AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನದಲ್ಲೆಲ್ಲ ‘ಧುರಂಧರ್ 2’ನದ್ದೇ ಚರ್ಚೆ, ಬೇಡಿಕೆ ಏನು ಗೊತ್ತೆ?

Dhurandhar 2 in Pakistan: ಭಾರತದ ಸೈನಿಕನೋರ್ವ ಗೂಢಚಾರಿಯಾಗಿ ಪಾಕಿಸ್ತಾನಕ್ಕೆ ಹೋಗಿ ಅಲ್ಲಿ ಉಗ್ರರ ಮಟ್ಟ ಹಾಕುವ ಕತೆಯನ್ನು ‘ಧುರಂಧರ್ 2’ ಸಿನಿಮಾ ಒಳಗೊಂಡಿದೆ. ಸಿನಿಮಾನಲ್ಲಿ ಕೆಲವು ನಿಜ ವ್ಯಕ್ತಿಗಳ ಕತೆಗಳನ್ನು ತೋರಿಸಲಾಗಿದೆ. ಅದರಲ್ಲೂ ಪಾಕಿಸ್ತಾನದ ರಹಾಮನ್ ಡಕೈತ್, ಎಸ್​​ಪಿ ಚೌಧರಿ ಅಸ್ಲಂ, ಇಲಿಯಾಸ್ ಕಶ್ಮೀರಿ ಇನ್ನೂ ಕೆಲವು ಅಕೀತ್ ಅಹ್ಮದ್ ಇನ್ನೂ ಕೆಲವು ನಿಜ ವ್ಯಕ್ತಿಗಳ ಪಾತ್ರಗಳನ್ನು ತೋರಿಸಲಾಗಿದೆ.

ಪಾಕಿಸ್ತಾನದಲ್ಲೆಲ್ಲ ‘ಧುರಂಧರ್ 2’ನದ್ದೇ ಚರ್ಚೆ, ಬೇಡಿಕೆ ಏನು ಗೊತ್ತೆ?
Dhurandhar 2
ಮಂಜುನಾಥ ಸಿ.
|

Updated on: Mar 22, 2026 | 4:46 PM

Share

ರಣ್ವೀರ್ ಸಿಂಗ್ (Ranveer Singh) ನಟಿಸಿರುವ ‘ಧುರಂಧರ್ 2’ ಸಿನಿಮಾ ಬಿಡುಗಡೆ ಆಗಿ ಕೆಲವೇ ದಿನಗಳಾಗಿದ್ದು, ದೇಶದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಭಾರತದ ಸೈನಿಕನೋರ್ವ ಗೂಢಚಾರಿಯಾಗಿ ಪಾಕಿಸ್ತಾನಕ್ಕೆ ಹೋಗಿ ಅಲ್ಲಿ ಉಗ್ರರ ಮಟ್ಟ ಹಾಕುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾನಲ್ಲಿ ಕೆಲವು ನಿಜ ವ್ಯಕ್ತಿಗಳ ಕತೆಗಳನ್ನು ತೋರಿಸಲಾಗಿದೆ. ಅದರಲ್ಲೂ ಪಾಕಿಸ್ತಾನದ ರಹಾಮನ್ ಡಕೈತ್, ಎಸ್​​ಪಿ ಚೌಧರಿ ಅಸ್ಲಂ, ಇಲಿಯಾಸ್ ಕಶ್ಮೀರಿ ಇನ್ನೂ ಕೆಲವು ಅಕೀತ್ ಅಹ್ಮದ್ ಇನ್ನೂ ಕೆಲವು ನಿಜ ವ್ಯಕ್ತಿಗಳ ಪಾತ್ರಗಳನ್ನು ತೋರಿಸಲಾಗಿದೆ.

ಪಾಕಿಸ್ತಾನದಲ್ಲಿ ‘ಧುರಂಧರ್ 2’ ಸಿನಿಮಾ ಬ್ಯಾನ್ ಆಗಿದೆಯಾದರೂ ಪಾಕಿಸ್ತಾನದ ಜನ ಮುಗಿಬಿದ್ದು ‘ಧುರಂಧರ್ 2’ ಸಿನಿಮಾ ನೋಡುತ್ತಿದ್ದು, ಪ್ರಸ್ತುತ ಪಾಕಿಸ್ತಾನದಲ್ಲಿ ಅತಿ ಹೆಚ್ಚು ಮಾರಾಟ ಆಗುತ್ತಿರುವ ಪೈರಸಿ ಸಿನಿಮಾ ಎಂದರೆ ಅದು ‘ಧುರಂಧರ್’ ಮತ್ತು ‘ಧುರಂಧರ್ 2’ ಆಗಿದೆ. ಸಾಮಾನ್ಯ ಜನರು ಮಾತ್ರವಲ್ಲ, ರಾಜಕಾರಣಿಗಳು ಸಹ ‘ಧುರಂಧರ್’ ಸಿನಿಮಾದ ಪೈರಸಿ ಕಾಪಿಗಳನ್ನು ನೋಡುತ್ತಿದ್ದಾರೆ.

‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾನಲ್ಲಿ ಬಹಳ ಪ್ರಮುಖ ಪಾತ್ರವೊಂದಿದೆ. ಸಿನಿಮಾನಲ್ಲಿ ಪಾತ್ರದ ಹೆಸರು ಜಮೀಲ್ ಜಮಾಲಿ, ಆದರೆ ಈ ಪಾತ್ರ ಪಾಕಿಸ್ತಾನದ ರಾಜಕಾರಣಿ ನಬೀಲ್ ಗೊಬಾಲ್ ಅವರನ್ನು ಆಧರಿಸಿದ ಪಾತ್ರವಾಗಿದೆ. ನಬೀಲ್ ಗೊಬಾಲ್ ಹಲವು ಕಡೆ ‘ಧುರಂಧರ್’ ಸಿನಿಮಾ ಬಗ್ಗೆ ಸಂದರ್ಶನಗಳನ್ನು ನೀಡಿದ್ದು, ‘ನನ್ನ ಪಾತ್ರವನ್ನು ಹಾಸ್ಯ ಪಾತ್ರಧಾರಿಯಂತೆ ತೋರಿಸಲಾಗಿದೆ’ ಎಂದು ಗೋಳು ತೋಡಿಕೊಂಡಿದ್ದಾರೆ. ಜೊತೆಗೆ ತಮ್ಮ ಹಾಗೂ ರಹಮಾನ್ ಡಕೈತ್ ನಡುವಿದ್ದ ಗೆಳೆತನದ ಬಗ್ಗೆಯೂ ಮಾತನಾಡಿದ್ದಾರೆ.

ಇದನ್ನೂ ಓದಿ:‘ನಾನು ಮೋದಿಯ ಹೆಮ್ಮೆಯ ಅಂಧಭಕ್ತೆ’: ‘ಧುರಂಧರ್ 2’ ನೋಡಿ ಹೇಳಿಕೆ ನೀಡಿದ ನಟಿ ರೇಣು ದೇಸಾಯಿ

ನಬೀಲ್ ಗೊಬಾಲ್ ಮಾತ್ರವೇ ಅಲ್ಲದೆ, ಪಾಕಿಸ್ತಾನದ ಇನ್ನೂ ಕೆಲ ರಾಜಕಾರಣಿಗಳು ‘ಧುರಂಧರ್’ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ತಮ್ಮದೇ ಆದ ಅಭಿಪ್ರಾಯಗಳನ್ನು ಸಿನಿಮಾ ಬಗ್ಗೆ ನೀಡಿದ್ದಾರೆ. ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಪಾಕಿಸ್ತಾನದ ರಾಜಕಾರಣಿ ನಬೀಲ್ ಗೊಬಾಲ್, ‘ನಾವು (ಪಾಕಿಸ್ತಾನ) ಸಹ ಇದೇ ರೀತಿಯಾದ ಸಿನಿಮಾ ಒಂದನ್ನು ಮಾಡಿ, ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳಬೇಕು’ ಎಂದು ಹಾಸ್ಯಾಸ್ಪದ ಹೇಳಿಕೆಯನ್ನು ನೀಡಿದ್ದಾರೆ.

‘ಧುರಂಧರ್’ ಮತ್ತು ಈಗ ‘ಧುರಂಧರ್ 2’ ಸಿನಿಮಾದ ಹಾಡುಗಳಂತೂ ಪಾಕಿಸ್ತಾನದಲ್ಲಿ ಭಾರಿ ವೈರಲ್ ಆಗಿವೆ. ಪಾಕಿಸ್ತಾನದಲ್ಲಿ ನಡೆಯುತ್ತಿರುವ ಮದುವೆಗಳಲ್ಲಿಯೂ ‘ಧುರಂಧರ್’ ಸಿನಿಮಾದ ಹಾಡುಗಳನ್ನು ಹಾಕಲಾಗುತ್ತಿದೆ. ಪಾಕಿಸ್ತಾನದಲ್ಲಿ ಪೈರಸಿ ಸಿಡಿ ಕ್ಯಾಸೆಟ್ ಮಾರಾಟ ಮಾಡುವವರಿಗಂತೂ ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾದಿಂದ ಭಾರಿ ಲಾಭವಾಗಿದೆ. ಅಂಗಡಿಗಳ ಮುಂದೆ ‘ಧುರಂಧರ್’ ಸಿನಿಮಾದ ಪೋಸ್ಟರ್​​ಗಳನ್ನು ಹಾಕಿಕೊಳ್ಳುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ದಾವಣಗೆರೆ ಬೈ ಎಲೆಕ್ಷನ್: ಕಾಂಗ್ರೆಸ್​​ ವಿರುದ್ಧವೇ ತೊಡೆತಟ್ಟಿದ ಪೈಲ್ವಾನ್
ದಾವಣಗೆರೆ ಬೈ ಎಲೆಕ್ಷನ್: ಕಾಂಗ್ರೆಸ್​​ ವಿರುದ್ಧವೇ ತೊಡೆತಟ್ಟಿದ ಪೈಲ್ವಾನ್
ಕಾಂಗ್ರೆಸ್​​ ಟಿಕೆಟ್​​ ಸಿಕ್ಕ ಬೆನ್ನಲ್ಲೇ ತಂದೆ ನೆನೆದು ಉಮೇಶ್ ಮೇಟಿ ಭಾವುಕ
ಕಾಂಗ್ರೆಸ್​​ ಟಿಕೆಟ್​​ ಸಿಕ್ಕ ಬೆನ್ನಲ್ಲೇ ತಂದೆ ನೆನೆದು ಉಮೇಶ್ ಮೇಟಿ ಭಾವುಕ
Video: ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ, ಭೂಕುಸಿತ
Video: ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ, ಭೂಕುಸಿತ
ಲ್ಯಾಂಬೋರ್ಗಿನಿ ಡ್ರಿಫ್ಟಿಂಗ್: ಹುಚ್ಚಾಟ ಮೆರೆದಿದ್ದು ಮುತ್ತಪ್ಪ ರೈ ಪುತ್ರ?
ಲ್ಯಾಂಬೋರ್ಗಿನಿ ಡ್ರಿಫ್ಟಿಂಗ್: ಹುಚ್ಚಾಟ ಮೆರೆದಿದ್ದು ಮುತ್ತಪ್ಪ ರೈ ಪುತ್ರ?
ಬೇರೆ ವಿದ್ಯಾರ್ಥಿಯ ಹಾಸಿಗೆಯಲ್ಲಿ ಮಲಗಿದ್ದಕ್ಕೆ ವಿದ್ಯಾರ್ಥಿಗೆ ಥಳಿತ
ಬೇರೆ ವಿದ್ಯಾರ್ಥಿಯ ಹಾಸಿಗೆಯಲ್ಲಿ ಮಲಗಿದ್ದಕ್ಕೆ ವಿದ್ಯಾರ್ಥಿಗೆ ಥಳಿತ
ಈ ವಾರ ಈ ರಾಶಿಗೆ ಆಕಸ್ಮಿಕ ಧನಲಾಭ, ಹಳೆಯ ಬಾಕಿ ವಸೂಲಿ
ಈ ವಾರ ಈ ರಾಶಿಗೆ ಆಕಸ್ಮಿಕ ಧನಲಾಭ, ಹಳೆಯ ಬಾಕಿ ವಸೂಲಿ
ಹೋಟೆಲ್, ಮೊಬೈಲ್ ಶಾಪ್ ಸೇರಿ 12ಕ್ಕೂ ಅಧಿಕ ಅಂಗಡಿಗಳು ಬೆಂಕಿಗಾಹುತಿ!
ಹೋಟೆಲ್, ಮೊಬೈಲ್ ಶಾಪ್ ಸೇರಿ 12ಕ್ಕೂ ಅಧಿಕ ಅಂಗಡಿಗಳು ಬೆಂಕಿಗಾಹುತಿ!
ಲಷ್ಕರ್ ಕಮಾಂಡರ್ ಬಿಲಾಲ್ ಆರಿಫ್ ಮೇಲೆ ಗುಂಡಿನ ದಾಳಿ
ಲಷ್ಕರ್ ಕಮಾಂಡರ್ ಬಿಲಾಲ್ ಆರಿಫ್ ಮೇಲೆ ಗುಂಡಿನ ದಾಳಿ
ಬ್ರಹ್ಮಣಿಪುರ ಕೆರೆಯಲ್ಲಿ ಬೆಳ್ಳಂ ಬೆಳಿಗ್ಗೆ ಕಾಣಿಸಿಕೊಂಡ ಕಾಡಾನೆಗಳ ಹಿಂಡು
ಬ್ರಹ್ಮಣಿಪುರ ಕೆರೆಯಲ್ಲಿ ಬೆಳ್ಳಂ ಬೆಳಿಗ್ಗೆ ಕಾಣಿಸಿಕೊಂಡ ಕಾಡಾನೆಗಳ ಹಿಂಡು
ಬಾಗಲಕೋಟೆಯಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 32.50 ಲಕ್ಷ ರೂ. ಹಣ ಜಪ್ತಿ!
ಬಾಗಲಕೋಟೆಯಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 32.50 ಲಕ್ಷ ರೂ. ಹಣ ಜಪ್ತಿ!