ಸೀರೆಯುಟ್ಟ ಅಲ್ಲು ಅರ್ಜುನ್, ‘ಪುಷ್ಪ’ ಲುಕ್ ಲೀಕ್

Pushpa 2: ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾದ ಶೂಟಿಂಗ್​ ಸೆಟ್​ನಿಂದ ಅಲ್ಲು ಅರ್ಜುನ್ ಲುಕ್ ಒಂದು ಲೀಕ್ ಆಗಿದೆ.

ಸೀರೆಯುಟ್ಟ ಅಲ್ಲು ಅರ್ಜುನ್, ‘ಪುಷ್ಪ’ ಲುಕ್ ಲೀಕ್
Follow us
ಮಂಜುನಾಥ ಸಿ.
|

Updated on: Jan 30, 2024 | 4:21 PM

ಅಲ್ಲು ಅರ್ಜುನ್ (Allu Arjun) ನಟನೆಯ ‘ಪುಷ್ಪ’ (Pushpa) ಸಿನಿಮಾ 2024ರ ಅತಿ ಹೆಚ್ಚು ನಿರೀಕ್ಷೆಯ ಸಿನಿಮಾ. 2021ರ ಅಂತ್ಯದಲ್ಲಿ ಬಿಡುಗಡೆ ಆಗಿದ್ದ ‘ಪುಷ್ಪ’ ಸಿನಿಮಾ ಕೋವಿಡ್ ಬಳಿಕ ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಉತ್ತರ ಭಾರತದಲ್ಲಿ ಇರುವ ಮಾರುಕಟ್ಟೆಯನ್ನು ದಕ್ಷಿಣ ಭಾರತದ ಚಿತ್ರರಂಗಕ್ಕೆ ಪರಿಚಯಿಸಿತ್ತು. ಸಿನಿಮಾ ಸಹ ದೊಡ್ಡ ಹಿಟ್ ಆಗಿದ್ದಲ್ಲದೆ, ಅಲ್ಲು ಅರ್ಜುನ್​ಗೆ ರಾಷ್ಟ್ರಪ್ರಶಸ್ತಿಯನ್ನು ಸಹ ತಂದುಕೊಟ್ಟಿತು. ಇದೇ ಕಾರಣಕ್ಕೆ ಹೆಚ್ಚಿನ ಕಾಳಜಿಯಿಂದ ‘ಪುಷ್ಪ 2’ ಸಿನಿಮಾವನ್ನು ನಿರ್ಮಿಸಲಾಗುತ್ತಿದೆ. ಸಿನಿಮಾದ ಬಿಡುಗಡೆ ದಿನಾಂಕ, ಒಂದು ಟೀಸರ್, ಒಂದು ಲುಕ್ ಅಷ್ಟೆ ಈವರೆಗೆ ಬಹಿರಂಗಗೊಂಡಿದೆ. ಇದೀಗ ಸಿನಿಮಾ ಸೆಟ್​ನ ಚಿತ್ರವೊಂದು ಲೀಕ್ ಆಗಿದೆ.

‘ಪುಷ್ಪ’ ಸಿನಿಮಾದ ಪೋಸ್ಟರ್ ಒಂದನ್ನು ಚಿತ್ರತಂಡ ಈ ಹಿಂದೆ ಬಿಡುಗಡೆ ಮಾಡಿತ್ತು, ಅಲ್ಲುಅರ್ಜುನ್ ಕಾಳಿಕಾ ಮಾತೆಯಂತೆ ವೇಷ ಧರಿಸಿದ್ದ ಚಿತ್ರವದು. ಆ ಲುಕ್ ಸಖತ್ ವೈರಲ್ ಆಗಿತ್ತು. ಜೊತೆಗೆ ಕುತೂಹಲವನ್ನೂ ಸಹ ಕೆರಳಿಸಿತ್ತು. ಇದೀಗ ‘ಪುಷ್ಪ’ ಸೆಟ್​ನಿಂದ ಚಿತ್ರವೊಂದು ವೈರಲ್ ಆಗಿದೆ. ಸೀರೆಯುಟ್ಟು ಅಲ್ಲು ಅರ್ಜುನ್ ಕುರ್ಚಿಯ ಮೇಲೆ ಕುಳಿತಿರುವ ಚಿತ್ರವದು. ವೈರಲ್ ಆಗಿರುವ ಚಿತ್ರವನ್ನು ಅಲ್ಲು ಅರ್ಜುನ್​ರ ಅಭಿಮಾನಿಗಳು ಹಂಚಿಕೊಳ್ಳುತ್ತಿದ್ದಾರೆ.

‘ಪುಷ್ಪ 2’ ಸಿನಿಮಾದ ಸೆಟ್​ನ ಚಿತ್ರಗಳು ಹೊರಬರದಂತೆ ಹಲವು ಎಚ್ಚರಿಕೆಗಳನ್ನು ಚಿತ್ರತಂಡ ತೆಗೆದುಕೊಂಡಿದೆ. ಹಾಗಿದ್ದರೂ ಸಹ ಇದೀಗ ಅಲ್ಲು ಅರ್ಜುನ್​ರ ಚಿತ್ರವೊಂದು ಲೀಕ್ ಆಗಿದೆ. ಇದನ್ನು ಬೇರೆ ಯಾರಾದರೂ ಮಾಡಿದ್ದಾರಾ? ಅಥವಾ ಚಿತ್ರತಂಡವೇ ಮಾಡಿದೆಯಾ? ಸ್ಪಷ್ಟ ಮಾಹಿತಿ ಇಲ್ಲ.

ಇದನ್ನೂ ಓದಿ:‘ಪುಷ್ಪ 2’ ಬಳಿಕ ಅಲ್ಲು ಅರ್ಜುನ್ ಮುಂದಿನ ಸಿನಿಮಾ ಯಾವುದು? ಇದೆ ಮೂರು ಆಯ್ಕೆ

‘ಪುಷ್ಪ 2’ ಸಿನಿಮಾದ ಟೀಸರ್ ಒಂದು ಈಗಾಗಲೇ ಬಿಡುಗಡೆ ಆಗಿ ಸಿನಿಮಾದ ಕತೆಯ ಬಗ್ಗೆ ಸಣ್ಣ ಸುಳಿವನ್ನು ನೀಡಿತ್ತು. ‘ಪುಷ್ಪ’ ಸಿನಿಮಾನಲ್ಲಿ ಮರಕಡಿಯುವವ, ರಕ್ತಚಂದನ ಕಳ್ಳಸಾಗಣೆದಾರನಾಗಿ ಇದ್ದ ಅಲ್ಲು ಅರ್ಜುನ್, ‘ಪುಷ್ಪ 2’ ನಲ್ಲಿ ದೊಡ್ಡ ವ್ಯಕ್ತಿಯಾಗಿ ಬೆಳೆದಿದ್ದಾನೆ. ಹಾಗೆಯೇ ಆತನಿಗೆ ವೈರಿಗಳು ಸಹ ಹೆಚ್ಚಾಗಿದ್ದಾರೆ. ಪುಷ್ಪ ಜೈಲಿಗೆ ಸಹ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿ, ಅಲ್ಲಿ ಪುಷ್ಪನ ಜೀವಕ್ಕೆ ಸಂಚಕಾರ ಎದುರಾದಾಗ ಅಲ್ಲಿಂದಲೂ ತಪ್ಪಿಸಿಕೊಂಡು ಹೋಗಿದ್ದಾನೆ. ಪುಷ್ಪ ಹೇಗೆ ತನ್ನ ವಿರೋಧಿಗಳನ್ನು ಎದುರಿಸುತ್ತಾನೆ ಎಂಬುದು ‘ಪುಷ್ಪ 2’ ಸಿನಿಮಾದ ಕತೆ.

‘ಪುಷ್ಪ’ ಸಿನಿಮಾದಲ್ಲಿದ್ದ ಬಹುತೇಕ ತಂಡ ‘ಪುಷ್ಪ 2’ನಲ್ಲಿಯೂ ಇದೆ. ಮೊದಲ ಸಿನಿಮಾಕ್ಕೆ ಕೆಲಸ ಮಾಡಿದ್ದ ತಂತ್ರಜ್ಞರೆಲ್ಲರೂ ಎರಡನೇ ಸಿನಿಮಾದಲ್ಲಿಯೂ ಇದ್ದಾರೆ. ಜೊತೆಗೆ ಕೆಲವು ಹೊಸ ನಟ-ನಟಿಯರು ಸಹ ‘ಪುಷ್ಪ’ ತಂಡ ಸೇರಿಕೊಂಡಿದ್ದಾರೆ. ಕನ್ನಡದ ಡಾಲಿ ಧನಂಜಯ್, ‘ಪುಷ್ಪ’ ಸಿನಿಮಾದಲ್ಲಿದ್ದರು, ಇದೀಗ ‘ಪುಷ್ಪ 2’ನಲ್ಲಿಯೂ ಇದ್ದಾರೆ. ರಶ್ಮಿಕಾ ಮಂದಣ್ಣ ಸಿನಿಮಾದ ನಾಯಕಿ. ಇನ್ನೊಬ್ಬ ನಾಯಕಿಯ ಎಂಟ್ರಿ ಸಹ ಆಗಿದೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ