AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧರ್ಮೇಂದ್ರ-ಹೇಮಾ ಮಾಲಿನಿ ಲವ್​ಸ್ಟೋರಿಗೆ ಜಿತೇಂದ್ರ ವಿಲನ್ ಆದಾಗ

ಹೇಮಾ ಹಾಗೂ ಧರ್ಮೇಂದ್ರ ಪ್ರೀತಿಯಲ್ಲಿರೋ ಸುದ್ದಿ ಸಾಕಷ್ಟು ಚರ್ಚೆ ಆಗಿತ್ತು. ಆದರೆ, ಹೇಮಾ ಪಾಲಕರಾದ ಜಯಾ ಚಕ್ರವರ್ತಿ ಹಾಗೂ ರಾಮಾಜುನಮ್ ಚಕ್ರವರ್ತಿ ಅವರು ಇದನ್ನು ವಿರೋಧಿಸಿದ್ದರು. ಏಕೆಂದರೆ ಧರ್ಮೇಂದ್ರ ಅವರಿಗೆ ಆಗಲೇ ಒಂದು ಮದುವೆ ಆಗಿತ್ತು. ಈ ಕಾರಣದಿಂದ ಈ ಮದುವೆ ಬೇಡ ಎಂಬುದು ಹೇಮಾ ಪಾಲಕರ ಆಸೆ ಆಗಿತ್ತು.

ಧರ್ಮೇಂದ್ರ-ಹೇಮಾ ಮಾಲಿನಿ ಲವ್​ಸ್ಟೋರಿಗೆ ಜಿತೇಂದ್ರ ವಿಲನ್ ಆದಾಗ
ಧರ್ಮೇಂದ್ರ-ಹೇಮಾ ಮಾಲಿನಿ
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Nov 12, 2025 | 9:56 AM

Share

ಧರ್ಮೇಂದ್ರ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು. ಅವರು ಈಗ ಚೇತರಿಸಿಕೊಳ್ಳುತ್ತಿದ್ದು, ಮನೆಗೆ ತೆಗೆದುಕೊಂಡು ಹೋಗಲಾಗಿದೆ ಎಂದು ಹೇಳಲಾಗುತ್ತಾ ಇದೆ.  ಈ ವಿಷಯ ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಈ ಸಂದರ್ಭದಲ್ಲಿ ಅವರ ವೈಯಕ್ತಿಕ ಜೀವನದ ಬಗ್ಗೆ ನೋಡೋಣ. ಧರ್ಮೇಂದ್ರ ಅವರ ಎರಡನೇ ಪತ್ನಿ ಹೇಮಾ ಮಾಲಿನಿ. ಇವರದ್ದು ಪ್ರೇಮ ವಿವಾಹ. ಅಸಲಿಗೆ ಹೇಮಾ ಹಾಗೂ ಜೀತೇಂದ್ರ ಇಬ್ಬರೂ ವಿವಾಹ ಆಗಬೇಕಿತ್ತು. ಆದರೆ, ಹೇಮಾ ಅವರು ಧರ್ಮೆಂದ್ರ ಜೊತೆ ಪ್ರಿತಿಯಲ್ಲಿ ಬಿದ್ದರು. ಅವರನ್ನೇ ವರಿಸಿದರು. ಇವರ ಲವ್​ ಸ್ಟೋರಿ ಗಮನ ಸೆಳೆಯೋ ರೀತಿಯಲ್ಲಿ ಇದೆ.

ಹೇಮಾ ಹಾಗೂ ಧರ್ಮೇಂದ್ರ ಪ್ರೀತಿಯಲ್ಲಿರೋ ಸುದ್ದಿ ಸಾಕಷ್ಟು ಚರ್ಚೆ ಆಗಿತ್ತು. ಆದರೆ, ಹೇಮಾ ಪಾಲಕರಾದ ಜಯಾ ಚಕ್ರವರ್ತಿ ಹಾಗೂ ರಾಮಾಜುನಮ್ ಚಕ್ರವರ್ತಿ ಅವರು ಇದನ್ನು ವಿರೋಧಿಸಿದ್ದರು. ಏಕೆಂದರೆ ಧರ್ಮೇಂದ್ರ ಅವರಿಗೆ ಆಗಲೇ ಒಂದು ಮದುವೆ ಆಗಿತ್ತು. ಈ ಕಾರಣದಿಂದ ಈ ಮದುವೆ ಬೇಡ ಎಂಬುದು ಹೇಮಾ ಪಾಲಕರ ಆಸೆ ಆಗಿತ್ತು.

ಹೇಮಾ ಭವಿಷ್ಯದ ಬಗ್ಗೆ ಜಯಾ ಅವರು ಚಿಂತೆಗೆ ಒಳಗಾಗಿದ್ದರು. 1974ರಲ್ಲಿ ಹೇಮಾ ಮಾಲಿನಿ ಕುಟುಂಬದವರು ಜಿತೇಂದ್ರ ಅವರನ್ನು ಭೇಟಿ ಮಾಡುವ ಒತ್ತಾಯ ಮಾಡಿದ್ದರು. ಆದರೆ, ಜಿತೇಂದ್ರ ಅವರಿಗೆ ಮದುವೆ ಆಗುವ ಯಾವುದೇ ಆಲೋಚನೆ ಇರಲಿಲ್ಲ. ಇದನ್ನು ಕುಟುಂಬದ ಬಳಿ ಜಿತೇಂದ್ರ ಹೇಳಿದರೂ ಇವರು ಯಾರೂ ಇದನ್ನು ಕೇಳಲೇ ಇಲ್ಲ.

ಇದನ್ನೂ ಓದಿ: ನಟ ಧರ್ಮೇಂದ್ರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಮಗ ಸನ್ನಿ ಡಿಯೋಲ್

ಮದುವೆ ಮಾತುಕತೆಗೆ ಹೇಮಾ ಕುಟುಂಬ ಚೆನ್ನೈಗೆ ತೆರಳಿತ್ತು. ಸುದ್ದಿ ಸಾರ್ವಜನಿಕವಾಗಿ ಲೀಕ್ ಆಯಿತು. ಮದುವೆ ವಿಚಾರ ತಿಳಿದು ಧರ್ಮೇಂದ್ರ ಕೂಡ ತೆರಳಿದರು ಎನ್ನಲಾಗಿದೆ. ಹೇಮಾ ತಂದೆ ಅವರು ಧರ್ಮೇಂದ್ರ ಬಳಿ ಮಾತನಾಡಿದ್ದರು. ‘ನನ್ನ ಮಗಳನ್ನು ಯಾಕೆ ಬಿಡಬಾರದು? ನೀವು ವಿವಾಹಿತ ವ್ಯಕ್ತಿ; ನೀವು ಅವಳನ್ನು ಮದುವೆಯಾಗಲು ಸಾಧ್ಯವಿಲ್ಲ’ ಎಂದಿದ್ದರು. ಆದರೆ, ಧರ್ಮೇಂದ್ರ ಒಪ್ಪಲಿಲ್ಲ. ಆ ಬಳಿಕ ಜಿತೇಂದ್ರ ಕುಮಾರ್ ಕುಟುಂಬ ಅಲ್ಲಿಂದ ನಡೆಯಿತು. ಅಂದು ಇವರ ಮದುವೆ ನಡೆಯಲಿಲ್ಲ. ಇವರು 1980ರಂದು ಮದುವೆ ಆದರು. 45 ವರ್ಷಗಳ ಕಾಲ ಇವರು ಹಾಯಾಗಿ ಸಂಸಾರ ನಡೆಸಿದ್ದಾರೆ. ಈಗ ಧರ್ಮೇಂದ್ರ ಅವರು ಚೇತರಿಸಿಕೊಳ್ಳುತ್ತಿರುವುದು ಖುಷಿಯ ವಿಚಾರ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ