ತೆಲುಗು ನಟಿ ಹೇಮಾ (Telugu Actress Hema) ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ಅವರು ಭಾಗಿ ಆಗಿರುವ ಸುದ್ದಿ ಹೊರಬಿದ್ದಿದೆ. ಆದರೆ ತಾವು ಈ ಪಾರ್ಟಿಯಲ್ಲಿ ಇರಲಿಲ್ಲ ಎಂದು ವಿಡಿಯೋ ಮೂಲಕ ಹೇಮಾ ಅವರು ಸ್ಪಷ್ಟಪಡಿಸಿದ್ದರು. ಅದರ ಬೆನ್ನಲ್ಲೇ ಅಸಲಿ ವಿಷಯ ಗೊತ್ತಾಗಿದೆ. ರೇವ್ ಪಾರ್ಟಿ (Rave Party) ನಡೆದ ಬೆಂಗಳೂರಿನ ರೆಸಾರ್ಟ್ನಿಂದಲೇ ವಿಡಿಯೋ ಮಾಡಿ ‘ನಾನು ಹೈದರಾಬಾದ್ನಲ್ಲಿ ಇದ್ದೀನಿ’ ಎಂದು ಹೇಮಾ ಸುಳ್ಳು ಹೇಳಿದ್ದಾರೆ.
ಬೆಂಗಳೂರಿನ ಜಿ.ಆರ್. ಫಾರ್ಮ್ಹೌಸ್ ರೇವ್ ಪಾರ್ಟಿ ನಡೆಯುತ್ತಿದೆ ಎಂಬ ಅನುಮಾನದ ಮೇರೆಗೆ ಮೇ 20ರ ಮುಂಜಾನೆ ಸಿಸಿಬಿ ಪೊಲೀಸರು ದಾಳಿ ಮಾಡಿದರು. ಈ ವೇಳೆ ಅನೇಕರು ಸಿಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಪಾರ್ಟಿಯಲ್ಲಿ ನಟಿ ಹೇಮಾ ಕೂಡ ಇದ್ದರು ಎನ್ನಲಾಗಿದೆ. ಬಳಿಕ ಅವರು ಶೌಚಾಲಯಕ್ಕೆ ಹೋಗುವುದಾಗಿ ಹೇಳಿ, ಪಾರ್ಟಿ ನಡೆದ ಫಾರ್ಮ್ಹೌಸ್ನ ಆವರಣದಲ್ಲೇ ಸ್ನೇಹಿತನನ್ನು ಕರೆಸಿಕೊಂಡು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ತೆಲುಗು ನಟಿಯರು ಭಾಗಿಯಾಗಿದ್ದ ರೇವ್ಪಾರ್ಟಿ ಮೇಲೆ ಸಿಸಿಬಿ ದಾಳಿ; ಡ್ರಗ್ಸ್, ಕೊಕೇನ್ ಪತ್ತೆ
‘ನಾನು ಎಲ್ಲಿಗೂ ಹೋಗಿಲ್ಲ. ಹೈದರಾಬಾದ್ನಲ್ಲಿ ಒಂದು ಫಾರ್ಮ್ಹೌಸ್ನಲ್ಲಿ ಇದ್ದೇನೆ. ನನ್ನ ಬಗ್ಗೆ ಕೇಳಿಬಂದಿರುವ ಸುದ್ದಿ ಫೇಕ್. ಅದನ್ನು ನಂಬಬೇಡಿ’ ಎಂದು ಹೇಮಾ ವಿಡಿಯೋ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇದು ವೈರಲ್ ಆಗಿದೆ. ಆದರೆ ಅವರು ಈಗಲೂ ಜಿ.ಆರ್. ಫಾರ್ಮ್ಹೌಸ್ನಲ್ಲೇ ಇದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಅವರು ವಿಡಿಯೋ ಮಾಡಿದ ಸ್ಥಳವನ್ನು ಸಿಸಿಬಿ ಪೊಲೀಸರು ಪರಿಶೀಲಿಸಿದ್ದಾರೆ.
*సినీ నటి హేమ*#hema #raveparty #trending
నేను హైదరాబాద్ లోనే ఉన్నాను
నాకు బెంగుళూరు రేవ్ పార్టీ తో సంబంధం లేదు
అనవసరంగా నన్ను లాగుతున్నారు
కన్నడ మీడియా, సోషల్ మీడియాలో వస్తున్న వార్తల్లో నిజం లేదు pic.twitter.com/6C1FSpgr66— FILM JOURNALIST VENKAT (@CinemaPosts) May 20, 2024
ತೆಲುಗಿನ ಹಲವಾರು ಸಿನಿಮಾಗಳಲ್ಲಿ ಪೋಷಕ ಪಾತ್ರಗಳನ್ನು ಮಾಡಿ ಹೇಮಾ ಅವರು ಫೇಮಸ್ ಆಗಿದ್ದಾರೆ. ರೇವ್ ಪಾರ್ಟಿಯಲ್ಲಿ ಸಿಕ್ಕಿ ಬಿದ್ದಿರುವುದು ಅವರಿಗೆ ಮುಜುಗರ ತಂದಿದೆ. ಹಾಗಾಗಿ ತಮ್ಮ ಹೆಸರು ಬಹಿರಂಗಪಡಿಸದಂತೆ ಅಧಿಕಾರಿಗಳ ಬಳಿ ಅವರು ಅಳಲು ತೋಡಿಕೊಂಡಿದ್ದಾರೆ. ಅಲ್ಲದೇ, ಒಂದು ವೇಳೆ ಹೆಸರು ಬಹಿರಂಗಪಡಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಬೆದರಿಕೆ ಹಾಕಿದ್ದಾರೆ ಹಾಗೂ ಅಧಿಕಾರಿಗಳ ಕಾಲಿಗೆ ಬಿದ್ದು ಬೇಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.