ಅವಾಚ್ಯ ಪದಗಳಿಂದ ನಿಂದನೆ: ಜಾನಿ ಡೆಪ್ ವಿರುದ್ಧ ಸಹ ನಟಿಯಿಂದ ಆರೋಪ

Johnny Depp: ಜನಪ್ರಿಯ ಹಾಲಿವುಡ್ ನಟ ಜಾನಿ ಡೆಪ್, ಇತ್ತೀಚೆಗಷ್ಟೆ ಮಾಜಿ ಪತ್ನಿ ಅಂಬರ್ ಮಾಡಿದ್ದ ಆರೋಪಗಳ ವಿರುದ್ಧ ಕಾನೂನು ಸಮರ ಮಾಡಿ ಗೆದ್ದಿದ್ದಾರೆ. ಇದೀಗ ಜಾನಿಯ ಸಹ ನಟಿಯೊಬ್ಬರು ಜಾನಿ ವಿರುದ್ಧ ಆರೋಪ ಮಾಡಿದ್ದಾರೆ.

ಅವಾಚ್ಯ ಪದಗಳಿಂದ ನಿಂದನೆ: ಜಾನಿ ಡೆಪ್ ವಿರುದ್ಧ ಸಹ ನಟಿಯಿಂದ ಆರೋಪ
ಜಾನಿ ಡೆಪ್
Follow us
ಮಂಜುನಾಥ ಸಿ.
|

Updated on:Mar 20, 2024 | 11:52 AM

ಹಾಲಿವುಡ್​ನ ಹೆಸರಾಂತ ನಟ ಜಾನಿ ಡೆಪ್ (Jhonny Depp) ಹಾಗೂ ಅವರ ಮಾಜಿ ಪತ್ನಿ ಅಂಬರ್ ಹರ್ಡ್ ನಡುವೆ ನಡೆದ ಕಾನೂನು ಸಮರ ವಿಶ್ವದ ಗಮನ ಸೆಳೆದಿತ್ತು. ಯಾವ ಸಿನಿಮಾ, ಟಿವಿ ಶೋಗೂ ಕಡಿಮೆ ಇಲ್ಲದಂತೆ ಇವರಿಬ್ಬರ ಕೋರ್ಟ್ ಕಲಾಪಗಳನ್ನು ವಿಶ್ವದ ಜನ ನೋಡಿದ್ದರು. ಕಾನೂನು ಸಮರದಲ್ಲಿ ಜಾನಿ ಡೆಪ್ ಗೆದ್ದರು, ಅಂಬರ್ ಮಾಡಿದ್ದ, ಲೈಂಗಿಕ ದೌರ್ಜನ್ಯ ಇನ್ನಿತರೆ ಆರೋಪಗಳಿಂದ ಮುಕ್ತರಾದರು. ಇದೀಗ ಜಾನಿ ಡೆಪ್​ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಸಹ ನಟಿಯೊಬ್ಬರು ಜಾನಿ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ. ಜಾನಿ ಡೆಪ್ ತಮ್ಮೊಟ್ಟಿಗೆ ಕೆಟ್ಟದಾಗಿ ನಡೆದುಕೊಂಡರೆಂದು, ಅವಾಚ್ಯ ಶಬ್ದಗಳಿಂದ ನಿಂದಿಸಿದರೆಂದು ಆರೋಪ ಮಾಡಿದ್ದಾರೆ.

ಜಾನಿ ಡೆಪ್ ಜೊತೆಗೆ ‘ಬ್ಲೋ’ ಸಿನಿಮಾನಲ್ಲಿ ನಟಿಸಿದ್ದ ಲೋಲಾ ಗ್ಲೌಡಿನಿ ಇತ್ತೀಚೆಗೆ ನೀಡಿರುವ ಸಂದರ್ಶನವೊಂದರಲ್ಲಿ ಜಾನಿ ಡೆಪ್ ವಿರುದ್ಧ ದುರ್ವರ್ತನೆ ಆರೋಪವನ್ನು ಮಾಡಿದ್ದಾರೆ. ‘ಬ್ಲೋ’ ಸಿನಿಮಾದಲ್ಲಿ ನಟಿಸುವಾದ ದೃಶ್ಯವೊಂದರ ಚಿತ್ರೀಕರಣದ ವೇಳೆ ಆಕ್ಷನ್ ಅಥವಾ ಕ್ಯೂ ನೀಡಿದಾಗ ನಾನು ಜೋರಾಗಿ ನಕ್ಕೆ. ಕಟ್ ಹೇಳುತ್ತಿದ್ದಂತೆ ಜಾನಿ ಡೆಪ್ ನನ್ನ ಬಳಿ ಬಂದು ತೀವ್ರ ಸಿಟ್ಟಿನಿಂದ, ಅವಾಚ್ಯ ಶಬ್ದಗಳನ್ನು ಬಳಸಿ ನನ್ನನ್ನು ಬೈಯ್ಯಲು ಆರಂಭಿಸಿದ. ತೀರ ಕೊಳಕು ಭಾಷೆಯನ್ನು ಜಾನಿ ನನ್ನ ವಿರುದ್ಧ ಬಳಸಿದ್ದ’ ಎಂದು ಲೋಲಾ ಹೇಳಿದ್ದಾರೆ.

‘ನೀನು ಯಾರ ಮುಂದೆ ನಿಂತಿದ್ದೀಯ ಗೊತ್ತೆ, ನಿನ್ನ ಯೋಗ್ಯತೆ ಏನು? ಬಾಯಿ ಮುಚ್ಚಿಕೊಂಡಿರು, ನಿನ್ನನ್ನು ನೀನು ಏನಂದುಕೊಂಡಿದ್ದೀಯ? ಇತ್ಯಾದಿಗಳ ಜೊತೆಗೆ ‘ಎಫ್’ ಪದವನ್ನು ಅತಿಯಾಗಿ ಬಳಸಿ ಬೆದರಿಕೆ ಹಾಕಿದ್ದರು. ಜಾನಿ ಡೆಪ್ ನನ್ನ ಮೆಚ್ಚಿನ ನಟನಾಗಿದ್ದ, ಆದರೆ ಅಂದು ಜಾನಿ ನನ್ನ ಎದುರು ನಿಂತು ಕೆಟ್ಟದಾಗಿ ಬೈಯ್ಯುತ್ತಿದ್ದಾಗ ನನಗೆ ಕಣ್ಣೀರು ಬಂದುಬಿಟ್ಟಿತು. ಆ ಸಿನಿಮಾ ನನ್ನ ಮೊದಲ ದೊಡ್ಡ ಪ್ರೊಡಕ್ಷನ್ ಹೌಸ್​ನ ಸಿನಿಮಾ ಆಗಿತ್ತು. ಜಾನಿ ಜೊತೆ ಕೆಲಸ ಮಾಡುವುದು ನನ್ನ ಆಸೆಗಳಲ್ಲಿ ಒಂದಾಗಿತ್ತು. ಆದರೆ ಜಾನಿ ಅಂದು ನಡೆದುಕೊಂಡ ರೀತಿಯಿಂದ ಅವರ ಮೇಲಿನ ನನ್ನ ಅಭಿಪ್ರಾಯ ಬದಲಾಯ್ತು’ ಎಂದಿದ್ದಾರೆ ಲೋಲಾ.

ಇದನ್ನೂ ಓದಿ:‘Modi’ ಸಿನಿಮಾಗೆ ಹಾಲಿವುಡ್​ನಲ್ಲಿ ಶೂಟಿಂಗ್ ಶುರು; ಜಾನಿ ಡೆಪ್​ ನಿರ್ದೇಶನ: ಇದು ಯಾರ ಜೀವನದ ಕಥೆ?

‘ಘಟನೆ ನಡೆದ ಬಳಿಕ ಜಾನಿ ನನ್ನ ಬಳಿ ಬಂದರು. ಏನು ಅಂದುಕೊಳ್ಳಬೇಡ, ನಾನು ನನ್ನ ಪಾತ್ರದ ಮೇಲೆ ತೀವ್ರ ಗಮನ ಹರಿಸುವ ಪ್ರಯತ್ನ ಮಾಡುತ್ತಿದ್ದೇನೆ. ನಾನು ಪಾತ್ರದಲ್ಲಿಯೇ ಇರಲು ಬಯಸುವ ನಟ. ನನ್ನ ಪ್ರಕಾರ ನಾನು ಆಗ ಪಾತ್ರದಲ್ಲಿಯೇ ಇದ್ದೆ. ನಾನು ಈ ಸಿನಿಮಾನಲ್ಲಿ ಬಾಸ್ಟನ್​ ಶೈಲಿಯಲ್ಲಿ ಮಾತನಾಡಲು ಯತ್ನಿಸುತ್ತಿದ್ದೇನೆ. ಅದು ನನಗೆ ಬಹಳ ಕಷ್ಟವಾಗುತ್ತಿದೆ. ಆ ಒತ್ತಡದಿಂದ ನಾನು ಹಾಗೆ ವರ್ತಿಸಿದೆ. ನೀನು ಓಕೆ ತಾನೆ? ಎಂದು ಕೇಳಿದ. ಅದಕ್ಕೆ ನಾನು ಓಹ್ ಪರವಾಗಿಲ್ಲ, ಅದನ್ನೆಲ್ಲ ನಾನು ಆಗಲೆ ಮರೆತುಬಿಟ್ಟೆ, ಅದೇನು ದೊಡ್ಡ ವಿಷಯವಲ್ಲ’ ಎಂದುಬಿಟ್ಟೆ’ ಎಂದು ಲೋಲಾ ನೆನಪು ಮಾಡಿಕೊಂಡಿದ್ದಾರೆ.

‘ಅಸಲಿಗೆ ನನಗೆ ಆ ಘಟನೆ ಬಳಿಕ ಬಹಳ ಬೇಸರವಾಗಿತ್ತು. ಆದರೆ ನನ್ನ ತಂದೆ ಒಂದು ಪಾಠ ಕಲಿಸಿದ್ದರು, ಎಂದಿಗೂ ಸಹ ನೀನು ಅಸಹಾಯಕಳು, ಬೇರವರಿಂದ ನೋವಿಗೆ ಗುರಿಯಾದವಳು ಎಂದು ತೋರಿಸಬೇಡ ಎಂದು ಅದೇ ಕಾರಣಕ್ಕೆ ನಾನು ಜಾನಿಯ ಎದುರು ಏನೂ ಆಗಿಲ್ಲವೆಂದು ನಟಿಸಿದೆ. ಅಸಲಿಗೆ ಆ ದಿನ ಬಹಳ ಬೇಸರವಾಗಿತ್ತು. ಆ ಸಿನಿಮಾದ ನಿರ್ದೇಶಕ ಸಹ ನನ್ನ ಬಳಿ ಬಂದು ಮಾತನಾಡಲಿಲ್ಲ. ಸೆಟ್​ನಲ್ಲಿ ಯಾರೂ ಸಹ ಅಂದು ನನ್ನ ಪರವಾಗಿ ನಿಲ್ಲಲಿಲ್ಲ. ಅಂದು ನನಗೆ ಬಹಳ ಬೇಸರವಾಗಿತ್ತು. ನನ್ನನ್ನು ಒಬ್ಬಂಟಿ ಮಾಡಿ ನನ್ನ ಮೇಲೆ ದೌರ್ಜನ್ಯ ಮಾಡಲಾಗುತ್ತಿದೆ ಎಂಬ ಭಾವ ಬಂತು’ ಎಂದಿದ್ದಾರೆ.

ನಟಿ ಲೋಲಾರ ಆರೋಪಗಳನ್ನು ಜಾನಿ ಡೆಪ್​ರ ಮ್ಯಾನೇಜರ್ ತಳ್ಳಿ ಹಾಕಿದ್ದಾರೆ. ‘ಜಾನಿ ಯಾವಾಗಲೂ ಸಹ ನಟರು ಮತ್ತು ಸಿನಿಮಾ ಚಿತ್ರೀಕರಣದ ಸಿಬ್ಬಂದಿಯೊಂದಿಗೆ ಉತ್ತಮ ಬಂಧವನ್ನು ಇಟ್ಟುಕೊಳ್ಳಲು ಆದ್ಯತೆ ನೀಡುತ್ತಾರೆ. ಈಗ ಮಾಡಲಾಗುತ್ತಿರುವ ಆರೋಪ, ನಟಿ ಹೇಳುತ್ತಿರುವ ಘಟನೆ, ಆ ದಿನ ಸೆಟ್​ನಲ್ಲಿದ್ದು ಎಲ್ಲವನ್ನೂ ಕಣ್ಣಿನಿಂದ ನೋಡಿದವರು ಹೇಳುತ್ತಿರುವುದಕ್ಕಿಂತಲೂ ಬಹಳ ಭಿನ್ನವಾಗಿದೆ’ ಎನ್ನುವ ಮೂಲಕ ನಟಿ ಲೋಲಾ ಸುಳ್ಳು ಹೇಳುತ್ತಿದ್ದಾರೆ ಎಂದು ಪರೋಕ್ಷವಾಗಿ ಆರೋಪಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:51 am, Wed, 20 March 24

ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!