AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಟ್ ಆಯ್ತಾ ‘ಹಿಟ್ 3’, ಎರಡು ದಿನಕ್ಕೆ ಸಿನಿಮಾ ಗಳಿಸಿದ್ದೆಷ್ಟು?

Hit 3 movie: ನಾನಿ ನಟನೆಯ ತೆಲುಗು ಸಿನಿಮಾ ‘ಹಿಟ್ 3’ ಗುರುವಾರ ಬಲು ಅದ್ಧೂರಿಯಾಗಿ ಬಿಡುಗಡೆ ಆಗಿದೆ. ಭರ್ಜರಿ ಪ್ರಚಾರ, ನಿರೀಕ್ಷೆಗಳ ಜೊತೆಗೆ ಈ ಸಿನಿಮಾ ಬಿಡುಗಡೆ ಆಗಿತ್ತು. ಮೊದಲ ದಿನ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದ ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಹಿಟ್ ಆಯ್ತ?

ಹಿಟ್ ಆಯ್ತಾ ‘ಹಿಟ್ 3’, ಎರಡು ದಿನಕ್ಕೆ ಸಿನಿಮಾ ಗಳಿಸಿದ್ದೆಷ್ಟು?
Hit3
ಮಂಜುನಾಥ ಸಿ.
|

Updated on: May 03, 2025 | 12:40 PM

Share

ತೆಲುಗಿನ ಸ್ಟಾರ್ ನಟ ನಾನಿ, ಕರ್ನಾಟಕ ಮೂಲದ ನಟಿ ಶ್ರೀನಿಧಿ ಶೆಟ್ಟಿ ನಟಿಸಿರುವ ಕ್ರೈಂ ಥ್ರಿಲ್ಲರ್ ಸಿನಿಮಾ ‘ಹಿಟ್ 3’ ಕೆಲ ದಿನದ ಹಿಂದಷ್ಟೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದ್ದು, ನಟ ನಾನಿ ಬೆಂಗಳೂರಿಗೂ ಬಂದು ಸಿನಿಮಾದ ಪ್ರಚಾರ ಮಾಡಿ ಹೋಗಿದ್ದರು. ಸಿನಿಮಾದ ಟ್ರೈಲರ್ ಬಿಡುಗಡೆ ಆದಾಗ ಸಿನಿಮಾ ಪ್ರೇಮಿಗಳು ಬಹುವಾಗಿ ಮೆಚ್ಚಿದ್ದರು. ಸುದೀಪ್ ಪುತ್ರಿ ಸಾನ್ವಿ ಅವರು ಟ್ರೈಲರ್​ಗೆ ದನಿ ಸಹ ನೀಡಿದ್ದರು. ಭಾರಿ ಪ್ರಚಾರ, ನಿರೀಕ್ಷೆಗಳೊಟ್ಟಿಗೆ ಬಿಡುಗಡೆ ಆದ ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಗೆದ್ದಿತಾ ಅಥವಾ ಸೋತಿತಾ?

‘ಹಿಟ್ 3’ ಸಿನಿಮಾ ಬಿಡುಗಡೆ ಆದ ದಿನ ಮಿಶ್ರ ಪ್ರತಿಕ್ರಿಯೆಗಳು ಹೆಚ್ಚಾಗಿ ಕೇಳಿ ಬಂದವು. ಅದರಲ್ಲೂ ಬಹುತೇಕರು ಸಿನಿಮಾ ನಿರೀಕ್ಷೆಗೆ ತಕ್ಕಂತಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ‘ಹಿಟ್’ ಸಿನಿಮಾ ಸರಣಿಯ ಬಹಳ ವೀಕ್ ಆದ ಸಿನಿಮಾ ಇದು ಎಂಬ ಅಭಿಪ್ರಾಯವೂ ಸಹ ವ್ಯಕ್ತವಾಯ್ತು. ಆದರೆ ಹಲವರಿಗೆ ಸಿನಿಮಾದಲ್ಲಿದ್ದ ಭರ್ಜರಿ ಆಕ್ಷನ್ ಬಹಳ ಇಷ್ಟವಾಯ್ತು. ನಾನಿಯ ನಟನೆಯ ಬಗ್ಗೆಯೂ ಧನಾತ್ಮಕ ಅಭಿಪ್ರಾಯಗಳು ವ್ಯಕ್ತವಾದವು. ಕೆಲವು ಸೆಲೆಬ್ರಿಟಿಗಳು ಸಹ ಸಿನಿಮಾ ನೋಡಿ ಮೆಚ್ಚಿಕೊಂಡರು.

ಗುರುವಾರ ಬಿಡುಗಡೆ ಆದ ‘ಹಿಟ್ 3’ ಸಿನಿಮಾ ಎರಡು ದಿನಕ್ಕೆ ಬಾಕ್ಸ್ ಆಫೀಸ್​ನಲ್ಲಿ 62 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ಸ್ವತಃ ಚಿತ್ರತಂಡ ಹೇಳಿಕೊಂಡಿದೆ. ಆ ಮೂಲಕ ನೂರು ಕೋಟಿ ಕ್ಲಬ್ ಸೇರುವ ಸ್ಪಷ್ಟ ಸೂಚನೆಯನ್ನು ‘ಹಿಟ್ 3’ ಸಿನಿಮಾ ನೀಡಿದೆ. ‘ಹಿಟ್ 3’ ಸಿನಿಮಾ ಬಿಡುಗಡೆ ಆದ ಮೊದಲ ದಿನ ಅಂದರೆ ಗುರುವಾರ 31 ಕೋಟಿ ರೂಪಾಯಿ ಹಣವನ್ನು ಭಾರತದ ಬಾಕ್ಸ್ ಆಫೀಸ್​ನಲ್ಲಿ ಗಳಿಕೆ ಮಾಡಿತ್ತು. ವಿಶ್ವ ಬಾಕ್ಸ್ ಆಫೀಸ್ ಸೇರಿ ಸುಮಾರು 38 ಕೋಟಿ ರೂಪಾಯಿ ಗಳಿಕೆಯಾಗಿತ್ತು.

ಇದನ್ನೂ ಓದಿ:ಶ್ರೀನಿಧಿ ಶೆಟ್ಟಿ ಕನ್ನಡ ಪ್ರೇಮಕ್ಕೆ ನಾನಿ ಫುಲ್ ಫಿದಾ; ಯಾರೂ ಈ ರೀತಿ ಮಾಡಲ್ಲ

ನಾನಿ ನಟನೆಯ ‘ದಸರಾ’ ಸಿನಿಮಾ ಸಹ ಮೊದಲ ದಿನ ಭರ್ಜರಿ ಕಲೆಕ್ಷನ್ ಮಾಡಿತ್ತು. ಆದರೆ ಅದಾದ ಬಳಿಕ ಸಿನಿಮಾದ ಕಲೆಕ್ಷನ್ ಕುಸಿದಿತ್ತು. ಆದರೆ ‘ಹಿಟ್ 3’ ಸಿನಿಮಾ ಎರಡನೇ ದಿನವೂ ಸಹ ಭರ್ಜರಿ ಕಲೆಕ್ಷನ್ ಮಾಡಿದ್ದು, ಲಾಂಗ್ ವೀಕೆಂಡ್ ಇರುವ ಕಾರಣ ಸಿನಿಮಾದ ಕಲೆಕ್ಷನ್ ಶನಿವಾರ ಮತ್ತು ಭಾನುವಾರ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ‘ಹಿಟ್ 3’ ಸಿನಿಮಾ ಒಂದು ವಾರದ ಒಳಗಾಗಿ 100 ಕೋಟಿ ಕ್ಲಬ್ ದಾಟಲಿದೆ.

‘ಹಿಟ್ 3’ ಸಿನಿಮಾ ಅನ್ನು ಸೈಲೇಶ್ ಕೊಲನು ನಿರ್ದೇಶನ ಮಾಡಿದ್ದಾರೆ. ಸಿನಿಮಾ ನಿರ್ಮಾಣ ಮಾಡಿರುವುದು ಸ್ವತಃ ನಾನಿ. ಸಿನಿಮಾದಲ್ಲಿ ಶ್ರೀನಿಧಿ ಶೆಟ್ಟಿ ನಾಯಕಿ. ನಾನಿ ವೈಲೆಂಟ್ ವ್ಯಕ್ತಿತ್ವದ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ಮೈಖಲ್ ಮೇಯರ್ ಈ ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ. ಸಿನಿಮಾದ ಒಟ್ಟು ಬಜೆಟ್ 60 ಕೋಟಿ ಆಗಿದ್ದು, ಮೊದಲೆರಡು ದಿನಗಳಲ್ಲಿಯೇ 62 ಕೋಟಿ ಹಣವನ್ನು ಸಿನಿಮಾ ಬಾಚಿಕೊಂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮನೆಯ ಎದುರು ಕುರ್ಚಿ ಮೇಲೆ ಕುಳಿತಿದ್ಧ ವೃದ್ಧೆ ಮೇಲೆ ಕೋತಿಗಳ ದಾಳಿ
ಮನೆಯ ಎದುರು ಕುರ್ಚಿ ಮೇಲೆ ಕುಳಿತಿದ್ಧ ವೃದ್ಧೆ ಮೇಲೆ ಕೋತಿಗಳ ದಾಳಿ
Video: ತಂದೆ ತಾಯಿ ಜಗಳದಲ್ಲಿ ಮಗಳು ಸತ್ತೇ ಹೋದಳು!
Video: ತಂದೆ ತಾಯಿ ಜಗಳದಲ್ಲಿ ಮಗಳು ಸತ್ತೇ ಹೋದಳು!
ಎಣ್ಣೆ ನಶೆಯಲ್ಲಿ ನಾಯಿ ಜೊತೆ ಯುವಕನ ಡ್ಯಾನ್ಸ್​​: ವಿಡಿಯೋ ವೈರಲ್​
ಎಣ್ಣೆ ನಶೆಯಲ್ಲಿ ನಾಯಿ ಜೊತೆ ಯುವಕನ ಡ್ಯಾನ್ಸ್​​: ವಿಡಿಯೋ ವೈರಲ್​
ನಮಗೊಂದು ಟ್ವೀಟ್ ಮಾಡಿಕೊಡಿ: ಕೇರಳ ಸಿಎಂಗೆ ದುಂಬಾಲು ಬಿದ್ದ ಬಿಜೆಪಿ!
ನಮಗೊಂದು ಟ್ವೀಟ್ ಮಾಡಿಕೊಡಿ: ಕೇರಳ ಸಿಎಂಗೆ ದುಂಬಾಲು ಬಿದ್ದ ಬಿಜೆಪಿ!
ಹೊಸ ವರ್ಷಾಚರಣೆ ವೇಳೆ ಸ್ವಿಟ್ಜರ್​ಲ್ಯಾಂಡ್​ನ ಬಾರ್‌ನಲ್ಲಿ ಬಾಂಬ್ ಸ್ಫೋಟ
ಹೊಸ ವರ್ಷಾಚರಣೆ ವೇಳೆ ಸ್ವಿಟ್ಜರ್​ಲ್ಯಾಂಡ್​ನ ಬಾರ್‌ನಲ್ಲಿ ಬಾಂಬ್ ಸ್ಫೋಟ
ಹೊಸ ವರ್ಷದ ದಿನ ನಮ್ಮ ಮೆಟ್ರೋಗೆ ಬಂಪರ್​ ಆದಾಯ: ಕಲೆಕ್ಷನ್​ ಎಷ್ಟು?
ಹೊಸ ವರ್ಷದ ದಿನ ನಮ್ಮ ಮೆಟ್ರೋಗೆ ಬಂಪರ್​ ಆದಾಯ: ಕಲೆಕ್ಷನ್​ ಎಷ್ಟು?
ಪರೋಕ್ಷವಾಗಿ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಡಾ. ಜಿ. ಪರಮೇಶ್ವರ್
ಪರೋಕ್ಷವಾಗಿ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಡಾ. ಜಿ. ಪರಮೇಶ್ವರ್
ಹೂ, ಎಲೆಗಳ ಸಿಂಗಾರ; ವಿಶೇಷ ಅಲಂಕಾರದಲ್ಲಿ ಕಂಗೊಳಿಸಿದ ನಾಡ ದೇವತೆ
ಹೂ, ಎಲೆಗಳ ಸಿಂಗಾರ; ವಿಶೇಷ ಅಲಂಕಾರದಲ್ಲಿ ಕಂಗೊಳಿಸಿದ ನಾಡ ದೇವತೆ
ಮಂತ್ರಾಲಯದಲ್ಲಿ ಹೊಸ ವರ್ಷದ ಸಂಭ್ರಮ: ಸಾಗರೋಪಾದಿಯಲ್ಲಿ ಹರಿದುಬಂದ ಭಕ್ತರು
ಮಂತ್ರಾಲಯದಲ್ಲಿ ಹೊಸ ವರ್ಷದ ಸಂಭ್ರಮ: ಸಾಗರೋಪಾದಿಯಲ್ಲಿ ಹರಿದುಬಂದ ಭಕ್ತರು
ಪಕ್ಕದಮನೆಯವರ ಬಗ್ಗೆ ಮಾತನಾಡಲ್ಲ; ವಿಜಯಲಕ್ಷ್ಮೀ ಬಗ್ಗೆ ಸುದೀಪ್ ಮಾತು
ಪಕ್ಕದಮನೆಯವರ ಬಗ್ಗೆ ಮಾತನಾಡಲ್ಲ; ವಿಜಯಲಕ್ಷ್ಮೀ ಬಗ್ಗೆ ಸುದೀಪ್ ಮಾತು