Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೊಮ್ಮೆ ಪೊಲೀಸ್ ಅವತಾರದಲ್ಲಿ ಪವನ್ ಕಲ್ಯಾಣ್: ಗಬ್ಬರ್ ಸಿಂಗ್ ನೆನಪಿಸಿದ ಭಗತ್ ಸಿಂಗ್

Pawan Kalyan: ಪವನ್ ಕಲ್ಯಾಣ್ ನಟನೆಯ ಹೊಸ ಸಿನಿಮಾ ಉಸ್ತಾದ್ ಭಗತ್ ಸಿಂಗ್ ಫಸ್ಟ್ ಲುಕ್ ಟೀಸರ್ ಬಿಡುಗಡೆ ಆಗಿದೆ. ಗಬ್ಬರ್ ಸಿಂಗ್ ಸಿನಿಮಾದ ಪಾತ್ರವನ್ನೇ ಉಸ್ತಾದ್ ಭಗತ್ ಸಿಂಗ್ ಪಾತ್ರ ಹೋಲುತ್ತಿದೆ.

ಮತ್ತೊಮ್ಮೆ ಪೊಲೀಸ್ ಅವತಾರದಲ್ಲಿ ಪವನ್ ಕಲ್ಯಾಣ್: ಗಬ್ಬರ್ ಸಿಂಗ್ ನೆನಪಿಸಿದ ಭಗತ್ ಸಿಂಗ್
ಉಸ್ತಾದ್ ಭಗತ್ ಸಿಂಗ್
Follow us
ಮಂಜುನಾಥ ಸಿ.
|

Updated on:May 11, 2023 | 7:40 PM

ರಾಜಕೀಯಕ್ಕಾಗಿ ಸಿನಿಮಾಗಳಿಂದ ಮೂರು ವರ್ಷಗಳ ಕಾಲ ದೂರ ಉಳಿದಿದ್ದ ನಟ ಪವನ್ ಕಲ್ಯಾಣ್ (Pawan Kalyan) 2021 ರ ಬಳಿಕ ಮತ್ತೆ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ. ರಾಜಕೀಯ ಹಾಗೂ ಸಿನಿಮಾ ಎರಡನ್ನೂ ತೂಗಿಸಿಕೊಂಡು ಹೋಗುವ ಪ್ರಯತ್ನದಲ್ಲಿದ್ದಾರೆ. ಕಳೆದ ಚುನಾವಣೆಯಲ್ಲಿ ಹಿನ್ನಡೆಯನ್ನು ಅನುಭವಿಸಿದ್ದರೂ ಸಹ ಈಗ ಮತ್ತೊಮ್ಮೆ ಚುನಾವಣೆಗೆ ಸಜ್ಜಾಗುತ್ತಿದ್ದಾರೆ. ರಾಜಕೀಯದಲ್ಲಿ ಇನ್ನೂ ಹಿನ್ನಡೆಯಲ್ಲಿಯೇ ಪವನ್ ಕಲ್ಯಾಣ್ ಇದ್ದಾರಾದರೂ ಸಿನಿಮಾಗಳಲ್ಲಿ ಅವರದ್ದು ಆನೆ ನಡೆದಿದ್ದೇ ದಾರಿ. ಮೊದಲ ದಿನವೇ ದೊಡ್ಡ ಕಲೆಕ್ಷನ್ ಮಾಡಿಕೊಡುವ ಕೆಲವೇ ಸ್ಟಾರ್ ನಟರಲ್ಲಿ ಪವನ್ ಕಲ್ಯಾಣ್ ಸಹ ಒಬ್ಬರು. ಇದೀಗ ಪವನ್ ಕಲ್ಯಾಣ್ ನಟನೆಯ ಹೊಸ ಸಿನಿಮಾದ ಟೀಸರ್ (Teaser) ಬಿಡುಗಡೆ ಆಗಿದೆ.

ಪವನ್ ಕಲ್ಯಾಣ್ ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾದ ಫಸ್ಟ್ ಲುಕ್ ಟೀಸರ್ ಇಂದು (ಮೇ 11) ಬಿಡುಗಡೆ ಆಗಿದ್ದು, ಟೀಸರ್​ ನಲ್ಲಿ ಪವನ್ ಕಲ್ಯಾಣ್​ರ ಪಾತ್ರ ನೋಡಿದ ಹಲವರಿಗೆ ಅವರ ಸೂಪರ್ ಹಿಟ್ ಸಿನಿಮಾ ಗಬ್ಬರ್ ಸಿಂಗ್ ನೆನಪಾಗಿದೆ. ಗಬ್ಬರ್ ಸಿಂಗ್ ಸಿನಿಮಾದಲ್ಲಿದ್ದಂತೆಯೇ ಖಡಕ್ ಆದರೆ ಲೋಕಲ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಭಗತ್ ಸಿಂಗ್ ಸಿನಿಮಾದಲ್ಲಿಯೂ ಕಾಣಿಸಿಕೊಂಡಿದ್ದಾರೆ ಪವನ್ ಕಲ್ಯಾಣ್.

ಮಹಾಂಕಾಳಿ ಪೊಲೀಸ್ ಸ್ಟೇಷನ್, ಪತ್ತರ್ ಗಂಜ್, ಪಾತಬಸ್ತಿಯ ಪೊಲೀಸ್ ಇನ್​ಸ್ಪೆಕ್ಟರ್ ಆಗಿ ಪವನ್ ಕಲ್ಯಾಣ್ ಭಗತ್ ಸಿಂಗ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಪವನ್ ಕಲ್ಯಾಣ್​ರ ಹಲವು ಲುಕ್​ಗಳನ್ನು ಉಸ್ತಾದ್ ಭಗತ್ ಸಿಂಗ್ ಟೀಸರ್​ನಲ್ಲಿ ತೋರಿಸಲಾಗಿದೆ. ಲುಂಗಿ ತೊಟ್ಟು ಸ್ವತಃ ರೌಡಿಯಂತೆ ಕಾಣುತ್ತಿದ್ದಾರೆ ಪವನ್ ಕಲ್ಯಾಣ್. ಹುಡುಕುತನದ, ರೌಡಿ ವರ್ತನೆಯ ಜೊತೆಗೆ ಅಪಾರ ಸಿಟ್ಟು ಹೊಂದಿದ ಪೊಲೀಸ್ ಅಧಿಕಾರಿಯಾಗಿ ಪವನ್ ಕಲ್ಯಾಣ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಮಾತ್ರವಲ್ಲ ಗಬ್ಬರ್ ಸಿಂಗ್ ಸಿನಿಮಾದ ಐಕಾನಿಸ್ ಸೀನ್ ಆಗಿದ್ದ ಅಂತ್ಯಾಕ್ಷರಿ ಸೀನ್, ಈ ಸಿನಿಮಾದಲ್ಲಿಯೂ ಇರುವ ಸುಳಿವು ನೀಡುವ ಸೀನ್ ಒಂದು ಸಹ ಟೀಸರ್​ನಲ್ಲಿದೆ.

ಈ ಹಿಂದೆ ಗಬ್ಬರ್ ಸಿಂಗ್ ಸಿನಿಮಾ ನಿರ್ದೇಶಕ ಮಾಡಿದ್ದ ಹರೀಶ್ ಶಂಕರ್ ಅವರೇ ಈಗ ಉಸ್ತಾದ್ ಭಗತ್ ಸಿಂಗ್ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾ ನಿರ್ಮಾಣ ಮಾಡುತ್ತಿರುವುದು ತೆಲುಗಿನ ಭಾರಿ ಬಜೆಟ್ ಸಿನಿಮಾ ನಿರ್ಮಾಣ ಸಂಸ್ಥೆಯಾದ ಮೈತ್ರಿ ಮೂವಿ ಮೇಕರ್ಸ್. ಸಿನಿಮಾಕ್ಕೆ ಪೂಜಾ ಹೆಗ್ಡೆ ನಾಯಕಿ. ಕನ್ನಡತಿ ಶ್ರೀಲೀಲಾ ಸಹ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಹಿಂದಿಯ ಪಂಕಜ್ ತ್ರಿಪಾಠಿ, ಆಶುತೋಶ್ ರಾಣಾ, ನವಾಬ್ ಶಾ ಸಹ ಇದ್ದಾರೆ. ಸಿನಿಮಾ ಇನ್ನೂ ಚಿತ್ರೀಕರಣ ಹಂತದಲ್ಲಿದ್ದು ಸಿನಿಮಾವು ಮುಂದಿನ ವರ್ಷ ಅಥವಾ ಈ ವರ್ಷಾಂತ್ಯಕ್ಕೆ ಬಿಡುಗಡೆ ಆಗಲಿದೆ.

ಇದನ್ನೂ ಓದಿ: ಬೆಂಗಳೂರಿನ ಈ ಚೆಲುವೆ ಪವನ್ ಕಲ್ಯಾಣ್​ ಹೊಸ ಸಿನಿಮಾಕ್ಕೆ ನಾಯಕಿ

ಪವನ್ ಕಲ್ಯಾಣ್ ಈ ವರ್ಷ ಒಂದರ ಹಿಂದೊಂದು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಹರಿ ಹರ ವೀರ ಮಲ್ಲು ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಸಾಯಿ ಧರಮ್ ತೇಜ್ ಜೊತೆಗೆ ಒಂದು ಸಿನಿಮಾದಲ್ಲಿ ನಟಿಸುತ್ತಿದ್ದು ಆ ಸಿನಿಮಾದ ಚಿತ್ರೀಕರಣ ಇನ್ನಷ್ಟೆ ಪ್ರಾರಂಭವಾಗಬೇಕಿದೆ. ಇದರ ಜೊತೆಗೆ ಓಜಿ ಹೆಸರಿನ ಮತ್ತೊಂದು ಸಿನಿಮಾ ಸಹ ಒಪ್ಪಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:40 pm, Thu, 11 May 23

ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಉಗ್ರರ ದಾಳಿಗೆ ಬಲಿಯಾದ ಲೆ. ವಿನಯ್ ನರ್ವಾಲ್​ಗೆ ಪತ್ನಿಯಿಂದ ಭಾವುಕ ವಿದಾಯ
ಉಗ್ರರ ದಾಳಿಗೆ ಬಲಿಯಾದ ಲೆ. ವಿನಯ್ ನರ್ವಾಲ್​ಗೆ ಪತ್ನಿಯಿಂದ ಭಾವುಕ ವಿದಾಯ
ಈಗ ಮತಾಂತರ ಮಾಡಲಾಗಲ್ಲ, ಹಾಗಾಗೇ ಮುಸ್ಲಿಮೇತರರನ್ನು ಕೊಲ್ಲೋದು: ರವಿ
ಈಗ ಮತಾಂತರ ಮಾಡಲಾಗಲ್ಲ, ಹಾಗಾಗೇ ಮುಸ್ಲಿಮೇತರರನ್ನು ಕೊಲ್ಲೋದು: ರವಿ