AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ದೇವರ’ ಸೆಲೆಬ್ರೇಷನ್ ವೇಳೆ ಸಿಡಿದ ಪಟಾಕಿ; ಜೂನಿಯರ್ ಎನ್​ಟಿಆರ್​ ಕಟೌಟ್​ಗೆ ಬೆಂಕಿ

‘ಅರವಿಂದ ಸಮೇದ’ ಬಳಿಕ ಜೂನಿಯರ್ ಎನ್​ಟಿಆರ್ ನಟನೆಯ ‘ಆರ್​ಆರ್​ಆರ್’ ಸಿನಿಮಾ ರಿಲೀಸ್ ಆಯಿತು. ಇದು ಮಲ್ಟಿ ಸ್ಟಾರರ್ ಚಿತ್ರ. ಈಗ ಆರು ವರ್ಷಗಳ ಬಳಿಕ ಜೂನಿಯರ್ ಎನ್​ಟಿಆರ್ ಸೋಲೋ ಹೀರೋ ಆಗಿ ಪ್ರೇಕ್ಷಕರ ಎದುರು ಬಂದಿದ್ದಾರೆ.

‘ದೇವರ’ ಸೆಲೆಬ್ರೇಷನ್ ವೇಳೆ ಸಿಡಿದ ಪಟಾಕಿ; ಜೂನಿಯರ್ ಎನ್​ಟಿಆರ್​ ಕಟೌಟ್​ಗೆ ಬೆಂಕಿ
ಜೂನಿಯರ್ ಎನ್​ಟಿಆರ್​ ಕಟೌಟ್​ಗೆ ಬೆಂಕಿ
ರಾಜೇಶ್ ದುಗ್ಗುಮನೆ
|

Updated on: Sep 27, 2024 | 9:00 AM

Share

‘ದೇವರ: ಚಾಪ್ಟರ್ 1’ ಸಿನಿಮಾ ಇಂದು (ಸೆಪ್ಟೆಂಬರ್ 27) ರಿಲೀಸ್ ಆಗಿದೆ. ಈ ಸಿನಿಮಾ ನೋಡಿದ ಫ್ಯಾನ್ಸ್ ಟ್ವಿಟರ್ ಮೂಲಕ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಫ್ಯಾನ್ಸ್ ಥಿಯೇಟರ್ ಮುಂದೆ ಸೆಲೆಬ್ರೇಷನ್ ಮಾಡುತ್ತಿದ್ದಾರೆ. ಈ ವೇಳೆ ಜೂನಿಯರ್​ ಎನ್​ಟಿಆರ್ ಕಟೌಟ್​ ಎದುರು ಪಟಾಕಿ ಸಿಡಿಸಲಾಗಿದೆ. ಕಟೌಟ್​ಗೆ ಬೆಂಕಿ ಕೂಡ ಹೊತ್ತಿದೆ. ಈ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಜೂನಿಯರ್ ಎನ್​ಟಿಆರ್ ಅವರು ನಟಿಸಿದ್ದ ‘ಅರವಿಂದ ಸಮೇದ’ 2018ರಲ್ಲಿ ರಿಲೀಸ್ ಆಯಿತು. ಆ ಬಳಿಕ ರಿಲೀಸ್ ಆಗಿದ್ದು ಅವರ ನಟನೆಯ  ‘ಆರ್​ಆರ್​ಆರ್’ ಚಿತ್ರ. ಇದು ಮಲ್ಟಿ ಸ್ಟಾರರ್ ಸಿನಿಮಾ ಆಗಿತ್ತು. 2018ರ ಬಳಿಕ ಜೂನಿಯರ್​ ಎನ್​ಟಿಆರ್ ಅವರು ಸೋಲೋ ಹೀರೋ ಆಗಿ ಕಾಣಿಸಿಕೊಂಡಿದ್ದು ಈ ಚಿತ್ರದಲ್ಲಿ. ಆಂಧ್ರ ಹಾಗೂ ತೆಲಂಗಾಣದಲ್ಲಿ ಸಿನಿಮಾಗೆ ಭರ್ಜರಿ ಸ್ವಾಗತ ಕೋರಲಾಗಿದೆ.

ಜೂನಿಯರ್ ಎನ್​ಟಿಆರ್ ಕಟೌಟ್​ ಎದುರು ಪಟಾಕಿ ಸಿಡಿಸಲಾಗಿದೆ. ಈ ವೇಳೆ ಕಟೌಟ್​ಗೆ ಬೆಂಕಿ ತಾಗಿದೆ. ಎನ್​ಟಿಆರ್ ಫ್ಯಾನ್ಸ್ ಹಾಲಿನ ಅಭಿಷೇಕ ಕೂಡ ಮಾಡಿದ್ದಾರೆ. ಇದು ‘ದೇವರ’ ಮೇಲಿನ ಎಗ್ಸೈಟ್​ಮೆಂಟ್​ನ ಹೆಚ್ಚಿಸಿದೆ. ಕರ್ನಾಟಕ ಭಾಗದಲ್ಲಿ ಮುಂಜಾನೆ 4 ಗಂಟೆಯಿಂದಲೇ ಶೋ ಆರಂಭ ಆಗಿದೆ.

ಇದನ್ನೂ ಓದಿ: Devara Movie Review: ದೇವರ: ಅಲೆ ಮೂಡದ ಸಾಗರ

‘ದೇವರ’ ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್ ಇದೆ. ಜೂನಿಯರ್ ಎನ್​ಟಿಆರ್ ಜೊತೆ ಜಾನ್ವಿ ಕಪೂರ್, ಸೈಫ್ ಅಲಿ ಖಾನ್, ಜಾನ್ವಿ ಕಪೂರ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾಗೆ ಒಳ್ಳೆಯ ರೀತಿಯಲ್ಲಿ ಅಡ್ವಾನ್ಸ್ ಬುಕಿಂಗ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More