ಚಿರಂಜೀವಿ ಕುಟುಂಬದ ಮಗಳು ನಿಹಾರಿಕಾ ಕೊನಿಡೆಲಾ (Niharika Konidela) ಹಾಗೂ ವೆಂಕಟ್ ಚೈತನ್ಯ ಜೊನ್ನಲಗಡ್ಡ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದಾರೆ. ಕಳೆದ ತಿಂಗಳು ಇಬ್ಬರೂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಪ್ರಕ್ರಿಯೆ ಮುಗಿದಿದ್ದು, ಇವರಿಗೆ ಡಿವೋರ್ಸ್ ಸಿಕ್ಕಿದೆ. ಇದು ಚಿರಂಜೀವಿ (Chiranjeevi) ಕುಟುಂಬದ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಇವರ ವಿಚ್ಛೇದನಕ್ಕೆ ಕಾರಣ ಏನು ಎಂಬ ವಿಚಾರ ಈಗ ರಿವೀಲ್ ಆಗಿದೆ. ಇಬ್ಬರೂ ಹೊಂದಾಣಿಕೆ ಮಾಡಿಕೊಂಡು ಜೀವನ ನಡೆಸಬಹುದಿತ್ತು ಎಂಬ ಮಾತು ಕೇಳಿ ಬಂದಿದೆ.
ನಿಹಾರಿಕಾ ಕೊನಿಡೆಲಾ ಹಾಗೂ ಚೈತನ್ಯ ಜೆವಿ ಪರಸ್ಪರ ಪ್ರೀತಿಸಿ ಮದುವೆ ಆದವರು. ಹಲವು ವರ್ಷಗಳ ಕಾಲ ಪ್ರೀತಿಸುತ್ತಿದ್ದ ಇವರು 2020ರ ಡಿಸೆಂಬರ್ನಲ್ಲಿ ಉದಯಪುರದಲ್ಲಿ ಅದ್ದೂರಿಯಾಗಿ ಮದುವೆ ಆದರು. ಅನೇಕ ಸೆಲೆಬ್ರಿಟಿಗಳು ಈ ಮದುವೆಯಲ್ಲಿ ಭಾಗಿ ಆದರು. ಮದುವೆ ಆಗಿ ಎರಡು ವರ್ಷ ಕಳೆಯುವುದರೊಳಗೆ ಇವರಿಗೆ ಸಂಸಾರ ಸಾಕಾಗಿದೆ. ಇಬ್ಬರೂ ಬೇರೆ ಆಗುವ ನಿರ್ಧಾರ ತೆಗೆದುಕೊಂಡರು.
ಇದಕ್ಕೆ ಕಾರಣ ಏನು ಎಂಬುದು ಅಧಿಕೃತ ಆಗಿಲ್ಲ. ಆದರೆ, ಕೆಲ ತೆಲುಗು ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿವೆ. ಮದುವೆಗೆ ಮೊದಲು ಯಾವ ರೀತಿಯಲ್ಲಿ ಹೊಂದಾಣಿಕೆ ಇತ್ತೋ ಆ ಹೊಂದಾಣಿಕೆ ಮದುವೆ ಬಳಿಕ ಇಲ್ಲದಾಗಿದೆ. ಹಲವು ವ್ಯತ್ಯಾಸಗಳು ಎದುರಾಗಿದ್ದರಿಂದ ಇಬ್ಬರೂ ಬೇರೆ ಆಗುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಚಿರಂಜೀವಿ ತಮ್ಮ ನಾಗ ಬಾಬು ಅವರ ಮಗಳು ನಿಹಾರಿಕಾ. ಅವರ ಮದುವೆಯನ್ನು ಕುಟುಂಬದವರು ಅದ್ದೂರಿಯಾಗಿ ಮಾಡಿಕೊಟ್ಟಿದ್ದರು. ಆದರೆ, ಈಗ ಇಬ್ಬರೂ ಬೇರೆ ಆಗಿದ್ದಾರೆ. ಇದು ಅನೇಕರಿಗೆ ಬೇಸರ ಮೂಡಿಸಿದೆ. ನಿಹಾರಿಕಾ ಅವರು ಟಾಲಿವುಡ್ನಲ್ಲಿ ಗುರುತಿಸಿಕೊಂಡಿದ್ದಾರೆ. ಇವರು ಅನೇಕ ತೆಲುಗು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ.
ಇದನ್ನೂ ಓದಿ: ವಿಚ್ಛೇದನ ಪಡೆದ ನಿಹಾರಿಕಾ ಕೊನಿಡೆಲಾ-ಚೈತನ್ಯ ಜೊನ್ನಲಗಡ್ಡ; ಕಡೆಗೂ ನಿಜವಾಯ್ತು ಅನುಮಾನ
ನಿಹಾರಿಕಾ ಅವರು ನಟನೆಯ ಜೊತೆಗೆ ತಮ್ಮದೇ ನಿರ್ಮಾಣ ಸಂಸ್ಥೆ ಆರಂಭಿಸಿದರು. ವೆಬ್ ಸೀರಿಸ್ ಹಾಗೂ ಸಿನಿಮಾಗಳನ್ನು ಅವರು ನಿರ್ಮಾಣ ಮಾಡಿದರು. ಪಿಂಕ್ ಎಲಿಫೆಂಟ್ ಪಿಕ್ಚರ್ಸ್ ಎಂದು ಈ ಬ್ಯಾನರ್ಗೆ ಅವರು ಹೆಸರಿಟ್ಟಿದ್ದಾರೆ. ಹೈದರಾಬಾದ್ನಲ್ಲಿ ಅವರು ಅದ್ದೂರಿ ಕಚೇರಿ ಕೂಡ ಆರಂಭಿಸಿದ್ದಾರೆ.
ಚೈತನ್ಯ ಜೊತೆಗಿನ ಫೋಟೋ ಡಿಲೀಟ್ ಮಾಡಿದಾಗಲೇ ಅಭಿಮಾನಿಗಳಿಗೆ ಇವರ ವಿಚ್ಛೇದನದ ಬಗ್ಗೆ ಅನುಮಾನ ಶುರುವಾಗಿತ್ತು. ಇಬ್ಬರೂ ಬೇರೆ ಆಗುತ್ತಿರುವುದು ಬಹುತೇಕ ಖಚಿತ ಎಂದು ಹೇಳಲಾಗಿತ್ತು. ಈ ಬಗ್ಗೆ ಈಗ ಅಧಿಕೃತ ಮಾಹಿತಿ ಹೊರಬಿದ್ದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:22 am, Wed, 5 July 23