AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗ ರಾಮ್ ಚರಣ್ ಹುಟ್ಟುಹಬ್ಬಕ್ಕೆ ಹತ್ತು ಲಕ್ಷ ದೇಣಿಗೆ ಕೊಟ್ಟ ಮೆಗಾಸ್ಟಾರ್ ಚಿರಂಜೀವಿ

Megastar Chiranjeevi: ಚಿರಂಜೀವಿ ಅವರು ಸಿನಿಮಾ ನಟನೆಯ ಜೊತೆಗೆ ತಮ್ಮ ಅಪಾರ ಸಮಾಜ ಸೇವೆಯಿಂದಲೂ ಗುರುತಿಸಿಕೊಂಡಿದ್ದಾರೆ. ಚಿರಂಜೀವಿ ಬ್ಲಡ್ ಬ್ಯಾಂಕ್, ಐ ಬ್ಯಾಂಕ್ ಈಗಾಗಲೇ ಲಕ್ಷಾಂತರ ಜನರ ಜೀವ ಉಳಿಸಿವೆ. ಹಲವಾರು ಸಮಾಜ ಸೇವಾ ಕಾರ್ಯಕ್ರಗಳಲ್ಲಿ ತೊಡಗಿಕೊಂಡಿರುವ ನಟ ಚಿರಂಜೀವಿ, ಇದೀಗ ತಮ್ಮ ಮಗ, ಸೂಪರ್ ಸ್ಟಾರ್ ರಾಮ್ ಚರಣ್ ಹುಟ್ಟುಹಬ್ಬದಂದು ಹಲವಾರು ಮಂದಿಗೆ ಊಟ ಹಾಕಿಸಿದ ಜೊತೆಗೆ ಹತ್ತು ಲಕ್ಷ ರೂಪಾಯಿ ಹಣವನ್ನು ಸಮಾಜ ಸೇವೆಗೆಂದು ಉಚಿತವಾಗಿ ನೀಡಿದ್ದಾರೆ.

ಮಗ ರಾಮ್ ಚರಣ್ ಹುಟ್ಟುಹಬ್ಬಕ್ಕೆ ಹತ್ತು ಲಕ್ಷ ದೇಣಿಗೆ ಕೊಟ್ಟ ಮೆಗಾಸ್ಟಾರ್ ಚಿರಂಜೀವಿ
Chiranjeevi
ಮಂಜುನಾಥ ಸಿ.
|

Updated on: Mar 28, 2026 | 5:28 PM

Share

ಮೆಗಾಸ್ಟಾರ್ ಚಿರಂಜೀವಿ (Chiranjeevi), ತೆಲುಗು ಚಿತ್ರರಂಗ ಮಾತ್ರವಲ್ಲ, ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ನಟರುಗಳಲ್ಲಿ ಒಬ್ಬರು. ಈಗಲೂ ಸಹ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಚಿರಂಜೀವಿ ಅವರು ಸಿನಿಮಾ ನಟನೆಯ ಜೊತೆಗೆ ತಮ್ಮ ಅಪಾರ ಸಮಾಜ ಸೇವೆಯಿಂದಲೂ ಗುರುತಿಸಿಕೊಂಡಿದ್ದಾರೆ. ಚಿರಂಜೀವಿ ಬ್ಲಡ್ ಬ್ಯಾಂಕ್, ಐ ಬ್ಯಾಂಕ್ ಈಗಾಗಲೇ ಲಕ್ಷಾಂತರ ಜನರ ಜೀವ ಉಳಿಸಿವೆ. ಹಲವಾರು ಸಮಾಜ ಸೇವಾ ಕಾರ್ಯಕ್ರಗಳಲ್ಲಿ ತೊಡಗಿಕೊಂಡಿರುವ ನಟ ಚಿರಂಜೀವಿ, ಇದೀಗ ತಮ್ಮ ಮಗ, ಸೂಪರ್ ಸ್ಟಾರ್ ರಾಮ್ ಚರಣ್ ಹುಟ್ಟುಹಬ್ಬದಂದು ಹಲವಾರು ಮಂದಿಗೆ ಊಟ ಹಾಕಿಸಿದ ಜೊತೆಗೆ ಹತ್ತು ಲಕ್ಷ ರೂಪಾಯಿ ಹಣವನ್ನು ಸಮಾಜ ಸೇವೆಗೆಂದು ಉಚಿತವಾಗಿ ನೀಡಿದ್ದಾರೆ.

ನಿನ್ನೆಯಷ್ಟೆ ರಾಮ್ ಚರಣ್ ಅವರು ತಮ್ಮ ಹುಟ್ಟುಹಬ್ಬ ಆಚರಣೆ ಮಾಡಿಕೊಂಡರು. ತಮ್ಮ ಪುತ್ರ ರಾಮ್ ಚರಣ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಹಲವು ಸಾಮಾಜಿಕ ಸಂಸ್ಥೆಗಳಿಗೆ ಬೆಂಬಲ ನೀಡುವ ಮೂಲಕ ಈ ದಿನವನ್ನು ಅರ್ಥಪೂರ್ಣವಾಗಿಸಿದ್ದಾರೆ ಮೆಗಾಸ್ಟಾರ್ ಚಿರಂಜೀವಿ. ಇತ್ತೀಚೆಗಷ್ಟೆ ಮೆಗಾಸ್ಟಾರ್ ಚಿರಂಜೀವಿ ಅವರು ಚಿತ್ರರಂಗಕ್ಕೆ ನೀಡಿರುವ ಅಭೂತಪೂರ್ವ ಕೊಡುಗೆಯನ್ನು ಗುರುತಿಸಿ ಎನ್​​ಟಿಆರ್ ಪ್ರಶಸ್ತಿಯನ್ನು ಅವರಿಗೆ ನೀಡಲಾಯ್ತು. ಈ ಪ್ರಶಸ್ತಿಯು, ಫಲಕದ ಜೊತೆಗೆ 10 ಲಕ್ಷ ರೂಪಾಯಿ ನಗದು ಹಣವನ್ನು ಸಹ ಒಳಗೊಂಡಿತ್ತು. ಆ ಹಣವನ್ನು ಚಿರಂಜೀವಿ ಅವರು ವೃದ್ಧಾಶ್ರಮಗಳು, ದೃಷ್ಟಿ ವಿಕಲಚೇತನರ ಸಂಸ್ಥೆಗಳು ಮತ್ತು ಅನಾಥ ಮಕ್ಕಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಫೌಂಡೇಶನ್‌ಗಳಿಗೆ ಹಂಚಿಕೆ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವ ಬಾಲಕಿಯೊಬ್ಬಳ ವೈದ್ಯಕೀಯ ವೆಚ್ಚಕ್ಕೂ ಅವರು ಸಹಾಯ ಹಸ್ತ ಚಾಚಿದ್ದಾರೆ.

ಕೇವಲ ದೇಣಿಗೆ ನೀಡುವುದಷ್ಟೇ ಅಲ್ಲದೆ, ಚಿರಂಜೀವಿ ಅವರು ವೈಯಕ್ತಿಕವಾಗಿ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಸಂಭ್ರಮಾಚರಣೆಗೆ ವೃದ್ಧರನ್ನು ಆಹ್ವಾನಿಸಿ, ಅವರಿಗೆ ಅನ್ನದಾನ ಮಾಡಿ ಹೊಸ ಬಟ್ಟೆಗಳನ್ನು ವಿತರಿಸಿದರು. ಈ ಮಾನವೀಯ ಕಾರ್ಯವು ಅನೇಕರ ಮೊಗದಲ್ಲಿ ಮಂದಹಾಸ ಮೂಡಿಸಿತು. ಕುಟುಂಬದ ಸಂಭ್ರಮವನ್ನು ಸಮಾಜಸೇವೆಯಾಗಿ ಪರಿವರ್ತಿಸುವ ಮೂಲಕ, ನಿಜವಾದ ಯಶಸ್ಸು ಇತರರೊಂದಿಗೆ ಸಂತೋಷವನ್ನು ಹಂಚಿಕೊಳ್ಳುವುದರಲ್ಲಿ ಅಡಗಿದೆ ಎಂದು ಚಿರಂಜೀವಿ ತೋರಿಸಿಕೊಟ್ಟಿದ್ದಾರೆ.

ಇದನ್ನೂ ಓದಿ:ಪವನ್ ಕಲ್ಯಾಣ್, ಶ್ರೀಲೀಲಾ ಜೊತೆಗೆ ‘ಉಸ್ತಾದ್ ಭಗತ್ ಸಿಂಗ್’ ನೋಡಿದ ಚಿರಂಜೀವಿ

ಮೆಗಾಸ್ಟಾರ್ ಚಿರಂಜೀವಿ ಅವರು ಈ ರೀತಿಯ ಅನೇಕ ಸಮಾಜ ಮುಖಿ ಕಾರ್ಯಗಳನ್ನು ಮಾಡಿದ್ದಾರೆ. ಒಂದು ಸಮಯದಲ್ಲಿ ಇಡೀ ದೇಶದಲ್ಲೇ ಅತಿ ಹೆಚ್ಚು ಅಭಿಮಾನಿ ಸಂಘಗಳನ್ನು ಹೊಂದಿದ್ದ ನಟ ಮೆಗಾಸ್ಟಾರ್ ಚಿರಂಜೀವಿ. ತಮ್ಮ ಅಭಿಮಾನಿಗಳನ್ನು ಸಾಮಾಜಿಕ ಕಾರ್ಯಗಳನ್ನು ಮಾಡಲು ಬಳಕೆ ಮಾಡಿಕೊಂಡರು. ಆ ಮೂಲಕ ಇತರೆ ಸ್ಟಾರ್ ನಟರುಗಳಿಗೆ ಮಾದರಿ ಆದರು. ಚಿರಂಜೀವಿ ಸ್ಥಾಪಿಸಿದ ಬ್ಲಾಡ್ ಬ್ಯಾಂಕ್ ಲಕ್ಷಾಂತರ ಜನರ ಜೀವಗಳನ್ನು ಉಳಿಸಿದೆ. ಚಿರಂಜೀವಿ ಅವರು ಹಲವಾರು ಸಿನಿಮಾ ನಟ-ನಟಿಯರಿಗೆ ಸಹ ಅವರ ಕಷ್ಟಕಾಲದಲ್ಲಿ ಸಹಾಯ ಮಾಡಿದ್ದಾರೆ. ಕೋವಿಡ್ ಸಮಯದಲ್ಲಿ ಆಕ್ಸಿಜನ್ ಬ್ಯಾಂಕ್ ಅನ್ನು ಸಹ ಚಿರಂಜೀವಿ ಮಾಡಿದ್ದರು. ಈಗಲೂ ಸಹ ಆ ಕಾರ್ಯವನ್ನು ಮುಂದುವರೆಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಇರಾನ್‌ ಸುಪ್ರೀಂ ನಾಯಕ ಮೊಜ್ತಬಾ ಖಮೇನಿ ಬಗ್ಗೆ ಟ್ರಂಪ್ ಶಾಕಿಂಗ್ ಹೇಳಿಕೆ
ಇರಾನ್‌ ಸುಪ್ರೀಂ ನಾಯಕ ಮೊಜ್ತಬಾ ಖಮೇನಿ ಬಗ್ಗೆ ಟ್ರಂಪ್ ಶಾಕಿಂಗ್ ಹೇಳಿಕೆ
ಕೊಹ್ಲಿ ನನಗೆ ಲವ್ ಬೈಟ್ ನೀಡಿದ್ದಾನೆ; ಯುವತಿಯ ಹೇಳಿಕೆ ವೈರಲ್
ಕೊಹ್ಲಿ ನನಗೆ ಲವ್ ಬೈಟ್ ನೀಡಿದ್ದಾನೆ; ಯುವತಿಯ ಹೇಳಿಕೆ ವೈರಲ್
ಬಿಜೆಪಿ ಕಚೇರಿ ಮುಂದೆನೇ ಬಂದು ತೊಡೆತಟ್ಟಿದ್ದೇವೆ: ಗುಡುಗಿದ ಪ್ರದೀಪ್ ಈಶ್ವರ್
ಬಿಜೆಪಿ ಕಚೇರಿ ಮುಂದೆನೇ ಬಂದು ತೊಡೆತಟ್ಟಿದ್ದೇವೆ: ಗುಡುಗಿದ ಪ್ರದೀಪ್ ಈಶ್ವರ್
ಜೆವಾರ್‌ನಲ್ಲಿ ಅಂತಾರಾಷ್ಟ್ರೀಯ ಏರ್​ಪೋರ್ಟ್​ ಉದ್ಘಾಟನೆ ಮಾಡಿದ ಮೋದಿ!
ಜೆವಾರ್‌ನಲ್ಲಿ ಅಂತಾರಾಷ್ಟ್ರೀಯ ಏರ್​ಪೋರ್ಟ್​ ಉದ್ಘಾಟನೆ ಮಾಡಿದ ಮೋದಿ!
ಕಾಫಿನಾಡಿನಲ್ಲಿ ವರುಣನ ಅಬ್ಬರ
ಕಾಫಿನಾಡಿನಲ್ಲಿ ವರುಣನ ಅಬ್ಬರ
ಚಿಕ್ಕೋಡಿ ಕಾಡಸಿದ್ದೇಶ್ವರ ಮಠಕ್ಕೆ ಮೋಹನ್ ಭಾಗವತ್​ ಭೇಟಿ: ತುಲಾಭಾರ
ಚಿಕ್ಕೋಡಿ ಕಾಡಸಿದ್ದೇಶ್ವರ ಮಠಕ್ಕೆ ಮೋಹನ್ ಭಾಗವತ್​ ಭೇಟಿ: ತುಲಾಭಾರ
ಇನ್ನೋವಾ ಕಾರು ಡಿಕ್ಕಿಯಾಗಿ ಗರ್ಭಿಣಿ ಇದ್ದ ಆಂಬುಲೆನ್ಸ್ ಪಲ್ಟಿ
ಇನ್ನೋವಾ ಕಾರು ಡಿಕ್ಕಿಯಾಗಿ ಗರ್ಭಿಣಿ ಇದ್ದ ಆಂಬುಲೆನ್ಸ್ ಪಲ್ಟಿ
ಬೆಂಗಳೂರಿನಲ್ಲಿ ಗ್ಯಾಸ್​​ ಸಿಲಿಂಡರ್​ ಲಾರಿ ಪಲ್ಟಿ: ತಪ್ಪಿದ ಭಾರಿ ಅನಾಹುತ
ಬೆಂಗಳೂರಿನಲ್ಲಿ ಗ್ಯಾಸ್​​ ಸಿಲಿಂಡರ್​ ಲಾರಿ ಪಲ್ಟಿ: ತಪ್ಪಿದ ಭಾರಿ ಅನಾಹುತ
ಮದ್ಯದ ಅಂಗಡಿಗೆ ಮುತ್ತಿಗೆ ಹಾಕಿ ಸಿಬ್ಬಂದಿಗೆ ಕ್ಲಾಸ್ ತಗೊಂಡ ಮಹಿಳೆಯರು!
ಮದ್ಯದ ಅಂಗಡಿಗೆ ಮುತ್ತಿಗೆ ಹಾಕಿ ಸಿಬ್ಬಂದಿಗೆ ಕ್ಲಾಸ್ ತಗೊಂಡ ಮಹಿಳೆಯರು!
‘ಗೋ ಬ್ಯಾಕ್ ಜಮೀರ್​ ಅಹ್ಮದ್’: ಬಾಗಲಕೋಟೆಯಲ್ಲಿ ಮುಸ್ಲಿಂ ಮುಖಂಡರ ಆಕ್ರೋಶ!
‘ಗೋ ಬ್ಯಾಕ್ ಜಮೀರ್​ ಅಹ್ಮದ್’: ಬಾಗಲಕೋಟೆಯಲ್ಲಿ ಮುಸ್ಲಿಂ ಮುಖಂಡರ ಆಕ್ರೋಶ!