AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Niharika Konidela: ವಿಚ್ಛೇದನ ಪಡೆದ ನಿಹಾರಿಕಾ ಕೊನಿಡೆಲಾ-ಚೈತನ್ಯ ಜೊನ್ನಲಗಡ್ಡ; ಕಡೆಗೂ ನಿಜವಾಯ್ತು ಅನುಮಾನ

Niharika Konidela Divorce: ನಿಹಾರಿಕಾ ಕೊನಿಡೆಲಾ ಮತ್ತು ಚೈತನ್ಯ ಜೊನ್ನಲಗಡ್ಡ ಡಿವೋರ್ಸ್​ ಪಡೆದಿರುವುದು ಖಚಿತವಾಗಿದೆ. ಅವರು ಈ ನಿರ್ಧಾರಕ್ಕೆ ಬರಲು ಕಾರಣ ಏನು ಎಂಬುದು ಇನ್ನೂ ರಹಸ್ಯವಾಗಿಯೇ ಉಳಿದಿದೆ.

Niharika Konidela: ವಿಚ್ಛೇದನ ಪಡೆದ ನಿಹಾರಿಕಾ ಕೊನಿಡೆಲಾ-ಚೈತನ್ಯ ಜೊನ್ನಲಗಡ್ಡ; ಕಡೆಗೂ ನಿಜವಾಯ್ತು ಅನುಮಾನ
ಚೈತನ್ಯ ಜೊನ್ನಲಗಡ್ಡ, ನಿಹಾರಿಕಾ ಕೊನಿಡೆಲಾ
ಮದನ್​ ಕುಮಾರ್​
|

Updated on:Jul 04, 2023 | 9:11 PM

Share

ಮೆಗಾ ಸ್ಟಾರ್​ ಚಿರಂಜೀವಿ ಸಹೋದರ ನಾಗೇಂದ್ರ ಬಾಬು ಅವರ ಪುತ್ರಿ ನಿಹಾರಿಕಾ ಕೊನಿಡೆಲಾ (Niharika Konidela) ಸಂಸಾರದ ಬಗ್ಗೆ ಆಗಾಗ ಸುದ್ದಿ ಆಗುತ್ತಿತ್ತು. ಅವರ ದಾಂಪತ್ಯದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಅನುಮಾನ ಮೂಡಿತ್ತು. ಆ ಅನುಮಾನ ಈಗ ನಿಜವಾಗಿದೆ. ಇಷ್ಟು ದಿನ ಕೇಳಿಬರುತ್ತಿದ್ದ ಎಲ್ಲ ಅಂತೆಕಂತೆಗಳಿಗೆ ಈಗೊಂದು ಸ್ಪಷ್ಟನೆ ಸಿಕ್ಕಿದೆ. ನಿಹಾರಿಕಾ ಕೊನಿಡೆಲಾ ಅವರು ವಿಚ್ಛೇದನ (Niharika Konidela Divorce) ಪಡೆದಿರುವುದು ಖಚಿತವಾಗಿದೆ. ಪತಿ ಚೈತನ್ಯ ಜೊನ್ನಲಗಡ್ಡ (Chaitanya Jonnalagadda) ಜೊತೆಗಿನ ದಾಂಪತ್ಯ ಜೀವನಕ್ಕೆ ಅವರು ಅಂತ್ಯ ಹಾಡಿದ್ದಾರೆ. ಆ ಮೂಲಕ ಅವರು ಹೊಸ ಜೀವನ ಆರಂಭಿಸುತ್ತಿದ್ದಾರೆ. ನಿಹಾರಿಕಾ ಕೊನಿಡೆಲಾ ಅವರ ಬದುಕಿನಲ್ಲಿ ಈ ರೀತಿ ಆಗಿದ್ದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಅವರ ಮುಂದಿನ ಪಯಣವಾದರೂ ಚೆನ್ನಾಗಿ ಇರಲಿ ಎಂದು ಫ್ಯಾನ್ಸ್​ ಹಾರೈಸುತ್ತಿದ್ದಾರೆ.

2020ರ ಡಿಸೆಂಬರ್​ 9ರಂದು ನಿಹಾರಿಕಾ ಕೊನಿಡೆಲಾ ಮತ್ತು ಚೈತನ್ಯ ಜೊನ್ನಲಗಡ್ಡ ಅವರು ಮದುವೆ ಆಗಿದ್ದರು. ಆದರೆ ನಂತರದ ದಿನಗಳಲ್ಲಿ ಇಬ್ಬರ ನಡುವೆ ವೈಮನಸ್ಸು ಮೂಡಿತು. ಅವರು ಬೇರೆ-ಬೇರೆಯಾಗಿ ವಾಸಿಸಲು ಆರಂಭಿಸಿದರು. ಇಬ್ಬರೂ ಸೋಶಿಯಲ್​ ಮೀಡಿಯಾದಲ್ಲಿ ಪರಸ್ಪರರ ಫೋಟೋಗಳನ್ನು ಡಿಲೀಟ್​ ಮಾಡಿಕೊಂಡರು. ಆಗಲೇ ಎಲ್ಲರಿಗೂ ಅನುಮಾನ ಮೂಡಿತ್ತು. ಹಾಗಿದ್ದರೂ ಕೂಡ ಅವರು ಸಾರ್ವಜನಿಕವಾಗಿ ಈ ಬಗ್ಗೆ ಮಾತನಾಡಿರಲಿಲ್ಲ. ಈಗ ಅವರು ಡಿವೋರ್ಸ್​ ಪಡೆದಿರುವುದು ಖಚಿತವಾಗಿದೆ.

ಇದನ್ನೂ ಓದಿ: Niharika Konidela: ಡಿವೋರ್ಸ್​ ಚಿಂತೆ ಬಿಟ್ಟು ಬಿಂದಾಸ್​ ಆಗಿ ಫೋಟೋಶೂಟ್​ ಮಾಡಿಸಿದ ಚಿರಂಜೀವಿ ಮನೆಮಗಳು ನಿಹಾರಿಕಾ

ಸೆಲೆಬ್ರಿಟಿಗಳ ವಲಯದಲ್ಲಿ ವಿಚ್ಛೇದನ ಎಂಬುದು ಕಾಮನ್​ ಎಂಬಂತಾಗಿದೆ. ಸಮಂತಾ ರುತ್​ ಪ್ರಭು-ನಾಗ ಚೈತನ್ಯ, ಆಮಿರ್​ ಖಾನ್​-ಕಿರಣ್​ ರಾವ್​ ಮುಂತಾದ ಜೋಡಿಗಳು ಡಿವೋರ್ಸ್​ ಪಡೆದಾಗ ಅಭಿಮಾನಿಗಳಿಗೆ ಅಚ್ಚರಿ ಆಗಿತ್ತು. ಈಗ ನಿಹಾರಿಕಾ ಕೊನಿಡೆಲಾ ಮತ್ತು ಚೈತನ್ಯ ಜೊನ್ನಲಗಡ್ಡ ಕೂಡ ವಿಚ್ಛೇದನ ಪಡೆಯುವ ಮೂಲಕ ದಾಂಪತ್ಯ ಜೀವನಕ್ಕೆ ವಿದಾಯ ಹೇಳಿದ್ದಾರೆ. ಇಬ್ಬರು ಈ ನಿರ್ಧಾರಕ್ಕೆ ಬರಲು ಕಾರಣ ಏನು ಎಂಬುದು ಇನ್ನೂ ರಹಸ್ಯವಾಗಿಯೇ ಉಳಿದಿದೆ.

ಇದನ್ನೂ ಓದಿ: ‘ಬೆಡ್​ನಲ್ಲಿ ರೋಷನ್​, ಮನಸ್ಸಲ್ಲಿ ಭಾರ್ಗವ್​’; ವೈರಲ್ ಆಯ್ತು ನಿಹಾರಿಕಾ ಕೊನಿಡೆಲಾ ಡೈಲಾಗ್

ಟಾಲಿವುಡ್​ ಚಿತ್ರರಂಗದಲ್ಲಿ ನಿಹಾರಿಕಾ ಕೊನಿಡೆಲಾ ಅವರು ನಿರ್ಮಾಪಕಿಯಾಗಿ ಮತ್ತು ನಟಿಯಾಗಿ ಗುರುತಿಸಿಕೊಂಡಿದ್ದಾರೆ. ‘ಸೂರ್ಯಕಾಂತಂ’, ‘ಒಕ ಮನಸು’, ‘ಹ್ಯಾಪಿ ವೆಡ್ಡಿಂಗ್​’ ಸೇರಿದಂತೆ ಕೆಲವು ಚಿತ್ರಗಳಲ್ಲಿ ಅವರ ಬಣ್ಣ ಹಚ್ಚಿದ್ದಾರೆ. ಸಿನಿಮಾ ನಿರ್ಮಾಣದಲ್ಲಿ ಆಸಕ್ತಿ ಹೊಂದಿರುವ ಅವರು ‘ಪಿಂಕ್​ ಎಲಿಫೆಂಟ್​ ಪಿಕ್ಚರ್ಸ್​’ ಎಂಬ ನಿರ್ಮಾಣ ಸಂಸ್ಥೆಯನ್ನು 2015ರಲ್ಲಿ ಪ್ರಾರಂಭಿಸಿದರು. ವಿಚ್ಛೇದನದ ಬಳಿಕ ಅವರು ಸಿನಿಮಾ ನಿರ್ಮಾಣ ಮತ್ತು ನಟನೆಯಲ್ಲಿ ಸಕ್ರಿಯರಾಗಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:07 pm, Tue, 4 July 23