ಈ ನಟಿ ಗರ್ಭಿಣಿ ಎಂದು ತಿಳಿದ 72 ಗಂಟೆಯಲ್ಲಿ ನಡೆದೋಯ್ತು ಮದುವೆ

Neha Dhupia: ನಟಿ, ಟಿವಿ ನಿರೂಪಕಿ, ರಿಯಾಲಿಟಿ ಶೋ ಜಡ್ಜ್ ಈಗ ಯೂಟ್ಯೂಬರ್ ಸಹ ಆಗಿರುವ ನೇಹಾ ಧುಪಿಯಾ ಮದುವೆ ಬಗ್ಗೆ ಮಾತನಾಡಿದ್ದಾರೆ. ಕೇವಲ 72 ಗಂಟೆಗಳಲ್ಲಿ ತರಾತುರಿಯಲ್ಲಿ ಮದುವೆ ಆಗಬೇಕಾಯ್ತಂತೆ ನೇಹಾ. ಯಾಕೆ?

ಈ ನಟಿ ಗರ್ಭಿಣಿ ಎಂದು ತಿಳಿದ 72 ಗಂಟೆಯಲ್ಲಿ ನಡೆದೋಯ್ತು ಮದುವೆ
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on: Sep 01, 2024 | 3:26 PM

ತರಾತುರಿಯಲ್ಲಿ ಮದುವೆಯಾಗುವ ಮೂಲಕ ತಮ್ಮ ಅಭಿಮಾನಿಗಳನ್ನು ಅಚ್ಚರಿಗೊಳಿಸಿರುವ ಅನೇಕ ಜೋಡಿಗಳು ಬಾಲಿವುಡ್‌ನಲ್ಲಿ ಇವೆ. ಅಂತಹ ಅನೇಕ ಜೋಡಿಗಳ ಬಗ್ಗೆ ಆಗಾಗ ಚರ್ಚೆ ಆಗುತ್ತಲೇ ಇರುತ್ತದೆ. ಮದುವೆಗೂ ಮುನ್ನವೇ ಗರ್ಭಿಣಿಯಾದ ಕಾರಣ ನಟಿಯ ಮನೆಯವರು ಆಕೆಯನ್ನು ಕೂಡಲೇ ಮದುವೆಯಾಗುವಂತೆ ಒತ್ತಾಯಿಸಿದ್ದರು. ತಾವು ಗರ್ಭಿಣಿ ಎಂದು ಮನೆಯವರಿಗೆ ತಿಳಿಸಿದ 72 ಗಂಟೆಗಳಲ್ಲಿ ಆಕೆಯ ಮದುವೆ ಮುಗಿದು ಹೋಗಿತ್ತು. ಈ ನಟಿ ಬೇರೆ ಯಾರೂ ಅಲ್ಲ ನೇಹಾ ಧೂಪಿಯಾ.

2018ರ ಮೇ 10ರಂದು ನೇಹಾ ಧೂಪಿಯಾ ಮತ್ತು ಅಂಗದ್ ಬೇಡಿ ಗುರುದ್ವಾರದಲ್ಲಿ ವಿವಾಹವಾದರು. ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದ ಕಾರಣ ನೇಹಾ ಅವರ ಮದುವೆಯನ್ನು ತರಾತುರಿಯಲ್ಲಿ ಮುಗಿಸಲಾಗಿತ್ತು. ತಾವು ಗರ್ಭಿಣಿ ಎಂದು ಮನೆಯವರಿಗೆ ಹೇಳಿದಾಗ ಮನೆಯವರು ಒಂದು ಕಂಡೀಷನ್ ಹಾಕಿದ್ದರು ಎಂದು ನೇಹಾ ಹೇಳಿದ್ದರು. ‘ನಾನು ಅಂಗದ್ ಮತ್ತು ನನ್ನ ಸಂಬಂಧದ ಬಗ್ಗೆ ನನ್ನ ಪೋಷಕರಿಗೆ ಹೇಳಿದಾಗ, ಅವರು ಆಘಾತಕ್ಕೊಳಗಾದರು. ಆ ನಂತರ ನಾನು ಗರ್ಭಿಣಿ ಎಂದು ಹೇಳಿದ್ದೆ. ಆಗ ಅವರು ನನಗೆ ಎರಡು ದಿನ ಸಮಯ ನೀಡಿ ಮದುವೆಯಾಗಲು ಹೇಳಿದರು. ನನಗೆ ಅಂಗದ್ ನಾಲ್ಕು ವರ್ಷಗಳಿಂದ ಗೊತ್ತಿತ್ತು. ಹಾಗಾಗಿ ಇಷ್ಟು ಬೇಗ ಮದುವೆಯಾಗಲು ನಿರ್ಧರಿಸುವುದು ನನಗೆ ಕಷ್ಟವಾಗಲಿಲ್ಲ’ ಎಂದಿದ್ದರು ಅವರು.

ಇದನ್ನೂ ಓದಿ:ಆಪಲ್ ಸ್ಟೋರ್ ಲಾಂಚ್‌ನಲ್ಲಿ ಟಿಮ್ ಕುಕ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡ ಬಾಲಿವುಡ್ ತಾರೆಯರು

ಮದುವೆ ಆದ ಐದು ತಿಂಗಳ ನಂತರ ಅವರು ನವೆಂಬರ್ 2018ರಲ್ಲಿ ಮಗಳಿಗೆ ಜನ್ಮ ನೀಡಿದರು. ನೇಹಾ ಮತ್ತು ಅಂಗದ್ ತಮ್ಮ ಮಗಳಿಗೆ ಮೆಹರ್ ಎಂದು ಹೆಸರಿಟ್ಟರು. ನಂತರ ಅಕ್ಟೋಬರ್ 3, 2021 ರಂದು ನೇಹಾ ತನ್ನ ಎರಡನೇ ಮಗುವಿಗೆ ಜನ್ಮ ನೀಡಿದರು. ಅವರ ಹೆಸರು ಗುರಿಕ್ ಸಿಂಗ್ ಬೇಡಿ.

ನೇಹಾ 2003ರಲ್ಲಿ ‘ಕಯಾಮತ್’ ಚಿತ್ರದ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಆ ನಂತರ ‘ಜೂಲಿ’, ‘ಶಿಖರ್’, ‘ಚುಪ್ ಚುಪ್ ಕೆ’, ‘ಶೀಶಾ’, ‘ಫ್ಯಾನ್ಸ್ ಗಯೇ ರೇ ಒಬಾಮಾ’, ‘ದೇ ದಾನಾ ದಾನ್’, ‘ರೇ ರಗಿಲೆ’, ‘ಬ್ಯಾಡ್ ನ್ಯೂಸ್’ ಚಿತ್ರಗಳಲ್ಲಿ ನಟಿಸಿದ್ದಾರೆ. ನೇಹಾ ಈಗ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದು ಅಪರೂಪ. ಆದರೆ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ. ಅಂತೆಯೇ, ಅವರ ಪಾಡ್‌ಕಾಸ್ಟ್ ಕೂಡ ಬಹಳ ಜನಪ್ರಿಯವಾಗಿದೆ. ಈ ಪಾಡ್‌ಕ್ಯಾಸ್ಟ್‌ನಲ್ಲಿ ಅವರು ವಿವಿಧ ಸೆಲೆಬ್ರಿಟಿಗಳನ್ನು ಸಂದರ್ಶಿಸುತ್ತಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ