Happy Birthday Madhuri Dixit: ಮಾಧುರಿ ದೀಕ್ಷಿತ್ ಜತೆಗಿನ 22 ವರ್ಷ ಹಳೆಯ ಫೋಟೋ ಹಂಚಿಕೊಂಡ ಪತಿ ಶ್ರೀರಾಮ್
ಅನಿಲ್ ಕಪೂರ್ ಕೂಡ ಮಾಧುರಿ ದೀಕ್ಷಿತ್ಗೆ ವಿಶ್ ಮಾಡಿದ್ದಾರೆ. ಹ್ಯಾಪ್ಪಿ ಬರ್ತ್ಡೇ ಮಾಧುರಿ ದೀಕ್ಷಿತ್. ನಿಮ್ಮ ಜತೆ ಮತ್ತೆ ಕೆಲಸ ಮಾಡೋಕೆ ನಾನು ಕಾತುರನಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಮಾಧುರಿ ದೀಕ್ಷಿತ್ ಇಂದು 54ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ವಿಶೇಷ ದಿನದಂದು ಮಾಧುರಿ ಡಾ. ಶ್ರೀರಾಮ್ ನೇನೆ ಅವರು ಅಪರೂಪದ ಹಳೆಯ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ನನ್ನ ಸೋಲ್ಮೇಟ್ ಮಾಧುರಿ ದೀಕ್ಷಿತ್ ಹ್ಯಾಪ್ಪಿ ಬರ್ತ್ಡೇ. ಜೊತೆಯಾಗಿ ನಮ್ಮಿಬ್ಬರ ಪಯಣ ಅದ್ಭುತವಾಗಿತ್ತು. ನಿನಗೆ ಹ್ಯಾಪ್ಪಿ ಬರ್ತ್ ಡೇ ಎಂದು ಶ್ರೀರಾಮ್ ಬರೆದುಕೊಂಡಿದ್ದಾರೆ.
ಅನಿಲ್ ಕಪೂರ್ ಕೂಡ ಮಾಧುರಿ ದೀಕ್ಷಿತ್ಗೆ ವಿಶ್ ಮಾಡಿದ್ದಾರೆ. ಹ್ಯಾಪ್ಪಿ ಬರ್ತ್ಡೇ ಮಾಧುರಿ ದೀಕ್ಷಿತ್. ನಿಮ್ಮ ಜತೆ ಮತ್ತೆ ಕೆಲಸ ಮಾಡೋಕೆ ನಾನು ಕಾತುರನಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ. ‘ಏಕ್ ದೋ ತೀನ್..’ ಎಂದು ಕುಣಿದು, ಪಡ್ಡೆಗಳ ನಿದ್ದೆ ಕೆಡಿಸಿದ ಮಾಧುರಿ ದೀಕ್ಷಿತ್ ಅಂದು ಭಾರತೀಯ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಆಗಿದ್ದರು.
Happy Birthday to my soul mate, @MadhuriDixit Life has been an amazing journey for us together and I look forward to the road ahead. Much Love ❤️ and many happy returns of the day! #HappyBirthdayMadhuriDixit #DrNene pic.twitter.com/DTz9q3TjMw
— Dr. Shriram Nene (@DoctorNene) May 15, 2021
1994ರಲ್ಲಿ ಬಂದ ಹಮ್ ಆಪ್ಕೆ ಹೈ ಕೌನ್ ಸಿನಿಮಾದಲ್ಲಿ ಮಾಧುರಿ ದೀಕ್ಷಿತ್ ಮತ್ತು ಸಲ್ಮಾನ್ ಖಾನ್ ಜೋಡಿ ಆಗಿದ್ದರು. ಆ ಚಿತ್ರ ಬರುವ ವೇಳೆಗೆ ಮಾಧುರಿ ಧೀಕ್ಷಿತ್ಗೆ ಸ್ಟಾರ್ ಪಟ್ಟ ಸಿಕ್ಕಿತ್ತು. ಆಗ ಸಲ್ಮಾನ್ ಖಾನ್ ಕೂಡ ಅಪಾರ ಜನಪ್ರಿಯತೆ ಪಡೆದುಕೊಂಡಿದ್ದರು. ಆದರೂ ಹಮ್ ಆಪ್ಕೆ ಹೈ ಕೌನ್ ಸಿನಿಮಾದಲ್ಲಿ ಸಲ್ಮಾನ್ ಖಾನ್ಗಿಂತಲೂ ಹೆಚ್ಚು ಸಂಭಾವನೆಯನ್ನು ಮಾಧುರಿಗೆ ನೀಡಲಾಗಿತ್ತು. ಅದು ಅಂದು ಮಾಧುರಿಗೆ ಇದ್ದ ಬೇಡಿಕೆಗೆ ಸಾಕ್ಷಿ ಒದಗಿಸುವಂತಹ ಸಂಗತಿ. ಇಂದಿಗೂ ಡ್ಯಾನ್ಸ್ ಸಂಬಂಧಿತ ಟಿವಿ ಕಾರ್ಯಕ್ರಮಗಳ ಜಡ್ಜ್ ಆಗಿ ಅವರು ಸಕ್ರಿಯರಾಗಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳು, ಸ್ನೇಹಿತರು ಮತ್ತು ಸೆಲೆಬ್ರಿಟಿಗಳು ಮಾಧುರಿಗೆ ಇಂದು ಜನ್ಮದಿನದ ಶುಭಾಶಯ ಕೋರುತ್ತಿದ್ದಾರೆ.
Happy Birthday, @MadhuriDixit ! As actors I feel all of us are happiest on the sets, especially if you are working with friends…so I’m looking forward to being on set with you again! Wishing you all the health & happiness always!! pic.twitter.com/IE0qe9kRSO
— Anil Kapoor (@AnilKapoor) May 15, 2021
Happy Birthday to the most beautiful @MadhuriDixit mam, Working with you was my absolute dream come true … I wish you happiness, love, best of health and May god fullfill your wish to work with me (again) real soon. ??? Have a great great day. pic.twitter.com/IsvhK0YLl6
— Riteish Deshmukh (@Riteishd) May 15, 2021
ಇದನ್ನೂ ಓದಿ: Happy Birthday Madhuri Dixit: ಮಾಧುರಿ ದೀಕ್ಷಿತ್ ಜನ್ಮದಿನ; ‘ಏಕ್ ದೋ ತೀನ್’ ಸುಂದರಿಗೆ ಈಗ ಎಷ್ಟು ವರ್ಷ?
Published On - 7:38 pm, Sat, 15 May 21