AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಟುಂಬ, ಸ್ನೇಹಿತರ ಆಕ್ರಂದನದ ನಡುವೆ ಮಣ್ಣು ಸೇರಿದ ದಿಲೀಪ್ ರಾಜ್

Dileep Raj: ಇಂದು ಬೆಳಿಗ್ಗೆ ನಿಧನರಾದ ಕನ್ನಡ ಚಿತ್ರರಂಗ ಮತ್ತು ಟಿವಿ ಲೋಕದ ಪ್ರತಿಭಾವಂತ ನಟ ದಿಲೀಪ್ ರಾಜ್ ಅವರ ಅಂತ್ಯಕ್ರಿಯೆಗಳು ಸಂಜೆ ವೇಳೆಗೆ ರಾಮನಗರದ ಬಳಿ ಇರುವ ಅವರ ಫಾರಂ ಹೌಸ್​​ನಲ್ಲಿ ನೆರವೇರಿದರು. ಅವರ ಕುಟುಂಬಸ್ಥರು, ಸ್ನೇಹಿತರು, ಅಭಿಮಾನಿಗಳ ಸಮ್ಮುಖದಲ್ಲಿ ಲಿಂಗಾಯತ ಸಂಪ್ರದಾಯದ ಪ್ರಕಾರ ಕ್ರಿಯೆಗಳನ್ನು ನೆರವೇರಿಸಿ, ಅವರನ್ನು ಅವರ ನೆಚ್ಚಿನ ಸ್ಥಳದಲ್ಲಿ ಸಮಾಧಿ ಮಾಡಲಾಯ್ತು. ದಿಲೀಪ್ ಅವರನ್ನು ಮಣ್ಣಿಗೆ ಕಳಿಸುವ ವೇಳೆ ಅವರ ಪತ್ನಿ ಶ್ರೀವಿದ್ಯಾ ಆಕ್ರಂದನ ಮುಗಿಲು ಮುಟ್ಟಿತ್ತು.

ಕುಟುಂಬ, ಸ್ನೇಹಿತರ ಆಕ್ರಂದನದ ನಡುವೆ ಮಣ್ಣು ಸೇರಿದ ದಿಲೀಪ್ ರಾಜ್
Dileep Raj
ಮಂಜುನಾಥ ಸಿ.
|

Updated on: May 13, 2026 | 6:11 PM

Share

ಕನ್ನಡ ಚಿತ್ರರಂಗ (Sandalwood) ಮತ್ತು ಟಿವಿ ಲೋಕದ ಪ್ರತಿಭಾವಂತ ನಟ ದಿಲೀಪ್ ರಾಜ್ ಇಂದು (ಮೇ 13) ನಿಧನ ಹೊಂದಿದ್ದು, ಅವರ ಅಂತ್ಯಕ್ರಿಯೆಗಳು ಸಂಜೆ ವೇಳೆಗೆ ರಾಮನಗರದ ಬಳಿ ಇರುವ ಅವರ ಫಾರಂ ಹೌಸ್​​ನಲ್ಲಿ ನೆರವೇರಿದರು. ಅವರ ಕುಟುಂಬಸ್ಥರು, ಸ್ನೇಹಿತರು, ಅಭಿಮಾನಿಗಳ ಸಮ್ಮುಖದಲ್ಲಿ ಲಿಂಗಾಯತ ಸಂಪ್ರದಾಯದ ಪ್ರಕಾರ ಕ್ರಿಯೆಗಳನ್ನು ನೆರವೇರಿಸಿ, ಅವರನ್ನು ಅವರ ನೆಚ್ಚಿನ ಸ್ಥಳದಲ್ಲಿ ಸಮಾಧಿ ಮಾಡಲಾಯ್ತು. ದಿಲೀಪ್ ಅವರನ್ನು ಮಣ್ಣಿಗೆ ಕಳಿಸುವ ವೇಳೆ ಅವರ ಪತ್ನಿ ಶ್ರೀವಿದ್ಯಾ ಆಕ್ರಂದನ ಮುಗಿಲು ಮುಟ್ಟಿತ್ತು.

ಹಲವು ಸಿನಿಮಾಗಳು, ನಾಟಕ, ಧಾರಾವಾಹಿಗಳಲ್ಲಿ ನಟಿಸಿದ್ದ ದಿಲೀಪ್ ರಾಜ್ ಅವರು ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು. ಅವರಿಗೆ ಇನ್ನೂ 47 ವರ್ಷ ವಯಸ್ಸು. ಪತ್ನಿ ಶ್ರೀವಿದ್ಯಾ ಅವರೊಟ್ಟಿಗೆ ಪ್ರೀತಿಸಿ ಮದುವೆಯಾಗಿದ್ದ ದಿಲೀಪ್, ಇಬ್ಬರು ಬಲು ಅನ್ಯೋನ್ಯದಿಂದ ದಾಂಪತ್ಯ ನಡೆಸುತ್ತಿದ್ದರು. ಆದರೆ ಇದೀಗ ವಿಧಿ ಆಟಕ್ಕೆ ಅವರ ಕುಟುಂಬ ಶೋಕದಲ್ಲಿ ಮುಳುಗಿದೆ.

ದಿಲೀಪ್ ಅವರಿಗೆ ಶ್ರದ್ಧಾಂಜಲಿ ಸಲಿಸಲು ಕಿರುತೆರೆ ಮತ್ತು ಚಿತ್ರರಂಗದ ಹಲವಾರು ಸೆಲೆಬ್ರಿಟಿಗಳು ಆಗಮಿಸಿದ್ದರು. ಗೋಲ್ಡನ್ ಸ್ಟಾರ್ ಗಣೇಶ್, ಶುಭಾ ಪೂಂಜಾ, ಖ್ಯಾತ ನಿರ್ದೇಶಕ ಎನ್ ನಾರಾಯಣ್, ಚೇತನ್, ಅನುಶ್ರೀ, ಥ್ರಿಲ್ಲರ್ ಮಂಜು, ದೊಡ್ಡಣ್ಣ, ಕಿರುತೆರೆಯ ಹಲವಾರು ಕಲಾವಿದರು ಮತ್ತು ತಂತ್ರಜ್ಞರು ಕಣ್ಣೀರು ಹಾಕುತ್ತಲೇ ದಿಲೀಪ್​​ಗೆ ಅಂತಿಮ ನಮನಗಳನ್ನು ಸಲ್ಲಿಸಿದರು. ಈ ವೇಳೆ ಬಹುತೇಕರು ಹೇಳಿದ್ದು, ‘ದಿಲೀಪ್ ಒಳ್ಳೆಯ ವ್ಯಕ್ತಿ, ಯಾವುದೇ ದುರಭ್ಯಾಸ ಇರಲಿಲ್ಲ, ಆರೋಗ್ಯದ ಬಗ್ಗೆ ಕಾಳಜಿ ಇದ್ದ ವ್ಯಕ್ತಿ. ಅತ್ಯಂತ ಪ್ರತಿಭಾವಂತ, ಅವರ ಪ್ರತಿಭೆಗೆ ತಕ್ಕ ಅವಕಾಶಗಳು ಅವರಿಗೆ ಸಿಗಲಿಲ್ಲ’ ಎಂದೇ.

ಇದನ್ನೂ ಓದಿ: ಮಾದರಿ ದಂಪತಿಯಾಗಿದ್ದ ದಿಲೀಪ್-ಶ್ರೀವಿದ್ಯಾ; ಕಾಂಬಿನೇಷನ್​​ನಲ್ಲಿ ಬಂದಿತ್ತು ಹಿಟ್ ಸೀರಿಯಲ್

ದಿಲೀಪ್ ಅವರು ರಾಮನಗರದ ಬಳಿ ಫಾರಂ ಹೌಸ್​ ಒಂದನ್ನು ಖರೀದಿ ಮಾಡಿದ್ದರು. ಆ ಫಾರಂ ಹೌಸ್ ದಿಲೀಪ್ ಅವರ ನೆಚ್ಚಿನ ಜಾಗವಾಗಿತ್ತು. ಇದೀಗ ಅದೇ ಫಾರಂ ಹೌಸ್ ಬಳಿ ದಿಲೀಪ್ ಅವರ ಅಂತ್ಯಕ್ರಿಯೆ ಮಾಡಲಾಗಿದೆ. ದಿಲೀಪ್ ಅವರ ಅಣ್ಣ ಹೇಳಿದಂತೆ ಲಿಂಗಾಯತ ಸಂಪ್ರದಾಯದ ಅನುಸಾರ ಅವರ ಅಂತ್ರಕ್ರಿಯೆ ನಡೆಸಲಾಯ್ತು. ಅಂತ್ಯಕ್ರಿಯೆ ವೇಳೆ ಅರುಣ್ ಸಾಗರ್ ಇನ್ನೂ ಹಲವಾರು ಗೆಳೆಯರು ಇದ್ದು, ಗೆಳೆಯನ ಕಳುಹಿಸಿಕೊಟ್ಟರು. ದಿಲೀಪ್ ಅವರನ್ನು ಮಣ್ಣಿಗೆ ಕಳಿಸುವ ವೇಳೆ ಅವರ ಕುಟುಂಬಸ್ಥರ ಅಳು ಕಲ್ಲು ಹೃದಯದವರನ್ನು ಕರಗಿಸುವಂತಿತ್ತು. ಸಾಕಷ್ಟು ಗೆಳೆಯರನ್ನು, ಆಪ್ತರನ್ನು ಸಂಪಾದಿಸಿದ್ದ ಪ್ರತಿಭಾವಂತ ನಟ ದಿಲೀಪ್ ಅವರು ಮಣ್ಣಲ್ಲಿ ಮಣ್ಣಾದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ