AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಲೆಳೆಯಲು ಬಂದ ತೆಲುಗು ಆ್ಯಂಕರ್​ಗೆ ದೀಕ್ಷಿತ್ ಶೆಟ್ಟಿ ಸಖತ್ ತಿರುಗೇಟು

ದೀಕ್ಷಿತ್ ಶೆಟ್ಟಿ 'ದಿಯಾ' ಹಾಗೂ 'ದಿ ಗರ್ಲ್​​ಫ್ರೆಂಡ್' ಚಿತ್ರಗಳ ಯಶಸ್ಸಿನ ಬಳಿಕ ಖ್ಯಾತಿ ಗಳಿಸಿದ್ದಾರೆ. 'ದಿ ಗರ್ಲ್​​ಫ್ರೆಂಡ್' ಯಶಸ್ಸು ಸಮಾರಂಭದಲ್ಲಿ ತೆಲುಗು ಆ್ಯಂಕರ್ ಸುಮಾ ದೀಕ್ಷಿತ್ ಶೆಟ್ಟಿಯನ್ನು ಕಾಲೆಳೆದಾಗ, ಅವರು ಚಾಣಾಕ್ಷವಾಗಿ ಪ್ರತಿಕ್ರಿಯಿಸಿದ್ದಾರೆ. ಸುಮಾ ಅವರ ಐಷಾರಾಮಿ ಜೀವನವನ್ನು ಉಲ್ಲೇಖಿಸಿ, ತಮ್ಮ ಸಂಭಾವನೆಯ ಪಾಲು ನೀಡುವ ಪ್ರಶ್ನೆಗೆ ಹಾಸ್ಯಮಯವಾಗಿ ಉತ್ತರಿಸಿದರು.

ಕಾಲೆಳೆಯಲು ಬಂದ ತೆಲುಗು ಆ್ಯಂಕರ್​ಗೆ ದೀಕ್ಷಿತ್ ಶೆಟ್ಟಿ ಸಖತ್ ತಿರುಗೇಟು
ಸುಮಾ-ದೀಕ್ಷಿತ್
 ಶ್ರೀಲಕ್ಷ್ಮೀ ಎಚ್
| Edited By: |

Updated on:Nov 14, 2025 | 8:09 AM

Share

ಕನ್ನಡದಲ್ಲಿ ಸಿನಿಮಾಗಳನ್ನು ಮಾಡಿ ಗಮನ ಸೆಳೆದವರು  ಶೆಟ್ಟಿ. ಅವರು ನಟಿಸಿದ ‘ದಿಯಾ’ ಸಿನಿಮಾ ಸೂಪರ್ ಹಿಟ್ ಆಯಿತು. 2020ರಲ್ಲಿ ಬಂದ ಈ ಸಿನಿಮಾ ಸೂಪರ್ ಡೂಪಟ್ ಎನಿಸಿಕೊಂಡಿತು. ಅಲ್ಲಿಂದ ದೀಕ್ಷಿತ್ ಅದೃಷ್ಟ ಬದಲಾಯಿತು. ಈಗ ಅವರು ‘ದಿ ಗರ್ಲ್​​ಫ್ರೆಂಡ್’ ಸಿನಿಮಾ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಚಿತ್ರದ ಯಶಸ್ಸಿನ ಸುದ್ದಿಗೋಷ್ಠಿಯಲ್ಲಿ ತೆಲುಗು ಆ್ಯಂಕರ್ ಅವರು ದೀಕ್ಷಿತ್ ಅವರ ಕಾಲೆಳೆಯಲು ಬಂದರು. ಇದಕ್ಕೆ ಅವರು ಒಳ್ಳೆಯ ರೀತಿಯಲ್ಲಿ ತಿರುಗೇಟು ಕೊಟ್ಟರು.

‘ದಿ ಗರ್ಲ್​ಫ್ರೆಂಡ್’ ಸಿನಿಮಾದಲ್ಲಿ ದೀಕ್ಷಿತ್ ಅವರು ವಿಕ್ಕಿ ಹೆಸರಿನ ಪಾತ್ರ ಮಾಡಿದ್ದಾರೆ. ಈ ಸಿನಿಮಾ ಗಮನ ಸೆಳೆದಿದೆ. ರಶ್ಮಿಕಾ ಮಂದಣ್ಣ ಈ ಚಿತ್ರಕ್ಕೆ ನಾಯಕಿ. ಈ ಸಿನಿಮಾ ಬಳಿಕ ಅವರ ಬಳಿ ಸಾಕಷ್ಟು ಆಫರ್​ಗಳು ಬರುತ್ತಿವೆ. ‘ದಿ ಗರ್ಲ್​ಫ್ರೆಂಡ್’ ಚಿತ್ರದ ಸಕ್ಸಸ್​ಮೀಟ್​ನಲ್ಲಿ ತೆಲುಗು ಆ್ಯಂಕರ್ ಸುಮಾ ಅವರು ಇದ್ದರು. ಅವರು ದೀಕ್ಷಿತ್ ಶೆಟ್ಟಿ ಕಾಲೆಳೆಯಲು ಬಂದರು.

‘ದೀಕ್ಷಿತ್ ಅವರೇ ನಿಮ್ಮ ಸಂಭಾವನೆಯಲ್ಲಿ ನಮಗೂ ಪಾಲು ಕೊಡಿ’ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ದೀಕ್ಷಿತ್ ಅವರು, ‘ನಾನು ಹೊರಗೆ ಕಾರಿನಲ್ಲಿ ಕೂತಿದ್ದೆ. ದೊಡ್ಡ ಕಾರು ಬಂತು. ಅಲ್ಲು ಅರವಿಂದ್ (ತೆಲುಗಿನ ಖ್ಯಾತ ನಿರ್ಮಾಪಕ) ಬಂದರಾ ಎಂದು ಕೇಳಿದೆ. ಇಲ್ಲ ಸುಮಾ ಬಂದರು ಎಂದು ಅಲ್ಲಿದ್ದವರು ಹೇಳಿದರು’ ಎಂದು ದೀಕ್ಷಿತ್ ವಿವರಿಸಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದೆ.

ಅಂದರೆ ಸುಮಾ ಅವರು ಟಾಲಿವುಡ್​ನಲ್ಲಿ ಸಾಕಷ್ಟು ಹಣ ಮಾಡಿದ್ದಾರೆ. ಅವರು ಓಡಾಡೋದು ದೊಡ್ಡ ಕಾರಿನಲ್ಲಿ. ಅವರಿಗೆ ನಮ್ಮ ಸಂಭಾವನೆಯಲ್ಲಿ ಪಾಲು ಕೊಡೋ ಅಗತ್ಯ ಇಲ್ಲ ಎಂಬ ವಾದವನ್ನು ದೀಕ್ಷಿತ್ ಮುಂದಿಡಲು ಹೋದರು. ಅವರು ಹೇಳಿದ ವಿಧಾನ ತುಂಬಾನೇ ಫನ್ ಆಗಿತ್ತು. ಈ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ತೆಲುಗು ಪ್ರೇಕ್ಷಕರ ಮನ ಗೆದ್ದ ಕನ್ನಡದ ನಟ ದೀಕ್ಷಿತ್ ಶೆಟ್ಟಿ: ವಿಡಿಯೋ ನೋಡಿ

ಸುಮಾ ಅವರು ಟಾಲಿವುಡ್​ನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ದೊಡ್ಡ ದೊಡ್ಡ ಪ್ರೋಗ್ರಾಂನ ಹೋಸ್ಟ್ ಮಾಡುತ್ತಾರೆ. ಅವರು ನಟಿ ಕೂಡ ಹೌದು. ಅವರ ಪತಿ ರಾಜೀವ್ ಅವರು ದೊಡ್ಡ ಹೀರೋ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:08 am, Fri, 14 November 25