ಅಭಿಮಾನಿಗಳಿಗೆ ಭಾವುಕ ವಿದಾಯ ಹೇಳಲು ಸಜ್ಜಾದ ವಿಜಯ್, ಹಲವು ಯೋಜನೆ
Vijay Thalapthy movie: ಸೂಪರ್ ಸ್ಟಾರ್ ವಿಜಯ್ ಕೊನೆಯ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ವಿಜಯ್ ಅವರ ಕೊನೆಯ ಸಿನಿಮಾ ಎನ್ನಲಾಗುತ್ತಿರುವ ‘ಜನ ನಾಯಗನ್’ ಜನವರಿ 09 ಕ್ಕೆ ಬಿಡುಗಡೆ ಆಗಲಿದೆ. ವಿಜಯ್, ತಮ್ಮ ಇಷ್ಟು ವರ್ಷಗಳ ಸಿನಿಮಾ ಪಯಣಕ್ಕೆ ಭಾವುಕ ವಿದಾಯವನ್ನು ಹೇಳಲು ಯೋಜನೆ ಹಾಕಿಕೊಂಡಿದ್ದಾರೆ.

ತಮಿಳು ಚಿತ್ರರಂಗದಲ್ಲಿ (Tamil Movie Industry) ದಶಕಗಳಿಂದಲೂ ರಜನೀಕಾಂತ್ ಅವರು ಟಾಪ್ ಸೂಪರ್ ಸ್ಟಾರ್ ಸ್ಥಾನದಲ್ಲಿದ್ದಾರೆ. ಆದರೆ ದಳಪತಿ ವಿಜಯ್ ಇತ್ತೀಚೆಗೆ ಬಾಕ್ಸ್ ಆಫೀಸ್ ಸಂಖ್ಯೆ, ಅಭಿಮಾನಿಗಳ ಸಂಖ್ಯೆಯಲ್ಲಿ ರಜನೀಕಾಂತ್ ಅವರನ್ನು ಹಿಂದಿಕ್ಕಿದ್ದಾರೆ. ವಿಜಯ್ ಅವರೇ ಮುಂದಿನ ರಜನೀಕಾಂತ್ ಚಿತ್ರರಂಗ ಮಾತನಾಡಿಕೊಳ್ಳುತ್ತಿರುವಾಗಲೇ ವಿಜಯ್ ಅವರು ರಾಜಕೀಯಕ್ಕಾಗಿ ಸಿನಿಮಾಕ್ಕೆ ವಿದಾಯ ಹೇಳುತ್ತಿದ್ದಾರೆ. ವಿಜಯ್ ಇದೀಗ ತಮ್ಮ ಕೊನೆಯ ಸಿನಿಮಾನಲ್ಲಿ ನಟಿಸುತ್ತಿದ್ದು, ಸಿನಿಮಾಕ್ಕೆ ಮತ್ತು ತಮ್ಮ ಸಿನಿಮಾ ಅಭಿಮಾನಿಗಳಿಗೆ ಭಾವುಕ ವಿದಾಯವನ್ನು ಹೇಳಲು ವಿಜಯ್ ಸಜ್ಜಾಗಿದ್ದಾರೆ. ಇದಕ್ಕಾಗಿ ಹಲವು ಯೋಜನೆಗಳನ್ನು ಅವರು ಹಾಕಿಕೊಂಡಿದ್ದಾರೆ.
ವಿಜಯ್ ಪ್ರಸ್ತುತ ‘ಜನ ನಾಯಗನ್’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಇದು ಅವರ ಕೊನೆಯ ಸಿನಿಮಾ ಆಗಿರಲಿದೆ. ಇದು ತಮ್ಮ ಕೊನೆಯ ಸಿನಿಮಾ ಎಂದು ಈಗಾಗಲೇ ವಿಜಯ್ ಘೋಷಣೆ ಮಾಡಿದ್ದಾರೆ. ಈ ಸಿನಿಮಾದ ಮೂಲಕ ಇಷ್ಟು ವರ್ಷಗಳ ತಮ್ಮ ಸಿನಿಮಾ ಪಯಣಕ್ಕೆ ಹಾಗೂ ತಮ್ಮ ಸಿನಿಮಾದ ಅಭಿಮಾನಿಗಳಿಗೆ ಭಾವುಕ ವಿದಾಯವನ್ನು ಹೇಳಲು ವಿಜಯ್ ಯೋಜನೆ ಹಾಕಿಕೊಂಡಿದ್ದಾರೆ.
ಈ ಸಿನಿಮಾ ಅನ್ನು ಹಾಗೂ ವಿದಾಯವನ್ನು ನೆನಪುಳಿಯುವಂತೆ ಮಾಡಲು ವಿಜಯ್ ನಿಶ್ಚಯಿಸಿದ್ದು, ಅದಕ್ಕಾಗಿ ಭಾರಿ ಅದ್ಧೂರಿ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಆಯೋಜನೆ ಮಾಡಲು ವಿಜಯ್ ಸಜ್ಜಾಗಿದ್ದಾರೆ. ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ತಮಿಳು ಚಿತ್ರರಂಗದ ಕೆಲವು ಸ್ಟಾರ್ ನಟ-ನಿರ್ದೇಶಕರು ಭಾಗಿ ಆಗಲಿದ್ದಾರೆ. ರಜನೀಕಾಂತ್, ಅಜಿತ್, ಕಮಲ್ ಹಾಸನ್, ಸೂರ್ಯ ಇನ್ನೂ ಹಲವರು ವಿಜಯ್ ಅವರ ಬಗ್ಗೆ ಮಾತನಾಡಿದ ವಿಡಿಯೋಗಳು ಪ್ಲೇ ಆಗಲಿವೆ. ವಿಜಯ್, ತಮ್ಮ ವೃತ್ತಿ ಜೀವನಕ್ಕೆ ಸಹಕರಿಸಿದ ಅನೇಕ ನಿರ್ದೇಶಕರು, ತಂತ್ರಜ್ಞರಿಗೆ ಸನ್ಮಾನ ಮಾಡಲಿದ್ದಾರೆ. ಅಂತಿಮವಾಗಿ ಭಾವುಕ ಭಾಷಣವೊಂದನ್ನು ಸಹ ಮಾಡಲಿದ್ದಾರಂತೆ.
ಇದನ್ನೂ ಓದಿ:ನಟ, ರಾಜಕಾರಣಿ ದಳಪತಿ ವಿಜಯ್ ನಿವಾಸಕ್ಕೆ ಬಾಂಬ್ ಬೆದರಿಕೆ
ಇನ್ನು ಸಿನಿಮಾದ ಒಳಗೂ ಸಹ ವಿಜಯ್ ಅವರು ಅಭಿಮಾನಿಗಳಿಗೆ ಭಾವುಕ ವಿದಾಯ ಹೇಳಲಿದ್ದಾರೆ. ‘ಜನ ನಾಯಗನ್’ ಸಿನಿಮಾ ಅನ್ನು ವಿಜಯ್ ಅವರ ರಾಜಕೀಯ ಭವಿಷ್ಯಕ್ಕೆ ನೆರವಾಗುವಂತೆಯೇ ರೂಪಿಸಲಾಗುತ್ತಿದೆಯಂತೆ. ಸರ್ಕಾರಗಳನ್ನು ಪ್ರಶ್ನೆ ಮಾಡುವ ಸಂಭಾಷಣೆಗಳು, ತಮ್ಮ ಪಕ್ಷದ ಧ್ಯೇಯೋದ್ಧೇಶಗಳ ಪ್ರಚಾರಕ್ಕೂ ಸಹ ‘ಜನ ನಾಯಗನ್’ ಅನ್ನು ಬಳಸಿಕೊಳ್ಳಲಾಗುತ್ತಿದೆ. ಜೊತೆಗೆ ಸಿನಿಮಾದ ಕೊನೆಯಲ್ಲಿ ವಿಜಯ್ ಅವರು ಅಭಿಮಾನಿಗಳಿಗೆ ವಿದಾಯ ಹೇಳುವ ದೃಶ್ಯ ಸಹ ಇರಲಿದೆಯಂತೆ.
‘ಜನ ನಾಯಗನ್’ ಸಿನಿಮಾ ಅನ್ನು ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡುತ್ತಿದ್ದು, ಎಚ್ ವಿನೋದ್ ಅವರು ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾನಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸುತ್ತಿದ್ದಾರೆ. ವಿಲನ್ ಪಾತ್ರದಲ್ಲಿ ಬಾಬಿ ಡಿಯೋಲ್ ನಟಿಸುತ್ತಿದ್ದಾರೆ. ಅನಿರುದ್ಧ್ ರವಿಚಂದ್ರನ್ ಸಂಗೀತ ನೀಡಿದ್ದಾರೆ. ಸಿನಿಮಾ ಜನವರಿ 09 ರಂದು ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




