AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಲ್ಲು ಅರ್ಜುನ್ ಹವಾ ತಗ್ಗಿಸಲು ನಡೆಯುತ್ತಿದೆಯೇ ಕುತಂತ್ರ?

Allu Arjun: ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ ಅಂತೂ ಹಳೆಯ ಹಲವು ಬಾಕ್ಸ್ ಆಫೀಸ್ ದಾಖಲೆಗಳನ್ನೆಲ್ಲ ಪುಡಿಗಟ್ಟಿವೆ. ಅಲ್ಲು ಅರ್ಜುನ್ ಜನಪ್ರಿಯತೆ ಭಾರತವನ್ನು ದಾಟಿ ವಿಶ್ವಮಟ್ಟದಲ್ಲಿ ಹಬ್ಬಿದೆ. ಆದರೆ ಇದೀಗ ಅಲ್ಲು ಅರ್ಜುನ್ ಅವರ ಜನಪ್ರಿಯತೆಯನ್ನು ಕುಗ್ಗಿಸುವ, ಅಲ್ಲು ಅರ್ಜುನ್ ಅನ್ನು ಕೆಟ್ಟದಾಗಿ ಬಿಂಬಿಸುವ ಕುತಂತ್ರ ನಡೆಯುತ್ತಿದೆ ಎಂಬ ಅನುಮಾನ ಮೂಡಿದೆ.

ಅಲ್ಲು ಅರ್ಜುನ್ ಹವಾ ತಗ್ಗಿಸಲು ನಡೆಯುತ್ತಿದೆಯೇ ಕುತಂತ್ರ?
Allu Arjun
ಮಂಜುನಾಥ ಸಿ.
|

Updated on: Feb 12, 2026 | 11:24 AM

Share

ಅಲ್ಲು ಅರ್ಜುನ್ (Allu Arjun) ಈಗ ಸ್ಟಾಪ್ ಪ್ಯಾನ್ ಇಂಡಿಯಾ ನಟ. ಅವರ ‘ಪುಷ್ಪ’ ಮತ್ತು ‘ಪುಷ್ಪ 2’ ಸಿನಿಮಾಗಳು ಗ್ಲೋಬಲ್ ಮಟ್ಟದಲ್ಲಿ ಸೂಪರ್ ಹಿಟ್ ಆಗಿವೆ. ‘ಪುಷ್ಪ 2’ ಸಿನಿಮಾ ಅಂತೂ ಹಳೆಯ ಹಲವು ಬಾಕ್ಸ್ ಆಫೀಸ್ ದಾಖಲೆಗಳನ್ನೆಲ್ಲ ಪುಡಿಗಟ್ಟಿವೆ. ಅಲ್ಲು ಅರ್ಜುನ್ ಜನಪ್ರಿಯತೆ ಭಾರತವನ್ನು ದಾಟಿ ವಿಶ್ವಮಟ್ಟದಲ್ಲಿ ಹಬ್ಬಿದೆ. ಆದರೆ ಇದೀಗ ಅಲ್ಲು ಅರ್ಜುನ್ ಅವರ ಜನಪ್ರಿಯತೆಯನ್ನು ಕುಗ್ಗಿಸುವ, ಅಲ್ಲು ಅರ್ಜುನ್ ಅನ್ನು ಕೆಟ್ಟದಾಗಿ ಬಿಂಬಿಸುವ ಕುತಂತ್ರ ನಡೆಯುತ್ತಿದೆ ಎಂಬ ಅನುಮಾನ ಮೂಡಿದೆ.

ಇತ್ತೀಚೆಗಷ್ಟೆ ಅಲ್ಲು ಅರ್ಜುನ್ ಬಗ್ಗೆ ಸುದ್ದಿಯೊಂದು ವೈರಲ್ ಆಗಿತ್ತು. ಅಲ್ಲು ಅರ್ಜುನ್ ಅವರನ್ನು ಭೇಟಿ ಆಗುವ ವ್ಯಕ್ತಿಗಳಿಗೆ 42 ನಿಯಮಗಳನ್ನು ಹಾಕಲಾಗಿದೆ. ಅಲ್ಲು ಅರ್ಜುನ್ ಅನ್ನು ಭೇಟಿ ಆಗುವ ಅಭಿಮಾನಿಗಳು ಹಾಗೂ ಇತರರು ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸುದ್ದಿ ಹಬ್ಬಿಸಲಾಗಿತ್ತು. ಪಿಆರ್ ಸಂಸ್ಥೆಯೊಂದಕ್ಕೆ ಸೇರಿದ ಕಾವೇರಿ ಬರುವಾ ಎಂಬ ಬ್ರ್ಯಾಂಡ್ ಮ್ಯಾನೇಜರ್ ಈ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿದ್ದರು. ಅದು ವೈರಲ್ ಆಗಿ, ಅಲ್ಲು ಅರ್ಜುನ್ ಬಗ್ಗೆ ನೆಗೆಟಿವ್ ಅಭಿಪ್ರಾಯ ಹಬ್ಬಿತ್ತು. ಬಳಿಕ ಅಲ್ಲು ಅರ್ಜುನ್ ಅವರ ತಂಡ ಈ ಬಗ್ಗೆ ಸ್ಪಷ್ಟನೆ ನೀಡಲಾಗಿ, ಇದೆಲ್ಲವೂ ಸುಳ್ಳು, ಅಲ್ಲು ಅರ್ಜುನ್ ಅವರು ಯಾವುದೇ ರೀತಿಯ ನಿಯಮಗಳನ್ನು ಯಾರ ಮೇಲೂ ಹೇರಿಲ್ಲ ಎಂದಿದ್ದರು.

ಆದರೆ ಹೀಗೆ ಅಲ್ಲು ಅರ್ಜುನ್ ಬಗ್ಗೆ ನೆಗೆಟಿವ್ ಸುದ್ದಿಗಳು ಹಬ್ಬುತ್ತಿರುವುದು ಹೇಗೆ? ಇದರ ಹಿಂದೆ ಯಾರಿದ್ದಾರೆ ಎಂಬ ಚರ್ಚೆಗಳು ಹುಟ್ಟಿಕೊಂಡಿವೆ. ಇತ್ತೀಚೆಗೆ ನಡೆದಿರುವ ಘಟನೆಯನ್ನು ಉದಾಹರಣೆಯಾಗಿ ನೋಡುವುದಾದರೆ ಬಾಲಿವುಡ್​ನ ಪಿಆರ್​​​ ಸಂಸ್ಥೆಗೆ ಸೇರಿದ ಮಹಿಳೆಯೊಬ್ಬರು ಅಲ್ಲು ಅರ್ಜುನ್ ವಿರುದ್ಧ ಹೀಗೆ ಇಲ್ಲ-ಸಲ್ಲದ ಆರೋಪಗಳನ್ನು ಮಾಡಿದ್ದರು. ಅಲ್ಲದೆ, ಅಲ್ಲು ಅರ್ಜುನ್ ವಿರುದ್ಧ ಹೀಗೆ ಸುಳ್ಳು ಆರೋಪಗಳು ಬರುತ್ತಿರುವುದು ಇದು ಮೊದಲೇನೂ ಅಲ್ಲ. ಈ ಹಿಂದೆಯೂ ಸಹ ಈ ರೀತಿಯ ಆರೋಪಗಳು ಬಂದಿದ್ದಿವೆ.

ಇದನ್ನೂ ಓದಿ:ಅಲ್ಲು ಅರ್ಜುನ್ ಭೇಟಿಗೆ ಇವೆ ಕಠಿಣ 42 ನಿಯಮಗಳು? ನಟನ ಪ್ರತಿಕ್ರಿಯೆ ಏನು?

ಚಿತ್ರರಂಗದವರೇ ಅಲ್ಲು ಅರ್ಜುನ್ ಅವರನ್ನು ತುಳಿಯಲು, ಅವರ ಬಗ್ಗೆ ನೆಗೆಟಿವ್ ಸುದ್ದಿಗಳನ್ನು ಹರಡುತ್ತಿದ್ದಾರೆ ಎನ್ನಲಾಗುತ್ತಿದೆ. ಇನ್ನು ಮುಂದೆ ಈ ರೀತಿಯ ನೆಗೆಟಿವ್ ಅಪಪ್ರಚಾರ ಮಾಡುವುದು ಕಂಡು ಬಂದರೆ ಕೂಡಲೇ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಲ್ಲು ಅರ್ಜುನ್ ತಂಡದವರು ಎಚ್ಚರಿಕೆ ನೀಡಿದ್ದಾರೆ. ಅಲ್ಲು ಅರ್ಜುನ್ ಅಭಿಮಾನಿಗಳು ಸಹ ಇದನ್ನು ತೀವ್ರವಾಗಿ ಖಂಡಿಸಿದ್ದಾರೆ.

ಅಲ್ಲು ಅರ್ಜುನ್ ಅವರ ತೆಲುಗು ರಾಜ್ಯಗಳ ಅಭಿಮಾನಿಗಳು ದೊಡ್ಡ ಸಮಾವೇಶವನ್ನು ಆಯೋಜಿಸಲು ಸಜ್ಜಾಗಿದ್ದು, ಎರಡೂ ತೆಲುಗು ರಾಜ್ಯಗಳಲ್ಲಿ ಅಭಿಮಾನಿ ಸಂಘವನ್ನು ಬಲಗೊಳಿಸಲು ಯೋಜನೆ ಸಿದ್ಧವಾಗಿದೆ ಎನ್ನಲಾಗುತ್ತಿದೆ. ಸಮಾವೇಶಕ್ಕೆ ತಯಾರಿಗಳು ನಡೆಯುತ್ತಿರುವ ಸಮಯದಲ್ಲಿಯೇ ಅಲ್ಲು ಅರ್ಜುನ್ ವಿರುದ್ಧ ಈ ರೀತಿಯ ಅಪಪ್ರಚಾರ ಆರಂಭವಾಗಿರುವುದು ಸಹಜವಾಗಿಯೇ ಅನುಮಾನಗಳನ್ನು ಮೂಡಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ