ಮನೆಕೆಲಸದವಳಿಗೆ ಲೈಂಗಿಕ ಕಿರಕುಳ; ‘ಧುರಂದರ್’ ಕಲಾವಿದನ ಬಂಧನ
‘ಧುರಂಧರ್’ ಚಿತ್ರದ ನಟ ನದೀಮ್ ಖಾನ್ ಮನೆಕೆಲಸದವಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾರೆ. ಮದುವೆಯ ಭರವಸೆ ನೀಡಿ 10 ವರ್ಷಗಳಿಂದ ದೈಹಿಕ ಸಂಪರ್ಕ ಸಾಧಿಸಿದ್ದರು ಎಂದು ಸಂತ್ರಸ್ತೆ ದೂರಿದ್ದಾರೆ. ನಟ ಮದುವೆಗೆ ನಿರಾಕರಿಸಿದ ನಂತರ ಮಹಿಳೆ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

ಮನೆಕೆಲಸದಾಕೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಧುರಂಧರ್ (Dhurandhar) ಸಿನಿಮಾ ಕಲಾವಿದ ನದೀಮ್ ಖಾನ್ ಅವರನ್ನು ಬಂಧಿಸಲಾಗಿದೆ. ಇವರು ‘ಧುರಂಧರ್’ ಸಿನಿಮಾದಲ್ಲಿ ಡಕಾಯಿತ್ ರೆಹಮಾನ್ ಮನೆಯ ಬಾಣಸಿಗ ಅಖ್ಲಾಕ್ ಆಗಿ ಕಾಣಿಸಿಕೊಂಡಿದ್ದರು. ನದೀಮ್ ಖಾನ್ ಅವರನ್ನು ಪೊಲೀಸರು ವಶದಲ್ಲಿ ಇಟ್ಟುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಕಳೆದ 10 ವರ್ಷಗಳಿಂದ ಮನೆ ಕೆಲಸದಾಕೆಯನ್ನ ನದೀಮ್ ಖಾನ್ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದರು. ಮದುವೆ ಆಗೋದಾಗಿ ಭರವಸೆ ನೀಡಿದ್ದರು ಎನ್ನಲಾಗಿದೆ. ಆದರೆ, ಈಗ ಅವರು ಮೋಸ ಮಾಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ ಎನ್ನಲಾಗಿದೆ. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿದ್ದಾರೆ.
41 ವರ್ಷದ ಮಹಿಳೆ ಈ ದೂರನ್ನು ನೀಡಿದ್ದಾರೆ. 2015ರಲ್ಲಿ ನದೀಮ್ ಖಾನ್ ಅವರನ್ನು ಸಂತ್ರಸ್ತೆ ಭೇಟಿ ಮಾಡಿದರು. ಆಗ ಅವರಿಗೆ 31 ವರ್ಷ. ಮನೆಕೆಲಸದವಳಾಗಿ ಅವರು ಸೇರಿಕೊಂಡರು. ನಂತರ ಇದು ದೈಹಿಕ ಸಂಬಂಧಕ್ಕೆ ತಿರುಗಿತು. ಇಬ್ಬರೂ ಆಪ್ತರಾದರು. ಈ ವೇಳೆ ನದೀಮ್ ಖಾನ್ ಅವರಿಗೆ ಮದುವೆ ಆಗುವ ಭರವಸೆ ನೀಡಿದರು ಎನ್ನಲಾಗಿದೆ.
ಈ ಭರವಸೆ ಮೇಲೆ ಅವರು ದೈಹಿಕ ಸಂಪರ್ಕಕ್ಕೆ ಒಪ್ಪಿದರು.ಇದು 10 ವರ್ಷಗಳ ಕಾಲ ಮುಂದುವರಿಯಿತು. ಈಗ ಅವರು ಮದುವೆ ಆಗಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ, ಪೊಲೀಸರನ್ನು ಸಂಪರ್ಕಿಸಲು ಅವರು ನಿರ್ಧರಿಸಿದರು.
ಆರಂಭಿಕ ತನಿಖೆ ನಡೆಸಿ ನದೀಮ್ ಖಾನ್ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಹೆಚ್ಚಿನ ತನಿಖೆ ಮುಂದುವರೆದಿದ್ದು, ಅಧಿಕಾರಿಗಳು ಹೆಚ್ಚುವರಿ ಹೇಳಿಕೆಗಳನ್ನು ದಾಖಲಿಸುವ ಮತ್ತು ಆರೋಪಗಳಿಗೆ ಸಂಬಂಧಿಸಿದ ಪುರಾವೆಗಳನ್ನು ಪರಿಶೀಲಿಸುವ ಸಾಧ್ಯತೆ ಇದೆ.
ಇದನ್ನೂ ಓದಿ:ಸಿನಿಪ್ರಿಯರಿಗೆ ಖುಷಿ ಸುದ್ದಿ; ಒಟಿಟಿಗೆ ಬರೋಕೆ ರೆಡಿ ಆಯ್ತು ‘ಧುರಂಧರ್’
ಧುರಂಧರ್ ಸಿನಿಮಾ ಹೊಸ ದಾಖಲೆ ಬರೆದಿದೆ. ಈ ಚಿತ್ರ ವಿಶ್ವಾದ್ಯಂತ 1300 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಜನವರಿ 30ರಂದು ಸಿನಿಮಾ ನೆಟ್ಫ್ಲಿಕ್ಸ್ ಮೂಲಕ ಪ್ರಸಾರ ಕಾಣಲಿದೆ. ರಣವೀರ್ ಸಿಂಗ್ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಸೀಕ್ವೆಲ್ ಮಾರ್ಚ್ 19ರಂದು ರಿಲೀಸ್ ಆಗುತ್ತಿದೆ. ಕನ್ನಡದ ‘ಟಾಕ್ಸಿಕ್’ ಎಸುರು ಸಿನಿಮಾ ತೆರೆಗೆ ಬರುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




