ಗೊಂದಲ ಮಾಡಿಕೊಂಡು ಬೇರೆ ಸಿನಿಮಾದ ಆರು ಶೋ ಹೌಸ್ಫುಲ್ ಮಾಡಿದ ಪ್ರಭಾಸ್ ಅಭಿಮಾನಿಗಳು
ಸಾಮಾನ್ಯವಾಗಿ ಒಂದೇ ಹೆಸರಿನ ಸಿನಿಮಾಗಳು ರಿಲೀಸ್ ಆದರೆ ಜನರಿಗೆ ಗೊಂದಲ ಉಂಟಾಗುತ್ತದೆ. ಇದಕ್ಕಾಗಿಯೇ ‘ಕಲ್ಕಿ’ ತಂಡದವರು ಈ ರೀತಿ ಮಾಡಿದ್ದಾರೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಇದರಲ್ಲಿ ತಮ್ಮ ಕೈವಾಡ ಇಲ್ಲ ಎಂದು ರಾಜಶೇಖರ್ ಅವರು ಟ್ವೀಟ್ ಮಾಡಿದ್ದಾರೆ.
‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾಗೆ ಟಿಕೆಟ್ ಬುಕಿಂಗ್ ಆರಂಭ ಆಗಿದೆ. ವಿಶ್ವಾದ್ಯಂತ ಸಿನಿಮಾ ಜೂನ್ 27ರಂದು ರಿಲೀಸ್ ಆಗಲಿದೆ. ಹೈದರಾಬಾದ್, ಬೆಂಗಳೂರು, ಚೆನ್ನೈ ಸೇರಿ ಪ್ರಮುಖ ನಗರಗಳಲ್ಲಿ ಅಭಿಮಾನಿಗಳು ಸಂಭ್ರಮಿಸಲು ರೆಡಿ ಆಗಿದ್ದಾರೆ. ಈ ಮಧ್ಯೆ ಪ್ರಭಾಸ್ ಅಭಿಮಾನಿಗಳು ಸಖತ್ ಕನ್ಫ್ಯೂಸ್ ಮಾಡಿಕೊಂಡಿದ್ದಾರೆ. ಅದ್ಯಾವ ಮಟ್ಟಿಗೆ ಎಂದರೆ 2019ರಲ್ಲಿ ರಿಲೀಸ್ ಆದ ‘ಕಲ್ಕಿ’ ಚಿತ್ರಕ್ಕೆ ಟಿಕೆಟ್ ಬುಕ್ ಮಾಡಿದ್ದಾರೆ. ಈ ಸಿನಿಮಾ ರೀ-ರಿಲೀಸ್ ಆಗಿದ್ದು ಆರು ಶೋಗಳು ಹೌಸ್ಫುಲ್ ಆಗಿವೆ.
ತೆಲುಗು ನಟ ರಾಜಶೇಖರ್ ನಟನೆಯ ‘ಕಲ್ಕಿ’ ಸಿನಿಮಾ 2019ರಲ್ಲಿ ರಿಲೀಸ್ ಆಗಿತ್ತು. ಈ ಚಿತ್ರದ ಟಿಕೆಟ್ನ ಫ್ಯಾನ್ಸ್ ಬುಕ್ ಮಾಡಿದ್ದಾರೆ. ಆ ಬಳಿಕ ಅವರಿಗೆ ತಪ್ಪಿನ ಅರಿವಾಗಿದೆ. ‘ಕಲ್ಕಿ 2898 ಎಡಿ’ ಸಿನಿಮಾ ರಿಲೀಸ್ ಆಗುತ್ತಿದ್ದು, ಇದರಿಂದ ಲಾಭ ಮಾಡಿಕೊಳ್ಳಲು ರಾಜಶೇಖರ್ ಸಿನಿಮಾ ತಂಡದವರು ಮುಂದಾದರೇ ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿದೆ. ಪ್ರಭಾಸ್ ಫ್ಯಾನ್ಸ್ ಚಿತ್ರತಂಡವನ್ನು ಶಪಿಸುತ್ತಿದ್ದಾರೆ.
ಸಾಮಾನ್ಯವಾಗಿ ಒಂದೇ ಹೆಸರಿನ ಸಿನಿಮಾಗಳು ರಿಲೀಸ್ ಆದರೆ ಜನರಿಗೆ ಗೊಂದಲ ಉಂಟಾಗುತ್ತದೆ. ಇದಕ್ಕಾಗಿಯೇ ‘ಕಲ್ಕಿ’ ತಂಡದವರು ಈ ರೀತಿ ಮಾಡಿದ್ದಾರೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಇದರಲ್ಲಿ ತಮ್ಮ ಕೈವಾಡ ಇಲ್ಲ ಎಂದು ರಾಜಶೇಖರ್ ಅವರು ಟ್ವೀಟ್ ಮಾಡಿದ್ದಾರೆ. ‘ನನಗೂ ಇದಕ್ಕೂ ಸಂಬಂಧವಿಲ್ಲ’ ಎಂದಿದ್ದಾರೆ ಅವರು. ‘ಪ್ರಭಾಸ್, ನಾಗ್ ಅಶ್ವಿನ್, ಅಶ್ವಿನಿ ದತ್, ವೈಜಯಂತಿ ಫಿಲ್ಮ್ಸ್ಗೆ ನನ್ನ ಶುಭಾಶಯ. ಸಿನಿಮಾ ಇತಿಹಾಸ ಸೃಷ್ಟಿಸಿ’ ಎಂದು ರಾಜಶೇಖರ್ ಟ್ವೀಟ್ ಮಾಡಿದ್ದಾರೆ.
‘ಕಲ್ಕಿ 2898 ಎಡಿ’ ಸಿನಿಮಾಗೆ ಭರ್ಜರಿ ಪ್ರಚಾರ ನೀಡಲಾಗುತ್ತಿದೆ. ಅಮಿತಾಭ್, ದೀಪಿಕಾ ಪಡುಕೋಣೆ, ಪ್ರಭಾಸ್, ಕಮಲ್ ಹಾಸನ್ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಿದ್ದಾರೆ. ದೀಪಿಕಾ ಪ್ರೆಗ್ನೆಂಟ್, ಆದಾಗ್ಯೂ ಅವರು ಪ್ರಚಾರದಲ್ಲಿ ಭಾಗಿ ಆಗುತ್ತಿದ್ದಾರೆ. ನಾಗ್ ಅಶ್ವಿನ್ ಅವರು ‘ಕಲ್ಕಿ 2898 ಎಡಿ’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ದೊಡ್ಡ ಸಿನಿಮಾಗಳನ್ನು ನಿರ್ದೇಶನ ಮಾಡಿದ ಅನುಭವ ಇವರಿಗೆ ಇನ್ನೂ ಇಲ್ಲ.
ಇದನ್ನೂ ಓದಿ:
ಮಹಾಭಾರತದಿಂದ ಆರಂಭ ಆಗೋ ಕಥೆ 6000 ವರ್ಷ ಸಾಗದಲಿದೆ ಎಂದು ಹೇಳಲಾಗುತ್ತಿದೆ. ಈ ಚಿತ್ರದ ಬಗ್ಗೆ ಪ್ರಭಾಸ್ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ‘ಸಲಾರ್’ ಬಳಿಕ ಅವರು ಮತ್ತೊಂದು ಗೆಲುವು ಕಾಣುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.