
ರಾಕಿಂಗ್ ಸ್ಟಾರ್ ಯಶ್ (Yash) ಅವರು ರಾಮನಾಗಿ ಕಾಣಿಸಿಕೊಳ್ಳುತ್ತಿರುವ ‘ರಾಮಾಯಣ’ ಸಿನಿಮಾದ ಬಜೆಟ್ ಒಂದಲ್ಲ, ಎರಡಲ್ಲ ಬರೋಬ್ಬರಿ ನಾಲ್ಕು ಸಾವಿರ ಕೋಟಿ ರೂಪಾಯಿ. ಹಾಗಂತ ಇದು ಯಾವುದೋ ಊಹಾಪೋಹವಲ್ಲ. ಸ್ವತಃ ನಿರ್ಮಾಕರೇ ಈ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಇದನ್ನು ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ. ನಾಲ್ಕು ಸಾವಿರ ಕೋಟಿ ರೂಪಾಯಿಯಲ್ಲಿ ಸಿನಿಮಾ ಮಾಡಿದರೆ ಅದರಿಂದ ಲಾಭ ಕಂಡುಕೊಳ್ಳುವುದು ಹೇಗೆ ಎಂಬ ಪ್ರಶ್ನೆ ಅನೇಕರಿಗೆ ಮೂಡಿದೆ.
ಈ ಚಿತ್ರವನ್ನು ನಿರ್ಮಾಣ ಮಾಡುತ್ತಿರುವ ಪ್ರಮುಖರಲ್ಲಿ ನಿಮಿತ್ ಮಲ್ಹೋತ್ರಾ ಕೂಡ ಒಬ್ಬರು. ಇವರ ಜೊತೆ ರಣಬೀರ್ ಕಪೂರ್, ಯಶ್ ಮೊದಲಾದವರು ಬಂಡವಾಳ ಹೂಡಿದ್ದಾರೆ. ನಿಮಿತ್ ಅವರು ಈ ಸಿನಿಮಾದ ಬಜೆಟ್ ಬಗ್ಗೆ ಮಾತನಾಡಿದ್ದಾರೆ. ಈ ಮೊದಲು ಸಿನಿಮಾಗೆ ಸಾವಿರ ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ ಎಂದು ಹೇಳಲಾಗಿತ್ತು. ಆದರೆ, ಸಿನಿಮಾ ಬಜೆಟ್ ಊಹೆಗೂ ಮೀರಿದೆ.
‘ಎರಡೂ ಪಾರ್ಟ್ನ ಮೊತ್ತ ಸೇರಿದರೆ 500 ಮಿಲಿಯನ್ ಡಾಲರ್ ಆಗಲಿದೆ. ಅಂದರೆ ಸುಮಾರು ನಾಲ್ಕು ಸಾವಿರ ಕೋಟಿ ರೂಪಾಯಿ. ನಾವು ವಿಶ್ವದ ಅತಿ ದೊಡ್ಡ ಸಿನಿಮಾ ಮಾಡುತ್ತಿದ್ದೇವೆ. ಅದ್ಭುತ ಸ್ಟೋರಿ ಮತ್ತು ಈ ಚಿತ್ರವನ್ನು ವಿಶ್ವವೇ ನೋಡಬೇಕು. ಆದಾಗ್ಯೂ ಹಾಲಿವುಡ್ ಸಿನಿಮಾಗಳಿಗಿಂತ ಕಡಿಮೆ ಬಜೆಟ್ನಲ್ಲಿ ಸಿನಿಮಾ ಮಾಡುತ್ತಿದ್ದೇವೆ. ಹಣವೇ ಎಲ್ಲವೂ ಅಲ್ಲ’ ಎಂದು ಅವರು ಹೇಳಿದ್ದಾರೆ. ಇದನ್ನು ಕೇಳಿ ಅನೇಕರು ಅಚ್ಚರಿಗೊಂಡಿದ್ದಾರೆ. ಅಂದರೆ ಪ್ರತಿ ಪಾರ್ಟ್ಗೆ 2 ಸಾವಿರ ಕೋಟಿ ರೂಪಾಯಿ ಖರ್ಚಾದಂತೆ ಆಗಿದೆ.
ಈ ಚಿತ್ರಕ್ಕೆ ಯಶ್ ಅವರು ಯಾವುದೇ ಸಂಭಾವನೆ ಪಡೆಯುತ್ತಿಲ್ಲ. ಬದಲಿಗೆ ತಮಗೆ ಸಂಭಾವನೆ ರೂಪದಲ್ಲಿ ಬರಬೇಕಿದ್ದ 100 ಕೋಟಿ ರೂಪಾಯಿ ಹಣವನ್ನು ಅವರು ಸಿನಿಮಾ ಮೇಲೆ ಹೂಡಿಕೆ ಮಾಡಿದ್ದಾರೆ. ಈ ಮೂಲಕ ನಿರ್ಮಾಪಕರಲ್ಲಿ ಒಬ್ಬರಾಗಿದ್ದಾರೆ. ಹೀಗಾಗಿ ಅವರು ಚಿತ್ರದ ಮೇಲೆ 100-150 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಅವರು ಇನ್ನೂ ಹೆಚ್ಚಿನ ಹಣವನ್ನು ಹಾಕಿರಬಹುದು ಎಂದು ಅನೇಕರು ಊಹಿಸಿದ್ದಾರೆ.
ಇದನ್ನೂ ಓದಿ: ‘ಎಂಜಿ ರಸ್ತೇಲಿ ಯಶ್ ಮನೆ, ಸೈಟ್ ಕೊಡ್ಸಿದ್ದಾನೆ’; ಯಾರಿಗೂ ಗೊತ್ತಿಲ್ಲದ ವಿಚಾರ ಹೇಳಿದ ಪುಷ್ಪಾ
‘ರಾಮಾಯಣ’ ಚಿತ್ರಕ್ಕೆ ನಿತೇಶ್ ತಿವಾರಿ ನಿರ್ದೇಶನ ಇದೆ. ರಣಬೀರ್ ಕಪೂರ್ ನಿರ್ಮಾಪಕನಾಗಿ, ಯಶ್ ರಾವಣನಾಗಿ, ಸಾಯಿ ಪಲ್ಲವಿ ಸೀತೆ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:01 am, Tue, 15 July 25