ಪವನ್ ಕಲ್ಯಾಣ್ ಮೊದಲ ಪತ್ನಿ ನಂದಿನಿ ಈಗ ಎಲ್ಲಿದ್ದಾರೆ? ಅಬ್ಬಬ್ಬಾ ಅವರ ಆಸ್ತಿ ಇಷ್ಟೊಂದಾ?
1997ರಲ್ಲಿ ವಿಶಾಖಪಟ್ಟಣದಲ್ಲಿ ಪವನ್ ಕಲ್ಯಾಣ್ ಅವರು ನಂದಿನಿ ಎಂಬ ಯುವತಿಯನ್ನು ಮದುವೆ ಆದರು. ಕುಟುಂಬದವರ ಸಮ್ಮುಖದಲ್ಲಿ ಈ ಮದುವೆ ನಡೆಯಿತು. ಆದರೆ, ಮದುವೆ ಬಳಿಕ ಇಬ್ಬರ ಮಧ್ಯೆ ಜಗಳ ನಡೆಯಿತು. ವಿಚ್ಛೇದನ ಪಡೆದರು.
ಪವನ್ ಕಲ್ಯಾಣ್ (Pawan Kalyan) ಅವರು ಚಿತ್ರರಂಗ ಹಾಗೂ ರಾಜಕೀಯ ಎರಡರಲ್ಲೂ ಬ್ಯುಸಿ ಇದ್ದಾರೆ. ಅವರು ಹೊಸಹೊಸ ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ. ಪವನ್ ಕಲ್ಯಾಣ್ ಕೇವಲ ಸಿನಿಮಾ ವಿಚಾರಕ್ಕೆ ಮಾತ್ರವಲ್ಲದೆ ವೈಯಕ್ತಿಕ ವಿಚಾರದಿಂದಲೂ ಚರ್ಚೆ ಆಗಿದ್ದಾರೆ. ಅವರು ಖಾಸಗಿ ಬದುಕಿನಲ್ಲಿ ಹಲವು ವಿವಾದ ಮಾಡಿಕೊಂಡಿದ್ದಾರೆ. ಅವರು ಮೂರು ಮದುವೆ ಆಗಿದ್ದಾರೆ. ಮೊದಲ ಪತ್ನಿ ನಂದಿನಿ (Nandini) ಅವರ ಜೊತೆ 10 ವರ್ಷ ಸಂಸಾರ ಮಾಡಿದ್ದರು. ನಂತರ ಡಿವೋರ್ಸ್ ಪಡೆದರು. ಈಗ ನಂದಿನಿ ಎಲ್ಲಿದ್ದಾರೆ? ಅವರ ಆಸ್ತಿ ಎಷ್ಟು? ಆ ಬಗ್ಗೆ ಇಲ್ಲಿದೆ ವಿವರ.
ಹಲವು ರಾಜಕೀಯ ನಾಯಕರು ಪವನ್ ಕಲ್ಯಾಣ್ ಅವರನ್ನು ಮದುವೆ ವಿಚಾರದಲ್ಲಿ ಟೀಕಿಸಿದ್ದಾರೆ. ‘ಪವನ್ ಮೂರು ಮದುವೆ ಆದವರು’ ಎಂದು ಟೀಕಿಸಿದ್ದಾರೆ. ಎರಡನೇ ಪತ್ನಿ ರೇಣು ದೇಸಾಯಿ ಹಾಗೂ ಮೂರನೇ ಪತ್ನಿ ಅನ್ನಾ ಬಗ್ಗೆ ಅನೇಕರಿಗೆ ತಿಳಿದಿದೆ. ಆದರೆ, ಮೊದಲ ಪತ್ನಿ ನಂದಿನಿ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಅವರು ಈಗ ಏನು ಮಾಡುತ್ತಿದ್ದಾರೆ ಅನ್ನೋದು ಕೂಡ ಗೊತ್ತಿಲ್ಲ.
1997ರಲ್ಲಿ ವಿಶಾಖಪಟ್ಟಣದಲ್ಲಿ ಪವನ್ ಕಲ್ಯಾಣ್ ಅವರು ನಂದಿನಿ ಎಂಬ ಯುವತಿಯನ್ನು ಮದುವೆ ಆದರು. ಕುಟುಂಬದವರ ಸಮ್ಮುಖದಲ್ಲಿ ಈ ಮದುವೆ ನಡೆಯಿತು. ಆದರೆ, ಮದುವೆ ಬಳಿಕ ಇಬ್ಬರ ಮಧ್ಯೆ ಜಗಳ ನಡೆಯಿತು. 2007ರಲ್ಲಿ ಇಬ್ಬರೂ ವಿಚ್ಛೇದನ ಪಡೆದರು. 2008ರಲ್ಲಿ ರೇಣು ದೇಸಾಯಿ ಅವರನ್ನು ಪವನ್ ಕಲ್ಯಾಣ್ ಮದುವೆ ಆದರು. ನಂತರ ರೇಣು ದೇಸಾಯಿ ಅವರಿಂದ ವಿಚ್ಛೇದನ ಪಡೆದು ಮತ್ತೊಂದು ಮದುವೆ ಆದರು. ಅವರು ಅನ್ನಾ ಜೊತೆ ಕಳೆದ 10 ವರ್ಷಗಳಿಂದ ಸಂಸಾರ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಕುಮಾರಸ್ವಾಮಿಯಂತೆ ನಾನೂ ಸಿಎಂ ಆಗಬಹುದು ಆದರೆ…: ಪವನ್ ಕಲ್ಯಾಣ್
ನಂದಿನಿ ಅವರು ವಿಚ್ಛೇದನ ಪಡೆದ ಬಳಿಕ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ ಎನ್ನಲಾಗಿದೆ. ಅವರು ಡಾಕ್ಟರ್ ಕೃಷ್ಣ ರೆಡ್ಡಿ ಅವರನ್ನು 2010ರಲ್ಲಿ ಮದುವೆ ಆದರು. ಈ ದಂಪತಿ ಸದ್ಯ ಅಮೆರಿಕದಲ್ಲಿ ಸೆಟ್ಲ್ ಆಗಿದ್ದಾರೆ. ಇವರ ಆಸ್ತಿ ಮೌಲ್ಯ 200 ಕೋಟಿ ರೂಪಾಯಿಗೂ ಮೀರಿದೆ ಎನ್ನಲಾಗಿದೆ. ಸದ್ಯ ಅವರು ಅಮೆರಿಕದಲ್ಲಿ ಹಾಯಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದಾರೆ ಎಂದು ವರದಿ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ