‘ಇಡೀ ಬಾಲಿವುಡ್ ಒಂದು ಕಡೆಯಾದರೆ, ಇಮ್ರಾನ್ ಹಶ್ಮಿ ಒಂದು ಕಡೆ’
ಆರ್ಯನ್ ಖಾನ್ ನಿರ್ದೇಶಿಸಿದ "ಬ್ಯಾಡ್ಸ್ ಆಫ್ ಬಾಲಿವುಡ್" ವೆಬ್ ಸರಣಿಯಲ್ಲಿ ಇಮ್ರಾನ್ ಹಶ್ಮಿ ಅವರ ಬಾಲಿವುಡ್‌ನಲ್ಲಿನ ಪ್ರಭಾವ ಮತ್ತು ಪ್ರಸ್ತುತ ಸ್ಥಿತಿಯನ್ನು ಚರ್ಚಿಸಲಾಗಿದೆ. ಒಂದು ಕಾಲದಲ್ಲಿ ಸೂಪರ್ ಸ್ಟಾರ್ ಆಗಿದ್ದ ಇಮ್ರಾನ್ ಹಶ್ಮಿ ಈಗ ಹಿಂದಿನಷ್ಟು ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಆದರೆ, ಅವರ ಚಾರ್ಮ್ ಕಡಿಮೆ ಆಗಿಲ್ಲ.

ಬಾಲಿವುಡ್ ಚಿತ್ರರಂಗದಲ್ಲಿ ಮಿಂಚಿ ಗಮನ ಸೆಳೆದವರು ಇಮ್ರಾನ್ ಹಶ್ಮಿ. ಈಗ ಅವರಿಗೆ ಮೊದಲಿನಷ್ಟು ಆಫರ್ ಇಲ್ಲ ನಿಜ, ಆದರೆ, ಒಂದು ಕಾಲದಲ್ಲಿ ಅವರು ಮಿಂಚು ಹರಿಸಿದವರು. ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದರು. ಅವರು ಸೀರಿಯಲ್ ಕಿಸ್ಸರ್ ಎಂದೇ ಫೇಮಸ್ ಆಗಿದ್ದರು. ಬಾಲಿವುಡ್ನಲ್ಲಿ ಅವರ ತೂಕ ಎಷ್ಟು ಹೊಂದಿದ್ದಾರೆ ಎಂಬುದನ್ನು ಆರ್ಯನ್ ಖಾನ್ ಹೇಳಿದ್ದಾರೆ. ಹಾಗಂತ ಅವರು ನೇರವಾಗಿ ಹೇಳಿಕೆ ನೀಡಿಲ್ಲ. ‘ಬ್ಯಾಡ್ಸ್ ಆಫ್ ಬಾಲಿವಡ್’ ಸರಣಿಯಲ್ಲಿ ಈ ಬಗ್ಗೆ ವಿವರಿಸಿದ್ದಾರೆ.
ಕಥಾ ನಾಯಕನ ಗೆಳೆಯನ ಪಾತ್ರದಲ್ಲಿ ಧ್ರುವ್ ಜುರೇಲ್ ನಟಿಸಿದ್ದಾರೆ. ಅವರು ಮಾಡಿದ ಪಾತ್ರದ ಹೆಸರು ಪರ್ವೇಜ್. ಈತ ಪಕ್ಕಾ ಇಮ್ರಾನ್ ಹಶ್ಮಿ ಅಭಿಮಾನಿ. ಸದಾ ಇಮ್ರಾನ್ ಹಶ್ಮಿಯ ಜಪ ಮಾಡುತ್ತಾ ಇರುತ್ತಾನೆ. ಆತ ಕಾರಿನಲ್ಲಿ ಸಾಗುವಾಗ, ‘ರಣವೀರ್ ಸಿಂಗ್ ಕೊಟ್ಟ ವಾಚ್ ಮಾರಿ ಕಾರನ್ನು ಮಾರ್ಪಾಡು ಮಾಡಿದೆ’ ಎಂದು ಹೇಳುತ್ತಾನೆ. ಆದರೆ, ಕಾರಿನಲ್ಲಿ ಇಮ್ರಾನ್ ಹಶ್ಮಿ ಫೋಟೋ ಇರುತ್ತದೆ.
Emraan Hashmi > Whole Bollywood
(Tamalimaaaa plays in the background) pic.twitter.com/WR6MOrJdVC
— Vishal (@vishalandcinema) September 19, 2025
A tribute that Emaran Hashmi deserved for a longest time 🙌🏻
Pura bollywood ek taraf, Emraan Hashmi ek taraf ❤️ pic.twitter.com/mYSyuc8crq
— Vaibhav 🤍 (@ProfessorDhond) September 19, 2025
Raghav Juyal’s Hilarious Tribute to Emraan Hashmi is the Best Thing on the Internet Today#TheBadsOfBollywood #EmraanHashmi #AryanKhan
— The Climax India (@TheClimaxIndia) September 18, 2025
Remember the name EMRAAN HASHMI
For over a decade, Emraan true potential has been left untapped. He may or may not be the face of ₹300 or ₹500 crore blockbusters, but with a right director, solid script, terrific music he has the ability to deliver a film that not only… pic.twitter.com/XCiDGoHj3K
— Rohit Jaiswal (@rohitjswl01) September 19, 2025
ಇದಕ್ಕೆ ಹಿಂದೆ ಕುಳಿತವಳು, ‘ಕಾರನ್ನು ಮಾರ್ಪಾಡು ಮಾಡಲು ರಣವೀರ್ ಸಿಂಗ್ ಹಣ ಬಳಕೆ ಮಾಡಿಕೊಂಡಿದ್ದೀಯಾ. ಆದರೆ, ಕಾರಲ್ಲಿ ಫೋಟೋ ಮಾತ್ರ ಇಮ್ರಾನ್ ಹಶ್ಮಿದಾ’ ಎಂದು ಪ್ರಶ್ನೆ ಮಾಡುತ್ತಾಳೆ. ಆಗ ಪರ್ವೇಜ್ ಹೇಳೋದು ಒಂದೇ ಮಾತು, ‘ಇಡೀ ಬಾಲಿವುಡ್ ಒಂದು ಕಡೆಯಾದರೆ, ಇಮ್ರಾನ್ ಹಶ್ಮಿ ಒಂದು ಕಡೆ’. ಈ ವೆಬ್ ಸರಣಿಯಲ್ಲಿ ಪರ್ವೇಜ್ ನಿಜವಾಗಲೂ ಇಮ್ರಾನ್ ಹಶ್ಮಿಯನ್ನು ಭೇಟಿ ಆಗುವ ಪರಿಸ್ಥಿತಿ ಬರುತ್ತದೆ. ಆಗಲೂ ಈತ ಹೇಳೋದು ಅದನ್ನೇ.
ಇದನ್ನೂ ಓದಿ: ಸಖತ್ ಚಿಲ್ ಆಗಿದೆ ‘ಬ್ಯಾಡ್ಸ್ ಆಫ್ ಬಾಲಿವುಡ್’; ಹೈಲೈಟ್ಸ್ ಏನು?
‘ಬ್ಯಾಡ್ಸ್ ಆಫಿ ಬಾಲಿವುಡ್’ ನಿರ್ದೇಶನ ಮಾಡಿದ್ದು ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್. ಬಾಲಿವುಡ್ನ ಹಲವು ವರ್ಷಗಳಿಂದ ಅವರು ಹತ್ತಿರದಿಂದ ಕಂಡಿದ್ದಾರೆ. ಅವರ ಮನಸ್ಸಿಗೂ ಈ ರೀತಿ ಅನಿಸಿರಬಹುದು ಎಂದು ಅನೇಕರು ಹೇಳಿದ್ದಾರೆ. ಇಮ್ರಾನ್ ಹಶ್ಮಿ ಫ್ಯಾನ್ಸ್ ಈ ದೃಶ್ಯದಿಂದ ಖುಷಿಪಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




