AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪುಷ್ಪ’ ಹಾಗೂ ‘ಪುಷ್ಪ 2‘ ಸಿನಿಮಾಗಳ ಬಗ್ಗೆ ನಿರ್ದೇಶಕ ಸುಕುಮಾರ್ ಮಾತು

Pushpa: ‘ಪುಷ್ಪ’ ಸಿನಿಮಾದ ನಿರ್ದೇಶಕ ಸುಕುಮಾರ್ ‘ಪುಷ್ಪ 2’ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ‘ಪುಷ್ಪ 2’ ಸಿನಿಮಾ ಆಗಸ್ಟ್ 15ರಂದು ಬಿಡುಗಡೆ ಆಗಲಿದೆ.

‘ಪುಷ್ಪ’ ಹಾಗೂ ‘ಪುಷ್ಪ 2‘ ಸಿನಿಮಾಗಳ ಬಗ್ಗೆ ನಿರ್ದೇಶಕ ಸುಕುಮಾರ್ ಮಾತು
ಮಂಜುನಾಥ ಸಿ.
|

Updated on:Feb 08, 2024 | 5:47 PM

Share

ಅಲ್ಲು ಅರ್ಜುನ್ (Allu Arjun) ನಟನೆಯ ‘ಪುಷ್ಪ’ (Pushpa) ಸಿನಿಮಾ 2021ರಲ್ಲಿ ಬಿಡುಗಡೆ ಆಗಿ ಗಳಿಕೆಯಲ್ಲಿ ಕೆಲ ದಾಖಲೆಗಳನ್ನು ಬರೆದಿತ್ತು. ಕೋವಿಡ್ ಬಳಿಕ ಬಿಡುಗಡೆ ಆದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದ್ದು, ದಕ್ಷಿಣದ ಸಿನಿಮಾಗಳಿಗೆ ಉತ್ತರ ಭಾರತದಲ್ಲಿರುವ ಯಥೇಚ್ಚ ಮಾರುಕಟ್ಟೆಯನ್ನು ತೆರೆದಿಟ್ಟಿತ್ತು. ಇದೀಗ ಪುಷ್ಪ ಸಿನಿಮಾದ ಎರಡನೇ ಭಾಗ ತಯಾರಾಗುತ್ತಿದ್ದು, ಸಿನಿಮಾ ಇದೇ ವರ್ಷ ಆಗಸ್ಟ್ 15ಕ್ಕೆ ತೆರೆಗೆ ಬರಲಿದೆ. ಸಿನಿಮಾದ ಒಂದು ಟೀಸರ್, ಪೋಸ್ಟರ್ ಬಿಟ್ಟರೆ ಇನ್ಯಾವುದೇ ಅಪ್​ಡೇಟ್ ಹೊರಬಿದ್ದಿಲ್ಲ. ಇದೀಗ ನಿರ್ದೇಶಕ ಸುಕುಮಾರ್ ‘ಪುಷ್ಪ 2’ ಬಗ್ಗೆ ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

‘ಪುಷ್ಪ’ ಸಿನಿಮಾಕ್ಕಿಂತಲೂ ‘ಪುಷ್ಪ 2’ ಸಿನಿಮಾ ದುಪ್ಪಟ್ಟು ಚೆನ್ನಾಗಿರುತ್ತದೆ. ‘ಪುಷ್ಪ’ ಸಿನಿಮಾಕ್ಕಿಂತಲೂ ಒಳ್ಳೆಯ ಚಿತ್ರಕತೆ ‘ಪುಷ್ಪ 2’ ಸಿನಿಮಾದ್ದು ಎಂದಿದ್ದಾರೆ ಸುಕುಮಾರ್, ಮುಂದುವರೆದು, ‘ಭೈರೋಸಿಂಗ್ ಶೇಖಾವತ್ ಹಾಗೂ ಪುಷ್ಪನ ನಡುವಿನ ಯುದ್ಧದ ಜೊತೆಗೆ ಪುಷ್ಪನ ಆಂತರಿಕ ಯುದ್ಧವು ಅದ್ಭುತವಾಗಿ ಇರಲಿದೆ’ ಎಂದಿದ್ದಾರೆ. ‘ಪುಷ್ಪ 2’ ಸಿನಿಮಾದ ಚಿತ್ರಕತೆಯ ಮೇಲೆ ಬಹಳ ನಂಬಿಕೆ ಇರುವುದಾಗಿಯೂ ಸುಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ:ಚಿಕ್ಕಬಳ್ಳಾಪುರ: ಪುಷ್ಪ ಸಿನಿಮಾ ಸ್ಟೈಲಲ್ಲಿ ರಕ್ತಚಂದನ ಸಾಗಿಸುತಿದ್ದ ಗ್ಯಾಂಗ್ ಸೆರೆ

ಪುಷ್ಪ ಸಿನಿಮಾದ ಅಂತ್ಯದಲ್ಲಿ ಅರಣ್ಯಾಧಿಕಾರಿ ಬೈರೋಸಿಂಗ್ ಶೇಖಾವತ್ ಜೊತೆಗೆ ಪುಷ್ಪನಿಗೆ ವೈರತ್ವ ಶುರುವಾಗುತ್ತದೆ. ಅದರ ಜೊತೆಗೆ ರಕ್ತ ಚಂದನ ಕಳ್ಳಸಾಗಣೆ ಮಾಡುವ ಸಿಂಡಿಕೇಟ್​ನ ಮುಖ್ಯ ಮೆಂಬರ್ ಸಹ ಆಗಿರುವ ಪುಷ್ಪನ ವಿರುದ್ಧ ಅದೇ ಸಿಂಡಿಕೇಟ್​ನ ಹಲವರು ಕತ್ತಿ ಮಸೆಯುತ್ತಿದ್ದಾರೆ. ಕೆಲವು ರಾಜಕೀಯ ಶತ್ರುಗಳು ಸಹ ಪುಷ್ಪನಿಗೆ ಎದುರಾಗಿದ್ದಾರೆ. ಅವರೆಲ್ಲರ ವಿರುದ್ಧ ಪುಷ್ಪ ಹೇಗೆ ಹೋರಾಡುತ್ತಾನೆ, ಅವರೆಲ್ಲರನ್ನೂ ಹೇಗೆ ಮಣಿಸುತ್ತಾನೆ ಎಂಬ ಕತೆಯನ್ನು ಪುಷ್ಪ 2 ಒಳಗೊಂಡಿರಲಿದೆ.

‘ಪುಷ್ಪ’ ಸಿನಿಮಾದಲ್ಲಿ ನಟಿಸಿದ್ದ ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ಡಾಲಿ ಧನಂಜಯ್ ರಾವ್ ರಮೇಶ್, ಸುನಿಲ್ ಇನ್ನೂ ಕೆಲವರು ‘ಪುಷ್ಪ 2’ ಸಿನಿಮಾದಲ್ಲಿಯೂ ಮುಂದುವರೆಯಲಿದ್ದಾರೆ. ಇವರ ಜೊತೆಗೆ ಇನ್ನೂ ಕೆಲವು ಹೊಸ ಪಾತ್ರಗಳು ಸಹ ಸೇರಿಕೊಳ್ಳಲಿವೆ. ಮೊದಲ ಸಿನಿಮಾಕ್ಕೆ ಕೆಲಸ ಮಾಡಿದ್ದ ಬಹುತೇಕ ತಂತ್ರಜ್ಞರು ‘ಪುಷ್ಪ 2’ಗೆ ಸಹ ಕೆಲಸ ಮಾಡಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:36 pm, Thu, 8 February 24

ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..