ್ರಿ; ಶುರುವಾಯ್ತು ಟ್ರೋಲ್
ಈ ಟೀಕೆಗೆ ರಾಹುಲ್ ಗಾಂಧಿ ಶೈಲಿಯಲ್ಲಿ ವಿವೇಕ್ ಅಗ್ನಿಹೋತ್ರಿ ಉತ್ತರ ನೀಡಿದ್ದಾರೆ. ‘ನಿಮ್ಮ ಮನಸ್ಸಿನಲ್ಲಿ ಇರುವ ಆ ನಿರ್ದೇಶಕನನ್ನು ನಾನು ಕೊಂದುಬಿಟ್ಟೆ. ಆತ ಈಗ ಇಲ್ಲ. ಈಗ ನಿಮಗೆ ಕಾಣಿಸುತ್ತಿರುವುದು ಆ ವ್ಯಕ್ತಿ ಅಲ್ಲ. ನೀವು ನೋಡುತ್ತಾ ಇದ್ದೀರಿ. ಆದ್ರೆ ಅದು ನಾನಲ್ಲ. ಇದು ನಿಮಗೆ ಅರ್ಥವಾಗಿಲ್ಲ ಎಂದರೆ ಹಿಂದೂ ಗ್ರಂಥಗಳನ್ನು ಓದಿರಿ. ಅವನು ನಿಮ್ಮ ಮನಸ್ಸಿನಲ್ಲಿ ಇದ್ದಾನೆ. ಆದರೆ ಅದು ನಾನಲ್ಲ’ ಎಂದು ವಿವೇಕ್ ಅಗ್ನಿಹೋತ್ರಿ ಟ್ವೀಟ್ ಮಾಡಿದ್ದಾರೆ.
“That director is in your mind. I killed him. He doesn’t exist. Not in my mind at all. He is gone. Gone. The person you’re looking at is not him; you are seeing him, but I’m not him. If you do not understand, read the Hindu scriptures. He is in your head, not mine”
Who said this? https://t.co/0lG2pTWj0a— Vivek Ranjan Agnihotri (@vivekagnihotri) March 27, 2023
‘ನಿಮ್ಮ ಮನಸ್ಸಿನಲ್ಲಿ ಇರುವ ರಾಹುಲ್ ಗಾಂಧಿಯನ್ನು ನಾನು ಕೊಂದಿದ್ದೇನೆ. ಈಗ ನೀವು ನೋಡುತ್ತಿರುವ ವ್ಯಕ್ತಿ ರಾಹುಲ್ ಗಾಂಧಿ ಅಲ್ಲ’ ಎಂದು ಜನವರಿ ತಿಂಗಳಲ್ಲಿ ರಾಹುಲ್ ಗಾಂಧಿ ಅವರು ಮಾತಾಡಿದ ವಿಡಿಯೋ ವೈರಲ್ ಆಗಿತ್ತು. ಅದನ್ನೇ ಈಗ ವಿವೇಕ್ ಅಗ್ನಿಹೋತ್ರಿ ಅನುಕರಣೆ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:59 pm, Mon, 27 March 23