Horoscope Today 16 February: ಇಂದು ಈ ರಾಶಿಯವರು ಯಾರನ್ನೋ ನಂಬಿ ಕುಳಿತುಕೊಳ್ಳಬಾರದು
ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಶಿಶಿರ ಋತುವಿನ ಮಾಘ ಮಾಸ ಕೃಷ್ಣ ಪಕ್ಷದ ಚತುರ್ದಶೀ ತಿಥಿ ಸೋಮವಾರ ಪ್ರಯತ್ನ, ಅಲಂಕಾರ, ಅಜ್ಞಾನ, ಆಪ್ತರ ಭೇಟಿ, ಕಲಹ, ಪರಿಶೀಲನೆ, ವಿಸ್ತರಣೆ, ಸಾಲ, ನಿಮ್ಮ ವೃತ್ತಿ, ಆರ್ಥಿಕ, ಸಂಬಂಧಗಳು ಮತ್ತು ಆರೋಗ್ಯದ ಬಗ್ಗೆ ಜ್ಯೋತಿಷ್ಯ ಆಧಾರಿತ ಮುನ್ನೋಟಗಳನ್ನು ತಿಳಿಯಿರಿ.

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರಮಾಸ : ಮಾಘ, ಸೌರ ಮಾಸ : ಮಕರ, ಮಹಾನಕ್ಷತ್ರ : ಧನಿಷ್ಠಾ, ವಾರ : ಸೋಮ, ಪಕ್ಷ : ಕೃಷ್ಣ, ತಿಥಿ : ಚತುರ್ದಶೀ, ನಿತ್ಯನಕ್ಷತ್ರ : ಶತಭಿಷಾ, ಯೋಗ : ಸಿದ್ಧಿ, ಕರಣ : ವಣಿಜ, ಸೂರ್ಯೋದಯ – 06 – 48 am, ಸೂರ್ಯಾಸ್ತ – 06 – 28 pm, ಇಂದಿನ ಶುಭಾಶುಭ ಕಾಲ : ರಾಹು 08:16 – 09:44, ಯಮಗಂಡ ಕಾಲ 11:11 – 12:39, ಗುಳಿಕ ಕಾಲ 14:06 – 15:33
ಮೇಷ ರಾಶಿ: ನಿಮ್ಮ ತಾಳ್ಮೆ ಮತ್ತು ಶ್ರಮದಿಂದ ನಿರೀಕ್ಷಿತ ಫಲಿತಾಂಶವೇ ಇರಲಿದೆ. ಆರ್ಥಿಕ ಪ್ರಗತಿಯ ಪರಿಗಣನೆ ಮಾಡುವ ಸಮಯ. ಕುಟುಂಬದಲ್ಲಿ ಹೊಸ ಶುಭ ಸಂದರ್ಭಗಳಿಗೆ ಮುನ್ಸೂಚನೆ. ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಯೋಗ್ಯ ಸಮಯ. ಅಪರಿಚಿತರು ಆಪ್ತರಾಗುವ ಸಾಧ್ಯತೆ ಇದೆ. ನಿಮ್ಮ ವೇಷಭೂಷಣದ ಬಗ್ಗೆ ಟೀಕಿಸುವರು.ಹೂಡಿಕೆಯ ಬಗ್ಗೆ ಸಂಗಾತಿಯ ನಿಲುವಿಗೆ ಬದ್ಧರಾಗಬೇಲಾದೀತು. ಯಾವುದನ್ನೂ ನೀವು ಮನಸ್ಸಿಗೆ ತೆಗೆದುಕೊಳ್ಳದೇ ನಿಶ್ಚಿಂತೆಯಿಂದ ಇರುವಿರಿ.
ವೃಷಭ ರಾಶಿ: ಯಶಸ್ಸನ್ನು ಗಳಿಸದಂತೆ ಹಿತಶತ್ರುಗಳು ಅಡ್ಡಗಾಲು ಹಾಕುವಿರಿ. ಆಭರಣದ ವಿಚಾರದಲ್ಲಿ ಜಾಗರೂಕತೆ ಇರಲಿ. ಸಹೋದ್ಯೋಗಿಗಳ ಜೊತೆ ಪ್ರೇಮಾಂಕುರ, ಮನೆಯವರ ಅಭಿಪ್ರಾಯದ ಬಗ್ಗೆ ಆತಂಕ. ನಿಮ್ಮ ಗುರಿಯ ಬಗ್ಗೆ ಸ್ಪಷ್ಟತೆ ಇರಲಿ. ಮನಸ್ಸಿನ ಚಾಂಚಲ್ಯವನ್ನು ನಿಲ್ಲಿಸಲಾಗದು. ವೃತ್ತಿಯಲ್ಲಿ ಬದಲಾವಣೆ ಬೇಕು ಎನಿಸುವುದು. ಅಜ್ಞಾತವಾಸದಂತೆ ಇರುವ ನಿಮ್ಮ ಜೀವನಕ್ಕೆ ಹೊಸ ತಿರುವು ಸಿಕ್ಕೀತು. ಅಪರಿಚಿತರು ನಿಮಗೆ ಕೆಲವು ತೊಂದರೆಯನ್ನು ಕೊಡಬಹುದು.
ಮಿಥುನ ರಾಶಿ: ಸೋಲಾದ ಸ್ಥಳದಲ್ಲಿಯೇ ಮೇಲೆ ಬರುವ ಛಲ ನಿಮಗೆ. ಧರ್ಮಾಚರಣೆಯ ಕಡೆ ಒಲವಿದ್ದರೂ ಸಮಯವು ಸರಿಯಾಗಿ ಸಿಗದೇ ಇದ್ದೀತು. ಸಂಗಾತಿಯ ಮೇಲೆ ಎಲ್ಲಿಲ್ಲದ ಅನುಮಾನ. ಉದ್ಯೋಗದಲ್ಲಿ ಮೇಲಧಿಕಾರಿಗಳು ನಿಮಗೆ ಪೂರಕವಾಗಿ ಸಹಕಾರ ನೀಡುವರು. ಮೂರನೇ ವ್ಯಕ್ತಿಯ ಮಾತುಗೆ ಪ್ರಾಮುಖ್ಯ ಬೇಡ. ದಾಂಪತ್ಯ ಕಲಹವು ಸುಖಾಂತವಾಗಲಿದೆ. ಸ್ಥಳದ ವ್ಯತ್ಯಾಸದಿಂದ ಆರೋಗ್ಯದ ಮೇಲೆ ದುಷ್ಪರಿಣಾಮವಾಗಲಿದೆ. ಉದ್ಯೋಗದ ಕಾರಣ ಪ್ರಯಾಣ ಮಾಡುವ ಸನ್ನಿವೇಶವು ಬರಲಿದೆ.
ಕರ್ಕಾಟಕ ರಾಶಿ: ವೃತ್ತಿ ಕ್ಷೇತ್ರದಲ್ಲಿ ಬದಲಾವಣೆಗೆ ಅವಕಾಶ. ಸೋಲನ್ನೂ ಆನಂದಿಸುವ ಮನೋಭಾವವಿರಲಿದೆ. ಹೊಸ ಜವಾಬ್ದಾರಿ ಬರಬಹುದು. ಇಂದಿನ ನಿಮ್ಮ ಕಾರ್ಯಕ್ಕೆ ಸಮಯದ ಮಿತಿಯನ್ನು ಅವಶ್ಯಕ. ನಿಮ್ಮ ಮಾತಿನಿಂದ ಇತರರಿಗೆ ನೋವಾಗುವುದು. ಪ್ರೇಮವು ಅಪಾಯಕ್ಕೆ ಸಿಕ್ಕಿಕೊಳ್ಳಬಹುದು. ಸಹೋದ್ಯೋಗಿಗಳ ಜೊತೆ ವಾದವನ್ನು ಮಾಡುವಿರಿ. ವ್ಯವಹಾರದಲ್ಲಿ ಮಾತನಾಡುವಾಗ ನಿಮ್ಮನ್ನು ಅಳೆಯಬಹುದು. ಶತ್ರುಗಳನ್ನು ತಿಳಿದುಕೊಳ್ಳುವ ಅಸಕ್ತಿಯು ಇರಲಿದೆ.
ಸಿಂಹ ರಾಶಿ: ಸಂತಾನಕ್ಕೆ ಸಂಬಂಧಿಸಿದಂತೆ ದಂಪತಿಗಳ ನಡುವೆ ಟೀಕೆಗಳು ನಡೆಯುವುದು. ನಿಮ್ಮ ನಿರ್ಧಾರ ಶಕ್ತಿಯು ಮುಂದಿನ ಯಶಸ್ಸಿನ ಕೀಲಿಕೈ. ವಿದೇಶಿ ವ್ಯವಹಾರಗಳಿಗೆ ಅನುಕೂಲಕರ ಸಮಯ. ವಿದ್ಯಾರ್ಥಿಗಳಿಗೆ ಭವಿಷ್ಯಕ್ಕೆ ಮಾರ್ಗದರ್ಶನವಾಗಲಿದೆ. ನಿಮ್ಮ ಇಷ್ಟದವರನ್ನು ಭೇಟಿಯಾಗಿ ಕೆಲವು ಸಮಯ ಸಂತೋಷದಿಂದ ಕಳೆಯುವಿರಿ. ಆಶಿಸ್ತಿನ ಕೆಲಸಕ್ಕೆ ಹಿರಿಯರು ನಿಂದಿಸಬಹುದು. ಅಪರಿಚಿತ ವ್ಯಕ್ತಿಗಳಿಂದ ಸಾಲಕ್ಕಾಗಿ ದೂರವಾಣಿಯ ಮೂಲಕ ಪೀಡೆ.
ಕನ್ಯಾ ರಾಶಿ: ಆರ್ಥಿಕ ನಿರ್ಧಾರಗಳಲ್ಲಿ ತಾಳ್ಮೆ ಮತ್ತು ಪರಿಶೀಲನೆ ಅಗತ್ಯ. ಸಂಬಂಧಗಳಲ್ಲಿ ಗೊಂದಲಗಳು ತಲೆದೋರಬಹುದು, ಸೂಕ್ಷ್ಮವಾಗಿ ನಡೆದುಕೊಳ್ಳಿ. ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ. ಕುಟುಂಬದವರ ಮಾತುಗಳು ಕಿರಿಕಿರಿ ಎನಿಸಬಹುದು. ಬಂಧುಗಳಿಂದ ನೀವು ನಿರ್ಲಕ್ಷ್ಯಕ್ಕೆ ಒಳಗಾಗುವಿರಿ. ನಿಮಗೆ ಸಿಕ್ಕ ಅಶುಭ ಸೂಚನೆಯಿಂದ ಭಯವಾಗಬಹುದು. ದಾಂಪತ್ಯದಲ್ಲಿ ನೀವು ಸುಖವನ್ನು ಕಾಣುವಿರಿ. ಇಷ್ಟು ದಿನ ನಿರ್ವಹಿಸುತ್ತಿದ್ದ ಜವಾಬ್ದಾರಿಗಳನ್ನು ಇಂದು ನಿರ್ವಹಿಸಲು ಕಷ್ಟವಾದೀತು.
ತುಲಾ ರಾಶಿ: ಹಣಕ್ಕಾಗಿ ಇನ್ನೊಬ್ಬರಿಗೆ ಮಾನಸಿಕ ಒತ್ತಡವನ್ನೂ ಹಿಂಸೆಯನ್ನೂ ಕೊಡುವಿರಿ. ಆದಾಯದಲ್ಲಿ ಸ್ಥಿರತೆ ಕಾಣಬಹುದು. ವ್ಯವಸ್ಥಿತ ಯೋಜನೆ ರೂಪಿಸಿದರೆ ಭವಿಷ್ಯದಲ್ಲಿ ಲಾಭ. ಮಾತುಗಳ ಬಳಕೆಯಲ್ಲಿ ಎಚ್ಚರಿಕೆ ವಹಿಸುವ ಸಮಯ. ಕೌಟುಂಬಿಕ ಜೀವನದಲ್ಲಿ ಅಹಂಕಾರಕ್ಕೆ ಅವಕಾಶ ನೀಡಬೇಡಿ. ಹೂಡಿಕೆಯ ಕಡೆ ಅಧಿಕ ಆಲೋಚನೆ ಮಾಡುವಿರಿ. ಮನೆಯಲ್ಲಿ ಇದ್ದು ಕೆಲಸ ಮಾಡುವವರಿಗೆ ಬಂಧನದಂತೆ ಅನ್ನಿಸಬಹುದು. ದಾನದಿಂದ ನಿಮಗೆ ಪ್ರಶಂಸೆಯು ಸಿಗುವುದು.
ವೃಶ್ಚಿಕ ರಾಶಿ: ಆರ್ಥಿಕವಾಗಿ ಲಾಭದಾಯಕ ದಿನ, ಹಳೆಯ ಸಾಲ ತೀರಿಸುವ ಅವಕಾಶ. ಕುಟುಂಬದಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಲಿದೆ. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಅಂದುಕೊಂಡ ಕಾರ್ಯವು ಮುಗಿಯುತ್ತ ಇರುವಾಗಲೇ ಯಾರಾದರೂ ಅಡ್ಡಿ ಮಾಡುವರು. ಆಪ್ತರ ಜೊತೆಗಿನ ಬಿಚ್ಚು ಮನಸ್ಸಿನ ಮಾತುಕತೆಯಿಂದ ನಿಮ್ಮ ಭಾರವಾದ ಮನಸ್ಸು ಹಗುರಾಗುವುದು. ನೀವು ಇಂದು ಸಿಟ್ಟು ಮಾಡಿಕೊಳ್ಳಬಹುದಾದ ಸನ್ನಿವೇಶಗಳು ಬಾರದು.
ಧನು ರಾಶಿ: ವೃತ್ತಿಜೀವನದಲ್ಲಿ ಹೊಸ ಅವಕಾಶಗಳು ದೊರೆಯಬಹುದು. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರದೆ, ದಿನಚರಿಯಲ್ಲಿ ತಾಳ್ಮೆ ವಹಿಸಿ. ಮನೆಯವರ ಸಹಕಾರದಿಂದ ನಿಮ್ಮ ಸಮಸ್ಯೆ ಪರಿಹಾರ. ನಿಮ್ಮ ಧೈರ್ಯ ಮತ್ತು ದೃಢ ನಿಲುವು ಯಶಸ್ಸಿನ ಮೂಲಮಂತ್ರ. ನೂತನ ವಸ್ತುಗಳನ್ನು ಪಡೆದು ಸಂತೋಷಪಡುವಿರಿ. ಗೌರವಾದಿಗಳು ಸಿಕ್ಕಿ ಸಂತೋಪಡುವಿರಿ. ರಾಜಕೀಯದಲ್ಲಿ ಅನಿರೀಕ್ಷಿತ ಬದಲಾವಣೆ ಆಗುವುದು. ಸಾಹಿತ್ಯಸಲ್ಲಿ ಆಸಕ್ತಿ ಇರುವವರು ತಮ್ಮ ಕ್ಷೇತ್ರದಲ್ಲಿ ಹೆಚ್ಚು ತೊಡಗಿಕೊಳ್ಳಿ.
ಮಕರ ರಾಶಿ: ಅಪರಿಚಿತರೇ ನಿಮಗೆ ಆಗಿಬರಬಹುದು. ಅನ್ಯೋನ್ಯತೆ ಹುಟ್ಟುವುದು. ಉದ್ವೇಗಕ್ಕೆ ವಶವಾಗದೇ ಬುದ್ದಿವಂತಿಕೆಯಿಂದ ನಿಮ್ಮ ಕಾರ್ಯವನ್ನು ಮುನ್ನಡೆಸಿ. ಆರ್ಥಿಕ ಪರಿಸ್ಥಿತಿ ಸ್ಥಿರವಾಗಿರುತ್ತದೆ, ಹೊಸ ಆದಾಯದ ಅವಕಾಶ ಇರುತ್ತದೆ. ವೃತ್ತಿಯ ಅಭಿವೃದ್ಧಿಗೆ ನೂತನ ಅವಕಾಶಗಳು ಲಭ್ಯ. ಎಲ್ಲವನ್ನೂ ನೀವೇ ಮಾಡಬೇಕು ಎನ್ನುವ ಮಾನಸಿಕತೆ ಬೇಡ. ಒಂಟಿತನವು ಇಷ್ಟವಾಗುವುದು. ಕುರುಡು ನಂಬಿಕೆಯಿಂದ ನಿಮಗೆ ಇಷ್ಟವಾಗುವುದು. ಕುಟುಂಬದ ಕೆಲವು ವಿಚಾರಗಳು ನಿಮಗೆ ಗೊತ್ತಾಗದೇ ಗೌಪ್ಯವಾಗಿ ಇರುವುದು.
ಕುಂಭ ರಾಶಿ: ಪ್ರಯತ್ನಿಸಿದರೆ ಹೊಸ ಅವಕಾಶಗಳು ಎದುರಾಗಬಹುದು. ನಿಮ್ಮ ಪರಿಶ್ರಮಕ್ಕೆ ಇಂದು ಫಲಿತಾಂಶ ದೊರೆಯಬಹುದು. ಆರ್ಥಿಕ ಅಭಿವೃದ್ಧಿಗೆ ಹೊಸ ಆಯ್ಕೆಗಳನ್ನು ಅನ್ವೇಷಿಸುವಿರಿ. ಕುಟುಂಬ ಜೊತೆ ಸಂತಸದ ಕ್ಷಣಗಳನ್ನು ಕಳೆಯುವಿರಿ. ಹೊಸ ಸಾಲಕ್ಕೂ ಮೊದಲು ಹಳೆಯದನ್ನು ದೂರಮಾಡಿಕೊಳ್ಳುವುದು ಉತ್ತಮ. ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಏಕಾಗ್ರತೆಯು ಇಲ್ಲವಾಗಬಹುದು. ಮಾತಿನಲ್ಲಿ ಪೇಲವ ಬೇಡ. ದೃಢತೆಯಿಂದ ಮಾತನಾಡಿ.
ಮೀನ ರಾಶಿ: ಉನ್ನತ ವಿದ್ಯಾಭ್ಯಾಸದ ಕಾರಣ ದೂರ ಪ್ರಯಾಣವನ್ನು ಮಾಡಬೇಕಾಗಬಹುದು. ಇಂದು ಸಂಯಮವನ್ನು ಹೊಂದಿರುವುದು ಅವಶ್ಯಕ. ಹೊಸ ಉತ್ಸಾಹದಿಂದ ಕಾರ್ಯಗಳು ಕೈಗೂಡುವುದು. ಆರ್ಥಿಕವಾಗಿ ನಿರೀಕ್ಷಿತ ಲಾಭ ದೊರಕುವ ಸಾಧ್ಯತೆ ಇದೆ. ಕೌಟುಂಬಿಕ ವಿಚಾರದಲ್ಲಿ ಸಾಮರಸ್ಯ ಹೆಚ್ಚಾಗಬಹುದು. ಹೊಸ ವ್ಯವಹಾರ ಶುರು ಮಾಡಲು ಚಿಂತನೆ. ಅತಿಥಿ ಸತ್ಕಾರದಿಂದ ಖುಷಿಯಾಗುವುದು. ಸಾರ್ವಜನಿಕ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವ ಆಸೆ ಇರುವುದು.
ಲೋಹಿತ ಹೆಬ್ಬಾರ್ – 8762924271 (what’s app only)
