ಕುಮಾರಸ್ವಾಮಿಯಂತೆ ನಾನೂ ಸಿಎಂ ಆಗಬಹುದು ಆದರೆ…: ಪವನ್ ಕಲ್ಯಾಣ್

HD Kumaraswamy: ನಟ ಪವನ್ ಕಲ್ಯಾಣ್ ಸಿಎಂ ಆಗುವ ಸಂಭವನೀಯತೆ ಬಗ್ಗೆ ಮಾತನಾಡಿದ್ದು ಕರ್ನಾಟಕ ಮಾಜಿ ಸಿಎಂ ಕುಮಾರಸ್ವಾಮಿ ಹೆಸರು ಉಲ್ಲೇಖಿಸಿದ್ದಾರೆ.

ಕುಮಾರಸ್ವಾಮಿಯಂತೆ ನಾನೂ ಸಿಎಂ ಆಗಬಹುದು ಆದರೆ...: ಪವನ್ ಕಲ್ಯಾಣ್
ಕುಮಾರಸ್ವಾಮಿ-ಪವನ್ ಕಲ್ಯಾಣ್
Follow us
ಮಂಜುನಾಥ ಸಿ.
|

Updated on: May 12, 2023 | 5:11 PM

ಸಿನಿಮಾ (Movie) ಹಾಗೂ ರಾಜಕೀಯ (Politics) ಎರಡನ್ನೂ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ ನಟ ಪವನ್ ಕಲ್ಯಾಣ್ (Pawan Kalyan). ಇದೀಗ ಆಂಧ್ರ ಪ್ರದೇಶದಲ್ಲಿ ಚುನಾವಣೆ ಹತ್ತಿರವಾಗುತ್ತಿದ್ದು, ಚುನಾವಣೆ ಎದುರಿಸಲು ಭರ್ಜರಿಯಾಗಿ ಪವನ್ ಕಲ್ಯಾಣ್ ಸಜ್ಜಾಗುತ್ತಿದ್ದಾರೆ. ಈಗಾಗಲೇ ಚುನಾವಣಾ ಪ್ರಚಾರ ವಾಹನವನ್ನು ಖರೀದಿಸಿ ಬೇಕಾದ ಮಾರ್ಪಾಡುಗಳನ್ನು ಮಾಡಿಕೊಂಡಿದ್ದು, ಪ್ರಚಾರ ಕಣಕ್ಕೆ ಧುಮುಕಲು ಪವನ್ ಸಜ್ಜಾಗಿದ್ದು ನಿನ್ನೆಯಷ್ಟೆ (ಮೇ 11) ತಮ್ಮ ಜನಸೇನಾ ಪಕ್ಷದ ಕಚೇರಿ ಸಭೆಯೊಂದರಲ್ಲಿ ತಾನು ಸಿಎಂ ಆಗಬೇಕೆಂದರೆ ಏನು ಮಾಡಬೇಕು ಎಂಬ ಬಗ್ಗೆ ಮಾತನಾಡಿದ್ದಾರೆ. ಈ ಸಭೆಯಲ್ಲಿ ಕರ್ನಾಟಕ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಅವರ ಹೆಸರನ್ನು ಉಲ್ಲೇಖಿಸಿದ್ದಾರೆ.

ತೆಲುಗು ದೇಶಂ ಪಾರ್ಟಿ, ಬಿಜೆಪಿ ಬೆಂಬಲವನ್ನು ಕೇಳುವುದಾಗಿ ನಟ ಪವನ್ ಕಲ್ಯಾಣ್ ಹೇಳಿರುವ ಹಿನ್ನೆಲೆಯಲ್ಲಿ ಪತ್ರಕರ್ತರು ಎತ್ತಿದ ಪ್ರಶ್ನೆಗಳಿಗೆ ಉತ್ತರಿಸುತ್ತಾ, ”ನಾನು, ನನ್ನನ್ನು ಸಿಎಂ ಮಾಡಿ ಎಂದು ಕೇಳುವ ಸ್ಥಿತಿಯಲ್ಲಿಲ್ಲ. ಕಳೆದ ಬಾರಿ ಕನಿಷ್ಠ 40 ಸೀಟನ್ನಾದರೂ ಗೆದ್ದಿದ್ದರೆ ಸಿಎಂ ಮಾಡಿ ಎಂದು ಕೇಳಬಹುದಿತ್ತು ಅಥವಾ ಕರ್ನಾಟಕದ ಕುಮಾರಸ್ವಾಮಿ ಅವರಂತೆ ಸಿಎಂ ಆಗಬಹುದಿತ್ತು. ಆದರೆ ಪರಿಸ್ಥಿತಿ ಹಾಗಿಲ್ಲ. ನನ್ನನ್ನು ಸಿಎಂ ಮಾಡಿ ಎಂದು ತೆಲುಗು ದೇಶಂ ಪಾರ್ಟಿಯನ್ನಾಗಲಿ, ಬಿಜೆಪಿ ಪಾರ್ಟಿಯನ್ನಾಗಲಿ ನಾನು ಕೇಳುವುದಿಲ್ಲ” ಎಂದಿದ್ದಾರೆ.

ನಾನು ಮೊದಲು ನನ್ನ ಶಕ್ತಿ ಪ್ರದರ್ಶನ ಮಾಡುತ್ತೇನೆ ಆ ಬಳಿಕವಷ್ಟೆ ನಾನು ಬೇಡಿಕೆಗಳನ್ನು ಇಡುತ್ತೇನೆ. ಈಗ ನಮಗೆ ಬೇಕಿರುವುದು ಭ್ರಷ್ಟ, ದುರಹಂಕಾರಿ ಜಗನ್ ಸರ್ಕಾರವನ್ನು ಹೋಗಲಾಡಿಸುವುದು ಅದಕ್ಕೆ ಏನೋ ಬೇಕೊ ಅದನ್ನು ಮಾಡುತ್ತೇನೆ. ಅದಕ್ಕಾಗಿ ನಾನು ತೆಲುಗು ದೇಶಂ ಬೆಂಬಲವನ್ನೂ ಕೇಳುತ್ತೇನೆ ಬಿಜೆಪಿ ಬೆಂಬಲವನ್ನೂ ಕೇಳುತ್ತೇನೆ ಎಂದಿದ್ದಾರೆ ನಟ ಪವನ್ ಕಲ್ಯಾಣ್.

ಪವನ್ ಕಲ್ಯಾಣ್ 2019 ಆಂಧ್ರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ತಮ್ಮ ಪಕ್ಷದ ಅಭ್ಯರ್ಥಿಗಳನ್ನು 144 ಕ್ಷೇತ್ರಗಳಲ್ಲಿ ಕಣಕ್ಕೆ ಇಳಿಸಿದ್ದರು. ಸ್ವತಃ ಪವನ್ ಕಲ್ಯಾಣ್ ಎರಡು ಕ್ಷೇತ್ರಗಳಿಂದ ಚುನಾವಣೆಗೆ ಸ್ಪರ್ಧಿಸಿದ್ದರು ಆದರೆ ಎರಡರಲ್ಲಿಯೂ ಸೋತಿದ್ದರು. ಜನಸೇನಾ ಪಕ್ಷದ ಕೇವಲ ಒಬ್ಬ ಅಭ್ಯರ್ಥಿ ಮಾತ್ರವೇ ಆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು.

ಇದೀಗ ಬಿಜೆಪಿ ಹಾಗೂ ಟಿಡಿಪಿ ಎರಡೂ ಪಕ್ಷಗಳೊಟ್ಟಿಗೆ ಸಖ್ಯದಲ್ಲಿರುವ ಪವನ್ ಕಲ್ಯಾಣ್ ಚುನಾವಣೆ ಹತ್ತಿರದಲ್ಲಿರುವಾಗ ಯಾವ ಪಕ್ಷದ ಸಹಾಯದೊಟ್ಟಿಗೆ ಚುನಾವಣೆಗೆ ಧುಮುಕುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಏಕೆಂದರೆ ಬಿಜೆಪಿ ಹಾಗೂ ಟಿಡಿಪಿ ಪಕ್ಷಗಳು ಪರಸ್ಪರ ವಿರೋಧಿ ಪಕ್ಷಗಳಾಗಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಲಬುರಗಿಯ ಶೇಖ್ ದರ್ಗಾದಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ
ಕಲಬುರಗಿಯ ಶೇಖ್ ದರ್ಗಾದಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ
Video: ಕಾಶಿ ವಿಶ್ವನಾಥನಿಗೆ ಪ್ರಾರ್ಥನೆ ಸಲ್ಲಿಸಿದ ಲಾರೆನ್ ಪೊವೆಲ್
Video: ಕಾಶಿ ವಿಶ್ವನಾಥನಿಗೆ ಪ್ರಾರ್ಥನೆ ಸಲ್ಲಿಸಿದ ಲಾರೆನ್ ಪೊವೆಲ್
ಜಿಗಿದು, ಹಾರಿ ಅದ್ಭುತ ಕ್ಯಾಚ್ ಹಿಡಿದ ಡೆವಾಲ್ಡ್ ಬ್ರೆವಿಸ್
ಜಿಗಿದು, ಹಾರಿ ಅದ್ಭುತ ಕ್ಯಾಚ್ ಹಿಡಿದ ಡೆವಾಲ್ಡ್ ಬ್ರೆವಿಸ್
Champions Trophy 2025: ಚಾಂಪಿಯನ್ಸ್ ಟ್ರೋಫಿಗೆ ನ್ಯೂಝಿಲೆಂಡ್ ತಂಡ ಪ್ರಕಟ
Champions Trophy 2025: ಚಾಂಪಿಯನ್ಸ್ ಟ್ರೋಫಿಗೆ ನ್ಯೂಝಿಲೆಂಡ್ ತಂಡ ಪ್ರಕಟ
ಮನೆ ಮಂದಿಗೆ ಶಾಕ್ ಕೊಟ್ಟ ಕಿಚ್ಚ ಸುದೀಪ್, ಬಚ್ಚಿಟ್ಟುಕೊಂಡ ಹನುಮಂತ
ಮನೆ ಮಂದಿಗೆ ಶಾಕ್ ಕೊಟ್ಟ ಕಿಚ್ಚ ಸುದೀಪ್, ಬಚ್ಚಿಟ್ಟುಕೊಂಡ ಹನುಮಂತ
ಜನವರಿ 13 ರಿಂದ 19ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 13 ರಿಂದ 19ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ದೃಷ್ಟಿ ಗಣಪತಿ ಕುರಿತಾಗಿ ಶಾಸ್ತ್ರಗಳಲ್ಲಿ ಉಲ್ಲೇಖವಿದೆಯೇ? ಇಲ್ಲಿದೆ ಉತ್ತರ
ದೃಷ್ಟಿ ಗಣಪತಿ ಕುರಿತಾಗಿ ಶಾಸ್ತ್ರಗಳಲ್ಲಿ ಉಲ್ಲೇಖವಿದೆಯೇ? ಇಲ್ಲಿದೆ ಉತ್ತರ
Daily Horoscope: ರವಿವಾರದಂದು ಗ್ರಹಗಳ ಸಂಚಾರ, ರಾಶಿ ಭವಿಷ್ಯ ತಿಳಿಯಿರಿ
Daily Horoscope: ರವಿವಾರದಂದು ಗ್ರಹಗಳ ಸಂಚಾರ, ರಾಶಿ ಭವಿಷ್ಯ ತಿಳಿಯಿರಿ
ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ