AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಪಾನಿನಲ್ಲಿ ಬಿಡುಗಡೆಗೆ ಸಜ್ಜಾದ ‘ಧುರಂಧರ್’, ಮುರಿಯುತ್ತಾ ‘ದಂಗಲ್’ ದಾಖಲೆ

Dhurandhar movie: ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾ ಅಮೆರಿಕ ಸೇರಿದಂತೆ ಇತರೆ ಕೆಲವು ದೇಶಗಳಲ್ಲಿಯೂ ಸಹ ದೊಡ್ಡ ಮೊತ್ತದ ಗಳಿಕೆ ಮಾಡಿದ್ದು, ವಿದೇಶದಲ್ಲಿ ಹೆಚ್ಚು ಹಣ ಬಾಚಿದ ಭಾರತದ ಸಿನಿಮಾಗಳಲ್ಲಿ ಒಂದೆನಿಸಿಕೊಂಡಿದೆ. ಇದೀಗ ‘ಧುರಂಧರ್ 2’ ಸಿನಿಮಾ ಒಟಿಟಿಗೆ ಸಹ ಬಂದಿದ್ದಾಗಿದೆ. ಆದರೆ ಇದೀಗ 2025 ರಲ್ಲಿ ಬಿಡುಗಡೆ ಆಗಿದ್ದ ‘ಧುರಂಧರ್’ ಸಿನಿಮಾ, ಜಪಾನಿನಲ್ಲಿ ಬಿಡುಗಡೆ ಆಗಲು ಮುಂದಾಗಿದೆ. ಜಪಾನಿನಲ್ಲಿ ಭಾರತೀಯ ಸಿನಿಮಾಗಳಿಗೆ ದೊಡ್ಡ ಮಾರುಕಟ್ಟೆ ಇದ್ದು, ಇಲ್ಲಿ ‘ಧುರಂಧರ್’ ಹೇಗೆ ಸದ್ದು ಮಾಡಲಿದೆ ಎಂಬ ಕುತೂಹಲ ಸಿನಿಮಾ ಪ್ರೇಮಿಗಳಿಗಿದೆ.

ಜಪಾನಿನಲ್ಲಿ ಬಿಡುಗಡೆಗೆ ಸಜ್ಜಾದ ‘ಧುರಂಧರ್’, ಮುರಿಯುತ್ತಾ ‘ದಂಗಲ್’ ದಾಖಲೆ
Dhurandharr
ಮಂಜುನಾಥ ಸಿ.
|

Updated on: Jun 05, 2026 | 3:24 PM

Share

ಧುರಂಧರ್’ (Dhurandhar) ಮತ್ತು ‘ಧುರಂಧರ್ 2’ ಸಿನಿಮಾ ಭಾರತದ ಬಾಕ್ಸ್ ಆಫೀಸ್​​ನಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆದಿದೆ. ಮಾತ್ರವಲ್ಲದೆ, ಅಮೆರಿಕ ಸೇರಿದಂತೆ ಇತರೆ ಕೆಲವು ದೇಶಗಳಲ್ಲಿಯೂ ಸಹ ದೊಡ್ಡ ಮೊತ್ತದ ಗಳಿಕೆ ಮಾಡಿದ್ದು, ವಿದೇಶದಲ್ಲಿ ಹೆಚ್ಚು ಹಣ ಬಾಚಿದ ಭಾರತದ ಸಿನಿಮಾಗಳಲ್ಲಿ ಒಂದೆನಿಸಿಕೊಂಡಿದೆ. ಇದೀಗ ‘ಧುರಂಧರ್ 2’ ಸಿನಿಮಾ ಒಟಿಟಿಗೆ ಸಹ ಬಂದಿದ್ದಾಗಿದೆ. ಆದರೆ ಇದೀಗ 2025 ರಲ್ಲಿ ಬಿಡುಗಡೆ ಆಗಿದ್ದ ‘ಧುರಂಧರ್’ ಸಿನಿಮಾ, ಜಪಾನಿನಲ್ಲಿ ಬಿಡುಗಡೆ ಆಗಲು ಮುಂದಾಗಿದೆ. ಜಪಾನಿನಲ್ಲಿ ಭಾರತೀಯ ಸಿನಿಮಾಗಳಿಗೆ ದೊಡ್ಡ ಮಾರುಕಟ್ಟೆ ಇದ್ದು, ಇಲ್ಲಿ ‘ಧುರಂಧರ್’ ಹೇಗೆ ಸದ್ದು ಮಾಡಲಿದೆ ಎಂಬ ಕುತೂಹಲ ಸಿನಿಮಾ ಪ್ರೇಮಿಗಳಿಗಿದೆ.

‘ಧುರಂಧರ್’ ಸಿನಿಮಾವು ಜಪಾನಿನಲ್ಲಿ ಅಲ್ಲಿನ ಮೂಲ ಭಾಷೆಯಲ್ಲಿ ಜುಲಯ 10 ರಂದು ತೆರೆಗೆ ಬರಲಿದೆ. ಜಪಾನಿನಲ್ಲಿ ದಶಕಗಳಿಂದಲೂ ಭಾರತೀಯ ಸಿನಿಮಾಗಳು ದೊಡ್ಡ ಗಳಿಕೆ ಮಾಡುತ್ತಾ ಬಂದಿವೆ. ಬಾಲಿವುಡ್ ಮಾತ್ರವಲ್ಲದೆ ತಮಿಳು, ತೆಲುಗು ಸಿನಿಮಾಗಳು ಸಹ ಜಪಾನಿನಲ್ಲಿ ದೊಡ್ಡ ಕಲೆಕ್ಷನ್ ಕಾಣುತ್ತವೆ. 2024 ರಲ್ಲಿ ಬಿಡುಗಡೆ ಆಗಿದ್ದ ತಮಿಳಿನ ‘ಮಹಾರಾಜ’ ಸಿನಿಮಾ 2025 ರಲ್ಲಿ ಜಪಾನಿನಲ್ಲಿ ಬಿಡುಗಡೆ ಆಗಿ ದೊಡ್ಡ ಹಿಟ್ ಆಗಿತ್ತು. ಅದಾದ ಬಳಿಕ ಕೆಲ ಭಾರತೀಯ ಸಿನಿಮಾಗಳು ಜಪಾನಿನಲ್ಲಿ ಬಿಡುಗಡೆ ಆಗಿದ್ದವಾದರೂ ದೊಡ್ಡ ಹಿಟ್ ಆಗಿರಲಿಲ್ಲ. ಇದೀಗ ‘ಧುರಂಧರ್’ ಸಿನಿಮಾ ಜಪಾನಿನಲ್ಲಿ ಬಿಡುಗಡೆ ಆಗಲಿದ್ದು, ಅದು ಹೇಗೆ ಮ್ಯಾಜಿಕ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಜಪಾನಿನಲ್ಲಿ ರಜನೀಕಾಂತ್ ನಟನೆಯ ‘ಮುತ್ತು’ ಸಿನಿಮಾ ಬಹು ದೊಡ್ಡ ಹಿಟ್ ಆಗಿತ್ತು. ‘ಮುತ್ತು’ ಸಿನಿಮಾದ ಕಲೆಕ್ಷನ್ ದಾಖಲೆಯನ್ನು ದಶಕಗಳ ಕಾಲ ಯಾವ ಸಿನಿಮಾ ಸಹ ಮುರಿಯಲಾಗಿರಲಿಲ್ಲ. ಆ ಬಳಿಕ ‘ಈಗ’, ‘3 ಇಡಿಯಟ್ಸ್’, ‘ಆರ್​​ಆರ್​​ಆರ್’ ಸಿನಿಮಾಗಳು ಸಹ ಜಪಾನಿನಲ್ಲಿ ಭಾರಿ ಕಲೆಕ್ಷನ್ ಮಾಡಿರುವ ಭಾರತೀಯ ಸಿನಿಮಾಗಳಾಗಿವೆ. ಇದೀಗ ‘ಧುರಂಧರ್’ ಸಿನಿಮಾ ಬಿಡುಗಡೆ ಆಗುತ್ತಿದ್ದು, ಅಮೆರಿಕ, ಬ್ರಿಟನ್​​ಗಳಲ್ಲಿ ಬರೆದಿರುವ ದಾಖಲೆಯನ್ನು ಜಪಾನಿನಲ್ಲೂ ಪುನರಾವರ್ತನೆ ಮಾಡುವ ನಿರೀಕ್ಷೆ ಸಿನಿಮಾ ಅಭಿಮಾನಿಗಳದ್ದು.

View this post on Instagram

A post shared by Taran Adarsh (@taranadarsh)

‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾಗಳು ಭಾರತೀಯ ಬಾಕ್ಸ್ ಆಫೀಸ್​​ನಲ್ಲಿ ಭಾರಿ ದೊಡ್ಡ ಮೊತ್ತ ಗಳಿಕೆ ಮಾಡಿದ್ದರೂ ಸಹ ಭಾರತದ ಅತಿ ಹೆಚ್ಚು ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದ ಸಿನಿಮಾಗಳು ಎನಿಸಿಕೊಂಡಿಲ್ಲ. ಆ ದಾಖಲೆ ಈಗಲೂ ‘ದಂಗಲ್’ ಹೆಸರಿನಲ್ಲೇ ಇದೆ. ಒಂದೊಮ್ಮೆ ‘ಧುರಂಧರ್’ ಸಿನಿಮಾ ಜಪಾನಿನಲ್ಲಿ ಯಶಸ್ಸು ಗಳಿಸಿದರೆ ‘ದಂಗಲ್’ ಸಿನಿಮಾದ ದಾಖಲೆ ಅಳಿಸಿ ಹೋಗುವ ಸಾಧ್ಯತೆ ಇದೆ.

‘ಧುರಂಧರ್’ 2025 ರಲ್ಲಿ ಬಿಡುಗಡೆ ಆದ ಸಿನಿಮಾ ಆಗಿದ್ದು, ಸಿನಿಮಾನಲ್ಲಿ ರಣ್ವೀರ್ ಸಿಂಗ್ ನಟಿಸಿದ್ದಾರೆ. ಜೊತೆಗೆ ಅಕ್ಷಯ್ ಖನ್ನಾ, ಆರ್ ಮಾಧವನ್, ಅರ್ಜುನ್ ರಾಂಪಾಲ್, ಸಂಜಯ್ ದತ್ ಇನ್ನೂ ಇತರರು ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಆದಿತ್ಯ ಧರ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಸಲಾಲ್ ಡ್ಯಾಂನ ಗೇಟ್​ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಸಲಾಲ್ ಡ್ಯಾಂನ ಗೇಟ್​ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ