ಟಿವಿ ಬಳಿಕ ಚಿತ್ರಮಂದಿರಕ್ಕೆ ಬರಲಿರುವ ಹಾವು

Ektaa Kapoor: ಟಿವಿ ಕ್ವೀನ್ ಎಂದೇ ಕರೆಯಲಾಗುವ ಏಕ್ತಾ ಕಪೂರ್ ನಾಗಿನ್ ಧಾರವಾಹಿಯ ನಿರ್ಮಾಪಕಿ ಆಗಿದ್ದು ಹಿಂದಿಯಲ್ಲಿ ನಾಗಿನ್ ಧಾರಾವಾಹಿ ಏಳು ಸೀಸನ್​ ಪೂರೈಸಿದೆ. ಹಿಂದಿಯ ‘ನಾಗಿನ್’ ಧಾರಾವಾಹಿ ಸಾಕಷ್ಟು ಜನಪ್ರಿಯತೆ ಮತ್ತು ಯಶಸ್ಸನ್ನು ಗಳಿಸಿದೆ. ಇದೀಗ ಏಕ್ತಾ ಕಪೂರ್, ಧಾರಾವಾಹಿ ಆಗಿದ್ದ ‘ನಾಗಿನ್’ ಅನ್ನು ಸಿನಿಮಾ ರೂಪಕ್ಕೆ ತರಲು ಸಜ್ಜಾಗಿದ್ದಾರೆ. ನಾಗಿನ್​​ಗೆ ಸಿನಿಮಾ ರೂಪ ನೀಡಲು ಏಕ್ತಾ ಸಜ್ಜಾಗಿದ್ದು, ಈ ಬಗ್ಗೆ ಚರ್ಚೆಗಳು ಚಾಲ್ತಿಯಲ್ಲಿವೆ ಎನ್ನಲಾಗುತ್ತಿದೆ.

ಟಿವಿ ಬಳಿಕ ಚಿತ್ರಮಂದಿರಕ್ಕೆ ಬರಲಿರುವ ಹಾವು
Nagin

Updated on: Feb 03, 2026 | 5:56 PM

ಒಂದು ಲೆಕ್ಕಾಚಾರದ ಪ್ರಕಾರ ಭಾರತದಲ್ಲಿ ಸಿನಿಮಾ (Cinema) ವೀಕ್ಷಕರ ಸಂಖ್ಯೆಗಿಂತಲೂ ಧಾರಾವಾಹಿ ವೀಕ್ಷಕರ ಸಂಖ್ಯೆ ಹೆಚ್ಚಾಗಿದೆ. ಟಿವಿ ಧಾರಾವಾಹಿಗಳು ಸಿನಿಮಾಗಳಿಗಿಂತಲೂ ಹೆಚ್ಚು ಹಣ ಗಳಿಸುತ್ತವೆ ಎನ್ನಲಾಗುತ್ತದೆ. ಆದರೆ ಭಾರತದ ಧಾರವಾಹಿಗಳು ಅತ್ಯಂತ ಕಳಪೆ ಗುಣಮಟ್ಟವನ್ನು ಹೊಂದಿವೆ. ಕ್ಲೀಷೆ ಕತೆಗಳು, ತೀರ ಕಳಪೆ ಮಟ್ಟದ ಚಿತ್ರಕತೆ, ಕಳಪೆ ನಿರ್ಮಾಣ ಮತ್ತು ಪ್ರೊಡಕ್ಷನ್ ಕ್ವಾಲಿಟಿಯನ್ನು ಒಳಗೊಂಡಿರುತ್ತವೆ. ಹಾಗಿದ್ದರೂ ಸಹ ಹಲವಾರು ಧಾರಾವಾಹಿಗಳು ವರ್ಷಾನುಗಟ್ಟಲೆ ಪ್ರದರ್ಶನ ಕಂಡಿವೆ. ಅಂಥಹ ಧಾರಾವಾಹಿಗಳಲ್ಲಿ ‘ನಾಗಿನ್’ ಸಹ ಒಂದು.

ಟಿವಿ ಕ್ವೀನ್ ಎಂದೇ ಕರೆಯಲಾಗುವ ಏಕ್ತಾ ಕಪೂರ್ ನಾಗಿನ್ ಧಾರವಾಹಿಯ ನಿರ್ಮಾಪಕಿ ಆಗಿದ್ದು ಹಿಂದಿಯಲ್ಲಿ ನಾಗಿನ್ ಧಾರಾವಾಹಿ ಏಳು ಸೀಸನ್​ ಪೂರೈಸಿದೆ. ಹಿಂದಿಯ ‘ನಾಗಿನ್’ ಧಾರಾವಾಹಿ ಸಾಕಷ್ಟು ಜನಪ್ರಿಯತೆ ಮತ್ತು ಯಶಸ್ಸನ್ನು ಗಳಿಸಿದೆ. ಇದೀಗ ಏಕ್ತಾ ಕಪೂರ್, ಧಾರಾವಾಹಿ ಆಗಿದ್ದ ‘ನಾಗಿನ್’ ಅನ್ನು ಸಿನಿಮಾ ರೂಪಕ್ಕೆ ತರಲು ಸಜ್ಜಾಗಿದ್ದಾರೆ. ನಾಗಿನ್​​ಗೆ ಸಿನಿಮಾ ರೂಪ ನೀಡಲು ಏಕ್ತಾ ಸಜ್ಜಾಗಿದ್ದು, ಈ ಬಗ್ಗೆ ಚರ್ಚೆಗಳು ಚಾಲ್ತಿಯಲ್ಲಿವೆ ಎನ್ನಲಾಗುತ್ತಿದೆ.

‘ನಾಗಿನ್’ ಪಾತ್ರವನ್ನು ಪ್ರಧಾನವಾಗಿರಿಸಿಕೊಂಡು ಸಿನಿಮಾ ನಿರ್ಮಾಣ ಮಾಡಲು ಏಕ್ತಾ ಕಪೂರ್ ಮುಂದಾಗಿದ್ದಾರೆ. ಧಾರಾವಾಹಿಯಲ್ಲಿ ತೋರಿಸಿದ ಕತೆಗಿಂತಲೂ ಭಿನ್ನವಾದ ಕತೆಯನ್ನು ‘ನಾಗಿನ್’ ಸಿನಿಮಾನಲ್ಲಿ ತೋರಿಸುವ ಉದ್ದೇಶವನ್ನು ಏಕ್ತಾ ಹೊಂದಿದ್ದಾರೆ. ಸಿನಿಮಾಕ್ಕೆ ‘ನಾಗಿನ್: ದಿ ಎಪಿಕ್ ಟೇಲ್ ಆಫ್ ಲವ್ ಆಂಡ್ ಸ್ಯಾಕ್ರಿಫೈಸ್’ ಎಂದು ಹೆಸರಿಡಲಾಗಿದೆಯಂತೆ. ಸಿನಿಮಾನಲ್ಲಿ ನಾಗಿನ್ ಪಾತ್ರದಲ್ಲಿ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ನಟಿಸಲಿದ್ದಾರೆ. ಇದೇ ಏಪ್ರಿಲ್​​ನಿಂದ ಸಿನಿಮಾದ ಚಿತ್ರೀಕರಣ ಶುರು ಆಗಲಿದ್ದು, ಸಿನಿಮಾದ ಹಲವು ಭಾಗಗಳು ಸಹ ಮುಂದಿನ ವರ್ಷಗಳಲ್ಲಿ ಬರಲಿದೆ.

ಇದನ್ನೂ ಓದಿ:ಮುರಿದು ಬಿತ್ತು ‘ರಾಧಾ ರಮಣ’ ಧಾರಾವಾಹಿ ನಟಿ ಅನುಷಾ ಹೆಗಡೆ ದಾಂಪತ್ಯ

ಧಾರಾವಾಹಿಯಲ್ಲಿ ಬಹಳ ಯಶಸ್ವಿ ಆದ ಪಾತ್ರಗಳನ್ನು ಇರಿಸಿಕೊಂಡು ಸಿನಿಮಾ ಮಾಡುವ ಟ್ರೆಂಡ್ ಇತ್ತೀಚೆಗೆ ಹೆಚ್ಚಾಗುತ್ತಿದೆ. ಭಾರಿ ಜನಪ್ರಿಯ ಆಗಿದ್ದ ‘ಶಕ್ತಿಮಾನ್’ ಧಾರಾವಾಹಿಯನ್ನು ಸಿನಿಮಾ ಮಾಡುವ ಚರ್ಚೆ ಬಾಲಿವುಡ್​​ನಲ್ಲಿ ಆಗಿತ್ತು. ಆದರೆ ಆ ಚರ್ಚೆ ಮುಂದುವರೆಯಲಿಲ್ಲ. ಧಾರಾವಾಹಿಗಳಾಗಿದ್ದ ‘ಮಹಾಭಾರತ’, ‘ರಾಮಾಯಣ’ಗಳನ್ನು ಈಗಾಗಲೇ ಸಿನಿಮಾ ಮಾಡಲಾಗಿದೆ. ಇದೀಗ ‘ನಾಗಿನ್’ ಧಾರಾವಾಹಿಯನ್ನು ಸಿನಿಮಾ ಮಾಡಲು ಯೋಜನೆ ಸಿದ್ಧವಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us