ಸಂಭಾವನೆಯಲ್ಲಿ ಎಲ್ಲಾ ದಕ್ಷಿಣದ ನಟಿಯರನ್ನು ಹಿಂದಿಕ್ಕಿದ ನಯನತಾರಾ
Nayanthara: ನಟಿ ನಯನತಾರಾ ದಶಕಗಳಿಂದಲೂ ಚಿತ್ರರಂಗದಲ್ಲಿದ್ದಾರೆ. ನಯನತಾರಾ ಅನ್ನು ಲೇಡಿ ಸೂಪರ್ ಸ್ಟಾರ್ ಎಂದೂ ಸಹ ಕರೆಯಲಾಗುತ್ತದೆ. ಈಗಲೂ ಬೇಡಿಕೆ ಉಳಿಸಿಕೊಂಡಿರುವುದು ಮಾತ್ರವೇ ಅಲ್ಲದೆ, ದಕ್ಷಿಣ ಭಾರತದಲ್ಲಿಯೇ ಅತಿ ಹೆಚ್ಚು ಸಂಭಾವನೆ ಪಡೆವ ನಟಿ ಸಹ ಎನಿಸಿಕೊಂಡಿದ್ದಾರೆ ನಯನತಾರಾ. ಅಂದಹಾಗೆ ಈ ನಟಿಯ ಸಂಭಾವನೆ ಎಷ್ಟು?

ಕಾಲಿವುಡ್ ನಟಿ ನಯನತಾರಾ (Nayanthara) ಅವರು ಲೇಡಿ ಸೂಪರ್ಸ್ಟಾರ್ ಎಂದೇ ಫೇಮಸ್ ಆದವರು. ದಕ್ಷಿಣ ಭಾರತದಲ್ಲಿ ಅವರಿಗೆ ಭರ್ಜರಿ ಬೇಡಿಕೆ ಇದೆ. ಅವರು ಈಗ ದಕ್ಷಿಣ ಭಾರತದ ಅತಿ ಹೆಚ್ಚು ಸಂಭಾವನೆ ಪಡೆದ ನಾಯಕಿ ಎನ್ನುವ ಪಟ್ಟ ಪಡೆದುಕೊಂಡಿದ್ದಾರೆ ಎಂಬುದಾಗಿ ವರದಿ ಆಗಿದೆ. ಈ ವಿಚಾರ ಅವರ ಅಭಿಮಾನಿಗಳಿಗೆ ಖುಷಿಯನ್ನು ಕೊಟ್ಟರೆ, ಅವರ ಜೊತೆ ಸಿನಿಮಾ ಮಾಡಬೇಕು ಎಂದು ಯೋಚಿಸುತ್ತಿರುವ ನಿರ್ಮಾಪಕರಿಗೆ ಇದು ಹೆಚ್ಚು ಚಿಂತೆಯನ್ನು ಉಂಟುಮಾಡಿದೆ ಎನ್ನಬಹುದು.
ನಯನತಾರಾ ಅವರು ‘ಲೇಡಿ ಸೂಪರ್ಸ್ಟಾರ್’ ಎಂದು ಕರೆಸಿಕೊಳ್ಳಲು ಕಾರಣ ಅವರು ಮಾಡಿರೋ ಪಾತ್ರಗಳು ಎಂದೇ ಹೇಳಬಹುದು. ಅವರು ಅನೇಕ ಪಾತ್ರಗಳನ್ನು ಮಾಡಿ ಗಮನ ಸೆಳೆದಿದ್ದಾರೆ. ಚಿರಂಜೀವಿ ಜೊತೆ ಅವರು ಈಗ ಸಿನಿಮಾ ಮಾಡುತ್ತಿದ್ದಾರೆ. ಅವರ ವೃತ್ತಿ ಜೀನವದಲ್ಲೇ ಅತಿ ಹೆಚ್ಚಿನ ಸಂಭಾವನೆಯನ್ನು ಈ ಪಾತ್ರಕ್ಕಾಗಿ ಪಡೆದುಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ನಯನತಾರಾ ಅವರು ಬಿಗ್ ಬಜೆಟ್ ಚಿತ್ರಗಳಿಗೆ ಪಡೆಯೋದು 10 ಕೋಟಿ ರೂಪಾಯಿ. ಈ ಮೊದಲು ‘ಪಠಾಣ್’ ಸಿನಿಮಾದಲ್ಲಿ ನಟಿಸಿದ್ದಕ್ಕಾಗಿ ಅವರು ಇದೇ ಮಟ್ಟದಲ್ಲಿ ಸಂಭಾವನೆ ಪಡೆದುಕೊಂಡಿದ್ದರು. ಇದನ್ನು ಅವರು ಈಗಲೂ ಮುಂದುವರಿಸಿಕೊಂಡು ಬಂದಿದ್ದಾರೆ. ಈಗ ಇದನ್ನು ಸುಮಾರು ದುಪ್ಪಟ್ಟು ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:ನಯನತಾರಾ ಕಾಂಪ್ರಮೈಸ್ ಮಾಡಿಕೊಳ್ಳಲಿಲ್ಲ, ತಮನ್ನಾ ಕಾಂಪ್ರಮೈಸ್ ಆದರು, ಹಿಟ್ ಸಿನಿಮಾ ಕೊಟ್ಟರು
ನಯನತಾರಾ ಅವರು ಚಿರಂಜೀವಿ ಸಿನಿಮಾಗಾಗಿ 18 ಕೋಟಿ ರೂಪಾಯಿ ಕೇಳಿದ್ದಾರಂತೆ. ಈ ಚಿತ್ರದಲ್ಲಿ ಅವರ ಕಾಲ್ಶೀಟ್ ಹೆಚ್ಚಿನ ದಿನ ಇದೆಯಂತೆ. ಅಲ್ಲದೆ, ಅವರ ಪಾತ್ರ ಕೂಡ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ. ಈ ಎಲ್ಲಾ ಕಾರಣದಿಂದ ಅವರು ಇಷ್ಟು ದೊಡ್ಡ ಮೊತ್ತಕ್ಕೆ ಬೇಡಿಕೆ ಇಟ್ಟಿದ್ದಾರೆ. ಸದ್ಯ ನಿರ್ಮಾಪಕರು ಈ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ. ಇದು ನಿಜವಾದಲ್ಲಿ ಅವರು ದಕ್ಷಿಣ ಭಾರತದ ಅತಿ ಹೆಚ್ಚಿನ ಸಂಭಾವನೆ ಪಡೆದ ನಟಿ ಆಗಲಿದ್ದಾರೆ.
ಪ್ರಿಯಾಂಕಾ ಚೋಪ್ರಾ ಅವರು 30 ಕೋಟಿ ರೂಪಾಯಿ ಸಂಭಾವನೆ ಪಡೆದು ಭಾರತದಲ್ಲಿ ಅತಿ ದುಬಾರಿ ನಟಿ ಎನಿಸಿಕೊಂಡಿದ್ದಾರೆ. ರಾಜಮೌಳಿ-ಮಹೇಶ್ ಬಾಬು ಚಿತ್ರಕ್ಕೆ ಅವರು ಇಷ್ಟು ದೊಡ್ಡ ಸಂಭಾವನೆ ಪಡೆದಿದ್ದರು. ಕಂಗನಾ ರಣಾವತ್ ಅವರು ಕೂಡ 15-20 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಇದಾದ ಬಳಿಕದ ಸ್ಥಾನದಲ್ಲಿ ನಯನತಾರಾ ಇದ್ದಾರೆ ಎಂದು ಹೇಳಲಾಗುತ್ತಿದೆ. ದಕ್ಷಿಣದಲ್ಲಿ ಅವರು ಟಾಪ್ನಲ್ಲಿ ಇದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



