Ramyug Trailer: ಲಾಕ್ಡೌನ್ನಲ್ಲಿ ಮತ್ತೆ ರಾಮಾಯಣ; ಆದ್ರೆ ಈ ಬಾರಿ ರಾಮನಾಗಿ ಕನ್ನಡದ ದಿಗಂತ್
Ramyug Trailer Released: ಹೊಸ ತಲೆಮಾರಿನ ಪ್ರೇಕ್ಷಕರಿಗೆ ಮತ್ತೆ ರಾಮಾಯಣವನ್ನು ತೋರಿಸುವ ಉದ್ದೇಶದಿಂದ ರಾಮ್ ಯುಗ್ ವೆಬ್ ಸಿರೀಸ್ ಮಾಡಲಾಗಿದೆ. ಈ ಜನರೇಷನ್ಗೆ ತಕ್ಕಂತೆ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ರಾಮಾಯಣದ ಕಾಲವನ್ನು ಚಿತ್ರಿಸಲಾಗಿದೆ.
ರಾಮಾಯಣದ ಕಥೆ ಯಾರಿಗೆ ಗೊತ್ತಿಲ್ಲ ಹೇಳಿ? ಈಗಾಗಲೇ ಅನೇಕ ಸಿನಿಮಾ ಮತ್ತು ಧಾರಾವಾಹಿಗಳ ಮೂಲಕ ರಾಮಾಯಣವನ್ನು ನಾವೆಲ್ಲ ನೋಡಿದ್ದೇವೆ. ಕಳೆದ ವರ್ಷ ಲಾಕ್ಡೌನ್ನಲ್ಲಿ 1987ರ ‘ರಾಮಾಯಣ’ ಸೀರಿಯಲ್ ಮರುಪ್ರಸಾರ ಆಗಿತ್ತು. ಈಗ ಮತ್ತೆ ಲಾಕ್ಡೌನ್ ಆಗಿದೆ. ಈಗಲೂ ಸಹ ಜನರನ್ನು ರಂಜಿಸಲು ರಾಮಾಯಣ ಬರುತ್ತಿದೆ. ಆದರೆ ಇದು ಹೊಸ ರಾಮಾಯಣ. ಇಲ್ಲಿ ರಾಮನಾಗಿ ಕಾಣಿಸಿಕೊಳ್ಳುತ್ತಿರುವುದು ಕನ್ನಡದ ನಟ ದಿಗಂತ್ ಮಂಚಾಲೆ.
ಹೌದು, ಹಿಂದಿಯಲ್ಲಿ ‘ರಾಮ್ ಯುಗ್’ ಶೀರ್ಷಿಕೆಯಲ್ಲಿ ವೆಬ್ ಸಿರೀಸ್ ನಿರ್ಮಾಣ ಆಗಿದೆ. ಅದರಲ್ಲಿ ನಟ ದಿಗಂತ್ ರಾಮನ ಪಾತ್ರ ನಿಭಾಯಿಸಿದ್ದಾರೆ. ಕುನಾಲ್ ಕೊಯ್ಲಿ ನಿರ್ದೇಶನ ಮಾಡಿದ್ದಾರೆ. ಅಕ್ಷಯ್ ಡೋಗ್ರಾ, ಕಬೀರ್ ದುಹಾನ್ ಸಿಂಗ್ ಮುಂತಾದವರು ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ.
ಇತ್ತೀಚೆಗೆ ಹನುಮ ಜಯಂತಿ ಪ್ರಯುಕ್ತ ಈ ವೆಬ್ ಸಿರೀಸ್ನ ಒಂದು ಮ್ಯೂಸಿಕ್ ವಿಡಿಯೋ ಬಿಡುಗಡೆ ಮಾಡಲಾಗಿತ್ತು. ಈಗ ಟ್ರೇಲರ್ ರಿಲೀಸ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಎಂಎಕ್ಸ್ ಪ್ಲೇಯರ್ನಲ್ಲಿ ಈ ವೆಬ್ ಸಿರೀಸ್ ಪ್ರಸಾರ ಆಗಲಿದೆ. ಮೇ 6ರಿಂದ ಎಲ್ಲ ಎಪಿಸೋಡ್ಗಳು ವೀಕ್ಷಣೆಗೆ ಲಭ್ಯವಾಗಲಿವೆ.
ಕನ್ನಡದ ನಟ ದಿಗಂತ್ ಅವರು ಹಿಂದಿಯಲ್ಲಿ ನಟಿಸಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಅವರು ವೆಡ್ಡಿಂಗ್ ಪುಲಾವ್ ಚಿತ್ರದಲ್ಲಿ ಹೀರೋ ಆಗಿದ್ದರು. ಈಗ ರಾಮ್ ಯುಗ್ ವೆಬ್ ಸರಣಿ ಮೂಲಕ ರಾಮನ ಅವತಾರದಲ್ಲಿ ಹಿಂದಿ ಪ್ರೇಕ್ಷಕರನ್ನು ಅವರು ರಂಜಿಸಲಿದ್ದಾರೆ. ರಾಮಾಯಣದ ಕಥೆಗೆ ದೇಶಾದ್ಯಂತ ಜನರು ಮನಸೋಲುವುದರಿಂದ ಕನ್ನಡದ ಪ್ರೇಕ್ಷಕರಿಂದ ಈ ವೆಬ್ ಸರಣಿಗೆ ಉತ್ತಮ ಪ್ರತಿಕ್ರಿಯೆ ಸಿಗುವ ಸಾಧ್ಯತೆ ಇದೆ. ದಿಗಂತ್ ಅಭಿಮಾನಿಗಳಿಗೆ ಈ ಬಗ್ಗೆ ಹೆಚ್ಚು ನಿರೀಕ್ಷೆ ಇದೆ.
ಹೊಸ ತಲೆಮಾರಿನ ಪ್ರೇಕ್ಷಕರಿಗೆ ಮತ್ತೆ ರಾಮಾಯಣವನ್ನು ತೋರಿಸುವ ಉದ್ದೇಶದಿಂದ ರಾಮ್ ಯುಗ್ ವೆಬ್ ಸಿರೀಸ್ ಮಾಡಲಾಗಿದೆ. ಈ ಜನರೇಷನ್ಗೆ ತಕ್ಕಂತೆ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ರಾಮಾಯಣದ ಕಾಲವನ್ನು ಚಿತ್ರಿಸಲಾಗಿದೆ. ಟ್ರೇಲರ್ನಲ್ಲಿ ಆ ಎಲ್ಲ ಅಂಶಗಳು ಗಮನ ಸೆಳೆಯುತ್ತಿವೆ. ರಾಮನ ಪಟ್ಟಾಭಿಷೇಕದಿಂದ ಆರಂಭಗೊಂಡು ರಾವಣನ ಅಂತ್ಯವಾಗುವವರೆಗೆ ಟ್ರೇಲರ್ನಲ್ಲಿ ಝಲಕ್ ತೋರಿಸಲಾಗಿದೆ.
ಇದನ್ನೂ ಓದಿ: ಬೀದಿಗೆ ಬಂತು ಶ್ರೀಕೃಷ್ಣ ಧಾರಾವಾಹಿ ನಟನ ಬದುಕು; ಕಣ್ಣೀರಿಟ್ಟ ಸುನಿಲ್ ನಗರ್
ರಾಮಾಯಣ ಧಾರಾವಾಹಿಯಲ್ಲಿ ರಾಮನ ಪಾತ್ರ ನಿರ್ವಹಿಸಿದ್ದ ನಟ ಅರುಣ್ ಗೋವಿಲ್ ಬಿಜೆಪಿಗೆ ಸೇರ್ಪಡೆ
Published On - 4:00 pm, Fri, 30 April 21