ದಿವ್ಯಾ ಸುರೇಶ್​ ಮಾಡಿದ ಈ ತಪ್ಪನ್ನು ಮಂಜು ಯಾವತ್ತೂ ಕ್ಷಮಿಸಲ್ಲ!

ಮಂಜುವಿನಿಂದ ದಿವ್ಯಾರನ್ನು ದೂರ ಮಾಡಬೇಕು ಎನ್ನುವ ತಂತ್ರ ಫಲಿಸಿದಂತೆ ಕಾಣುತ್ತಿದೆ. ದಿವ್ಯಾ ನಿಧಾನವಾಗಿ ಪ್ರಶಾಂತ್​ ಕಡೆ ವಾಲುತ್ತಿದ್ದಾರೆ.

ದಿವ್ಯಾ ಸುರೇಶ್​ ಮಾಡಿದ ಈ ತಪ್ಪನ್ನು ಮಂಜು ಯಾವತ್ತೂ ಕ್ಷಮಿಸಲ್ಲ!
ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್​
Edited By:

Updated on: Apr 06, 2021 | 7:01 AM

ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್​ ನಡುವೆ ನಿಧಾನವಾಗಿ ವೈಮನಸ್ಸು ಬೆಳೆಯುತ್ತಿದೆ. ಇದಕ್ಕೆ ಪ್ರಶಾಂತ್​ ಸಂಬರಗಿ ನೇರ ಕಾರಣ ಎಂದರೆ ತಪ್ಪಾಗಲಾರದು. ಪ್ರಶಾಂತ್​ ಮನೆಯಲ್ಲಿ ಮಾಡುತ್ತಿರುವ ಕೆಲ ತಂತ್ರಗಳಿಂದ ಮಂಜು ಬಗ್ಗೆ ದಿವ್ಯಾಗೆ ಬೇರೆಯದೇ ಅಭಿಪ್ರಾಯ ಬೆಳೆಯುತ್ತಿದೆ. ಪ್ರಶಾಂತ್​ ಮಾಡುತ್ತಿರುವ ಒಳಸಂಚು ಮಂಜುಗೆ ನಿಧಾನವಾಗಿ ಅರ್ಥವಾಗುತ್ತಿದೆ. ಆದರೆ, ದಿವ್ಯಾ ಸುರೇಶ್​ಗೆ ಇದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವೇ ಆಗುತ್ತಿಲ್ಲ.

ಬಿಗ್​ ಬಾಸ್​ ಮನೆಯಲ್ಲಿ ಮಂಜು ಪಾವಗಡ-ದಿವ್ಯಾ ಸುರೇಶ್​ ಒಟ್ಟಾಗಿದ್ದರು. ಇವರ ಒಗ್ಗಟ್ಟನ್ನು ಮುರಿಯೋಕೆ ಪ್ರಶಾಂತ್​ ನಿರಂತರವಾಗಿ ಪ್ರಯತ್ನಪಡುತ್ತಲೇ ಇದ್ದಾರೆ. ಇದೇ ಕಾರಣಕ್ಕೆ, ಮಂಜುವಿನ ಬಾಲ ದಿವ್ಯಾ ಎಂದು ಪುನರುಚ್ಛರಿಸುತ್ತಲೇ ಬಂದಿದ್ದಾರೆ. ಇದನ್ನು ಅದೆಷ್ಟು ಬಾರಿ ಹೇಳಿದ್ದಾರೆ ಎಂದರೆ, ನಾನು ಮಂಜುವಿನ ಬಾಲವೇ ಇರಬಹುದು ಎನ್ನುವಂತೆ ಭಾಸವಾಗುತ್ತಿದೆ.

ಮಂಜುವಿನಿಂದ ದಿವ್ಯಾರನ್ನು ದೂರ ಮಾಡಬೇಕು ಎನ್ನುವ ತಂತ್ರ ಫಲಿಸಿದಂತೆ ಕಾಣುತ್ತಿದೆ. ದಿವ್ಯಾ ನಿಧಾನವಾಗಿ ಪ್ರಶಾಂತ್​ ಕಡೆ ವಾಲುತ್ತಿದ್ದಾರೆ. ಅಷ್ಟೇ ಅಲ್ಲ, ಮಂಜುವಿನಿಂದ ದೂರವೇ ಇರಲು ಪ್ರಯತ್ನಿಸುತ್ತಿರುವ ಅವರು ಪ್ರಶಾಂತ್​ಗೆ ಹತ್ತಿರವಾಗುತ್ತಿದ್ದಾರೆ.

ಅತ್ತ, ದಿವ್ಯಾ ಸುರೇಶ್​ ವಿರುದ್ಧವೇ ಪ್ರಶಾಂತ್​ ಕತ್ತಿ ಮಸೆಯುತ್ತಿದ್ದಾರೆ. ಬ್ರೋ ಗೌಡ ಅವರನ್ನು ಮಂಜು ಎತ್ತಿ ಕಟ್ಟುತ್ತಿದ್ದಾರೆ. ಆದರೆ, ಈ ಯಾವ ವಿಚಾರಗಳೂ ದಿವ್ಯಾ ಸುರೇಶ್​ಗೆ ಗೊತ್ತೇ ಆಗುತ್ತಿಲ್ಲ.

ಬಿಗ್ ಬಾಸ್​ ಮನೆಯಲ್ಲಿ ಮಂಜು ತಂಡ ಮಾಡಿಕೊಂಡಿದ್ದಾರೆ. ಎಲ್ಲರೂ ಅವರ ಪರವಾಗಿಯೇ ಇದ್ದಾರೆ ಎಂಬುದು ಚಕ್ರವರ್ತಿ ಚಂದ್ರಚೂಡ್​ ಭಾವನೆ. ಪ್ರಶಾಂತ್​ಗೂ ಇದು ಹೌದೆನ್ನಿಸಿದೆ. ಹೀಗಾಗಿ, ಆ ತಂಡದಿಂದ ಒಬ್ಬರನ್ನು ತಮ್ಮ ಕಡೆ ಸೆಳೆದುಕೊಳ್ಳೋಕೆ ಪ್ಲಾನ್​ ಹಾಕುತ್ತಿದ್ದಾರೆ. ಒಂದೊಮ್ಮೆ ಈ ಯೋಜನೆಗೆ ಬಲಿಯಾಗಿ ಪ್ರಶಾಂತ್​ ಕಡೆ ದಿವ್ಯಾ ಸಂಪೂರ್ಣವಾಗಿ ವಾಲಿದರೆ ಈ ತಪ್ಪನ್ನು ಮಂಜು ಎಂದಿಗೂ ಕ್ಷಮಿಸುವುದಿಲ್ಲ.

ಇದನ್ನೂ ಓದಿ: ಬಿಗ್​ ಬಾಸ್​ನಿಂದ ರಘುಗೆ ಒಂದು ನ್ಯಾಯ, ಉಳಿದವರಿಗೊಂದು ನ್ಯಾಯ? ನಿಧಿ ತಲೆಯಲ್ಲಿ ಬಂತು ಡೌಟ್​

ಮಂಜುನ ಪ್ರೀತಿಸ್ತೀನಿ ಎನ್ನುತ್ತ ಸುದೀಪ್​ ಎದುರಲ್ಲೇ ಟ್ವಿಸ್ಟ್​ ಕೊಟ್ಟ ದಿವ್ಯಾ! ಅಬ್ಬಬ್ಬಾ ಸಖತ್​ ಚಾಲಾಕಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us