ಅಮಿತಾಭ್ ದಿವಾಳಿ ಆದಾಗ ಸಹಾಯಕ್ಕೆ ಬಂದಿದ್ದ ಈ ಬಿಲಿಯನೇರ್; ನಿರಾಕರಿಸಿದ್ದ ನಟ
ಧೀರೂಭಾಯ್ನಿಂದ ಅಮಿತಾಭ್ ಮತ್ತೆ ಆರಾಮಾಗಿ ಎದ್ದು ನಿಲ್ಲಬಹುದಿತ್ತು. ‘ಅವರಿಗೆ ಕೆಟ್ಟ ಸಮಯ ಇದೆ. ಸ್ವಲ್ಪ ಹಣ ನೀಡು’ ಎಂದು ಧೀರೂಭಾಯ್ ತಮ್ಮ ಮಗ ಅನಿಲ್ ಅಂಬಾನಿಗೆ ಹೇಳಿದ್ದರು. ಆದರೆ, ಇದನ್ನು ಅಮಿತಾಭ್ ತಿರಸ್ಕರಿಸಿದ್ದರು.
ಅಮಿತಾಭ್ ಬಚ್ಚನ್ ಅವರು ‘ಶೋಲೆ’ ರೀತಿಯ ಹಿಟ್ ಚಿತ್ರಗಳನ್ನು ನೀಡಿದ್ದರು. ಅವರಿಗೆ ಹಣ ಹೇರಳವಾಗಿ ಹರಿದು ಬಂದಿತ್ತು. ಆದರೆ, 90ರ ದಶಕದಲ್ಲಿ ಅವರು ಸಂಪೂರ್ಣವಾಗಿ ದಿವಾಳಿ ಆಗಿದ್ದರು. ಅವರ ‘ಅಮಿತಾಭ್ ಬಚ್ಚನ್ ಕಾರ್ಪೋರೇಷನ್ ಲಿಮಿಟೆಡ್’ ಯಶಸ್ಸು ಕಾಣಲೇ ಇಲ್ಲ. ಇದರಿಂದ ಅವರು ಸಾಕಷ್ಟು ನಷ್ಟ ಅನುಭವಿಸಿದ್ದರು. ಆಗ ಉದ್ಯಮಿ ಒಬ್ಬರು ಅವರ ಸಹಾಯಕ್ಕೆ ಬಂದಿದ್ದರು. ಈ ಸಹಾಯವನ್ನು ಅಮಿತಾಭ್ ಸ್ವೀಕರಿಸಿರಲಿಲ್ಲ ಅನ್ನೋದು ವಿಶೇಷ.
‘ನಾನು ದಿವಾಳಿ ಆಗಿದ್ದೆ. ನಾನು ಕಟ್ಟಿದ ಕಂಪನಿ ನಷ್ಟ ಅನುಭವಿಸಿತ್ತು. ನಾನು ಸಾಲ ಮಾಡಿಕೊಂಡಿದ್ದೆ. ನನ್ನ ಬ್ಯಾಂಕ್ ಬ್ಯಾಲೆನ್ಸ್ ಝೀರೋ ಆಯಿತು. ನನ್ನ ಮನೆಯ ಮೇಲೆ ಸರ್ಕಾರದ ಸಂಸ್ಥೆಗಳು ದಾಳಿ ಮಾಡಿದವು’ ಎಂದು ಅಮಿತಾಭ್ ಹೇಳಿಕೊಂಡಿದ್ದರು. ಆಗ ಅಮಿತಾಭ್ ಬಚ್ಚನ್ ಅವರ ಸಹಾಯಕ್ಕೆ ಬಂದಿದ್ದು ಉದ್ಯಮಿ ಧೀರೂಭಾಯ್ ಅಂಬಾನಿ.
ಧೀರೂಭಾಯ್ನಿಂದ ಅಮಿತಾಭ್ ಮತ್ತೆ ಆರಾಮಾಗಿ ಎದ್ದು ನಿಲ್ಲಬಹುದಿತ್ತು. ‘ಅವರಿಗೆ ಕೆಟ್ಟ ಸಮಯ ಇದೆ. ಸ್ವಲ್ಪ ಹಣ ನೀಡು’ ಎಂದು ಧೀರೂಭಾಯ್ ತಮ್ಮ ಮಗ ಅನಿಲ್ ಅಂಬಾನಿಗೆ ಹೇಳಿದ್ದರು. ಆದರೆ, ಇದನ್ನು ಅಮಿತಾಭ್ ತಿರಸ್ಕರಿಸಿದ್ದರು.
‘ಅವರು ಏನು ಕೊಟ್ಟರೂ ನನ್ನ ಹಣಕಾಸಿನ ತೊಂದರೆಗಳೆಲ್ಲವೂ ಪರಿಹಾರವಾಗುತ್ತಿತ್ತು. ಅವರ ಔದಾರ್ಯಕ್ಕೆ ನಾನು ಭಾವುಕನಾದೆ. ನಾನು ಆಫರ್ನ ತಿರಸ್ಕರಿಸಿದೆ. ದೇವರು ಕರುಣಾಮಯಿ. ಕಠಿಣ ದಿನಗಳ ನಂತರ ಎಲ್ಲವೂ ಸರಿ ಆಯಿತು. ನಾನು ಸಿನಿಮಾ ಮಾಡಲು ಪ್ರಾರಂಭಿಸಿದೆ ಮತ್ತು ನಿಧಾನವಾಗಿ ನನ್ನ ಎಲ್ಲಾ ಸಾಲಗಳನ್ನು ಮರುಪಾವತಿಸಿದೆ’ ಎಂದಿದ್ದರು ಅವರು.
ನಂತರ ಧೀರೂಭಾಯ್ ಅವರ ಮನೆಯ ಸಮಾರಂಭಕ್ಕೆ ಅಮಿತಾಭ್ಗೆ ಆಹ್ವಾನ ಇತ್ತು. ಧೀರೂಭಾಯ್ ತಮ್ಮ ಪಕ್ಕದಲ್ಲೇ ಅವರನ್ನು ಕೂರಿಸಿಕೊಂಡಿದ್ದರು. ‘ಈ ಹಡುಗ ಕೆಳಗೆ ಬಿದ್ದಿದ್ದ. ಆದರೆ, ಮತ್ತೆ ತನ್ನದೇ ಶ್ರಮದಿಂದ ಎದ್ದು ಬಂದ. ನಾನು ಅವನನ್ನು ಗೌರವಿಸುತ್ತೇನೆ’ ಎಂದು ಅವರು ಹೇಳಿದ್ದರು.
ಇದನ್ನೂ ಓದಿ: ಈ ಫೋಟೋದಲ್ಲಿ ಇದ್ದಾರೆ ಅಮಿತಾಭ್ ಬಚ್ಚನ್; ಯಾರೆಂದು ಪತ್ತೆ ಹಚ್ಚುವಿರಾ?
‘ಆ ಘಟನೆಯಿಂದ ಹೊರ ಬರಲು ಅವರ ಶಬ್ದಗಳು ಸಹಾಯ ಮಾಡಿದ್ದವು. ಅವರು ಸಹಾಯಕ್ಕೆ ಮುಂದೆ ಬಂದಿದ್ದರಲ್ಲ ಅದು ಅವರ ಔದಾರ್ಯತೆ’ ಎಂದು ಹೇಳಿದ್ದರು ಅಮಿತಾಭ್ ಬಚ್ಚನ್.
ಅಮಿತಾಭ್ ಅವರು ಈ ದಿವಾಳಿತನದ ಬಳಿಕ ಸಿಕ್ಕ ಎಲ್ಲ ಆಫರ್ಗಳನ್ನು ಒಪ್ಪಿ ನಟಿಸಿದರು. ಈ ಮಧ್ಯೆ ಕೆಲವು ಸಿನಿಮಾಗಳು ಯಶಸ್ಸು ಕಂಡವು. ಝೀರೋದಿಂದ ಅವರು 3 ಸಾವಿರ ಕೋಟಿ ರೂಪಾಯಿ ಗಳಿಕೆ ಮಾಡಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.