‘ಕಾಂತಾ’ ವಿರುದ್ಧ ಕೇಸು, ಅಡಕತ್ತರಿಯಲ್ಲಿ ಸಿಲುಕಿದ ರಾಣಾ ದಗ್ಗುಬಾಟಿ
Kaantha movie: ದುಲ್ಕರ್ ಸಲ್ಮಾನ್ ನಟಿಸಿ, ರಾಣಾ ದಗ್ಗುಬಾಟಿ ನಿರ್ಮಾಣ ಮಾಡಿರುವ ‘ಕಾಂತಾ’ ಸಿನಿಮಾ ನವೆಂಬರ್ 14 ರಂದು ಬಿಡುಗಡೆ ಆಗಲಿದೆ. ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದೆ. ಆದರೆ ಇದೀಗ ಸಿನಿಮಾದ ವಿರುದ್ಧ ಚೆನ್ನೈನಲ್ಲಿ ದೂರು ದಾಖಲಾಗಿದ್ದು, ಸಿನಿಮಾದ ಬಿಡುಗಡೆಗೆ ತಡೆ ನೀಡಬೇಕೆಂದು ಮನವಿ ಮಾಡಲಾಗಿದೆ.

ದುಲ್ಕರ್ ಸಲ್ಮಾನ್ ನಟಿಸಿ, ರಾಣಾ ದಗ್ಗುಬಾಟಿ ನಿರ್ಮಾಣ ಮಾಡಿರುವ ‘ಕಾಂತಾ’ ಸಿನಿಮಾ ಬಿಡುಗಡೆಗೆ ಇನ್ನೆರಡು ದಿನಗಳಷ್ಟೆ ಬಾಕಿ ಇದೆ. ನವೆಂಬರ್ 14 ಕ್ಕೆ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಹೀಗಿರುವಾಗ ಸಿನಿಮಾದ ವಿರುದ್ಧ ಚೆನ್ನೈನಲ್ಲಿ ಕೇಸು ದಾಖಲಾಗಿದ್ದು, ಸಿನಿಮಾದ ಬಿಡುಗಡೆಗೆ ತಡೆ ಬೀಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
‘ಕಾಂತಾ’ ಸಿನಿಮಾವು 1950ರ ತಮಿಳು ಚಿತ್ರರಂಗದ ಕತೆಯನ್ನು ಒಳಗೊಂಡಿದೆ. ಸಿನಿಮಾದಲ್ಲಿ ದುಲ್ಕರ್ ಸಲ್ಮಾನ್, ಟಿಕೆ ಮಹದೇವನ್ ಹೆಸರಿನ ಸಿನಿಮಾ ನಾಯಕನ ಪಾತ್ರದಲ್ಲಿ ನಟಿಸಿದ್ದಾರೆ. ಅವರ ತಂದೆ, ಸಿನಿಮಾ ನಿರ್ದೇಶಕನ ಪಾತ್ರದಲ್ಲಿ ಸಮುದ್ರಕಣಿ ನಟಿಸಿದ್ದಾರೆ. ನಾಯಕಿಯಾಗಿ ಭಾಗ್ಯಶ್ರೀ ಬೋರ್ಸೆ ನಟಿಸಿದ್ದಾರೆ. ಈ ಸಿನಿಮಾವು ತಮಿಳು ಚಿತ್ರರಂಗದ ಮೊಟ್ಟ ಮೊದಲ ಸೂಪರ್ ಸ್ಟಾರ್ ಎಂಕೆ ತ್ಯಾಗರಾಜ ಭಾಗವತರ್ ಅವರ ಜೀವನ ಕುರಿತಾದದ್ದು ಎನ್ನಲಾಗುತ್ತಿದೆ.
ಇದನ್ನೂ ಓದಿ:ಸ್ಮಗ್ಲಿಂಗ್ ಪ್ರಕರಣ: ಖ್ಯಾತ ನಟ ದುಲ್ಕರ್ ಸಲ್ಮಾನ್ಗೆ ಸಮನ್ಸ್ ಜಾರಿ
ಇದೀಗ ಎಂಕೆ ತ್ಯಾಗರಾಜ ಭಾಗವತರ್ ಅವರ ಮೊಮ್ಮಗ ತ್ಯಾಗರಾಜ ಅವರು ಚೆನ್ನೈನ ಸಿವಿಲ್ ನ್ಯಾಯಾಲಯದಲ್ಲಿ ‘ಕಾಂತಾ’ ಸಿನಿಮಾದ ವಿರುದ್ಧ ದೂರು ದಾಖಲಿಸಿದ್ದು, ‘ಕಾಂತಾ’ ಸಿನಿಮಾ ತಮ್ಮ ತಾತ ಎಂಕೆ ತ್ಯಾಗರಾಜ ಭಾಗವತರ್ ಅವರ ಜೀವನ ಕುರತಾಗಿದ್ದಾಗಿದೆ. ಆದರೆ ಚಿತ್ರತಂಡ ಕುಟುಂಬವನ್ನು ಭೇಟಿ ಮಾಡದೆ, ಕುಟುಂಬದವರ ಅನುಮತಿ ಪಡೆಯದೇ ಸಿನಿಮಾ ಮಾಡಿದ್ದಾರೆ. ಹಾಗಾಗಿ ಸಿನಿಮಾದ ಬಿಡುಗಡೆಗೆ ತಡೆ ನೀಡಬೇಕೆಂದು ಮನವಿ ಮಾಡಿದ್ದಾರೆ.
ಈ ಬಗ್ಗೆ ಟ್ವಿಟ್ಟರ್ನಲ್ಲಿ ಪ್ರತಿಕ್ರಿಯೆ ನೀಡಿರುವ ನಿರ್ಮಾಪಕ ರಾಣಾ ದಗ್ಗುಬಾಟಿ, ‘ನಮ್ಮ ‘ಕಾಂತಾ’ ಸಿನಿಮಾವು ಯಾರದ್ದೇ ವೈಯಕ್ತಿಕ ಜೀವನ ಆಧರಿಸಿದ ಕತೆಯಲ್ಲ, ಬದಲಿಗೆ ಇದೊಂದು ಕಲ್ಪಿತ ಕತೆ, ನಮ್ಮ ಸಿನಿಮಾ ಮೊದಲೇ ನಿಶ್ಚಯಿಸಿರುವಂತೆ ನವೆಂಬರ್ 14ರಂದು ಬಿಡುಗಡೆ ಆಗುವುದು ಪಕ್ಕಾ’ ಎಂದಿದ್ದಾರೆ.
‘ಕಾಂತಾ’ ಸಿನಿಮಾನಲ್ಲಿ ದುಲ್ಕರ್ ಸಲ್ಮಾನ್ ಅವರು ಟಿಕೆ ಮಹದೇವನ್ ಹೆಸರಿನ ಪಾತ್ರದಲ್ಲಿ ನಟಿಸಿದ್ದಾರೆ. ಸೆಲ್ವಮಣಿ ಸೆಲ್ವರಾಜ್ ಅವರು ಸಿನಿಮಾ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹಾಕಿರುವ ಜೊತೆಗೆ ಪ್ರಮುಖವಾದ ಪಾತ್ರದಲ್ಲಿ ನಟಿಸಿದ್ದ ರಾಣಾ ದಗ್ಗುಬಾಟಿ. ಸಿನಿಮಾಕ್ಕೆ ದುಲ್ಕರ್ ಸಲ್ಮಾನ್ ಸಹ ನಿರ್ಮಾಪಕರೂ ಆಗಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




