ಹಾಡಿನ ಮೇಲೆ ನಿರ್ಬಂಧ, ಸರ್ಕಾರದ ವಿರುದ್ಧವೇ ಗರಂ ಆದ ದಿಲ್ಜೀತ್

ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳಲ್ಲಿ ದಿಲ್ಜಿತ್ ಅವರ ಕಾನ್ಸರ್ಟ್ ಹೌಸ್​​ಫುಲ್ ಆಗುತ್ತವೆ. ವಿಶ್ವದಾದ್ಯಂತ ದಿಲ್ಜೀತ್ ಅವರ ಹಾಡುಗಳನ್ನು ಖುಷಿಯಿಂದ ಎಂಜಾಯ್ ಮಾಡುತ್ತಾರೆ. ಆದರೆ ದಿಲ್ಜೀತ್ ಅವರಿಗೆ ತಮ್ಮದೇ ದೇಶದಲ್ಲಿ ಕಾನ್ಸರ್ಟ್ ಮಾಡಲು ಕೆಲ ಸರ್ಕಾರಗಳಿಂದ ವಿರೋಧಗಳು ವ್ಯಕ್ತವಾಗುತ್ತಿದೆ. ಈ ಬಗ್ಗೆ ದಿಲ್ಜೀತ್ ತೀವ್ರ ಆಕ್ರೋಶ ಹೊರಹಾಕಿದ್ದು, ಸರ್ಕಾರ ಹಾಗೂ ತನ್ನ ಟೀಕಾಕಾರರ ನಡೆಯನ್ನು ‘ಡಬಲ್ ಸ್ಟಾಂಡರ್ಡ್ಸ್’ ಎಂದು ಕರೆದಿದ್ದಾರೆ.

ಹಾಡಿನ ಮೇಲೆ ನಿರ್ಬಂಧ, ಸರ್ಕಾರದ ವಿರುದ್ಧವೇ ಗರಂ ಆದ ದಿಲ್ಜೀತ್
Diljit

Updated on: Nov 22, 2026 | 8:34 PM

ಮುಖ್ಯಾಂಶಗಳು

  • ಸರ್ಕಾರಗಳ ವಿರುದ್ಧ ದಿಲ್ಜಿತ್ ದೊಸ್ಸಾಂಜ್ ಆಕ್ರೋಶ
  • ದಿಲ್ಜಿತ್ ಹಾಡುಗಳ ಮೇಲೆ ನಿರ್ಬಂಧ
  • ಈ ಇಬ್ಬಗೆ ನೀತಿ ಏಕೆ ಎಂದು ಪ್ರಶ್ನಿಸಿದ ದಿಲ್ಜಿತ್

ದಿಲ್ಜೀತ್ ದುಸ್ಸಾಂಜ್, ಭಾರತದ ಹಾಲಿ ನಂಬರ್ 1 ಕಾನ್ಸರ್ಟ್ ಆರ್ಟಿಸ್ಟ್ ಮತ್ತು ಗಾಯಕ. ಅವರ ಲೈವ್ ಕಾನ್ಸರ್ಟ್ ನೋಡಲು ದೇಶ, ವಿದೇಶಗಳಿಂದ ಜನ ಹರಿದು ಬರುತ್ತಾರೆ. ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳಲ್ಲಿ ಅವರ ಕಾನ್ಸರ್ಟ್ ಹೌಸ್​​ಫುಲ್ ಆಗುತ್ತವೆ. ವಿಶ್ವದಾದ್ಯಂತ ದಿಲ್ಜೀತ್ ಅವರ ಹಾಡುಗಳನ್ನು ಖುಷಿಯಿಂದ ಎಂಜಾಯ್ ಮಾಡುತ್ತಾರೆ. ಆದರೆ ದಿಲ್ಜೀತ್ ಅವರಿಗೆ ತಮ್ಮದೇ ದೇಶದಲ್ಲಿ ಕಾನ್ಸರ್ಟ್ ಮಾಡಲು ಕೆಲ ಸರ್ಕಾರಗಳಿಂದ ವಿರೋಧಗಳು ವ್ಯಕ್ತವಾಗುತ್ತಿದೆ. ಈ ಬಗ್ಗೆ ದಿಲ್ಜೀತ್ ತೀವ್ರ ಆಕ್ರೋಶ ಹೊರಹಾಕಿದ್ದು, ಸರ್ಕಾರ ಹಾಗೂ ತನ್ನ ಟೀಕಾಕಾರರ ನಡೆಯನ್ನು ‘ಡಬಲ್ ಸ್ಟಾಂಡರ್ಡ್ಸ್’ ಎಂದು ಕರೆದಿದ್ದಾರೆ.

ಗಜರಾತಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅದ್ಧೂರಿ ಲೈವ್ ಕಾನ್ಸರ್ಟ್ ಮಾಡಿದ ದಿಲ್ಜೀತ್ ದೊಸ್ಸಾಂಜ್, ‘ವಿಶ್ವದ ಅತಿ ದೊಡ್ಡ ಕ್ರೀಡಾಂಗಣ ಇದು. ಕೆಲ ವರ್ಷದ ಹಿಂದೆ ವಿದೇಶದ ಜನಪ್ರಿಯ ಬ್ಯಾಂಡ್ ಕೋಲ್ಡ್ ಪ್ಲೇ ಇದೇ ಸ್ಟೇಡಿಯಂನಲ್ಲಿ ಕಾನ್ಸರ್ಟ್ ಮಾಡಿದರು. ಅದನ್ನು ನೋಡಿದ ನಾನು ಇಲ್ಲಿ ನನ್ನ ಕಾನ್ಸರ್ಟ್ ಮಾಡಬೇಕು ಎಂದು ಆಸೆ ಪಟ್ಟೆ ಈಗ ಅದು ಈಡೇರಿದೆ. ಆದರೆ ಕೋಲ್ಡ್ ಪ್ಲೇನವರು ‘ಡ್ರಂಕ್ ಆಂಡ್ ಹೈ’ ಎಂದು ಮದ್ಯದ ಬಗ್ಗೆ ಹಾಡಿದರು, ಆಗ ಯಾರಿಗೂ ಏನೂ ಸಮಸ್ಯೆ ಆಗಲಿಲ್ಲ. ಆದರೆ ನಾನು ಹಾಡಿದರೆ ಮಾತ್ರ ಯಾಕೆ ಸಮಸ್ಯೆ ಆಗುತ್ತದೆ? ಇದು ನಿಮ್ಮ ಡಬಲ್ ಸ್ಟಾಂಡರ್ಡ್ ಅಥವಾ ಇಬ್ಭಗೆ ನೀತಿ ತಾನೆ’ ಎಂದು ದಿಲ್ಜಿತ್ ಪ್ರಶ್ನೆ ಮಾಡಿದರು.

Loading...

‘ವಿದೇಶದಿಂದ ಬಂದವರು ಹಾಡಿದರೆ ಪರವಾಗಿಲ್ಲ, ಅದೇ ನಾನು ಹಾಡಿದರೆ ನಿಮಗೆ ಸಮಸ್ಯೆ. ಇದೆಂಥ ನೀತಿ ನಿಮ್ಮದು. ನಾನು ಹೊರಗಿನವನಲ್ಲ ನಾನೂ ಸಹ ಇದೇ ದೇಶದವನು, ಇದೇ ದೇಶದಲ್ಲಿ ಹುಟ್ಟಿದವನು. ನಾನು ವಿದೇಶಗಳಲ್ಲಿ ಹಲವಾರು ಕಡೆ ಹೋಗುತ್ತೇನೆ ಶೋ ಮಾಡುತ್ತೇನೆ. ಎಲ್ಲಿಯೂ ನನಗೆ ಇಂಥಹದ್ದು ಹಾಡಬೇಕು, ಇಂಥಹದ್ದು ಹಾಡಬಾರದು ಎಂಬ ನಿರ್ಬಂಧ ಇಲ್ಲ, ಆದರೆ ನನ್ನದೇ ದೇಶದಲ್ಲಿ ಹೀಗಾಗುತ್ತಿದೆ’ ಎಂದು ದಿಲ್ಜಿತ್ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಎರಡನೇ ಪತಿಯಿಂದ ಡಿವೋರ್ಸ್​ ಪಡೆದ ಗಾಯಕಿ ಕನಿಕಾ ಕಪೂರ್ 

ದಿಲ್ಜಿತ್ ಅವರು ಮದ್ಯ ಮತ್ತು ಹಿಂಸೆಯ ಕುರಿತಾದ ತಮ್ಮ ಹಾಡುಗಳನ್ನು ಕಾನ್ಸರ್ಟ್​​ನಲ್ಲಿ ಹಾಡಬಾರದು ಎಂದು ಕೆಲ ರಾಜ್ಯಗಳ ಸರ್ಕಾರಗಳು ದಿಲ್ಜಿತ್ ಅವರಿಗೆ ನೊಟೀಸ್ ನೀಡಿವೆ. ತೆಲಂಗಾಣ, ಗುಜರಾತ್, ಮಧ್ಯ ಪ್ರದೇಶ ಇನ್ನೂ ಕೆಲ ರಾಜ್ಯಗಳು ದಿಲ್ಜೀತ್ ಇಂಥಹಾ ಹಾಡು ಹಾಡಬೇಕು, ಇಂಥಹಾ ಹಾಡು ಹಾಡಬಾರದು ಎಂದು ನಿರ್ಬಂಧ ಹೇರಿವೆ. ಇದೇ ಕಾರಣಕ್ಕೆ ದಿಲ್ಜೀತ್ ಸಿಟ್ಟಾಗಿದ್ದಾರೆ. ಈ ಹಿಂದಿನ ಕಾನ್ಸರ್ಟ್​​ನಲ್ಲಿ ರಾಹತ್ ಇಂದೋರಿ ಅವರ ಕವನ ಒಂದನ್ನು ಓದಿ ಪರೋಕ್ಷ ಟಾಂಗ್ ನೀಡಿದ್ದರು. ಈಗ ನೇರವಾಗಿ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us