AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ರಿಟೀಷ್ ಸೀಕ್ರೆಟ್ ಏಜೆಂಟ್ ಆದ ಜೂ ಎನ್​ಟಿಆರ್ ಸಹೋದರ ಕಲ್ಯಾಣ್ ರಾಮ್

Kalyan Ram: ಜೂ ಎನ್​ಟಿಆರ್ ಸಹೋದರ ಕಲ್ಯಾಣ್ ರಾಮ್ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಬ್ರಿಟೀಷ್ ಸೀಕ್ರೆಟ್ ಏಜೆಂಟ್ ಆಗಿದ್ದಾರೆ ಕಲ್ಯಾಣ್ ರಾಮ್.

ಬ್ರಿಟೀಷ್ ಸೀಕ್ರೆಟ್ ಏಜೆಂಟ್ ಆದ ಜೂ ಎನ್​ಟಿಆರ್ ಸಹೋದರ ಕಲ್ಯಾಣ್ ರಾಮ್
ಕಲ್ಯಾಣ್ ರಾಮ್
Follow us
ಮಂಜುನಾಥ ಸಿ.
|

Updated on: Jul 05, 2023 | 10:29 PM

ಜೂ ಎನ್​ಟಿಆರ್ (Jr NTR) ಚಿತ್ರರಂಗ ಕಾಲಿಟ್ಟ ಸಂದರ್ಭದಲ್ಲಿಯೇ ಅವರ ಸಹೋದರ ಕಲ್ಯಾಣ್ ರಾಮ್ (Kalyan Ram) ಸಹ ಚಿತ್ರರಂಗಕ್ಕೆ ಎಂಟ್ರಿ ಹಾಕಿದರು. ಆದರೆ ಜೂ ಎನ್​ಟಿಆರ್​ಗೆ ಧಕ್ಕಿದ ಯಶಸ್ಸು, ಜನಪ್ರೇಮ ಕಲ್ಯಾಣ್ ರಾಮ್​ಗೆ ಧಕ್ಕಲಿಲ್ಲ. ಹಾಗೆಂದು ಅವರು ತೀರ ಫ್ಲಾಪ್ ನಟರೇನೂ ಅಲ್ಲ. 2003 ರಿಂದ ಈಗಿನ ವರೆಗೂ ಸತತವಾಗಿ ಸಿನಿಮಾಗಳನ್ನು ಮಾಡುತ್ತಲೇ ಬರುತ್ತಿದ್ದಾರೆ. ಆದರೆ ಆರಕ್ಕೇರುತ್ತಿಲ್ಲ ಮೂರಕ್ಕಿಳಿಯುತ್ತಿಲ್ಲ. ಇಂದು (ಜುಲೈ 5) ಕಲ್ಯಾಣ್​ ರಾಮ್​ರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಅವರ ಹೊಸ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ.

ಕಲ್ಯಾಣ್ ರಾಮ್​ ‘ಡೆವಿಲ್: ದಿ ಬ್ರಿಟೀಷ್ ಏಜೆಂಟ್’ ಹೆಸರಿನ ಹೊಸ ಸಿನಿಮಾದಲ್ಲಿ ನಟಿಸಿದ್ದು ಸಿನಿಮಾದ ಟೀಸರ್ ಇಂದು (ಜುಲೈ 05) ಬಿಡುಗಡೆ ಆಗಿದೆ. ಜನ್ಮದಿನದ ಉಡುಗೊರೆಯಾಗಿ ಡೆವಿಲ್ ಸಿನಿಮಾದ ಟೀಸರ್ ಬಿಡುಗಡೆ ಮಾಡಲಾಗಿದೆ. ಹೀರೋಯಿಸಂಗೆ ಕಟ್ಟುಬೀಳದೆ ಹೊಸಬಗೆಯ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುವ ಕಲ್ಯಾಣ್ ರಾಮ್ ಈಗಲೂ ಭಿನ್ನ ಕಥೆಯೊಂದಿಗೆ ಪ್ರೇಕ್ಷಕರನ್ನು ರಂಜಿಸಲು ಬಂದಿದ್ದಾರೆ.

1 ನಿಮಿಷ 2 ಸೆಕೆಂಡ್ ಇರುವ ಟೀಸರ್​ ನಲ್ಲಿ ಡೆವಿಲ್ ಸ್ವಾತಂತ್ರ್ಯ ಪೂರ್ವದ ಕತೆಯನ್ನು ಒಳಗೊಂಡಿದೆ ಎಂಬ ಮಾಹಿತಿ ತಿಳಿದು ಬರುತ್ತಿದೆ. ಡೆವಿಲ್ ಸಿನಿಮಾದಲ್ಲಿ ಕಲ್ಯಾಣ್ ರಾಮ್ ಗೂಢಚಾರಿ ಪಾತ್ರದಲ್ಲಿ ನಟಿಸಿದ್ದಾರೆ. ಗೂಢಚಾರಿಯ ವ್ಯಕ್ತಿತ್ವ ಹೇಗಿರಬೇಕು ಎಂದು ವಿವರಿಸುತ್ತಾ ಎಂಟ್ರಿ ಕೊಡುವ ಕಲ್ಯಾಣ್ ರಾಮ್​ರ ಎಂಟ್ರಿ ಟೀಸರ್​ನಲ್ಲಿಯೇ ಗಮನ ಸೆಳೆಯುತ್ತಿದೆ. ಆದರೆ ಡೆವಿಲ್ ಬ್ರಿಟೀಷರ ಪರ ಏಜೆಂಟಾ ಅಥವಾ ಬ್ರಿಟೀಷರ ವಿರುದ್ಧ ಕೆಲಸ ಮಾಡುವವನಾ? ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಭಾರತೀಯ ಗೂಢಚಾರಿ ಭಾರತದಲ್ಲಿದ್ದುಕೊಂಡು ಏನು ಕಂಡು ಹಿಡಿಯುವ ಪ್ರಯತ್ನ ಮಾಡುತ್ತಿದ್ದಾನೆ? ಇತ್ಯಾದಿ ಪ್ರಶ್ನೆಗಳು ಟೀಸರ್​ ನೋಡಿದ ಬಳಿಕ ಸಹಜವಾಗಿ ಹುಟ್ಟುತ್ತಿವೆ.

ಇದನ್ನೂ ಓದಿ:ಜೂ ಎನ್​ಟಿಆರ್ ಅಭಿಮಾನಿ ಸಾವು, ತಂಗಿ ಮದುವೆ ಜವಾಬ್ದಾರಿ ಹೊತ್ತ ಅಭಿಮಾನಿಗಳು

ಸಂಯುಕ್ತ ಮೆನನ್ ನಾಯಕಿಯಾಗಿ ನಟಿಸಿದ್ದಾರೆ. ದೇವಾಂಶ್ ನಾಮಾ ಈ ಡೆವಿಲ್ ಸಿನಿಮಾವನ್ನು ಪ್ರೆಸೆಂಟ್ ಮಾಡುತ್ತಿದ್ದಾರೆ. ಅಭಿಷೇಕ್ ನಾಮಾ ಎಂಬುವರು ಅಭಿಷೇಕ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಡೆವಿಲ್ ಸಿನಿಮಾಕ್ಕೆಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಶ್ರೀಕಾಂತ್ ವಿಸ್ಸಾ ಒದಗಿಸಿದ್ದು ನಿರ್ದೇಶನ ಮಾಡಿರುವುದು ನವೀನ್ ಮೇಡಾರಂ. ಹರ್ಷವರ್ಧನ್ ರಾಮೇಶ್ವರ್ ಸಂಗೀತ ನಿರ್ದೇಶನ ಮಾಡಿದ್ದಾರೆ, ಛಾಯಾಗ್ರಹಣ ಸೌಂದರರಾಜನ್ ಅವರದ್ದು. ಡೆವಿಲ್ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು ತೆಲುಗು, ಕನ್ನಡ, ಹಿಂದಿ, ತಮಿಳು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.

ಇದೇ ವರ್ಷದಲ್ಲಿ ಡೆವಿಲ್ ಸಿನಿಮಾ ಬಿಡುಗಡೆ ಆಗಲಿದ್ದು, ಈ ವರ್ಷ ಬಿಡುಗಡೆ ಆಗುತ್ತಿರುವ ಕಲ್ಯಾಣ್ ರಾಮ್​ರ ಎರಡನೇ ಸಿನಿಮಾ ಇದಾಗಲಿದೆ. ಫೆಬ್ರವರಿ ತಿಂಗಳಲ್ಲಿ ಬಿಡುಗಡೆ ಆಗಿದ್ದ ಕಲ್ಯಾಣ್ ರಾಮ್​ರ ಅಮಿಗೋಸ್ ಸಿನಿಮಾ ಗಮನ ಸೆಳೆದಿತ್ತಾದರೂ ದೊಡ್ಡ ಬಾಕ್ಸ್ ಆಫೀಸ್ ಯಶಸ್ಸು ಗಳಿಸಿರಲಿಲ್ಲ. ನಟ ಕಲ್ಯಾಣ್ ರಾಮ್ ನಿರ್ಮಾಪಕರೂ ಆಗಿದ್ದು ತಮ್ಮ ಸಹೋದರ ಜೂ ಎನ್​ಟಿಆರ್​ರ ಕೆಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ತಮ್ಮ ಸಿನಿಮಾಗಳಿಗೂ ಆಗಾಗ್ಗೆ ಬಂಡವಾಳ ಹೂಡುತ್ತಿರುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಾವೇರಿ ಆರತಿಯಿಂದ ಕೆಆರ್​ಎಸ್ ಜಲಾಶಯಕ್ಕೆ ಅಪಾಯವಿಲ್ಲ: ಗಣಿಗ
ಕಾವೇರಿ ಆರತಿಯಿಂದ ಕೆಆರ್​ಎಸ್ ಜಲಾಶಯಕ್ಕೆ ಅಪಾಯವಿಲ್ಲ: ಗಣಿಗ
ಫೆಬ್ರುವರಿ ಮತ್ತು ಮಾರ್ಚ್ ಗೃಹಲಕ್ಷ್ಮಿ ಹಣ ಬಿಡುಗಡೆ ಆಗಿಲ್ಲ: ಸಚಿವೆ
ಫೆಬ್ರುವರಿ ಮತ್ತು ಮಾರ್ಚ್ ಗೃಹಲಕ್ಷ್ಮಿ ಹಣ ಬಿಡುಗಡೆ ಆಗಿಲ್ಲ: ಸಚಿವೆ
ಸಮಾವೇಶದಲ್ಲಿ ಸರ್ಕಾರದ ಎರಡು ವರ್ಷದ ಸಾಧನೆಗಳ ಪುಸ್ತಕ ಬಿಡುಗಡೆ
ಸಮಾವೇಶದಲ್ಲಿ ಸರ್ಕಾರದ ಎರಡು ವರ್ಷದ ಸಾಧನೆಗಳ ಪುಸ್ತಕ ಬಿಡುಗಡೆ
Udupi Rains: ಉಡುಪಿಯಲ್ಲಿ ಮಳೆ ಆರ್ಭಟ: ಮಣಿಪಾಲ ರಸ್ತೆಯಲ್ಲಿ ಪ್ರವಾಹ
Udupi Rains: ಉಡುಪಿಯಲ್ಲಿ ಮಳೆ ಆರ್ಭಟ: ಮಣಿಪಾಲ ರಸ್ತೆಯಲ್ಲಿ ಪ್ರವಾಹ
ಸಚಿವನಿಂದ ಪ್ರಾಸ್ತಾವಿಕ ಭಾಷಣ; ವೇದಿಕೆ ಮೇಲಿದ್ದವರು ಮಾತಿನಲ್ಲಿ ಬ್ಯೂಸಿ
ಸಚಿವನಿಂದ ಪ್ರಾಸ್ತಾವಿಕ ಭಾಷಣ; ವೇದಿಕೆ ಮೇಲಿದ್ದವರು ಮಾತಿನಲ್ಲಿ ಬ್ಯೂಸಿ
ನಿರ್ಮಾಣ ಹಂತದ ನಾಡಪ್ರಭು ಕೆಂಪೇಗೌಡ ಲೇಔಟ್​ನಲ್ಲೂ ಜಲ ಪ್ರವಾಹ
ನಿರ್ಮಾಣ ಹಂತದ ನಾಡಪ್ರಭು ಕೆಂಪೇಗೌಡ ಲೇಔಟ್​ನಲ್ಲೂ ಜಲ ಪ್ರವಾಹ
ಬೆಳಗ್ಗೆ ಸುರಿದ ಮಳೆಯಿಂದ ಮತ್ತಷ್ಟು ಹೆಚ್ಚಿದ ನೀರು, ಟ್ರಾಫಿಕ್ ಡೈವರ್ಟ್
ಬೆಳಗ್ಗೆ ಸುರಿದ ಮಳೆಯಿಂದ ಮತ್ತಷ್ಟು ಹೆಚ್ಚಿದ ನೀರು, ಟ್ರಾಫಿಕ್ ಡೈವರ್ಟ್
ರೈಲು ಹತ್ತುವ ಭರದಲ್ಲಿ ಪ್ರಯಾಣಿಕನನ್ನು ಕೆಳಗೆ ಬೀಳಿಸಿದ ವ್ಯಕ್ತಿ
ರೈಲು ಹತ್ತುವ ಭರದಲ್ಲಿ ಪ್ರಯಾಣಿಕನನ್ನು ಕೆಳಗೆ ಬೀಳಿಸಿದ ವ್ಯಕ್ತಿ
ಜನ ನಿಶ್ಚಿಂತೆಯಿಂದ ಇರುವಂತೆ ಹೇಳಿ ಶಿವಕುಮಾರ್ ಹೊಸಪೇಟೆಗೆ ತೆರಳಿದರು
ಜನ ನಿಶ್ಚಿಂತೆಯಿಂದ ಇರುವಂತೆ ಹೇಳಿ ಶಿವಕುಮಾರ್ ಹೊಸಪೇಟೆಗೆ ತೆರಳಿದರು
ಕೋರ್ಟ್​ ಹಾಲಲ್ಲಿ ದರ್ಶನ್,ಪವಿತ್ರಾ ಅಕ್ಕ-ಪಕ್ಕ; ಹೊರಬರುವಾಗ ಅಪರೂಪದ ಘಟನೆ
ಕೋರ್ಟ್​ ಹಾಲಲ್ಲಿ ದರ್ಶನ್,ಪವಿತ್ರಾ ಅಕ್ಕ-ಪಕ್ಕ; ಹೊರಬರುವಾಗ ಅಪರೂಪದ ಘಟನೆ