AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಧುರಂಧರ್ 2’ ಕತೆ ನಡೆಯುವುದು ಪಾಕಿಸ್ತಾನದಲ್ಲಿ, ಆದರೆ ಚಿತ್ರೀಕರಣ ಆಗಿದ್ದೆಲ್ಲಿ?

Dhurandhar 2 movie shooting: ‘ಧುರಂಧರ್ 2’ ಸಿನಿಮಾ ಭಾರತದ ಸೈನಿಕನೊಬ್ಬ ಗೂಢಚಾರಿಯಾಗಿ ಪಾಕಿಸ್ತಾನಕ್ಕೆ ಹೋಗಿ ಅಲ್ಲಿ ಉಗ್ರರ ವಿರುದ್ಧ ಏಕಾಂಗಿಯಾಗಿ ಹೋರಾಡುವ ಕತೆ ಹೊಂದಿದೆ. ಸಹಜವಾಗಿಯೇ ಸಿನಿಮಾದ ಇಡೀ ಕತೆ ನಡೆಯುವುದು ಪಾಕಿಸ್ತಾನದಲ್ಲಿಯೇ. ಅದರಲ್ಲೂ ಪಾಕಿಸ್ತಾನದ ಕರಾಚಿಯ ಲಯಾರಿ ಎಂಬ ಸ್ಥಳದಲ್ಲಿ. ಸಿನಿಮಾ ನೋಡಿದವರು, ನಿರ್ದೇಶಕ ಆದಿತ್ಯ ಧರ್, ಪಾಕಿಸ್ತಾನವನ್ನು ಇರುವ ಹಾಗೆಯೇ ತೋರಿಸಿದ್ದಾರೆ ಎನ್ನುತ್ತಿದ್ದಾರೆ. ಸಿನಿಮಾದ ಕತೆ ನಡೆಯುವುದು ಪಾಕಿಸ್ತಾನದಲ್ಲಿ ಆದರೆ ಸಿನಿಮಾ ಚಿತ್ರೀಕರಣ ಆಗಿರುವುದು ಎಲ್ಲಿ?

‘ಧುರಂಧರ್ 2’ ಕತೆ ನಡೆಯುವುದು ಪಾಕಿಸ್ತಾನದಲ್ಲಿ, ಆದರೆ ಚಿತ್ರೀಕರಣ ಆಗಿದ್ದೆಲ್ಲಿ?
Dhurandhar 2
ಮಂಜುನಾಥ ಸಿ.
|

Updated on: Mar 22, 2026 | 7:10 PM

Share

ರಣ್ವೀರ್ ಸಿಂಗ್ ನಟನೆಯ ‘ಧುರಂಧರ್ 2’ (Dhurandahr 2) ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಅಬ್ಬರಿಸುತ್ತಿದೆ. ಆದಿತ್ಯ ಧರ್ ನಿರ್ದೇಶಿಸಿರುವ ಈ ಸಿನಿಮಾ ಭಾರತದ ಸೈನಿಕನೊಬ್ಬ ಗೂಢಚಾರಿಯಾಗಿ ಪಾಕಿಸ್ತಾನಕ್ಕೆ ಹೋಗಿ ಅಲ್ಲಿ ಉಗ್ರರ ವಿರುದ್ಧ ಏಕಾಂಗಿಯಾಗಿ ಹೋರಾಡುವ ಕತೆ ಹೊಂದಿದೆ. ಸಹಜವಾಗಿಯೇ ಸಿನಿಮಾದ ಇಡೀ ಕತೆ ನಡೆಯುವುದು ಪಾಕಿಸ್ತಾನದಲ್ಲಿಯೇ. ಅದರಲ್ಲೂ ಪಾಕಿಸ್ತಾನದ ಕರಾಚಿಯ ಲಯಾರಿ ಎಂಬ ಸ್ಥಳದಲ್ಲಿ. ಸಿನಿಮಾ ನೋಡಿದವರು, ನಿರ್ದೇಶಕ ಆದಿತ್ಯ ಧರ್, ಪಾಕಿಸ್ತಾನವನ್ನು ಇರುವ ಹಾಗೆಯೇ ತೋರಿಸಿದ್ದಾರೆ ಎನ್ನುತ್ತಿದ್ದಾರೆ. ಸಿನಿಮಾದ ಕತೆ ನಡೆಯುವುದು ಪಾಕಿಸ್ತಾನದಲ್ಲಿ ಆದರೆ ಸಿನಿಮಾ ಚಿತ್ರೀಕರಣ ಆಗಿರುವುದು ಎಲ್ಲಿ?

ಎಲ್ಲರಿಗೂ ಗೊತ್ತಿರುವಂತೆ ಪಾಕಿಸ್ತಾನದಲ್ಲಿ ಭಾರತದ ಸಿನಿಮಾ ಚಿತ್ರೀಕರಣಕ್ಕೆ ಅವಕಾಶ, ಅನುಮತಿ ನೀಡಲಾಗುವುದಿಲ್ಲ. ಅಲ್ಲದೆ ಭದ್ರತಾ ಸಮಸ್ಯೆಯೂ ಇದ್ದೇ ಇರುತ್ತದೆ. ಇದೇ ಕಾರಣಕ್ಕೆ ನಿರ್ದೇಶಕ ಆದಿತ್ಯ ಧರ್ ಅವರು ಸಿನಿಮಾದ ಚಿತ್ರೀಕರಣವನ್ನು ಬೇರೆ ಬೇರೆ ಕಡೆಗಳಲ್ಲಿ ಮಾಡಿದ್ದಾರೆ. ವಿಶೇಷವಾಗಿ ಭಾರತದ ಕೆಲವು ಭಾಗಗಳು ಹಾಗೂ ಥೈಲೆಂಡ್​​ಗಳಲ್ಲಿ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ. ಅದರಲ್ಲೂ ಭಾರತದಲ್ಲಿ ಸಿನಿಮಾದ ಚಿತ್ರೀಕರಣ ಮಾಡುವಾಗ ಕೆಲವು ಸಮಸ್ಯೆಗಳನ್ನು ಸಹ ಚಿತ್ರತಂಡ ಎದುರಿಸಿದ್ದಿದೆ.

ಚಿತ್ರದ ಪ್ರಮುಖ ಭಾಗಗಳನ್ನು ಪಂಜಾಬ್‌ನ ಲುಧಿಯಾನದ ಸಮೀಪವಿರುವ ಖೇರಾ ಗ್ರಾಮದಲ್ಲಿ ಚಿತ್ರೀಕರಿಸಲಾಗಿದೆ. ಇಲ್ಲಿನ ಕೆಲವು ಗಲ್ಲಿಗಳನ್ನು ಪಾಕಿಸ್ತಾನದ ‘ಲ್ಯಾರಿ’ ಪ್ರದೇಶದಂತೆ ಕಾಣುವಂತೆ ಸೆಟ್ ಹಾಕಲಾಗಿತ್ತು. ಚಿತ್ರೀಕರಣಕ್ಕಾಗಿ ಇಲ್ಲಿ ಪಾಕಿಸ್ತಾನಿ ಧ್ವಜಗಳನ್ನು ಹಾಕಿದಾಗ ಸ್ಥಳೀಯರಲ್ಲಿ ಕುತೂಹಲ ಮತ್ತು ಸ್ವಲ್ಪ ಗೊಂದಲವೂ ಉಂಟಾಗಿತ್ತು. ಕೆಲವರು ಪ್ರಶ್ನೆ ಸಹ ಮಾಡಿದ್ದರಂತೆ. ಅಲ್ಲದೆ, ಅಮೃತಸರದ ಸುವರ್ಣ ಮಂದಿರ ಮತ್ತು ಲುಧಿಯಾನದ ಸಾಹ್ನೆವಾಲ್ ವಿಮಾನ ನಿಲ್ದಾಣದಲ್ಲೂ ಚಿತ್ರೀಕರಣ ನಡೆದಿದೆ.

ಪಾಕಿಸ್ತಾನದ ಕರಾಚಿಯ ಕೆಲವು ದೃಶ್ಯಗಳನ್ನು ಮತ್ತು ಚಿತ್ರದ ಸಿನಿಮಾದ ಸಾಹಸ ಮತ್ತು ಕೆಲ ಚೇಸ್ ದೃಶ್ಯಗಳನ್ನು ಥೈಲ್ಯಾಂಡ್‌ನಲ್ಲಿ ಚಿತ್ರೀಕರಿಸಲಾಗಿದೆ. ಮುಂಬೈನ ಫಿಲ್ಮಿಸ್ಟಾನ್ ಸ್ಟುಡಿಯೋ ಮತ್ತು ಮಡ್ ಐಲ್ಯಾಂಡ್‌ನಲ್ಲಿ ಚಿತ್ರದ ಒಳಾಂಗಣ ಹಾಗೂ ಕೆಲವು ಕರಾವಳಿ ತೀರದ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ದೋಂಬಿವಲಿ-ಮಂಕೋಲಿ ಸೇತುವೆಯ ಮೇಲೂ ಸಾಹಸ ದೃಶ್ಯಗಳ ಚಿತ್ರೀಕರಣ ನಡೆದಿದೆ. ಚಿತ್ರದ ಕೆಲವು ಸಸ್ಪೆನ್ಸ್ ದೃಶ್ಯಗಳಿಗಾಗಿ ಲಡಾಖ್‌ನ ಹಿಮಪರ್ವತಗಳು ಮತ್ತು ಹಿಮಾಚಲ ಪ್ರದೇಶದ ಕಸೌಲಿ ಎಂಬ ಸುಂದರ ಪ್ರದೇಶಗಳನ್ನು ಬಳಸಿಕೊಳ್ಳಲಾಗಿದೆ.

ಇದನ್ನೂ ಓದಿ:‘ನಾನು ಮೋದಿಯ ಹೆಮ್ಮೆಯ ಅಂಧಭಕ್ತೆ’: ‘ಧುರಂಧರ್ 2’ ನೋಡಿ ಹೇಳಿಕೆ ನೀಡಿದ ನಟಿ ರೇಣು ದೇಸಾಯಿ

ನಿರ್ದೇಶಕ ಆದಿತ್ಯ ಧರ್ ಅವರು ಪಾಕಿಸ್ತಾನಕ್ಕೆ ಹೋಗದೆ ಪಾಕಿಸ್ತಾನವನ್ನು ಸೃಷ್ಟಿ ಮಾಡಿದ್ದಾರೆ. ಮಾರ್ಚ್ 19ರಂದು ಬಿಡುಗಡೆ ಆಗಿರುವ ಈ ಸಿನಿಮಾ ಹಿಂದಿ ಮಾತ್ರವಲ್ಲದೆ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲೂ ತೆರೆ ಕಂಡಿದ್ದು. ಬಾಕ್ಸ್ ಆಫೀಸ್​​ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ರಣವೀರ್ ಸಿಂಗ್ ಅವರು ‘ಜಸ್ಕಿರತ್ ಸಿಂಗ್ ರಂಗಿ’ ಅಲಿಯಾಸ್ ಹಮ್ಜಾ ಅಲಿ ಮಜಾರಿ ಎಂಬ ಗೂಢಚಾರಿಯ ಪಾತ್ರದಲ್ಲಿ ಮಿಂಚಿದ್ದಾರೆ. ಅವರ ಜೊತೆಗೆ ಸಂಜಯ್ ದತ್ (ಚೌಧರಿ ಅಸ್ಲಂ), ಅರ್ಜುನ್ ರಾಂಪಾಲ್ (ಮೇಜರ್ ಇಕ್ಬಾಲ್), ಆರ್ ಮಾಧವನ್ (ಅಜಯ್ ಸನ್ಯಾಲ್) ಮತ್ತು ಅಕ್ಷಯ್ ಖನ್ನಾ (ರಹಮಾನ್ ಡಕೈತ್) ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಚಿತ್ರವು 3 ಗಂಟೆ 49 ನಿಮಿಷಗಳಷ್ಟು ದೀರ್ಘವಾಗಿದ್ದು, ಇತ್ತೀಚಿನ ವರ್ಷಗಳ ಅತ್ಯಂತ ದೊಡ್ಡ ಸಾಹಸಮಯ ಚಿತ್ರಗಳಲ್ಲಿ ಒಂದೆನಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಜಾಗತಿಕ ನಾಯಕರಿಂದ ಭಾರತದ ಸಾಂಪ್ರದಾಯಿಕ ಸಿರಿಧಾನ್ಯಗಳ ಮೆನುಗೆ ಮೆಚ್ಚುಗೆ
ಜಾಗತಿಕ ನಾಯಕರಿಂದ ಭಾರತದ ಸಾಂಪ್ರದಾಯಿಕ ಸಿರಿಧಾನ್ಯಗಳ ಮೆನುಗೆ ಮೆಚ್ಚುಗೆ
ವಂದೇ ಮಾತರಂ ಗೀತೆ ವಿವಾದ: ಸರ್ಕಾರದ ಆದೇಶಕ್ಕೆ ಜನಾರ್ದನ ರೆಡ್ಡಿ ಸೆಡ್ಡು
ವಂದೇ ಮಾತರಂ ಗೀತೆ ವಿವಾದ: ಸರ್ಕಾರದ ಆದೇಶಕ್ಕೆ ಜನಾರ್ದನ ರೆಡ್ಡಿ ಸೆಡ್ಡು
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್