AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಣ ಕೊಟ್ಟು ನೋಡಬೇಕು ‘ಅವತಾರ್ 3’ ಸಿನಿಮಾ ಟ್ರೇಲರ್; ಪ್ರೇಕ್ಷಕರು ಗರಂ

ಹಾಲಿವುಡ್​ನ ಬಹುನಿರೀಕ್ಷಿತ ‘ಅವತಾರ್: ಫೈರ್ ಆ್ಯಂಡ್ ಆ್ಯಶ್’ ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ. ಇದು ‘ಅವತಾರ್’ ಸರಣಿಯ ಮೂರನೇ ಚಿತ್ರವಾಗಿದ್ದು, ಟ್ರೇಲರ್ ಬಿಡುಗಡೆಗೆ ಸಕಲ ಸಿದ್ಧತೆ ನಡೆದಿದೆ. ಟ್ರೇಲರ್ ರಿಲೀಸ್ ಮಾಡಲು ಚಿತ್ರತಂಡ ಆಯ್ಕೆ ಮಾಡಿರುವ ವಿಧಾನದ ಬಗ್ಗೆ ಪ್ರೇಕ್ಷಕರಿಗೆ ಬೇಸರ ಇದೆ. ಆ ಕುರಿತು ಇಲ್ಲಿದೆ ಮಾಹಿತಿ..

ಹಣ ಕೊಟ್ಟು ನೋಡಬೇಕು ‘ಅವತಾರ್ 3’ ಸಿನಿಮಾ ಟ್ರೇಲರ್; ಪ್ರೇಕ್ಷಕರು ಗರಂ
Avatar Fire And Ash
ಮದನ್​ ಕುಮಾರ್​
|

Updated on: Jul 22, 2025 | 6:11 PM

Share

‘ಅವತಾರ್’ ಮತ್ತು ‘ಅವತಾರ್ 2’ ಸಿನಿಮಾ ನೋಡಿ ಇಷ್ಟಪಟ್ಟ ಪ್ರೇಕ್ಷಕರು ಈಗ ‘ಅವತಾರ್ 3’ (Avatar 3) ನೋಡಲು ಕಾಯುತ್ತಿದ್ದಾರೆ. ಜೇಮ್ಸ್ ಕ್ಯಾಮರಾನ್ ನಿರ್ದೇಶನ ಮಾಡಿರುವ ಈ ಸಿನಿಮಾದ ಟ್ರೇಲರ್ ಬಿಡುಗಡೆಗೆ ಸಕಲ ಸಿದ್ಧತೆ ನಡೆದಿದೆ. ‘ಅವತಾರ್ 3’ (Avatar Fire and Ash) ಚಿತ್ರದಲ್ಲಿ ಗ್ರಾಫಿಕ್ಸ್ ಬಹಳ ಮಹತ್ವದ್ದಾಗಿರಲಿದೆ. ದೊಡ್ಡ ಪರದೆಯಲ್ಲಿ ಅದನ್ನು ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಎಗ್ಸೈಟ್ ಆಗಿದ್ದಾರೆ. ಸಿನಿಮಾ ಹೇಗಿರಲಿದೆ ಎಂಬುದರ ಝಲಕ್ ಟ್ರೇಲರ್​ನಲ್ಲಿ ಕಾಣಿಸಲಿದೆ. ಆದರೆ ಎಲ್ಲರಿಗೂ ‘ಅವತಾರ್ 3’ ಟ್ರೇಲರ್ (Avatar Fire and Ash Trailer) ನೋಡುವ ಭಾಗ್ಯ ಇಲ್ಲ. ದುಡ್ಡು ಕೊಟ್ಟು ಚಿತ್ರಮಂದಿರಕ್ಕೆ ಬರುವವರಿಗೆ ಮಾತ್ರ ಟ್ರೇಲರ್ ಪ್ರದರ್ಶನ ಆಗಲಿದೆ. ಇದು ಪ್ರೇಕ್ಷಕರ ಅಸಮಾಧಾನಕ್ಕೆ ಕಾರಣ ಆಗಿದೆ.

ಹೌದು, ‘ಅವತಾರ್ 3’ ಮೇಲಿನ ನಿರೀಕ್ಷೆ ಹೆಚ್ಚಿಸಲು ಚಿತ್ರತಂಡ ಏನೇನೋ ಕಸರತ್ತು ಮಾಡುತ್ತಿದೆ. ಡಿಸೆಂಬರ್ 19ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಈಗಾಗಲೇ ಪ್ರಚಾರ ಕಾರ್ಯ ಶುರು ಮಾಡಲಾಗಿದೆ. ಹೊಸ ಪೋಸ್ಟರ್ ನೋಡಿ ಅಭಿಮಾನಿಗಳಿಗೆ ಖುಷಿ ಆಗಿದೆ. ಆದರೆ ಟ್ರೇಲರ್ ನೋಡಲು ಹಣ ಕೊಡಬೇಕು ಎಂಬ ವಿಷಯ ಬೇಸರ ಉಂಟುಮಾಡಿದೆ.

ಜುಲೈ 25ರಂದು ‘ದಿ ಫೆಂಟಾಸ್ಟಿಕ್ ಫೋರ್: ಫಸ್ಟ್ ಸ್ಟೆಪ್ಸ್’ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾದ ಜೊತೆ ‘ಅವತಾರ್ 3’ ಸಿನಿಮಾದ ಟ್ರೇಲರ್ ಅಟ್ಯಾಚ್ ಮಾಡಲಾಗಿದೆ. ಅಂದರೆ, ‘ದಿ ಫೆಂಟಾಸ್ಟಿಕ್ ಫೋರ್: ಫಸ್ಟ್ ಸ್ಟೆಪ್ಸ್’ ಚಿತ್ರ ನೋಡಲು ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರಿಗೆ ಮಾತ್ರ ‘ಅವತಾರ್ 3’ ಚಿತ್ರದ ಟ್ರೇಲರ್ ಪ್ರದರ್ಶನ ಆಗಲಿದೆ.

ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ‘ಈ ವಾರಾಂತ್ಯದಲ್ಲಿ ದಿ ಫೆಂಟಾಸ್ಟಿಕ್ ಫೋರ್ ಫಸ್ಟ್ ಸ್ಟೆಪ್ಸ್ ಚಿತ್ರದ ಜೊತೆ ಎಕ್ಸ್​ಕ್ಲೂಸೀವ್ ಆಗಿ ಅವತಾರ್ ಫೈರ್ ಆ್ಯಂಡ್ ಆ್ಯಶ್ ಸಿನಿಮಾದ ಟ್ರೇಲರ್ ನೋಡುವ ಮೊದಲಿಗರಲ್ಲಿ ನೋವು ಕೂಡ ಒಬ್ಬರಾಗಿ’ ಎಂದು ಪೋಸ್ಟ್ ಮಾಡಲಾಗಿದೆ. ಇದಕ್ಕೆ ಕಮೆಂಟ್ ಮಾಡಿರುವ ಸಿನಿಪ್ರಿಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ‘ಅವತಾರ್’ ಹೀರೋ ಆಫರ್ ನನಗೆ ಬಂದಿತ್ತು, ಶೀರ್ಷಿಕೆ ಕೊಟ್ಟಿದ್ದು ನಾನೇ: ಗೋವಿಂದ

ಇದು ಆನ್​ಲೈನ್ ಯುಗ. ಈ ಕಾಲದಲ್ಲೂ ಟ್ರೇಲರ್​ ಅನ್ನು ಬರೀ ಚಿತ್ರಮಂದಿರದಲ್ಲಿ ತೋರಿಸುತ್ತೇವೆ ಎಂಬುದು ಯಾಕೋ ಸರಿಯಾದ ನಿರ್ಧಾರ ಅಲ್ಲ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ಟ್ರೇಲರ್ ಬಿಡುಗಡೆ ಆದ ಬಳಿಕ ಪ್ರೇಕ್ಷಕರಿಂದ ಯಾವ ರೀತಿಯ ಪ್ರತಿಕ್ರಿಯೆ ಸಿಗಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ಭಾರಿ ಬಜೆಟ್​ನಲ್ಲಿ ‘ಅವತಾರ್ 3’ ಸಿನಿಮಾ ನಿರ್ಮಾಣ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.