ಕಾಫಿ ನಾಡು ಚಂದು ಮಾಡಿದ್ರು ಮಿಸ್ಟೇಕ್​; ಗಣನೀಯವಾಗಿ ಇಳಿಕೆ ಆಗುತ್ತಿದೆ ಇನ್​ಸ್ಟಾಗ್ರಾಮ್ ಹಿಂಬಾಲಕರ ಸಂಖ್ಯೆ

ರಾತ್ರಿ ಬೆಳಗಾಗುವುದರೊಳಗೆ ಫೇಮಸ್ ಆಗಬಹುದು. ಕಾಫಿ ನಾಡು ಚಂದುಗೆ ಸಿಕ್ಕಿದ್ದು ಕೂಡ ಇದೇ ರೀತಿಯ ಜನಪ್ರಿಯತೆ. ತಮ್ಮದೇ ಶೈಲಿಯಲ್ಲಿ ಬರ್ತ್​ಡೇ ವಿಶ್ ಮಾಡಿ ಅವರು ಫೇಮಸ್ ಆದರು.

ಕಾಫಿ ನಾಡು ಚಂದು ಮಾಡಿದ್ರು ಮಿಸ್ಟೇಕ್​; ಗಣನೀಯವಾಗಿ ಇಳಿಕೆ ಆಗುತ್ತಿದೆ ಇನ್​ಸ್ಟಾಗ್ರಾಮ್ ಹಿಂಬಾಲಕರ ಸಂಖ್ಯೆ
ಚಂದು
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Sep 19, 2022 | 5:52 PM

ಕಾಫಿ ನಾಡು ಚಂದು (Coffee Nadu Chandu) ಅವರು ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಶನ್ ಕ್ರಿಯೇಟ್ ಮಾಡಿದ್ದರು. ‘ನಾನು ಶಿವಣ್ಣ ಪುನೀತಣ್ಣ ಅವರ ಅಭಿಮಾನಿ’ ಎಂದು ಮಾತು ಆರಂಭಿಸುವ ಅವರು ತಮ್ಮದೇ ಸ್ಟೈಲ್​ನಲ್ಲಿ ಬರ್ತ್​ಡೇ ವಿಶ್ ಮಾಡಿ ಗಮನ ಸೆಳೆದಿದ್ದರು. ಆದರೆ, ಇತ್ತೀಚೆಗೆ ಅವರ ಜನಪ್ರಿಯತೆ ಕುಗ್ಗುತ್ತಿದೆ. ಅನೇಕರಿಗೆ ಅವರ ವಿಡಿಯೋಗಳು ಬೋರ್ ಹೊಡೆಸುತ್ತಿವೆ. ಇದೆಲ್ಲಕ್ಕಿಂತ ಮುಖ್ಯವಾಗಿ ಅವರ ಇನ್​ಸ್ಟಾಗ್ರಾಮ್ ಖಾತೆಗೆ ಕನ್ನ ಬಿದ್ದಿದೆ. ಈ ಎಲ್ಲಾ ಕಾರಣದಿಂದ ಅವರ ಜನಪ್ರಿಯತೆ ಕುಗ್ಗುತ್ತಿದೆ. ಅಷ್ಟೇ ಅಲ್ಲ ಇನ್​ಸ್ಟಾಗ್ರಾಮ್ (Intagram) ಖಾತೆಯಲ್ಲಿ ಹಿಂಬಾಲಕರ ಸಂಖ್ಯೆ ಗಣನೀಯವಾಗಿ ಇಳಿಕೆ ಕಾಣುತ್ತಿದೆ.

ಮೊದಲೆಲ್ಲ ಫೇಮಸ್ ಆಗಬೇಕು ಎಂದರೆ ಸಾಕಷ್ಟು ಶ್ರಮ ಹಾಕಬೇಕಿತ್ತು. ಸಾಕಷ್ಟು ಪ್ರಯತ್ನ ಪಡಬೇಕಿತ್ತು. ಆದರೂ ಅದೃಷ್ಟ ಕೈ ಹಿಡಿಯುತ್ತದೆ ಎಂಬ ಗ್ಯಾರಂಟಿ ಇಲ್ಲ. ಆದರೆ, ಈಗ ಹಾಗಲ್ಲ. ರಾತ್ರಿ ಬೆಳಗಾಗುವುದರೊಳಗೆ ಫೇಮಸ್ ಆಗಬಹುದು. ಕಾಫಿ ನಾಡು ಚಂದುಗೆ ಸಿಕ್ಕಿದ್ದು ಕೂಡ ಇದೇ ರೀತಿಯ ಜನಪ್ರಿಯತೆ. ತಮ್ಮದೇ ಶೈಲಿಯಲ್ಲಿ ಬರ್ತ್​ಡೇ ವಿಶ್ ಮಾಡಿ ಅವರು ಫೇಮಸ್ ಆದರು. ಆದರೆ, ಅವರ ವಿಡಿಯೋಗಳು ಈಗ ಜನರಿಗೆ ಅಷ್ಟಾಗಿ ರುಚಿಸುತ್ತಿಲ್ಲ. ಇನ್ನು ಅವರ ಇನ್​ಸ್ಟಾಗ್ರಾಮ್ ಖಾತೆ ಹ್ಯಾಕ್ ಆಗಿದೆ. ಅವರ ಜನಪ್ರಿಯತೆ ಕುಗ್ಗಲು ಇದೂ ಕೂಡ ಕಾರಣ ಎನ್ನಬಹುದು.

ಚಂದು ಅವರು ಇನ್​ಸ್ಟಾಗ್ರಾಮ್​ನಲ್ಲಿ ಸಾಕಷ್ಟು ಫೇಮಸ್ ಆಗಿದ್ದಾರೆ ನಿಜ. ಆದರೆ, ಅವರು ತಮ್ಮ ಖಾತೆಯ ಸೆಕ್ಯುರಿಟಿ ಬಗ್ಗೆ ಅಷ್ಟಾಗಿ ಗಮನವಹಿಸಿಲ್ಲ. ಈ ಕಾರಣಕ್ಕೆ ಖಾತೆ ಹ್ಯಾಕ್ ಆಗಿದೆ. ಇದು ಅವರು ಮಾಡಿದ ದೊಡ್ಡ ತಪ್ಪು ಎಂದು ಫ್ಯಾನ್ಸ್ ಮಾತನಾಡಿಕೊಳ್ಳುತ್ತಿದ್ದಾರೆ. ಈ ಖಾತೆಯಲ್ಲಿ ನಾನಾ ರೀತಿಯ ವಿಡಿಯೋ ಹಾಗೂ ಸ್ಟೇಟಸ್​​ಗಳನ್ನು ಪೋಸ್ಟ್ ಮಾಡಲಾಗುತ್ತಿದೆ. ಈ ಖಾತೆಯಿಂದ ದುಡ್ಡಿಗೆ ಬೇಡಿಕೆ ಇಡಲಾಗುತ್ತಿದೆ ಎಂಬ ಆರೋಪ ಕೂಡ ಇದೆ. ಈ ಎಲ್ಲಾ ಕಾರಣದಿಂದ ಅವರ ಹಿಂಬಾಲಕರ ಸಂಖ್ಯೆ ಕಡಿಮೆ ಆಗುತ್ತಿದೆ.

ಇದನ್ನೂ ಓದಿ
Image
‘ಬಿಗ್ ಬಾಸ್ ಕನ್ನಡ ಸೀಸನ್​ 9’ರ ಪ್ರೋಮೋ ರಿಲೀಸ್; ಅಲ್ಲಿಯೂ ಕಾಫಿ ನಾಡು ಚಂದು ಫ್ಯಾನ್ಸ್ ಹಾವಳಿ 
Image
Coffee Nadu Chandu: ರಾಜಕೀಯಕ್ಕೆ ಸೇರಿ ಅಂತ ಬಿಟ್ಟಿ ಸಲಹೆ ಕೊಟ್ಟವರಿಗೆ ಖಡಕ್​ ತಿರುಗೇಟು ನೀಡಿದ ಕಾಫಿ ನಾಡು ಚಂದು
Image
Coffee Nadu Chandu: ಕಾಫಿ ನಾಡು ಚಂದುಗೆ ಅನುಶ್ರೀ ಪ್ರೀತಿಯ ಗಿಫ್ಟ್​; ಶಿವಣ್ಣನ ಎದುರು ಎಮೋಷನಲ್​ ಆದ ರೀಲ್ಸ್​ ಹೀರೋ
Image
‘ಇಂಥ ಅಭಿಮಾನಿ ಪಡೆಯಲು ಪುಣ್ಯ ಮಾಡಿರಬೇಕು’: ಕಾಫಿ ನಾಡು ಚಂದು ಬಗ್ಗೆ ಶಿವಣ್ಣನ ಮಾತು

ಈ ಮೊದಲು ಚಂದು ಅವರನ್ನು 4 ಲಕ್ಷಕ್ಕೂ ಅಧಿಕ ಮಂದಿ ಹಿಂಬಾಲಿಸುತ್ತಿದ್ದರು. ಈಗ ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿ ಹಿಂಬಾಲಕರು ಅವರನ್ನು ಅನ್​​ಫಾಲೋ ಮಾಡಿದ್ದಾರೆ. ಹೀಗಾಗಿ, ಚಂದು ಹಿಂಬಾಲಕರ ಸಂಖ್ಯೆ 3.90 ಲಕ್ಷ ಸಮೀಪಿಸಿದೆ. ಅಕೌಂಟ್ ರಿಕವರಿ ಆಗದೆ ಇದ್ದರೆ ಇನ್ನಷ್ಟು ಹಿಂಬಾಲಕರನ್ನು ಅವರು ಕಳೆದುಕೊಳ್ಳಬಹುದು.

ಇದನ್ನೂ ಓದಿ: BBK 9: ‘ರೂಪೇಶ್ ಶೆಟ್ಟಿ ಬಿಗ್ ಬಾಸ್ ಕನ್ನಡ ಸೀಸನ್ 9ರ ವಿನ್ನರ್’; ಏನಿದು ಸಮಾಚಾರ?

ಬಿಗ್ ಬಾಸ್ ಒಟಿಟಿ ಸೀಸನ್​ಗೆ ಚಂದು ಬರುತ್ತಾರೆ ಎನ್ನಲಾಗಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ಈಗ ಅವರು ಟಿವಿ ಸೀಸನ್​ಗಾದರೂ ಕಾಲಿಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಅವರು ಬಿಗ್ ಬಾಸ್​ಗೆ ಬರಬೇಕು ಎಂದು ಅನೇಕರು ಆಗ್ರಹಿಸುತ್ತಿದ್ದಾರೆ.

ಕನ್ನಡ ಹೋರಾಟಗಾರರ ಮೇಲಿನ ಕೇಸ್ ವಾಪಸ್: ಸಿಎಂ ಘೋಷಣೆ
ಕನ್ನಡ ಹೋರಾಟಗಾರರ ಮೇಲಿನ ಕೇಸ್ ವಾಪಸ್: ಸಿಎಂ ಘೋಷಣೆ
ಮಾಧ್ಯಮಗೋಷ್ಠಿಯಲ್ಲಿ ಲೈಮ್​ಲೈಟನ್ನು ತನ್ನ ಮೇಲೆ ಎಳೆದುಕೊಂಡಿದ್ದು ಹನುಮಂತು
ಮಾಧ್ಯಮಗೋಷ್ಠಿಯಲ್ಲಿ ಲೈಮ್​ಲೈಟನ್ನು ತನ್ನ ಮೇಲೆ ಎಳೆದುಕೊಂಡಿದ್ದು ಹನುಮಂತು
ಬಿಬಿಎಲ್ ಫೈನಲ್‌ನಲ್ಲಿ ದಾಖಲೆಯ ಶತಕ ಸಿಡಿಸಿದ ಮಿಚೆಲ್ ಓವನ್
ಬಿಬಿಎಲ್ ಫೈನಲ್‌ನಲ್ಲಿ ದಾಖಲೆಯ ಶತಕ ಸಿಡಿಸಿದ ಮಿಚೆಲ್ ಓವನ್
ಮಾಧ್ಯಮದವರು ಪ್ರಶ್ನೆ ಕೇಳಿದಾಗ ಹನುಮಂತನಿಂದ ಅದೇ ಮುಗ್ಧತೆಯ ಉತ್ತರ!
ಮಾಧ್ಯಮದವರು ಪ್ರಶ್ನೆ ಕೇಳಿದಾಗ ಹನುಮಂತನಿಂದ ಅದೇ ಮುಗ್ಧತೆಯ ಉತ್ತರ!
ಫೈನಾನ್ಸ್ ಸಂಸ್ಥೆ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲು ಜಿಲ್ಲಾಡಳಿತಕ್ಕೆ ಸೂಚನೆ
ಫೈನಾನ್ಸ್ ಸಂಸ್ಥೆ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲು ಜಿಲ್ಲಾಡಳಿತಕ್ಕೆ ಸೂಚನೆ
ವಿಜಯೇಂದ್ರರನ್ನೇ ರಾಜ್ಯಾಧ್ಯಕ್ಷನಾಗಿ ಮುಂದುವರಿಸಿದರೆ ಯತ್ನಾಳ್ ನಡೆ ಏನು?
ವಿಜಯೇಂದ್ರರನ್ನೇ ರಾಜ್ಯಾಧ್ಯಕ್ಷನಾಗಿ ಮುಂದುವರಿಸಿದರೆ ಯತ್ನಾಳ್ ನಡೆ ಏನು?
ಮುಂದಿನ 3-4 ತಿಂಗಳಲ್ಲಿ ಹನುಮಂತನ ಮದುವೆ: ಊರಿನ ಜನರ ಖುಷಿ ನೋಡಿ..
ಮುಂದಿನ 3-4 ತಿಂಗಳಲ್ಲಿ ಹನುಮಂತನ ಮದುವೆ: ಊರಿನ ಜನರ ಖುಷಿ ನೋಡಿ..
ವೈಶಾಲಿ ಜೊತೆಗೆ ಕೈಕುಲುಕದಿರಲು ಕಾರಣ ತಿಳಿಸಿದ ಯಾಕುಬೊವ್
ವೈಶಾಲಿ ಜೊತೆಗೆ ಕೈಕುಲುಕದಿರಲು ಕಾರಣ ತಿಳಿಸಿದ ಯಾಕುಬೊವ್
ಮಹಾಕುಂಭದಲ್ಲಿ ತ್ರಿವೇಣಿ ಸಂಗಮದಲ್ಲಿ ಗೃಹ ಸಚಿವ ಅಮಿತ್ ಶಾ ತೀರ್ಥ ಸ್ನಾನ
ಮಹಾಕುಂಭದಲ್ಲಿ ತ್ರಿವೇಣಿ ಸಂಗಮದಲ್ಲಿ ಗೃಹ ಸಚಿವ ಅಮಿತ್ ಶಾ ತೀರ್ಥ ಸ್ನಾನ
ಯಾರೇ ಬಂದರೂ ನನ್ನನ್ನು ತುಳಿಯಲಾಗಲ್ಲ: ಸತೀಶ್ ಜಾರಕಿಹೊಳಿ, ಸಚಿವ
ಯಾರೇ ಬಂದರೂ ನನ್ನನ್ನು ತುಳಿಯಲಾಗಲ್ಲ: ಸತೀಶ್ ಜಾರಕಿಹೊಳಿ, ಸಚಿವ