ಮತ್ತೆ ‘ಟಾಕ್ಸಿಕ್’ ಚಿತ್ರಕ್ಕೆ ಚಿಂತೆ ತಂದಿಟ್ಟ ‘ಧುರಂದರ್ 2’ ಟೀಂ
ಸೂಪರ್ ಹಿಟ್ 'ಧುರಂಧರ್' ಚಿತ್ರದ ಸೀಕ್ವೆಲ್ 'ಧುರಂಧರ್ 2' ಬಿಡುಗಡೆ ದಿನಾಂಕದ ಬಗ್ಗೆ ಗೊಂದಲ ಮುಂದುವರಿದಿದೆ. ಅಕ್ಷಯ್ ಖನ್ನಾ ಅವರ ಕಾಲ್ಶೀಟ್ ಮತ್ತು ರೀಶೂಟ್ ಕಾರಣದಿಂದ ಮಾರ್ಚ್ 19ರ ಬಿಡುಗಡೆ ಮುಂದೂಡಿಕೆ ವದಂತಿ ಹರಡಿತ್ತು. ಆದರೆ, ರೀಶೂಟ್ ಅಸಾಧ್ಯ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಇದೇ ದಿನ ಯಶ್ ನಟನೆಯ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ಎರಡೂ ಚಿತ್ರಗಳ ನಡುವೆ ಪೈಪೋಟಿ ನಿರೀಕ್ಷಿಸಲಾಗಿದೆ.

‘ಧುರಂಧರ್’ ಸಿನಿಮಾ (Dhurandhar Movie) ಸೂಪರ್ ಹಿಟ್ ಆಗಿದೆ. ಈ ಚಿತ್ರ 2025ರ ಡಿಸೆಂಬರ್ 5ರಂದು ತೆರೆಗೆ ಬಂತು. ಈಗಲೂ ಸಿನಿಮಾ ಅದ್ಭುತ ಕಲೆಕ್ಷನ್ ಮಾಡುತ್ತಿದೆ. ಚಿತ್ರವನ್ನು ಜನರು ಮುಗಿಬಿದ್ದು ವೀಕ್ಷಣೆ ಮಾಡುತ್ತಿದ್ದಾರೆ. ಈಗ ಸಿನಿಮಾಗೆ ಸೀಕ್ವೆಲ್ ಬರುತ್ತಿದೆ. ಮಾರ್ಚ್ 19ರಂದು ‘ಧುರಂಧರ್ 2’ ಸಿನಿಮಾ ರಿಲೀಸ್ ಆಗಲಿದೆ ಎನ್ನಲಾಗಿತ್ತು. ಈ ವಿಷಯದಲ್ಲಿ ಇನ್ನೂ ಗೊಂದಲ ಇದೆ. ಹೀಗಿರುವಾಗಲೇ ಒಂದು ಅಪ್ಡೇಟ್ ಸಿಕ್ಕಿದೆ. ಇದು ‘ಟಾಕ್ಸಿಕ್’ ಚಿತ್ರ ತಂಡದ ಚಿಂತೆಗೆ ಕಾರಣ ಆಗಿದೆ.
‘ಧುರಂಧರ್ 2’ ಸಿನಿಮಾ ಮಾರ್ಚ್ ರೇಸ್ನಿಂದ ಮುಂದಕ್ಕೆ ಹೋಗಿದೆ ಎನ್ನಲಾಗಿತ್ತು. ಇದಕ್ಕೆ ಕಾರಣ ಅಕ್ಷಯ್ ಖನ್ನಾ. ‘ಧುರಂದರ್ 2’ ಚಿತ್ರದ ಕೆಲವು ದೃಶ್ಯಗಳನ್ನು ರೀಶೂಟ್ ಮಾಡುವ ಅಗತ್ಯವಿರುವ ಕಾರಣಕ್ಕೆ ಅಕ್ಷಯ್ ಖನ್ನಾ ಅವರ ಕಾಲ್ಶೀಟ್ ಕೇಳಲಾಗಿದೆ ಎನ್ನಲಾಗಿತ್ತು. ಆದರೆ, ಈಗ ಕೇಳಿ ಬರುತ್ತಿರುವ ಮಾಹಿತಿ ಪ್ರಕಾರ, ಅಕ್ಷಯ್ ಖನ್ನಾ ಯಾವುದೇ ಶೂಟ್ನಲ್ಲಿ ಭಾಗಿ ಆಗುತ್ತಿಲ್ಲವಂತೆ.
ಆದಿತ್ಯ ಧಾರ್ ಅವರು ಪರ್ಫೆಕ್ಷನಿಸ್ಟ್ ಎನಿಸಿಕೊಂಡಿದ್ದಾರೆ. ಅವರು ಸ್ಕ್ರಿಪ್ಟ್ನ ಬರೆಯುವಾಗಲೇ ಎಲ್ಲವನ್ನೂ ಆಲೋಚಿಸಿರುತ್ತಾರೆ. ‘ಧುರಂದರ್ 2’ ವಿಷಯದಲ್ಲೂ ಅವರು ಹಾಗೆಯೇ ಮಾಡಿದ್ದಾರೆ. ಈಗಾಗಲೇ ಸಿನಿಮಾ ಶೂಟ್ ಪೂರ್ಣಗೊಂಡಿದ್ದು, ಅವರು ಭಾಗಿ ಆಗೋದಿಲ್ಲ ಎಂದು ಹೇಳಲಾಗುತ್ತಿದೆ.
ಅಕ್ಷಯ್ ಖನ್ನಾ ಅವರು ‘ಧುರಂಧರ್ 2’ ಚಿತ್ರದ ಕೆಲವೇ ದೃಶ್ಯಗಳಲ್ಲಿ ಬರಲಿದ್ದಾರೆ. ಇದನ್ನು ಈಗಾಗಲೇ ಶೂಟ್ ಮಾಡಲಾಗಿದೆ. ಹೀಗಾಗಿ, ‘ಧುಂಧರ್ 2’ ಚಿತ್ರದ ರೀಶೂಟ್ ಎಂಬುದರಲ್ಲಿ ಯಾವುದೇ ಅರ್ಥವಿಲ್ಲ ಎನ್ನುತ್ತಿವೆ ಮೂಲಗಳು.
ಇದನ್ನೂ ಓದಿ: ‘ಧುರಂಧರ್ 2’ ಸಿನಿಮಾ ಬಿಡುಗಡೆ ಮುಂದೂಡಿಕೆ, ‘ಟಾಕ್ಸಿಕ್’ ಕಾರಣವಾ?
‘ಟಾಕ್ಸಿಕ್’ ಸಿನಿಮಾ ಮಾರ್ಚ್ 19ರಂದು ರಿಲೀಸ್ ಆಗುತ್ತಿದೆ. ಇದೇ ದಿನ ‘ಧುರಂದರ್ 2’ ಕೂಡ ರಿಲೀಸ್ ಆಗಲಿದೆ. ‘ಟಾಕ್ಸಿಕ್’ ಚಿತ್ರದಲ್ಲಿ ಯಶ್ ನಟಿಸಿದ್ದಾರೆ. ಈ ಸಿನಿಮಾಗೆ ದೊಡ್ಡ ಬಜೆಟ್ ಸುರಿಯಲಾಗಿದೆ. ಹಿಂದಿ ಬೆಲ್ಟ್ನಲ್ಲಿ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಸ್ಪರ್ಧೆ ನಿರೀಕ್ಷಿಸಬಹುದಾಗಿದೆ.
‘ಟಾಕ್ಸಿಕ್’ ಸಿನಿಮಾಗೆ ಯಶ್ ಹೀರೋ. ಗೀತು ಮೋಹನ್ದಾಸ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಸಿನಿಮಾ ಕನ್ನಡದ ಜೊತೆಗೆ ಇಂಗ್ಲಿಷ್ನಲ್ಲೂ ತೆರೆಗೆ ಬರುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




