Rashmika Mandanna: ರಶ್ಮಿಕಾ ಮಂದಣ್ಣ ಹಾಟ್​ ಫೋಟೋ ವೈರಲ್​; ಇದನ್ನು ಕ್ಲಿಕ್ಕಿಸಿದ್ದು ವಿಜಯ್​ ದೇವರಕೊಂಡ? ಫ್ಯಾನ್ಸ್​ ಪ್ರಶ್ನೆ

Maldives | Vijay Devarakonda: ರಶ್ಮಿಕಾ ಮಂದಣ್ಣ ಒಂದು ಹೊಸ ಫೋಟೋ ಹಂಚಿಕೊಂಡಿದ್ದಾರೆ. ಕಡಲ ತೀರದಲ್ಲಿ ಕುಳಿತು ಅವರು ಹಾಟ್​ ಆಗಿ ಪೋಸ್​ ನೀಡಿದ್ದಾರೆ.

Rashmika Mandanna: ರಶ್ಮಿಕಾ ಮಂದಣ್ಣ ಹಾಟ್​ ಫೋಟೋ ವೈರಲ್​; ಇದನ್ನು ಕ್ಲಿಕ್ಕಿಸಿದ್ದು ವಿಜಯ್​ ದೇವರಕೊಂಡ? ಫ್ಯಾನ್ಸ್​ ಪ್ರಶ್ನೆ
ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ
Follow us
TV9 Web
| Updated By: ಮದನ್​ ಕುಮಾರ್​

Updated on: Oct 11, 2022 | 9:08 AM

ಖ್ಯಾತ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಏನೇ ಮಾಡಿದರೂ ಸೆನ್ಸೇಷನ್​ ಸೃಷ್ಟಿ ಆಗುತ್ತದೆ. ಅಷ್ಟರಮಟ್ಟಿಗೆ ಅವರು ಫೇಮಸ್​ ಆಗಿದ್ದಾರೆ. ಸದ್ಯ ಅವರು ರಜೆಯ ಮಜಾ ಸವಿಯುತ್ತಿದ್ದಾರೆ. ಇತ್ತ, ‘ಗುಡ್​ಬೈ’ ಸಿನಿಮಾ ರಿಲೀಸ್​ ಆಗುತ್ತಿದ್ದಂತೆಯೇ ಅವರು ವಿದೇಶಕ್ಕೆ ತೆರಳಿದ್ದಾರೆ. ಮಾಲ್ಡೀವ್ಸ್​ನ (Maldives) ಕಡಲ ತೀರದಲ್ಲಿ ಬಿಂದಾಸ್​ ಆಗಿ ಪೋಸ್​ ನೀಡುತ್ತಿದ್ದಾರೆ. ಆ ಎಲ್ಲ ಫೋಟೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅವುಗಳನ್ನು ನೋಡಿ ಫ್ಯಾನ್ಸ್​ ಮೆಚ್ಚುಗೆ ಸೂಚಿಸಿದ್ದಾರೆ. ಜೊತೆಗೆ ಒಂದು ಅನುಮಾನ ಕೂಡ ವ್ಯಕ್ತವಾಗಿದೆ. ರಶ್ಮಿಕಾ ಮಂದಣ್ಣ ಅವರ ಈ ಫೋಟೋಗಳನ್ನು ಕ್ಲಿಕ್ಕಿಸುತ್ತಿರುವುದು ಯಾರು? ವಿಜಯ್​ ದೇವರಕೊಂಡ (Vijay Deverakonda) ಇರಬಹುದು ಎಂದು ಅನೇಕರು ಊಹಿಸಿದ್ದಾರೆ. ಆ ಬಗ್ಗೆ ಹಲವು ಕಮೆಂಟ್ಸ್​ ಬಂದಿವೆ.

ಅಕ್ಟೋಬರ್ 7ರಂದು ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರು ಕೆಲವೇ ನಿಮಿಷಗಳ ಅಂತರದಲ್ಲಿ ಮುಂಬೈ ವಿಮಾನ ನಿಲ್ದಾಣ ಪ್ರವೇಶ ಮಾಡಿದ್ದರು. ಇದು ಪಾಪರಾಜಿಗಳ ಕ್ಯಾಮೆರಾದಲ್ಲಿ ಸೆರೆ ಆಗಿತ್ತು. ಅವರಿಬ್ಬರು ಒಟ್ಟಿಗೆ ಪ್ರಯಾಣ ಮಾಡಿರಬಹುದು ಎಂಬ ಅನುಮಾನಕ್ಕೆ ಈ ಘಟನೆ ಕೂಡ ಪುಷ್ಠಿ ನೀಡುವಂತಿತ್ತು.

ಇದನ್ನೂ ಓದಿ
Image
Rashmika Mandanna: ಎದೆ ಮೇಲೆ ಆಟೋಗ್ರಾಫ್​ ಹಾಕಿ ಅಂತ ಹಠ ಹಿಡಿದ ರಶ್ಮಿಕಾ ಮಂದಣ್ಣ ಅಭಿಮಾನಿ; ಮುಂದೇನಾಯ್ತು?
Image
Rashmika Mandanna: ‘ಇಂದು ನಾನೇ ಗೋಲ್ಡನ್​ ಗರ್ಲ್​’ ಅಂತ ಪೋಸ್​ ನೀಡಿದ ರಶ್ಮಿಕಾ ಮಂದಣ್ಣ; ಆದ್ರೆ ಜನ ಹೇಳಿದ್ದೇನು?
Image
Rashmika Mandanna: ಬಾಲಿವುಡ್​ ಸೇರಿದ ರಶ್ಮಿಕಾ ಮಂದಣ್ಣ ಹೊಸ ಅವತಾರ ಹೇಗಿದೆ ನೋಡಿ; ಫೋಟೋ ವೈರಲ್​
Image
Rashmika Mandanna: ಸೆಲ್ಫಿ ಕೇಳಿದ ಅಭಿಮಾನಿಗಳ ಜತೆ ರಶ್ಮಿಕಾ ಮಂದಣ್ಣ ನಡೆದುಕೊಂಡಿದ್ದು ಹೇಗೆ? ವಿಡಿಯೋ ವೈರಲ್​

ಮಾಲ್ಡೀವ್ಸ್​ನಿಂದ ಹಲವು ಫೋಟೋಗಳನ್ನು ರಶ್ಮಿಕಾ ಶೇರ್​ ಮಾಡುತ್ತಿದ್ದಾರೆ. ಆ ಪೈಕಿ ಒಂದು ಫೋಟೋದಲ್ಲಿ ರಶ್ಮಿಕಾ ಧರಿಸಿರುವ ಕೂಲಿಂಗ್​ ಗ್ಲಾಸ್​ ವಿಜಯ್​ ದೇವರಕೊಂಡ ಅವರದ್ದು ಎಂದು ಹಲವರು ಕಮೆಂಟ್​ ಮಾಡಿದ್ದಾರೆ. ಈಗ ರಶ್ಮಿಕಾ ಒಂದು ಹೊಸ ಫೋಟೋ ಹಂಚಿಕೊಂಡಿದ್ದಾರೆ. ಕಡಲ ತೀರದಲ್ಲಿ ಕುಳಿತು ಅವರು ಹಾಟ್​ ಆಗಿ ಪೋಸ್​ ನೀಡಿದ್ದಾರೆ. ಫೋಟೋ ಕ್ರೆಡಿಟ್​ ವಿಜಯ್​ ದೇವರಕೊಂಡ ಅವರಿಗೆ ಸಲ್ಲಬೇಕೇ ಎಂದು ಕಮೆಂಟ್​ ಬಾಕ್ಸ್​ನಲ್ಲಿ ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ.

ಸದ್ಯಕ್ಕಂತೂ ಜನರ ಕಮೆಂಟ್​ಗಳಿಗೆ ರಶ್ಮಿಕಾ ಮಂದಣ್ಣ ಉತ್ತರ ನೀಡಿಲ್ಲ. ಅಭಿಮಾನಿಗಳ ವಲಯದಲ್ಲಿ ಈ ಫೋಟೋಗಳು ವೈರಲ್​ ಆಗುತ್ತಿವೆ. ವಿಜಯ್​ ದೇವರಕೊಂಡ ಅವರು ತಮ್ಮ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಪ್ರವಾಸದ ಫೋಟೋಗಳನ್ನು ಹಂಚಿಕೊಂಡಿಲ್ಲ. ದೇವರಕೊಂಡ ಮತ್ತು ರಶ್ಮಿಕಾ ನಡುವಿನ ಸ್ನೇಹದ ಬಗ್ಗೆ ಹಲವು ಬಾರಿ ಪ್ರಶ್ನೆ ಎದುರಾಗಿದ್ದುಂಟು. ‘ಗೀತ ಗೋವಿಂದಂ’ ಹಾಗೂ ‘ಡಿಯರ್​ ಕಾಮ್ರೇಡ್​’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ ಬಳಿಕ ಈ ಜೋಡಿಯ ನಡುವೆ ಆಪ್ತತೆ ಹೆಚ್ಚಾಯಿತು. ಅನೇಕ ಬಾರಿ ಅವರಿಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದುಂಟು. ತಾವಿಬ್ಬರು ಬೆಸ್ಟ್​ ಫ್ರೆಂಡ್ಸ್​ ಎಂದಷ್ಟೇ ಹೇಳುವ ಮೂಲಕ ಅವರು ಗಾಸಿಪ್​ಗಳಿಗೆ ತೆರೆ ಎಳೆಯುತ್ತಲೇ ಬರುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ