- Kannada News Photo gallery Adipurush actor Kriti Sanon cried on the very first day of her modelling photoshoot
Kriti Sanon: ಮೊದಲ ಬಾರಿ ಫೋಟೋಶೂಟ್ ಮಾಡಿಸಿದಾಗ ಅಳುತ್ತಾ ಮನೆಗೆ ಬಂದಿದ್ದ ಕೃತಿ ಸನೋನ್; ಕಾರಣ ಏನು?
Kriti Sanon Photoshoot: ಚಿತ್ರರಂಗದಲ್ಲಿ ಕೃತಿ ಸನೋನ್ ಅವರಿಗೆ ಸಖತ್ ಬೇಡಿಕೆ ಇದೆ. ಸಿನಿಮಾದಲ್ಲಿ ನಟಿ ಆಗುವುದಕ್ಕೂ ಮುನ್ನ ಅವರು ಮಾಡೆಲಿಂಗ್ನಲ್ಲಿ ಸಕ್ರಿಯಾಗಿದ್ದರು.
Updated on: May 12, 2023 | 3:27 PM

ನಟಿ ಕೃತಿ ಸನೋನ್ ಅವರು ‘ಆದಿಪುರುಷ್’ ಸಿನಿಮಾದಲ್ಲಿ ನಟಿಸಿದ್ದಾರೆ. ಜೂನ್ 16ರಂದು ಈ ಚಿತ್ರ ಬಿಡುಗಡೆ ಆಗಲಿದ್ದು, ಆ ಪ್ರಯುಕ್ತ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ಅವರು ಹಳೇ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ.

ನಟಿ ಆಗುವುದಕ್ಕೂ ಮುನ್ನ ಕೃತಿ ಸನೋನ್ ಅವರು ಮಾಡೆಲ್ ಆಗಿದ್ದರು. ಮಾಡೆಲಿಂಗ್ ಆರಂಭಿಸಿದಾಗ ಮೊದಲು ಬಾರಿ ಫೋಟೋಶೂಟ್ ಮಾಡಿಸಿದ ದಿನ ಅವರು ಕಣ್ಣೀರು ಹಾಕಿದ್ದರು. ಅಳುತ್ತಾ ಅವರು ಮನೆಗೆ ಬಂದಿದ್ದರು.

ಅಷ್ಟಕ್ಕೂ ಅಂದು ಅಳುವಂಥದ್ದು ಏನಾಗಿತ್ತು? ಈ ಪ್ರಶ್ನೆಗೆ ಕೃತಿ ಸನೋನ್ ಉತ್ತರ ನೀಡಿದ್ದಾರೆ. ಎಲ್ಲ ಕೆಲಸವನ್ನೂ ಪರ್ಫೆಕ್ಟ್ ಆಗಿ ಮಾಡಬೇಕು ಎಂಬುದು ಕೃತಿ ಸನೋನ್ ಅವರ ಉದ್ದೇಶ ಆಗಿತ್ತು. ಆದರೆ ಆ ದಿನ ಫೋಟೋಶೂಟ್ ತಾವು ಅಂದುಕೊಂಡ ರೀತಿ ಬರಲಿಲ್ಲ ಎಂಬ ಕಾರಣಕ್ಕೆ ಕೃತಿಗೆ ಬೇಸರ ಆಗಿತ್ತು.

ಫೋಟೋಶೂಟ್ ಚೆನ್ನಾಗಿ ಆಗಲಿಲ್ಲ ಎಂಬ ಕಾರಣಕ್ಕೆ ಕೃತಿ ಸನೋನ್ ಅವರು ಕಣ್ಣೀರು ಹಾಕುತ್ತ ಮನೆಗೆ ಬಂದಿದ್ದರು. ನಂತರ ಅವರು ತಮ್ಮ ತಪ್ಪುಗಳಿಂದಲೇ ಪಾಠ ಕಲಿತರು. ಚಿತ್ರರಂಗಕ್ಕೆ ಕಾಲಿಟ್ಟು ಯಶಸ್ವಿ ನಟಿಯಾಗಿ ಗುರುತಿಸಿಕೊಂಡರು.

‘ಆದಿಪುರುಷ್’ ಸಿನಿಮಾದಲ್ಲಿ ಪ್ರಭಾಸ್ ಅವರು ರಾಮನಾಗಿ ನಟಿಸಿದ್ದಾರೆ. ಓಂ ರಾವತ್ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಿಂದ ಕೃತಿ ಸನೋನ್ ಅವರಿಗೆ ದೊಡ್ಡ ಗೆಲುವು ಸಿಗಲಿ ಎಂದು ಫ್ಯಾನ್ಸ್ ಹಾರೈಸುತ್ತಿದ್ದಾರೆ.



















